Site icon Vistara News

Mithilesh Chaturvedi | ಬಾಲಿವುಡ್‌ ಖ್ಯಾತ ನಟ ಮಿಥಿಲೇಶ್‌ ಚತುರ್ವೇದಿ ನಿಧನ

Mithilesh Chaturvedi

ಬೆಂಗಳೂರು: ಬಾಲಿವುಡ್‌ ಸಿನಿಮಾ ನಟ ಹಾಗೂ ರಂಗಭೂಮಿ ಕಲಾವಿದ ಮಿಥಿಲೇಶ್‌ ಚತುರ್ವೇದಿ (Mithilesh Chaturvedi) ಅವರು (ಆ.3 ಬುಧವಾರ) ಸಂಜೆ ನಿಧನರಾಗಿದ್ದಾರೆ. ಹೃದಯಾಘಾತದಿಂದ ಮಿಥಿಲೇಶ್‌ ಅವರು ಲಕ್ನೋದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಿಥಿಲೇಶ್ ಅವರ ಅಳಿಯ ಆಶಿಶ್ ಚತುರ್ವೇದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇವರು ಹೃತಿಕ್ ರೋಷನ್ ಜತೆಗಿನ ʻಕೋಯಿ ಮಿಲ್ ಗಯಾʼ, ಸನ್ನಿ ಡಿಯೋಲ್ ಅವರೊಂದಿಗೆ ʻಗದರ್ ಏಕ್ ಪ್ರೇಮ್ ಕಥಾʼ, ʻಸತ್ಯʼ, ʻಬಂಟಿ ಔರ್ ಬಬ್ಲಿʼ, ʻಕ್ರಿಶ್, ತಾಲ್ʼ, ʻರೆಡಿʼ, ʻಅಶೋಕʼ ಮತ್ತು ʻಫಿಜಾʼ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘Scam 1992’ ಸಿರೀಸ್‌ನಲ್ಲಿಯೂ ನಟಿಸಿದ್ದಾರೆ.

ಇದನ್ನೂ ಓದಿ | ಡಾ. ರಾಜ್‌, ರಂಜನಿಕಾಂತ್‌, ಅನಂತ್‌ನಾಗ್‌ ಮತ್ತಿತರ ಹಿರಿಯ ನಟರಿಗೆ ಮೇಕಪ್‌ ಮಾಡಿದ್ದ ಕೇಶವಣ್ಣ ನಿಧನ

Exit mobile version