Site icon Vistara News

Kamal Haasan: ನಿರ್ದೇಶಕ ಮಣಿರತ್ನಂ ಬಗ್ಗೆ ಅನೇಕರಿಗೆ ಅಸೂಯೆ! ನಟ ಕಮಲ್ ಹಾಸನ್ ಹೀಗೆ ಹೇಳಿದ್ದೇಕೆ?

many writers are now jealous of Mani RatnamKamal Haasan

ಬೆಂಗಳೂರು: ಮಣಿರತ್ನಂ ನಿರ್ದೇಶನದ ʻಪೊನ್ನಿಯನ್ ಸೆಲ್ವನ್ʼ -1ರ ಸೂಪರ್ ಸಕ್ಸೆಸ್‌ ನಂತರ, ಆ ಸಿನಿಮಾದ ಎರಡನೇ ಭಾಗವಾದ ‘ಪೊನ್ನಿಯನ್‌ ಸೆಲ್ವನ್‌ 2’ (Ponniyin Selvan 2) ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಚಿಯಾನ್ ವಿಕ್ರಮ್, ತ್ರಿಶಾ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಜತೆಗೆ ಪ್ರಕಾಶ್ ರಾಜ್, ಪ್ರಭು, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧೂಲಿಪಾಲ, ಜಯರಾಮ್, ಅಶ್ವಿನ್ ಕಾಕುಮನು, ಮೋಹನ್ ರಾಮನ್, ಶರತ್‌ಕುಮಾರ್ ಮತ್ತು ಪಾರ್ತಿಬನ್ ನಟಿಸಿದ್ದಾರೆ. ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಮಲ್ ಹಾಸನ್‌ (Kamal Haasan) ಅವರಲ್ಲದೆ, ನಟ ಸಿಲಂಬರಸನ್ ಟಿಆರ್, ಹಿರಿಯ ಚಲನಚಿತ್ರ ನಿರ್ಮಾಪಕ ಭಾರತಿರಾಜ ಸೇರಿದಂತೆ ಹಲವು ಗಣ್ಯರು ಮಾರ್ಚ್‌ 29ರಂದು ಟ್ರೈಲರ್‌ ಲಾಂಚ್‌ನಲ್ಲಿ ಭಾಗಿಯಾಗಿದ್ದರು.

ಪೊನ್ನಿಯನ್ ಸೆಲ್ವನ್ 2 ಟ್ರೈಲರ್‌ ಲಾಂಚ್ ನಲ್ಲಿ ಕಮಲ ಹಾಸನ್

ಕಮಲ್ ಹಾಸನ್ ಅವರು ಮುಖ್ಯ ಅತಿಥಿಯಾಗಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ನಟ ಮಾತನಾಡಿ “ವರ್ಷಗಳಿಂದ ನನ್ನನ್ನು ವೇದಿಕೆಗೆ ಬರುವಂತೆ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಪೊನ್ನಿಯಿನ್ ಸೆಲ್ವನ್‌ನಂತಹ ಚಿತ್ರದಲ್ಲಿ ನಟಿಸುವ ಅವಕಾಶ ನಾನು ಕಳೆದುಕೊಂಡಿದ್ದೇನೆ. ಹಾಗಾಗಿ ನಾನು ಧ್ವನಿ ನೀಡಿದ್ದೇನೆʼʼ ಎಂದರು. ʻʻಕಲ್ಕಿ ಕೃಷ್ಣಮೂರ್ತಿ ಅವರ ಪುಸ್ತಕಗಳನ್ನು ಆಧರಿಸಿ ಅನೇಕ ಬರಹಗಾರರು ಅಸೂಯೆ ಪಟ್ಟಂತೆ, ಈಗ ಅನೇಕ ಬರಹಗಾರರು ಮಣಿರತ್ನಂ ಬಗ್ಗೆ ಅಸೂಯೆ ಹೊಂದಿದ್ದಾರೆʼʼ ಎಂದು ಹೇಳಿದರು.

ʻʻನಿನ್ನೆ ಮೊನ್ನೆ ಎಆರ್ ರೆಹಮಾನ್ ಮೂಲಕ ನನಗೆ ಹೊಸ ಅವಕಾಶ ಸಿಕ್ಕಿತು. ಅವರ ಆರ್ಕೆಸ್ಟ್ರಾ ಹಾಡುಗಳು ಮ್ಯಾಜಿಕ್ ಆಗಿತ್ತು. ಅದನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ಜೀವನ ಚಿಕ್ಕದಾಗಿದ್ದು ಸಿನಿಮಾದಲ್ಲಿ ಅವಕಾಶ ಸಿಗುವುದು ಕಡಿಮೆ. ಸಿಕ್ಕ ಅವಕಾಶಗಳನ್ನು ನಾವೆಲ್ಲರೂ ಸಂಭ್ರಮಿಸಬೇಕು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಅಸೂಯೆಗೆ ಸಮಯವಿಲ್ಲ. ಈ ನಟರು ನಮ್ಮನ್ನು ಬೇರೆ ಜಗತ್ತಿಗೆ ಸಾಗಿಸಿದ್ದಾರೆ. ಅದು ಸುಲಭದ ಸಾಧನೆಯಲ್ಲ, ”ಎಂದರು.

ಇದನ್ನೂ ಓದಿ : Kamal Haasan: ವಿಚ್ಛೇದನ ನಂತರ ನನ್ನ ಬಳಿ ಇದ್ದದ್ದು ಕೇವಲ 60 ರೂ. : ಕಮಲ್‌ ಹಾಸನ್‌ ಮಾಜಿ ಪತ್ನಿ ಸಾರಿಕಾ ಹೇಳಿದ್ದೇನು?

ಈ ಸಿನಿಮಾ ಇದೇ ವರ್ಷ ಏಪ್ರಿಲ್‌ 28ರಂದು ತೆರೆ ಕಾಣಲಿದೆ. ಪೊನ್ನಿಯನ್ ಸೆಲ್ವನ್ 2 ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಂಯೋಜಕ ಎಆರ್ ರೆಹಮಾನ್, ಸಂಕಲನಕಾರ ಶ್ರೀಕರ್ ಪ್ರಸಾದ್ ಮತ್ತು ಛಾಯಾಗ್ರಾಹಕ ರವಿವರ್ಮನ್ ತಾಂತ್ರಿಕ ಸಿಬ್ಬಂದಿಯ ಭಾಗವಾಗಿದ್ದಾರೆ. ಈ ಚಿತ್ರವನ್ನು ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿವೆ.

Exit mobile version