Site icon Vistara News

Mrs Chatterjee Vs Norway: ರಾಣಿ ಮುಖರ್ಜಿ ʻನನ್ನ ರಾಣಿʼಎಂದು ಶಾರುಖ್‌ ಖಾನ್ ಹೇಳಿದ್ದೇಕೆ!

Mrs Chatterjee Vs Norway My Rani Shines by Shah Rukh Khan

ಬೆಂಗಳೂರು: ರಾಣಿ ಮುಖರ್ಜಿ ಅಭಿನಯದ, ಇತ್ತೀಚೆಗೆ ಬಿಡುಗಡೆಯಾದ ಮಿಸೆಸ್ ಚಟರ್ಜಿ Vs ನಾರ್ವೆ (Mrs Chatterjee Vs Norway)ಸಿನಿಮಾ ಕಾರ್ಯಕ್ರಮದಲ್ಲಿ ಶಾರುಖ್‌ ಅವರು ರಾಣಿ ಮುಖರ್ಜಿ ಅವರನ್ನು ನನ್ನ ರಾಣಿ ಎಂದಿದ್ದಾರೆ. ಶಾರುಖ್ ಖಾನ್ ಮಾರ್ಚ್‌16ರಂದು ತಮ್ಮ ಟ್ವೀಟ್‌ನಲ್ಲಿ ʻ ಮಿಸೆಸ್ ಚಟರ್ಜಿ Vs ನಾರ್ವೆ ತಂಡದ ಅದ್ಭುತ ಪ್ರಯತ್ನ. ನನ್ನ ರಾಣಿ ಕೇಂದ್ರ ಪಾತ್ರದಲ್ಲಿ ಮಿಂಚಿದ್ದಾರೆ. ನಿರ್ದೇಶಕ ಅಶಿಮಾ, ಸೂಕ್ಷ್ಮತೆಯೊಂದಿಗೆ ಮಾನವ ಹೋರಾಟದ ಬಗ್ಗೆ ಚೆಂದವಾಗಿ ತೋರಿಸಿದ್ದಾರೆ. ಜಿಮ್ (ಸರ್ಭ್), ಅನಿರ್ಬನ್ ಭಟ್ಟಾಚಾರ್ಯ ನಮಿತ್, ಸೌಮ್ಯ ಮುಖರ್ಜಿ, ಬಾಲಾಜಿ ಗೌರಿ ಎಲ್ಲರೂ ಮಿಂಚುತ್ತಾರೆ. ನೋಡಲೇಬೇಕಾದ ಸಿನಿಮಾʼʼಎಂದು ಬರೆದುಕೊಂಡಿದ್ದಾರೆ.

ರಾಣಿ ಮುಖರ್ಜಿ ಮತ್ತು ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ʻ ಕಭಿ ಖುಷಿ ಕಭಿ ಗಮ್ (Kabhi Khushi Kabhie Gham)ʼ, ʻಕಭಿ ಅಲ್ವಿದಾ ನಾ ಕೆಹನಾ (Kabhi Alvida Naa Kehna)ʼ, ಕುಚ್ ಕುಚ್ ಹೋತಾ ಹೈ( Kuch Kuch Hota Hai ), ಚಲ್ತೆ ಚಲ್ತೆ, ಪಹೇಲಿ ( Chalte Chalte, Paheli) ಮತ್ತು ವೀರ್-ಜಾರಾ (Veer-Zaara )ಸೇರಿದಂತೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಇದನ್ನೂ ಓದಿ: Mrs Chatterjee Vs Norway: ರಾಣಿ ಮುಖರ್ಜಿ ಅಭಿನಯದ ಮಿಸೆಸ್‌ ಚಟರ್ಜಿ Vs ನಾರ್ವೆ ಟ್ರೈಲರ್‌ ಔಟ್‌!

ಶಾರುಖ್‌ ಟ್ವೀಟ್‌

ಮಿಸೆಸ್ ಚಟರ್ಜಿ Vs ನಾರ್ವೆ, ನೈಜ ಘಟನೆಗಳಿಂದ ಪ್ರೇರಿತವಾಗಿದೆ,.ಮಿಸೆಸ್‌ ಚಟರ್ಜಿ Vs ನಾರ್ವೆ ಸಿನಿಮಾವನ್ನು ನಿಖಿಲ್ ಆಡ್ವಾಣಿ ನಿರ್ಮಿಸಿದ್ದಾರೆ. ನಾರ್ವೆ ದೇಶದಲ್ಲಿ ಭಾರತೀಯ ದಂಪತಿಯ ಮಕ್ಕಳನ್ನು ಸರ್ಕಾರ ವಶಕ್ಕೆ ಪಡೆಯುತ್ತದೆ. ಬಳಿಕ ಭಾರತೀಯ ದಂಪತಿ ಮಕ್ಕಳನ್ನು ವಾಪಸ್ಸು ಪಡೆಯಲು ಹೇಗೆಲ್ಲ ಕಾನೂನು ಹೋರಾಟ ಮಾಡುತ್ತಾರೆ ಎಂಬುದೇ ಚಿತ್ರದ ಒನ್‌ಲೈನ್‌ ಸ್ಟೋರಿ.

ರಾಣಿ ಮುಖರ್ಜಿ ಅವರು ʻಬಂಟಿ ಔರ್‌ ಬಬ್ಲಿ-2ʼ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮಾರ್ಚ್‌ 21ರಂದು ರಾಣಿ ಮುಖರ್ಜಿ ಅವರ ಬಯೋಗ್ರಫಿ ಕೂಡ ಬಿಡುಗಡೆಯಾಗಲಿದೆ.

Exit mobile version