ಬೆಂಗಳೂರು: ಹೊರಗೆ ಬಿಸಿಲು ತೀವ್ರವಾಗಿದೆ. ಹೀಗಿರುವಾಗ ಮನೆಯೊಳಗೆ ಕುಳಿತು ತಂಪಾದ ಜ್ಯೂಸು ಕುಡಿಯುತ್ತಾ, ತಿಂಡಿಗಳನ್ನು ಮೆಲ್ಲುತ್ತಾ ಇಷ್ಟವಾದ ಸಿನಿಮಾಗಳನ್ನು ನೋಡುತ್ತಾ ರಜೆ ಕಳೆಯಬಹುದು. ಯಾಕೆಂದರೆ ಈ ವಾರ ಹಲವು ಹೊಸ ಚಿತ್ರಗಳು ಒಟಿಟಿಯಲ್ಲಿ (OTT) ಬಿಡುಗಡೆಯಾಗಲಿದೆ. ಅತ್ಯಂತ ನಿರೀಕ್ಷಿತ ಚಿತ್ರಗಳಾದ ಯನಿವನ್ ಬಟ್ ಯು (Anyone But You), ಡ್ಯೂನ್: ಪಾರ್ಟ್ 2 (Dune: Part 2), ಡ್ರೀಮ್ ಸಿನಾರಿಯೊ (Dream Scenario) ಮತ್ತು ಝಾಕ್ ಸ್ನೈಡರ್ಸ್ ರೆಬೆಲ್ ಮೂನ್ – ಪಾರ್ಟ್ 2: ದಿ ಸ್ಕಾರ್ಗಿವರ್ (Zack Snyder’s Rebel Moon – Part Two: The Scargiver) ಕೂಡ ಸೇರಿದೆ.
ಇನ್ನು ವಿದ್ಯಾ ಬಾಲನ್ (Vidya Balan) ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ. ದೋ ಔರ್ ದೋ ಪ್ಯಾರ್ (Do Aur Do Pyaar ) ಕೂಡ ಈ ವಾರ ಥಿಯೇಟರ್‌ಗಳಿಗೆ ಆಗಮಿಸಲಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಹೀಗಾಗಿ ಮನೆಯಿಂದ ಹೊರಬಂದು ದೊಡ್ಡ ಪರದೆಯ ಮೇಲೆ ಈ ಚಿತ್ರ ನೋಡಬಹುದು.
ಇಷ್ಟೇ ಅಲ್ಲದೇ ಸೀ ಯು ಇನ್ ಅನದರ್ ಲೈಫ್, ದಿ ಗ್ರಿಮ್ ವೇರಿಯೇಷನ್ಸ್, ದಿ ಟೂರಿಸ್ಟ್: ಸೀಸನ್ 2 ಮತ್ತು ಚೀಫ್ ಡಿಟೆಕ್ಟಿವ್ 1958 ಸರಣಿಯು ತೆರೆಗೆ ಬರಲು ಕಾಯುತ್ತಿದೆ. ಈ ವಾರ ನೆಟ್ ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಒಟಿಟಿಯಲ್ಲಿ ಬರಲು ಸಿದ್ದವಾಗಿರುವ ಚಿತ್ರಗಳು ಇಂತಿದೆ.
ಇದನ್ನೂ ಓದಿ: Priyanka Chopra: ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವನ್ನು ಹೊಗಳಿದ ಪ್ರಿಯಾಂಕಾ ಚೋಪ್ರಾ!
ಡ್ಯೂನ್: ಪಾರ್ಟ್ ಟು
ಬುಕ್ ಮೈ ಶೋ (BookMyShow ) ನಲ್ಲಿ ಡೆನಿಸ್ ವಿಲ್ಲೆನ್ಯೂವ್ ನಿರ್ದೇಶನದ ತಿಮೋತಿ ಚಲಾಮೆಟ್, ಝೆಂಡಯಾ, ಜೇವಿಯರ್ ಬಾರ್ಡೆಮ್, ರೆಬೆಕಾ ಫರ್ಗುಸನ್, ಜೋಶ್ ಬ್ರೋಲಿನ್, ಫ್ಲಾರೆನ್ಸ್ ಪಗ್, ಆಸ್ಟಿನ್ ಬಟ್ಲರ್, ಲಿಯಾ ಸೆಡೌಕ್ಸ್, ಕ್ರಿಸ್ಟೋಫರ್ ವಾಕೆನ್ ಮೊದಲಾದವರು ಅಭಿನಯಿಸಿರುವ ಚಿತ್ರ ಡ್ಯೂನ್: ಪಾರ್ಟ್ ಟು ಏಪ್ರಿಲ್ 16ರಂದು ಬಿಡುಗಡೆಯಾಗಲಿದೆ. ಸಾಹಸಮಯ ದೃಶ್ಯಗಳಿಂದಾಗಿಯೇ ಈ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯ ಗಮನ ಸೆಳೆದಿದೆ.
ಅವರ್ ಲಿವಿಂಗ್ ವರ್ಲ್ಡ್
ಜೇಮ್ಸ್ ಹನಿಬೋರ್ನ್ ನಿರ್ದೇಶನದ ಈ ಚಿತ್ರ ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 17ರಂದು ತೆರೆಗೆ ಬರಲಿದೆ. ಪ್ರಮುಖ ಪಾತ್ರಧಾರಿಯಾಗಿ ಕೇಟ್ ಬ್ಲಾಂಚೆಟ್ ಕಾಣಿಸಿಕೊಂಡಿದ್ದು,ಇದರಲ್ಲಿ ಎಮ್ಮಿ ಪ್ರಶಸ್ತಿ ವಿಜೇತ ತಂಡವು ಜೀವಂತ ಜಗತ್ತನ್ನು ಪುನಃಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಪ್ರಯತ್ನಿಸುವ ಸಾಹಸಗಾಥೆಯನ್ನು ಒಳಗೊಂಡ ಚಿತ್ರವಿದು. ಅತ್ಯಂತ ರೋಮಾಂಚಕ ದೃಶ್ಯಗಳು ಮನ ಸೆಳೆಯುತ್ತದೆ.
ಸೀ ಯು ಇನ್ ಅನೆದರ್ ಲೈಫ್
ಜಾರ್ಜ್ ಸ್ಯಾಂಚೆಜ್-ಕಾಬೆಜುಡೊ, ಬೋರ್ಜಾ ಸೋಲರ್ ನಿರ್ದೇಶನದ ಈ ಚಿತ್ರದಲ್ಲಿ ರಾಬರ್ಟೊ ಗುಟೈರೆಜ್, ಪೋಲ್ ಲೋಪೆಜ್, ತಮಾರಾ ಕ್ಯಾಸೆಲ್ಲಾಸ್, ಕ್ವಿಮ್ ಅವಿಲಾ, ಮೌರಾದ್ ಔವಾನಿ, ಜೈಮ್ ಜಟಾರಿನ್ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 17 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಈ ಚಿತ್ರ ತೆರೆಗೆ ಬರಲಿದೆ. ಮ್ಯಾನುಯೆಲ್ ಜಬೋಯಿಸ್ ಅವರ ಪುಸ್ತಕವನ್ನು ಆಧರಿಸಿ ನಿರ್ಮಿಸಿರುವ ಈ ಕಿರುಸರಣಿಯು 11M ರೈಲು ಬಾಂಬ್ ದಾಳಿಯ ಹಿನ್ನೆಲೆಯನ್ನು ಹೊಂದಿದೆ.
ದಿ ಗ್ರಿಮ್ಮ್ ವರಿಯೇಷನ್ಸ್
ಯೊಕೊ ಕನೆಮೊರಿ, ಯಸುಹಿರೊ ಅಕಮಾಟ್ಸು, ಜುನಿಚಿರೊ ಹಶಿಗುಚಿ, ಯುಮಿ ಕಾಮಮುರಾ, ಮಸಾಟೊ ಟಕೆಯುಚಿ, ಶಿಂಟಾರೊ ನಕಾಜವಾ ನಿರ್ದೇಶಿಸರುವ ಅನಿಮೇಷನ್ ಚಿತ್ರ ಏಪ್ರಿಲ್ 17ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ತತ್ಸುಹಿಸಾ ಸುಜುಕಿ, ಕೆಂಜಿ ನೊಜಿಮಾ, ಮಿಸಾಟೊ ಫುಕುಯೆನ್ ಧ್ವನಿ ನೀಡಿರುವ ಚಿತ್ರದಲ್ಲಿ ಜಪಾನೀಸ್ ಮೂಲ ನೆಟ್ ಅನಿಮೇಷನ್ (ONA) ಸಂಕಲನ ಸರಣಿಯು ಸಹೋದರರಾದ ಜಾಕೋಬ್ ಮತ್ತು ವಿಲ್‌ಹೆಲ್ಮ್ ಮತ್ತು ಅವರ ಕಿರಿಯ ಸಹೋದರಿ, ಮುಗ್ಧ ಮತ್ತು ಕುತೂಹಲಕಾರಿ ಚಾರ್ಲೆಟ್ ಸುತ್ತ ಸುತ್ತುತ್ತದೆ.
ದಿ ಸೀಕ್ರೆಟ್ ಸ್ಕೋರ್
ಜುವಾನ್ ಕಾರ್ಲೋಸ್ ಡಿ ಲಾಕಾ ನಿರ್ದೇಶಿಸಿದ ಈ ಚಿತ್ರದಲ್ಲಿ ವಾಲ್ ಡೊರಾಂಟೆಸ್, ಜುವಾನ್ಮಾ ಪಿಯಾನೋ, ಜೋಸ್ ಪೆರಾಲ್ಟಾ, ಡೇನಿಯಲ್ ಅಬ್ರೆಗೊ, ಮೊನಿಕಾ ಪ್ಲೆಹ್ನ್, ಡಿಯಾಗೋ ಸ್ಯಾಂಡೋವಲ್, ಪಾವೊಲಾ ಗೊಮೆಜ್, ಮಿಚೆಲ್ ಅಲ್ಮಾಗುರ್, ಸೀಸರ್ ಅಕೋಸ್ಟಾ, ಡೇವಿಡ್ ಅಂಗುಲೋ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಏಪ್ರಿಲ್ 17ರಂದು ಚಿತ್ರ ತೆರೆಗೆ ಬರಲಿದೆ.
ಸುಗಾ: ಅಗಸ್ಟ್ ಡಿ ಟೂರ್ ಡಿ-ಡೇ ದಿ ಮೂವಿ
ಜುನ್-ಸೂ ಪಾರ್ಕ್ ನಿರ್ದೇಶನದ ಸುಗಾ, ಜಿಮಿನ್, ಜಂಗ್‌ಕುಕ್ ಅಭಿನಯಿಸಿರುವ ಈ ಚಿತ್ರ ಏಪ್ರಿಲ್ 18ರಂದು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ. ಎನ್‌ಕೋರ್ ಸಂಗೀತ ಕಛೇರಿಗಾಗಿ ಪ್ರಪಂಚದಾದ್ಯಂತ ಪ್ರಯಾಣಿಸುವ ತಂಡದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ.
ಆರ್ಟಿಕಲ್ 370
ಆದಿತ್ಯ ಸುಹಾಸ್ ಜಂಬಾಳೆ ನಿರ್ದೇಶನದ ಯಾಮಿ ಗೌತಮ್, ಪ್ರಿಯಾಮಣಿ, ಸ್ಕಂದ ಠಾಕೂರ್, ಅಶ್ವಿನಿ ಕೌಲ್, ವೈಭವ್ ತತ್ವವಾದಿ, ಅರುಣ್ ಗೋವಿಲ್, ಕಿರಣ್ ಕರ್ಮಾರ್ಕರ್ ಅಭಿನಯದ ಚಿತ್ರ ಜಿಯೋ ಸಿನಿಮಾದಲ್ಲಿ ಏಪ್ರಿಲ್ 19ರಂದು ತೆರೆ ಕಾಣಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಮೇಲೆ ಚಿತ್ರ ಕೇಂದ್ರೀಕರಿಸಿದೆ. ಈಗಾಗಲೇ ಈ ಚಿತ್ರ ತೆರೆಗೆ ಬಂದಿದ್ದು, ನೋಡಲಾಗದೇ ಇದ್ದರೆ ಈ ವಾರ ಓಟಿಟಿಯಲ್ಲಿ ಕಾಣಬಹುದು.
ಚೀಫ್ ಡಿಟೆಕ್ಟಿವ್ 1958
ಕಿಮ್ ಸಿಯೋಂಗ್-ಹೂನ್ ನಿರ್ದೇಶನದ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಲೀ ಜೆ-ಹೂನ್, ಲೀ ಡಾಂಗ್-ಹ್ವಿ, ಚೋಯ್ ವೂ-ಸಂಗ್, ಯೂನ್ ಹ್ಯುನ್-ಸೂ ಕಾಣಿಸಿಕೊಂಡಿದ್ದಾರೆ. Disney+ Hotstar ನಲ್ಲಿ ಈ ಚಿತ್ರ ಏಪ್ರಿಲ್ 19ರಂದು ತೆರೆ ಕಾಣಲಿದೆ. ಚೀಫ್ ಇನ್ಸ್‌ಪೆಕ್ಟರ್ (1971) ಸರಣಿಯ ಪೂರ್ವಭಾವಿ ಕಥೆಯನ್ನು ಅಂದರೆ 1950 ರಿಂದ 1960 ರ ದಶಕದ ಕಥೆಯನ್ನು ಇದು ಒಳಗೊಂಡಿದೆ.
ಡ್ರೀಮ್ ಸಿನಾರಿಯೋ
ಕ್ರಿಸ್ಟೋಫರ್ ಬೋರ್ಗ್ಲಿ ನಿರ್ದೇಶನದ ಈ ಚಿತ್ರದಲ್ಲಿ ನಿಕೋಲಸ್ ಕೇಜ್, ಜೂಲಿಯಾನ್ನೆ ನಿಕೋಲ್ಸನ್, ಮೈಕೆಲ್ ಸೆರಾ, ಟಿಮ್ ಮೆಡೋಸ್, ಡೈಲನ್ ಗೆಲುಲಾ, ಡೈಲನ್ ಬೇಕರ್ ಮುಖ್ಯ ಭೂಮಿಕಾಯಲ್ಲಿ ಕಾಣಿಸಿಕೊಂಡಿದ್ದಾರೆ. ಲಯನ್ಸ್‌ಗೇಟ್ ಪ್ಲೇ ನಲ್ಲಿ ಏಪ್ರಿಲ್ 19ರಂದು ಪ್ರದರ್ಶನ ಕಾಣಲಿದೆ.
ರೆಬೆಲ್ ಮೂನ್- ಪಾರ್ಟ್ ಟು: ದಿ ಸ್ಕ್ಯಾರ್ಗಿವೆರ್
ಝಾಕ್ ಸ್ನೈಡರ್ ನಿರ್ದೇಶನದ ಈ ಚಿತ್ರದಲ್ಲಿ ಸೋಫಿಯಾ ಬೌಟೆಲ್ಲಾ, ಚಾರ್ಲಿ ಹುನ್ನಮ್, ಮೈಕೆಲ್ ಹುಯಿಸ್ಮನ್, ಜಿಮನ್ ಹೌನ್ಸೌ, ಡೂನಾ ಬೇ, ರೇ ಫಿಶರ್, ಕ್ಲಿಯೋಪಾತ್ರ ಕೋಲ್ಮನ್, ಜೆನಾ ಮ್ಯಾಲೋನ್, ಫ್ರಾ ಫೀ, ಎಡ್ ಸ್ಕ್ರೇನ್, ಆಂಥೋನಿ ಹಾಪ್ಕಿನ್ಸ್ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19 ರಂದು ನೆಟ್‌ಫ್ಲಿಕ್ಸ್ ಚಿತ್ರ ತೆರೆ ಕಾಣಲಿದೆ.
ಸೀರೆನ್
ಆಂಟೋನಿ ಭಾಗ್ಯರ ನಿರ್ದೇಶನದ ಈ ಚಿತ್ರದಲ್ಲಿ ಜಯಂ ರವಿ, ಕೀರ್ತಿ ಸುರೇಶ್, ಅನುಪಮಾ ಪರಮೇಶ್ವರನ್, ಯೋಗಿ ಬಾಬು ಮತ್ತು ಸಮುದ್ರಕನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. Disney+ Hotstar ನಲ್ಲಿ ಏಪ್ರಿಲ್ 19ರಂದು ಚಿತ್ರ ತೆರೆ ಕಾಣಲಿದೆ. ಆಕ್ಷನ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಇದೊಂದು ಒಳ್ಳೆಯ ಸಿನೆಮಾ.
ದಿ ಟೂರಿಸ್ಟ್ : ಸೀಸನ್ 2
ಕ್ರಿಸ್ ಸ್ವೀನಿ ನಿರ್ದೇಶನದ ಈ ಚಿತ್ರದಲ್ಲಿ ಜೇಮೀ ಡೋರ್ನಾನ್, ಡೇನಿಯಲ್ ಮ್ಯಾಕ್ಡೊನಾಲ್ಡ್, ಓಲ್ವೆನ್ ಫೌರೆ, ಗ್ರೆಗ್ ಲಾರ್ಸೆನ್, ವಿಕ್ಟೋರಿಯಾ ಹರಾಲಾಬಿಡೌ, ಕಾನರ್ ಮ್ಯಾಕ್‌ನೀಲ್, ಮಾರ್ಕ್ ಮೆಕೆನ್ನಾ, ನೆಸ್ಸಾ ಮ್ಯಾಥ್ಯೂಸ್, ಡೈರ್ಮೇಡ್ ಮುರ್ತಾಗ್, ಫ್ರಾನ್ಸಿಸ್ ಮ್ಯಾಗೀ ಮುಖ್ಯ ಪಾತ್ರಧಾರಿಗಳು. ಏಪ್ರಿಲ್ 19 ರಂದು ಲಯನ್ಸ್‌ಗೇಟ್ ಪ್ಲೇ ನಲ್ಲಿ ಈ ಚಿತ್ರ ತೆರೆ ಕಾಣಲಿದೆ.
ಎನಿ ಒನ್ ಬಟ್ ಯು
ವಿಲ್ ಗ್ಲುಕ್ ನಿರ್ದೇಶನದ ಈ ಚಿತ್ರದಲ್ಲಿ ಸಿಡ್ನಿ ಸ್ವೀನಿ, ಗ್ಲೆನ್ ಪೊವೆಲ್, ಅಲೆಕ್ಸಾಂಡ್ರಾ ಶಿಪ್, ಗಾಟಾ, ಹ್ಯಾಡ್ಲಿ ರಾಬಿನ್ಸನ್, ಮಿಚೆಲ್ ಹರ್ಡ್, ಡರ್ಮಟ್ ಮುಲ್ರೋನಿ, ಡ್ಯಾರೆನ್ ಬಾರ್ನೆಟ್ ಮತ್ತು ರಾಚೆಲ್ ಗ್ರಿಫಿತ್ಸ್. ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 19ರಂದು ಈ ಚಿತ್ರ ತೆರೆ ಕಾಣಲಿದೆ.
ಲವ್ ಸೆಕ್ಸ್ ಔರ್ ಧೋಖಾ 2
ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಈ ಚಿತ್ರದಲ್ಲಿ ನಿಮೃತ್ ಕೌರ್ ಅಹ್ಲುವಾಲಿಯಾ, ಅನುಪಮ್ ಜೋರ್ದಾರ್, ರೊಸಾನಾ ಎಲ್ಸಾ ಸ್ಕುಗಿಯಾ, ಉರ್ಫಿ ಜಾವೇದ್, ಅನು ಮಲಿಕ್ ಮುಖ್ಯ ಪಾತ್ರಧಾರಿಗಳಾಗಿದ್ದರೆ. ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಸಾಮಾಜಿಕ ಜಾಲತಾಣದಲ್ಲಿ ಬೆಳೆದ ಪ್ರೀತಿ ಹೇಗಿರುತ್ತದೆ ಎನ್ನುವುದನ್ನು ಈ ಚಿತ್ರ ವಿವರಿಸುತ್ತದೆ.
ಸಿವಿಲ್ ವಾರ್
ಅಲೆಕ್ಸ್ ಗಾರ್ಲ್ಯಾಂಡ್ ನಿರ್ದೇಶನ ನಿರ್ದೇಶನದ ಕರ್ಸ್ಟನ್ ಡನ್ಸ್ಟ್, ವ್ಯಾಗ್ನರ್ ಮೌರಾ, ಕೈಲೀ ಸ್ಪೇನಿ, ಸ್ಟೀಫನ್ ಮೆಕಿನ್ಲೆ ಹೆಂಡರ್ಸನ್, ನಿಕ್ ಆಫರ್ಮನ್ ಅವರು ಅಭಿನಯಿಸಿರುವ ಚಿತ್ರ ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಿಲಿಟರಿ-ಎಂಬೆಡೆಡ್ ಪತ್ರಕರ್ತರ ತಂಡವು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ವೇಗವಾಗಿ ಉಲ್ಬಣಗೊಳ್ಳುತ್ತಿರುವ ಎರಡನೇ ಅಮೇರಿಕನ್ ಅಂತರ್ಯುದ್ಧದ ಸಮಯದಲ್ಲಿ ಪ್ರಯಾಣಿಸುವ ಕಥೆಯನ್ನು ಇದು ಒಳಗೊಂಡಿದೆ.
ದೋ ಔರ್ ದೋ ಪ್ಯಾರ್
ಶಿರ್ಷಾ ಗುಹಾ ಠಾಕುರ್ತಾ ಅವರ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್, ಪ್ರತೀಕ್ ಗಾಂಧಿ, ಇಲಿಯಾನಾ ಡಿ’ಕ್ರೂಜ್, ಸೆಂಧಿಲ್ ರಾಮಮೂರ್ತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. 2017 ರ ರೊಮ್ಯಾಂಟಿಕ್ ಕಾಮಿಡಿ ದಿ ಲವರ್ಸ್‌ನ ಅಧಿಕೃತ ರೂಪಾಂತರ ವಾದ ಈ ಚಿತ್ರದಲ್ಲಿ ದಂಪತಿ ದೂರವಾಗಿ ಮತ್ತೆ ತಮ್ಮ ಹೊಸ ಸಂಗಾತಿಗಾಗಿ ಹುಡುಕುವ ಕಥೆಯನ್ನು ಇದು ಒಳಗೊಂಡಿದೆ.