Site icon Vistara News

Actor-Director Manobala: ವಿಷ್ಣುವರ್ಧನ್‌‌ ಸಿನಿಮಾಗೆ ನಿರ್ದೇಶನ ಮಾಡಿದ ನಟ, ನಿರ್ದೇಶಕ ಮನೋಬಾಲ ನಿಧನ

Actor-Director Manobala Passes Away

ಬೆಂಗಳೂರು: ಸಹಾಯಕ ನಿರ್ದೇಶಕರಾಗಿ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿ ಹತ್ತಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ ನಟ, ನಿರ್ದೇಶಕ ಮನೋಬಾಲ (Actor-Director Manobala) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮೇ 3ರಂದು ನಿಧನರಾಗಿದ್ದಾರೆ. ವರದಿ ಪ್ರಕಾರ 10 ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದರು. ಮನೋಬಾಲಾ ಅವರು ಲಿವರ್‌ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಮನೋಬಾಲ ಅವರಿಗೆ ಕೇವಲ 69 ವರ್ಷ ವಯಸ್ಸಾಗಿತ್ತು. ಸಾಹಸಸಿಂಹ ಡಾ.ವಿಷ್ಣುವರ್ಧನ್ ನಟನೆಯ `ಡಿಸೆಂಬರ್ 31′ ಸಿನಿಮಾ ನಿರ್ದೇಶನ ಮಾಡಿದ್ದರು.

ಹಿರಿಯ ನಟ ರಜನಿಕಾಂತ್ ಅವರು ತಮ್ಮ ಆತ್ಮೀಯ ಸ್ನೇಹಿತ ಮನೋಬಾಲ ಅವರನ್ನು ಸ್ಮರಿಸಿ ಟ್ವಿಟರ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ರಜನಿಕಾಂತ್ ಟ್ವೀಟ್‌ನಲ್ಲಿ ʻʻನನ್ನ ಆತ್ಮೀಯ ಸ್ನೇಹಿತ, ಖ್ಯಾತ ನಿರ್ದೇಶಕ ಮತ್ತು ನಟ ಮನೋಬಾಲಾ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿʼʼಎಂದು ಬರೆದುಕೊಂಡಿದ್ದಾರೆ. ನಿರ್ಮಾಪಕ ಜಿ ಧನಂಜಯನ್ ಟ್ವೀಟ್‌ ನಲ್ಲಿ ʻಮನೋಬಾಲ ಅವರ ನಿಧನದ ಸುದ್ದ ಕೇಳಿ ಆಘಾತವಾಗಿದೆʼʼ ಎಂದು ಬರೆದಿದ್ದಾರೆ.

ಸಾಹಸಸಿಂಹ ಡಾ.ವಿಷ್ಣುವರ್ಧನ್ ನಟನೆಯ `ಡಿಸೆಂಬರ್ 31′ ಸಿನಿಮಾ ನಿರ್ದೇಶನ ಮಾಡಿದ್ದರು. ಕೇವಲ ತಮಿಳು ಮಾತ್ರವಲ್ಲದೇ, ತೆಲುಗು ಮತ್ತು ಮಲಯಾಳಂನಲ್ಲೂ ನಟಿಸಿದ್ದಾರೆ. ಹಾಸ್ಯಕಲಾವಿದರಾಗಿ ಖ್ಯಾತಿ ಗಳಿಸಿದ್ದ ಮನೋಬಾಲ ಅವರು ಸಾವು ಅಭಿಮಾನಿಗಳಿಗೆ, ಆಪ್ತರಿಗೆ ದುಃಖ ತಂದಿದೆ.

ಇದನ್ನೂ ಓದಿ: Arun Manilal Gandhi: ಮಹಾತ್ಮ ಗಾಂಧಿ ಮೊಮ್ಮಗ ಅರುಣ್ ಮಣಿಲಾಲ್ ಗಾಂಧಿ ನಿಧನ

ರಜನಿಕಾಂತ್‌ ಟ್ವೀಟ್‌

1979ರಲ್ಲಿ, ಮನೋಬಾಲ ಅವರು ಭಾರತಿರಾಜ ಅವರ ʻಪುತಿಯ ವಾರ್ಪುಗಳುʼ (Puthiya Vaarpugal) ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಚಿತ್ರದಲ್ಲಿ ಸಣ್ಣ ಪಾತ್ರವನ್ನೂ ಸಹ ಮಾಡಿದ್ದಾರೆ. ಮನೋಬಾಲಾ ಅವರು 1982ರ ತಮಿಳು ಚಲನಚಿತ್ರ ʻಆಗಾಯ ಗಂಗೈʼ(Aagaya Gangai) ಮೂಲಕ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು. ಅವರು ಜೀತೇಂದ್ರ ಅಭಿನಯದ ಮೇರಾ ಪತಿ ಸಿರ್ಫ್ ಮೇರಾ ಹೈ (Mera Pati Sirf Mera Hai,) ಎಂಬ ಹಿಂದಿ ಚಲನಚಿತ್ರವನ್ನು ಸಹ ನಿರ್ದೇಶಿಸಿದ್ದರು. ಅವರ ಕೆಲವು ನಿರ್ದೇಶನದ ಚಿತ್ರಗಳಲ್ಲಿ ಪಿಳ್ಳೈ ನಿಲಾ (Pillai Nila), ಸಿರೈ ಪರ್ವೈ (Sirai Parvai) ಮತ್ತು ಊರ್ಕಾವಲನ್ (Oorkavalan) ಸೇರಿವೆ. ನೈನಾ (Naina) ನಟರ ಕೊನೆಯ ತಮಿಳು ಚಲನಚಿತ್ರ .

ಕಳೆದ ಎರಡು ದಶಕಗಳಲ್ಲಿ ಮನೋಬಾಲ ಅವರು ನಟನಾಗಿ ಸಕ್ರಿಯರಾಗಿದ್ದರು. ಕಾಮಿಡಿ ಪಾತ್ರಗಳಿಗೆ ಹೆಚ್ಚಾಗಿ ಜನಪ್ರಿಯತೆ ಗಳಿಸಿದ ಅವರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕಾಜಲ್ ಅಗರ್ವಾಲ್ ಅವರ ತಮಿಳು ಹಾರರ್ ಕಾಮಿಡಿ ʻಘೋಸ್ಟಿʼಯಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.

Exit mobile version