Site icon Vistara News

Monsoon Raaga | ಮಾನ್ಸೂನ್ ರಾಗ ರಾಜ್ಯಾದ್ಯಂತ ಬಿಡುಗಡೆ: ಬೆಲ್ ಬಾಟಂ ಉಡುಗೆಯಲ್ಲಿ ಬಂದ ಡಾಲಿ ಫ್ಯಾನ್ಸ್‌!

Monsoon Raaga

ಬೆಂಗಳೂರು : ನಟ ರಾಕ್ಷಸ ಡಾಲಿ ಧನಂಜಯ ಹಾಗೂ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ (Monsoon Raaga) ಸೆಪ್ಟೆಂಬರ್ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮಾನ್ಸೂನ್ ರಾಗ ಸಿನಿಮಾದ ಪ್ರೀ ಪೇಯ್ಡ್ ಪ್ರೀಮಿಯರ್ ಶೋದಲ್ಲಿ ಸಿನಿಮಾ ಕಣ್ತುಂಬಿಸಿಕೊಂಡಿರುವ ಕೆಲವು ಅಭಿಮಾನಿಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ಬೆಂಗಳೂರಿನ ಸಂತೋಷ್ ಥೀಯೇಟರ್‌ನಲ್ಲಿ ಬೆಳಗ್ಗೆ 10:30ಕ್ಕೆ ಮೊದಲ ಶೋ ಪ್ರದರ್ಶನಗೊಂಡಿದೆ. 150ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.

ಬೆಲ್ ಬಾಟಂನಲ್ಲಿ ಡಾಲಿ ಫ್ಯಾನ್ಸ್!
ಬೆಲ್ ಬಾಟಂ ಉಡುಗೆಯಲ್ಲಿ ಮಾನ್ಸೂನ್ ರಾಗ ನೋಡಲು ಡಾಲಿ ಫ್ಯಾನ್ಸ್‌ಗಳು ಬಂದಿದ್ದರು. ಅಷ್ಟೇ ಅಲ್ಲದೇ ಇಡೀ ಸಿನಿಮಾದ ತಾರಾಗಣ ಚಿತ್ರಮಂದಿರ ಮುಂದೆ ಸಂಭ್ರಮಾಚರಣೆ ಮಾಡಿತು. ಪೇಯ್ಡ್‌ ಪ್ರೀಮಿಯರ್ ಶೋಗೆ ಈಗಾಗಲೇ ಡಾಲಿ ಅಭಿಮಾನಿಗಳು ಬಂದು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Movie Review | ಹೃದಯದೊಳಗೆ ತೇರನೆಳೆದು ಪ್ರೇಮ ರಾಗ ಹಾಡಿದ ಮಾನ್ಸೂನ್‌ ರಾಗ!

ಒಂದು ಕಡೆ ಡಾಲಿ ಧನಂಜಯ್‌ ಹಾಗೂ ರಚಿತಾ ರಾಮ್‌ ಕಾಣಿಸಿಕೊಂಡರೆ ಇನ್ನೊಂದೆಡೆ ಅಚ್ಯುತ್‌ ಕುಮಾರ್‌ ಹಾಗೂ ಸುಹಾಸಿನಿ ಪಾತ್ರಗಳು ಸಹ ಚಿತ್ರದ ಇನ್ನೊಂದು ಹೈಲೈಟ್‌ ಆಗಿದೆ. ವಿಖ್ಯಾತ್‌ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್‌ ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ರಚಿತಾ ರಾಮ್‌ ಲೈಂಗಿಕ ಕಾರ್ಯಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಮಾನ್ಸೂನ್‌ ರಾಗ ಸಿನಿಮಾ 80% ಮಳೆಯಲ್ಲಿಯೇ ಚಿತ್ರೀಕರಣವಾಗಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದ್ದು, ಕೇಳುಗರಿಗೆ ಮುದ ನೀಡುವಂತಿದೆ.

ಇದನ್ನೂ ಓದಿ | Monsoon Raaga | ಡಾಲಿ- ರಚಿತಾ ಅಭಿನಯದ ಮಾನ್ಸೂನ್ ರಾಗ ಪೇಯ್ಡ್‌ ಪ್ರೀಮಿಯರ್ ಶೋ: ಟಿಕೆಟ್ ಬುಕಿಂಗ್ ಓಪನ್!

Exit mobile version