Site icon Vistara News

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರುದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Megha Dhade bigg boss marathi winner crptic post about rahul gandhi

‘ಬಿಗ್ ಬಾಸ್ ಮರಾಠಿ’ ಮೊದಲ ಸೀಸನ್‌ನ ವಿಜೇತೆ ಮತ್ತು ನಟಿ ಮೇಘಾ ಧಾಡೆ (Megha Dhade) ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಖತ್‌ ಆಕ್ಟಿವ್‌ ಆಗಿದ್ದಾರೆ. ಬಿಜೆಪಿ ಸೇರಿದ್ದ ನಟಿ ಮೇಘಾ ಧಾಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಹುಲ್ ಗಾಂಧಿಯವರ ವೀಡಿಯೊವನ್ನು ಹಂಚಿಕೊಂಡ ನಟಿ ಮೇಘಾ, ‘ರಾಹುಲ್ ಗಾಂಧಿಯನ್ನು ಬೆಂಬಲಿಸುವವರಿಗೆ ನಾಚಿಕೆಯಾಗಬೇಕು. ರಾಹುಲ್ ಗಾಂಧಿ ಅವರನ್ನು ನಾನು ದ್ವೇಷಿಸುತ್ತೇನೆ. ನಮ್ಮ ದೇಶವನ್ನು ಬಿಟ್ಟು ನರಕಕ್ಕೆ ಹೋಗಿ’ ಎಂದು ಹೇಳಿದ ಪೋಸ್ಟ್ ಇದೀಗ ವೈರಲ್‌ ಆಗುತ್ತಿದೆ.

ರಾಹುಲ್ ಗಾಂಧಿ ಅವರ ವಿಡಿಯೊವನ್ನು ನಟಿ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಹುಲ್‌ ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಭೆವೊಂದರಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸುವಾಗ ಕಾರ್ಯಕರ್ತರೊಬ್ಬರು ಛತ್ರಪತಿ ಶಿವಾಜಿ ಮಹಾರಾಜರ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದಾರೆ.ರಾಹುಲ್‌ ವಿಗ್ರಹ ಜತೆ ಫೋಟೊ ತೆಗೆಸಿಕೊಂಡರೇ ವಿನಃ ವಿಗ್ರಹ ಸ್ವೀಕರಿಸಿಲ್ಲ. ಈ ವಿಡಿಯೊ ವೈರಲ್‌ ಆಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಮೇಘಾ ಧಾಡೆ ಕೂಡ ರಾಹುಲ್ ಅವರನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

ಮೇಘಾ ಧಾಡೆ ಅವರು ಭಾರತೀಯ ಜನತಾ ಪಕ್ಷದ ಸಾಂಸ್ಕೃತಿಕ ಘಟಕದ ಉಪಾಧ್ಯಕ್ಷರು ಕೂಡ ಆಗಿದ್ದಾರೆ.

Exit mobile version