ಬಾಲಿವುಡ್
Mrs Chatterjee Vs Norway: ರಾಣಿ ಮುಖರ್ಜಿ ʻನನ್ನ ರಾಣಿʼಎಂದು ಶಾರುಖ್ ಖಾನ್ ಹೇಳಿದ್ದೇಕೆ!
ರಾಣಿ ಮುಖರ್ಜಿ ಅಭಿನಯದ, ಇತ್ತೀಚೆಗೆ ಬಿಡುಗಡೆಯಾದ ಮಿಸೆಸ್ ಚಟರ್ಜಿ Vs ನಾರ್ವೆ (Mrs Chatterjee Vs Norway)ಸಿನಿಮಾ ಕಾರ್ಯಕ್ರಮದಲ್ಲಿ ಶಾರುಖ್ ಅವರು ರಾಣಿ ಮುಖರ್ಜಿ ಅವರನ್ನು ನನ್ನ ರಾಣಿ ಎಂದಿದ್ದಾರೆ.
ಬೆಂಗಳೂರು: ರಾಣಿ ಮುಖರ್ಜಿ ಅಭಿನಯದ, ಇತ್ತೀಚೆಗೆ ಬಿಡುಗಡೆಯಾದ ಮಿಸೆಸ್ ಚಟರ್ಜಿ Vs ನಾರ್ವೆ (Mrs Chatterjee Vs Norway)ಸಿನಿಮಾ ಕಾರ್ಯಕ್ರಮದಲ್ಲಿ ಶಾರುಖ್ ಅವರು ರಾಣಿ ಮುಖರ್ಜಿ ಅವರನ್ನು ನನ್ನ ರಾಣಿ ಎಂದಿದ್ದಾರೆ. ಶಾರುಖ್ ಖಾನ್ ಮಾರ್ಚ್16ರಂದು ತಮ್ಮ ಟ್ವೀಟ್‌ನಲ್ಲಿ ʻ ಮಿಸೆಸ್ ಚಟರ್ಜಿ Vs ನಾರ್ವೆ ತಂಡದ ಅದ್ಭುತ ಪ್ರಯತ್ನ. ನನ್ನ ರಾಣಿ ಕೇಂದ್ರ ಪಾತ್ರದಲ್ಲಿ ಮಿಂಚಿದ್ದಾರೆ. ನಿರ್ದೇಶಕ ಅಶಿಮಾ, ಸೂಕ್ಷ್ಮತೆಯೊಂದಿಗೆ ಮಾನವ ಹೋರಾಟದ ಬಗ್ಗೆ ಚೆಂದವಾಗಿ ತೋರಿಸಿದ್ದಾರೆ. ಜಿಮ್ (ಸರ್ಭ್), ಅನಿರ್ಬನ್ ಭಟ್ಟಾಚಾರ್ಯ ನಮಿತ್, ಸೌಮ್ಯ ಮುಖರ್ಜಿ, ಬಾಲಾಜಿ ಗೌರಿ ಎಲ್ಲರೂ ಮಿಂಚುತ್ತಾರೆ. ನೋಡಲೇಬೇಕಾದ ಸಿನಿಮಾʼʼಎಂದು ಬರೆದುಕೊಂಡಿದ್ದಾರೆ.
ರಾಣಿ ಮುಖರ್ಜಿ ಮತ್ತು ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ʻ ಕಭಿ ಖುಷಿ ಕಭಿ ಗಮ್ (Kabhi Khushi Kabhie Gham)ʼ, ʻಕಭಿ ಅಲ್ವಿದಾ ನಾ ಕೆಹನಾ (Kabhi Alvida Naa Kehna)ʼ, ಕುಚ್ ಕುಚ್ ಹೋತಾ ಹೈ( Kuch Kuch Hota Hai ), ಚಲ್ತೆ ಚಲ್ತೆ, ಪಹೇಲಿ ( Chalte Chalte, Paheli) ಮತ್ತು ವೀರ್-ಜಾರಾ (Veer-Zaara )ಸೇರಿದಂತೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಇದನ್ನೂ ಓದಿ: Mrs Chatterjee Vs Norway: ರಾಣಿ ಮುಖರ್ಜಿ ಅಭಿನಯದ ಮಿಸೆಸ್ ಚಟರ್ಜಿ Vs ನಾರ್ವೆ ಟ್ರೈಲರ್ ಔಟ್!
ಶಾರುಖ್ ಟ್ವೀಟ್
ಮಿಸೆಸ್ ಚಟರ್ಜಿ Vs ನಾರ್ವೆ, ನೈಜ ಘಟನೆಗಳಿಂದ ಪ್ರೇರಿತವಾಗಿದೆ,.ಮಿಸೆಸ್ ಚಟರ್ಜಿ Vs ನಾರ್ವೆ ಸಿನಿಮಾವನ್ನು ನಿಖಿಲ್ ಆಡ್ವಾಣಿ ನಿರ್ಮಿಸಿದ್ದಾರೆ. ನಾರ್ವೆ ದೇಶದಲ್ಲಿ ಭಾರತೀಯ ದಂಪತಿಯ ಮಕ್ಕಳನ್ನು ಸರ್ಕಾರ ವಶಕ್ಕೆ ಪಡೆಯುತ್ತದೆ. ಬಳಿಕ ಭಾರತೀಯ ದಂಪತಿ ಮಕ್ಕಳನ್ನು ವಾಪಸ್ಸು ಪಡೆಯಲು ಹೇಗೆಲ್ಲ ಕಾನೂನು ಹೋರಾಟ ಮಾಡುತ್ತಾರೆ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ.
ರಾಣಿ ಮುಖರ್ಜಿ ಅವರು ʻಬಂಟಿ ಔರ್ ಬಬ್ಲಿ-2ʼ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮಾರ್ಚ್ 21ರಂದು ರಾಣಿ ಮುಖರ್ಜಿ ಅವರ ಬಯೋಗ್ರಫಿ ಕೂಡ ಬಿಡುಗಡೆಯಾಗಲಿದೆ.
ಬಾಲಿವುಡ್
Kangana Ranaut : ಪ್ರಿಯಾಂಕಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್ ಜೋಹರ್ ಕಾರಣ ಎಂದ ಕಂಗನಾ!
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆಯುವುದಕ್ಕೆ ನಿರ್ದೇಶಕ ಕರಣ್ ಜೋಹರ್ ಅವರೇ ಕಾರಣ ಎಂದು ನಟಿ ಕಂಗನಾ ರಣಾವತ್ (Kangana Ranaut) ಆರೋಪಿಸಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದಾ ಸೋಶಿಯಲ್ ಮೀಡಿಯಾ ಮೂಲಕ ಸುದ್ದಿ ಮಾಡುವವರು. ಇದೀಗ ನಟಿ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಕರಣ್ ಜೋಹರ್ ಅವರ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್ ಅವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Kangana Ranaut: ಚಿತ್ರರಂಗದಲ್ಲೇ ಅತ್ಯಂತ ದುಬಾರಿ ವ್ಯಾನಿಟಿ ವ್ಯಾನ್ ಬಳಸುತ್ತಿರುವ ನಟಿ ಕಂಗನಾ ರಣಾವತ್!
ಟ್ವಿಟರ್‌ನಲ್ಲಿ ಸಾಲು ಸಾಲು ಟ್ವೀಟ್ ಮಾಡಿರುವ ನಟಿ, “ಪ್ರಿಯಾಂಕಾ ವಿರುದ್ಧ ಹಲವರು ಗ್ಯಾಂಗ್ ಮಾಡಿಕೊಂಡರು. ಅವರ ಸಿನಿಮಾ ಕ್ಷೇತ್ರವನ್ನು ಬಿಟ್ಟು ಹೋಗುವಂತೆ ಹಿಂದೆ ಬಿದ್ದರು. ಸ್ವಯಂ ಪ್ರಯತ್ನದಿಂದ ಮೇಲೆ ಬಂದಿದ್ದ ಹೆಣ್ಣೊಬ್ಬರು ಭಾರತವನ್ನೇ ಬಿಟ್ಟು ಹೋಗುವಂತೆ ಮಾಡಿದರು. ಕರಣ್ ಜೋಹರ್ ಅವರು ಆಕೆಯನ್ನು ಬ್ಯಾನ್ ಮಾಡಿದ ವಿಚಾರ ಎಲ್ಲರಿಗೂ ತಿಳಿದಿದೆ” ಎಂದು ಬರೆದುಕೊಂಡಿದ್ದಾರೆ.
“ಶಾರುಖ್ ಖಾನ್ ಅವರೊಂದಿಗೆ ಪ್ರಿಯಾಂಕಾ ಸ್ನೇಹದಿಂದ ಇದ್ದಿದ್ದು ಕರಣ್‌ಗೆ ಆಗಲಿಲ್ಲ. ಹಾಗಾಗಿ ಅವರ ವಿರುದ್ಧ ಎಲ್ಲರನ್ನೂ ಎತ್ತಿಕಟ್ಟಿದರು. ಅದೇ ಕಾರಣಕ್ಕೆ ಆಕೆ ಭಾರತವನ್ನೇ ತೊರೆಯಬೇಕಾಯಿತು. ಈ ಅಸಹ್ಯಕರ, ಅಸೂಯೆ, ನೀಚ ಮತ್ತು ವಿಷಕಾರಿ ವ್ಯಕ್ತಿಗೆ ಚಲನಚಿತ್ರೋದ್ಯಮದ ಸಂಸ್ಕೃತಿ ಮತ್ತು ಪರಿಸರವನ್ನು ಹಾಳು ಮಾಡಿದ್ದಾರೆ. ಅವರ ಗ್ಯಾಂಗ್ ಮೇಲೆ ದಾಳಿ ನಡೆಸಿ ಬಂಧಿಸಬೇಕು” ಎಂದು ನಟಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Kangana Ranaut: ಇನ್ನೂ ಗದ್ದೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಕಂಗನಾ ತಾಯಿ! ನಾನೇ ಕಾರಣ ಎಂದ ಕಂಗನಾ
ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ತಾವು ಬಾಲಿವುಡ್ ತೊರೆಯುವುದಕ್ಕೆ ಕಾರಣ ಹೇಳಿಕೊಂಡಿದ್ದರು. “ಬಾಲಿವುಡ್‌ನಲ್ಲಿ ನನ್ನ ಮೂಲೆಗೆ ಹಾಕಲಾಯಿತು. ರಾಜಕೀಯ ಮಾಡಲಾಯಿತು. ಅದರಿಂದ ಬೇಸತ್ತು ಹೊರಬಂದೆ” ಎಂದು ಅವರು ಹೇಳಿದ್ದರು. ನಟಿ 2015ರಲ್ಲಿ ಬಾಲಿವುಡ್ ತೊರೆದು ಹಾಲಿವುಡ್ ಸೇರಿಕೊಂಡಿದ್ದಾರೆ.
South Cinema
Kareena Kapoor: ಉರ್ಫಿ ತುಂಬ ಧೈರ್ಯಶಾಲಿ ಎಂದು ಹಾಡಿ ಹೊಗಳಿದ ಕರೀನಾ ಕಪೂರ್
ಕರೀನಾ ಕಪೂರ್ (Kareena Kapoor) ಸಂದರ್ಶನವೊಂದರಲ್ಲಿ ಉರ್ಫಿಯನ್ನು ಹೊಗಳಿದ್ದಾರೆ. ನಟಿ ಮಾತನಾಡಿ ʻನಾನು ಉರ್ಫಿ ಜಾವೇದ್ ಅವರಷ್ಟು ಧೈರ್ಯಶಾಲಿಯಲ್ಲ ಎಂದಿದ್ದಾರೆ. ಸದಾ ಉಡುಪಿನ ಮೂಲಕವೇ ಕೆಂಗಣ್ಣಿಗೆ ಗುರಿಯಾಗುತ್ತಿರುವ ನಟಿಯ ಬಗ್ಗೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ನಟಿಯ ಫ್ಯಾಶನ್ ಸೆನ್ಸ್ ಕುರಿತು ಶ್ಲಾಘಿಸಿದ ಸಂದರ್ಭಗಳಿವೆ.
ಬೆಂಗಳೂರು: ಫ್ಯಾಷನ್ ಐಕಾನ್ ಅಂತಯೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (urfi javed) ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿಯನ್ನು ಗಳಿಸಿದರು. ಸದಾ ಉಡುಪಿನ ಮೂಲಕವೇ ಕೆಂಗಣ್ಣಿಗೆ ಗುರಿಯಾಗುತ್ತಿರುವ ನಟಿಯ ಬಗ್ಗೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ನಟಿಯ ಫ್ಯಾಶನ್ ಸೆನ್ಸ್ ಕುರಿತು ಶ್ಲಾಘಿಸಿದ ಸಂದರ್ಭಗಳಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ತಾರೆ ಕರೀನಾ ಕಪೂರ್ (Kareena Kapoor) ಅವರು ಉರ್ಫಿ ಜಾವೇದ್ ಅವರನ್ನು ಹೊಗಳಿದ್ದಾರೆ. ʻʻಉರ್ಫಿ ತುಂಬ ‘ಧೈರ್ಯಶಾಲಿ’ ಎಂದು ಹೇಳಿದ್ದಾರೆ.
ಕರೀನಾ ಕಪೂರ್ ಸಂದರ್ಶನವೊಂದರಲ್ಲಿ ಉರ್ಫಿಯನ್ನು ಹೊಗಳಿದ್ದಾರೆ. ನಟಿ ಮಾತನಾಡಿ ʻನಾನು ಉರ್ಫಿ ಜಾವೇದ್ ಅವರಷ್ಟು ಧೈರ್ಯಶಾಲಿಯಲ್ಲ. ಫ್ಯಾಷನ್ ಎನ್ನುವುದು ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ. ಅವರ ಒಂದು ಈ ಆತ್ಮವಿಶ್ವಾಸ ಇಂದು ಇಲ್ಲಿಗೆ ತಂದಿದೆ. ಉರ್ಫಿ ಅದ್ಭುತವಾಗಿ ಕಾಣುತ್ತಾರೆ ಎಂದು ನಾನು ಭಾವಿಸುತ್ತೇನೆʼʼಎಂದರು.
ಮಾತು ಮುಂದುವರಿಸಿ ʻʻತನಗೆ ಬೇಕಾದಂತಹ ಫ್ಯಾಷನ್ ಅನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ಫ್ಯಾಷನ್ ಅಂದರೆ. ನಿಮ್ಮ ಸ್ಕಿನ್‌ಗೆ ಯಾವುದು ಆರಾಮದಾಯಕವಾಗಿರುತ್ತದೆಯೋ ಅದನ್ನು ನೀವು ಮುಂದುವರಿಸಿ. ಉರ್ಫಿ ಅವರ ನಾನು ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ. ನಾನು ಆತ್ಮವಿಶ್ವಾಸದ ಹುಡುಗಿ. ಉರ್ಫಿ ಅವರು ನಡೆದುಕೊಳ್ಳುವ ರೀತಿಯನ್ನು ಪ್ರೀತಿಸುತ್ತೇನೆ. ಹ್ಯಾಟ್ಸ್ ಆಫ್ ಉರ್ಫಿ.”ಎಂದಿದ್ದಾರೆ.
ಇದನ್ನೂ ಓದಿ: Urfi Javed: ಇದು ಡಬಲ್ ಧಮಾಕಾ! ಒಟ್ಟಿಗೆ ಕಾಣಿಸಿಕೊಂಡ ಉರ್ಫಿ ಜಾವೇದ್ ಮತ್ತು ಸನ್ನಿ ಲಿಯೋನ್!
ಕೆಲಸದ ಮುಂಭಾಗದಲ್ಲಿ, ಕರೀನಾ ಕೊನೆಯದಾಗಿ ಅಮೀರ್ ಖಾನ್ ಅವರೊಂದಿಗೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡರು. ಮುಂದೆ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್, ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಮತ್ತು ದಿ ಕ್ರ್ಯೂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
South Cinema
Priyanka Chopra: ಆರ್‌ಆರ್‌ಆರ್ ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾ: ಟ್ರೋಲ್‌ಗೆ ಗುರಿಯಾದ ನಟಿ
ನಟಿ (Priyanka Chopra) ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆರ್‌ಆರ್‌ಆರ್ ಚಿತ್ರವನ್ನು ‘ತಮಿಳು ಚಿತ್ರ’ ಎಂದು ಉಲ್ಲೇಖಿಸಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಟಿಯ ವಿರುದ್ಧ ಗರಂ ಆಗಿದ್ದಾರೆ.
ಬೆಂಗಳೂರು: ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರ ಆಸ್ಕರ್‌ಗೆ ಸಲ್ಲಿಸಿದಾಗಿನಿಂದಲೂ ಪ್ರಿಯಾಂಕಾ ಚೋಪ್ರಾ (Priyanka Chopra) ಉತ್ತಮ ಬೆಂಬಲಿಗರಾಗಿದ್ದರು. ಅಮೆರಿಕಾದಲ್ಲಿ ಚಿತ್ರದ ಪ್ರದರ್ಶನದಲ್ಲಿಯೂ ನಟಿ ಹಾಜರಾಗಿದ್ದರು. ಆದರೆ ಇದೀಗ ನಟಿ ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆರ್‌ಆರ್‌ಆರ್ ಚಿತ್ರವನ್ನು ‘ತಮಿಳು ಚಿತ್ರ’ ಎಂದು ಉಲ್ಲೇಖಿಸಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಟಿಯ ವಿರುದ್ಧ ಗರಂ ಆಗಿದ್ದಾರೆ.
ಡಾಕ್ಸ್ ಶೆಪರ್ಡ್ ಅವರೊಂದಿಗೆ ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನ ಇತ್ತೀಚಿನ ಸಂದರ್ಶನದಲ್ಲಿ, ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದರು. ಸಂದರ್ಶನದ ಸಮಯದಲ್ಲಿ, ನಿರೂಪಕರು RRR ಅನ್ನು ಬಾಲಿವುಡ್ ಚಲನಚಿತ್ರ ಎಂದು ಹೇಳಿದ್ದಾರೆ. ಬಾಲಿವುಡ್ ಮತ್ತು ಹಾಲಿವುಡ್ ಹೋಲಿಕೆ ಮಾಡುವಾಗ, ʻಕೆಲವು ಸೆಲೆಬ್ರಿಟಿಗಳನ್ನು ಮತ್ತು ಸ್ಟುಡಿಯೋಗಳು ಎಲ್ಲವನ್ನೂ ನಿಯಂತ್ರಿಸುತ್ತವೆʼ ಎಂದು ಹೇಳಿದರು. ಪ್ರಿಯಾಂಕಾ ಅವರ ಮಾತಿಗೆ ಒಪ್ಪಿಗೆ ಸೂಚಿಸಿ, “ನೀವು ದೂರದಲ್ಲಿದ್ದೀರಿ ಎಂದು ನಾನು ಭಾವಿಸುತ್ತೇನೆ, ದೊಡ್ಡ ಸ್ಟುಡಿಯೋಗಳು, ಕೆಲವು ನಟರುಗಳು ದೊಡ್ಡ ಸಿನಿಮಾಗಳನ್ನು ಚಲನಚಿತ್ರಗಳನ್ನು ಮಾಡುತ್ತಾರೆ. ಆದರೆ ಇದೀಗ ಎಲ್ಲವೂ ಬದಲಾಗಿದೆ. ಮೊದಲನೆಯದಾಗಿ ಸ್ಟ್ರೀಮಿಂಗ್ ಆಗಿದೆ. ಇದು ಕಂಟೆಂಟ್ ಮಾಡುತ್ತಿರುವ ಹಲವಾರು ಜನರಿಗೆ ಸಾಥ್ ನೀಡಿದೆ. ಬಾಲಿವುಡ್ ಉದ್ಯಮ ನಂಬಲಾಗದ ರೀತಿಯಲ್ಲಿ ವಿಕಸನಗೊಂಡಿದೆ.ʼʼಎಂದರು. ಆಗ ಸಂದರ್ಶನಕಾರ ʻಆರ್‌ಆರ್‌ಆರ್ ಸಿನಿಮಾ ಅಂತೆʼ ಎಂದು ಹೇಳಿದಾಗ, ನಟಿ ʻಆರ್‌ಆರ್‌ಆರ್ ಬಾಲಿವುಡ್ ಸಿನಿಮಾವಲ್ಲ, ತಮಿಳು ಸಿನಿಮಾʼ ಎಂದಿದ್ದಾರೆ.
ಪ್ರಿಯಾಂಕಾ ಸಂದರ್ಶಕರ ಮಾತನ್ನು ಸರಿಪಡಿಸಿ,ʻʻಆರ್‌ಆರ್‌ಆರ್ ತಮಿಳು ಚಿತ್ರ. ಇದು ದೊಡ್ಡ, ಮೆಗಾ, ಬ್ಲಾಕ್‌ಬಸ್ಟರ್ ಸಿನಿಮಾ. ಇದು ನಮ್ಮ ಅವೆಂಜರ್ಸ್‌ನಂತೆ” ಎಂದು ಹೇಳಿದರು. ಇದೀಗ ನಟಿ ಆರ್‌ಆರ್‌ಆರ್ ಸಿನಿಮಾ ತಮಿಳು ಸಿನಿಮಾ ಅಂದಿರುವುದಕ್ಕೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ 2023ರ ಆಸ್ಕರ್‌ಗೆ ಮುಂಚಿತವಾಗಿ ಆರ್‌ಆರ್‌ಆರ್ ಸಿನಿಮಾವನ್ನು ಪ್ರಚಾರ ಮಾಡಿದ್ದರು. ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ ಚಲನಚಿತ್ರವನ್ನು ಅಭಿನಂದಿಸಿದ್ದರು. ಇಷ್ಟೆಲ್ಲ ಸಪೋರ್ಟ್ ಮಾಡಿರುವ ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇದೀಗ ನೆಟ್ಟಿಗರು ಟ್ವೀಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Priyanka Chopra: ಫೇರ್‌ನೆಸ್ ಆ್ಯಡ್‌ಗಳಲ್ಲಿ ನಟಿಸುವುದು ಹಾನಿಕರ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ?
ಟ್ರೋಲ್ ಮಾಡಿ ನಟಿಯ ಕಾಲೆಳೆದ ನೆಟ್ಟಿಗರು
ನೆಟ್ಟಿಗೊಬ್ಬರು ʻʻನಿಮ್ಮ ಬಗ್ಗೆ ತುಂಬಾ ನಿರಾಶೆಯಾಗಿದೆ. ತೆಲುಗು ಚಿತ್ರ ಯಾವುದು ಎಂದು ನಿಮಗೆ ಹೇಳಲು ಸಾಧ್ಯವಿಲ್ಲ ಅಂದರೆ ನೀವು ಪ್ರಚಾರದ ಸಮಯದಲ್ಲಿ RRR ಚಿತ್ರವನ್ನು ಬೆಂಬಲಿಸಿದ್ದೀರಿ ಅದಕ್ಕಾಗಿ ನಾವು ತುಂಬಾ ಕೃತಜ್ಞರಾಗಿದ್ದೇವೆ! ಆದರೆ ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರಿ. ಸಿನಿಮಾ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಸಂಶೋಧನೆಯನ್ನು ಮಾಡಿ ಬನ್ನಿʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Priyanka Chopra : ಬಾಲಿವುಡ್‌ನ ಪೊಲಿಟಿಕ್ಸ್ಗೆ ಹೆದರಿ ಹಾಲಿವುಡ್ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ
ಪಾಡ್‌ಕ್ಯಾಸ್ಟ್ ಸಂಭಾಷಣೆಯಲ್ಲಿ “ಡಾಕ್ಸ್ ಶೆಪರ್ಡ್ ಜತೆ ಆರ್ಮ್‌ಚೇರ್ ಎಕ್ಸ್‌ಪರ್ಟ್”. ಆರ್‌ಆರ್‌ಆರ್ ಸಿನಿಮಾವನ್ನು ಬಾಲಿವುಡ್ ಚಿತ್ರ ಎಂದು ಲೇಬಲ್ ಮಾಡುವ ಸಂದರ್ಶಕರ ತಪ್ಪನ್ನು ಪ್ರಿಯಾಂಕಾ ಚೋಪ್ರಾ ಎತ್ತಿ ತೋರಿಸಿದ್ದಾರೆ. ತಮಿಳು ಚಿತ್ರ ಎಂದು ಬೇರೆ ಹೇಳಿದ್ದಾರೆ. ಉತ್ತರ ಭಾರತದ ಜನರು ಯಾವಾಗಲೂ ದಕ್ಷಿಣ ಭಾರತದ ಚಿತ್ರರಂಗವನ್ನು ತಮಿಳು ಮತ್ತು ಸಾಂಬಾರ್ ಎಂದು ಕಂಡುಕೊಳ್ಳುತ್ತಾರೆʼʼಎಂದು ಬರೆದುಕೊಂಡಿದ್ದಾರೆ.
ನಟಿ ಆರ್‌ಆರ್‌ಆರ್ ಚಿತ್ರತಂಡಕ್ಕೆ ಪ್ರೀ ಇವೆಂಟ್ ಪಾರ್ಟಿಯನ್ನು ಸಹ ಆಯೋಜಿಸಿದ್ದರು. ಆದರೆ ಸಿನಿಮಾದ ಮೂಲ ಭಾಷೆಯೇʼʼಗೊತ್ತಿಲ್ಲ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.
ಸಿಟಾಡೆಲ್‌ನ ಪ್ರಚಾರಕ್ಕಾಗಿ ಪಿಗ್ಗಿ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಶೀಘ್ರದಲ್ಲೇ ನಟಿ ‘ಸಿಟಾಡೆಲ್’ ಮತ್ತು ‘ಲವ್ ಎಗೇನ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
South Cinema
Amitabh Bachchan: 5 ಗ್ರಹಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿರುವ ಅಪರೂಪದ ವಿಡಿಯೊ ಹಂಚಿಕೊಂಡ ಅಮಿತಾಭ್ ಬಚ್ಚನ್
ಮಾರ್ಚ್ 29ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 5 ಗ್ರಹಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿರುವ ಅಪರೂಪದ ವಿಡಿಯೊವನ್ನು ಹಂಚಿಕೊಂಡಿದ್ದಾರೆ (Amitabh Bachchan). ವಿಡಿಯೊದಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಯುರೇನಸ್ ಎಲ್ಲವೂ ಒಂದೇ ರೇಖೆಯಲ್ಲಿವೆ.
ಬೆಂಗಳೂರು: ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಮಾರ್ಚ್ 29ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 5 ಗ್ರಹಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿರುವ ಅಪರೂಪದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಯುರೇನಸ್ ಎಲ್ಲವೂ ಒಂದೇ ರೇಖೆಯಲ್ಲಿವೆ. ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ ನಟ ʻʻಎಷ್ಟು ಸುಂದರ ದೃಶ್ಯ…! 5 ಗ್ರಹಗಳು ಇಂದು ಒಟ್ಟಿಗೆ ಒಂದೇ ರೇಖೆಯಲ್ಲಿ ಜೋಡಿಸಲ್ಪಟ್ಟಿವೆ. ಸುಂದರ ಮತ್ತು ಅಪರೂಪ. ನೀವೂ ಇದಕ್ಕೆ ಸಾಕ್ಷಿಯಾಗಿದ್ದೀರಿ ಎಂದು ಭಾವಿಸುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ವಿಡಿಯೊವನ್ನು ಪೋಸ್ಟ್ ಮಾಡಿದ ನಂತರ 2.2 ಮಿಲಿಯನ್ ವೀಕ್ಷಣೆಗಳು, 15,000 ಲೈಕ್ಸ್‌ಗಳು ಬಂದಿವೆ. ನೆಟ್ಟಗರೊಬ್ಬರು ‘ನಾನೂ ಗಮನಿಸಿದ್ದೇನೆ… ನಿಮ್ಮಂತಹ ಅತ್ಯುತ್ತಮ ಫೋನ್ ನಮ್ಮ ಹತ್ತಿರ ಇಲ್ಲ’ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು “ನನ್ನ ಫೋನ್ ಚೆನ್ನಾಗಿ ಝೂಮ್ ಆಗುತ್ತಿಲ್ಲ ಸರ್” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಬಚ್ಚನ್ ಸಾಹಭ್ ಅವರ ಕೈಗಳು ತುಂಬಾ ಉದ್ದವಾಗಿದೆ” ಎಂದು ಕಮೆಂಟ್ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಅವರಿಂದ ಪ್ರೇರಿತರಾದ ಹಲವಾರು ಬಳಕೆದಾರರು ಬುಧ, ಗುರು, ಶುಕ್ರ, ಯುರೇನಸ್, ಮಂಗಳ ಮತ್ತು ಚಂದ್ರನ ಈ ಅಪರೂಪದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಮುಂಬರುವ ಚಲನಚಿತ್ರಗಳು
ಬಿಗ್ ಬಿ ಅವರು ʻಪ್ರಾಜೆಕ್ಟ್ ಕೆʼ ಸಿನಿಮಾದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನದಲ್ಲಿ, ಪ್ರಾಜೆಕ್ಟ್ ಕೆ ಮೂಡಿಬರುತ್ತಿದೆ. ಹಿಂದಿ ಮತ್ತು ತೆಲುಗುವಿನಲ್ಲಿ ಸಿನಿಮಾ ತಯಾರಾಗುತ್ತಿದೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾದ ದ್ವಿಭಾಷಾ ಚಲನಚಿತ್ರವಾಗಿದೆ. ಅದೇ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಬಿಗ್ ಬಿ ರಿಶು ದಾಸ್‌ಗುಪ್ತಾ ಅವರ ‘ಸೆಕ್ಷನ್ 84’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Amitabh Bachchan: ಬೆಡ್ ರೆಸ್ಟ್‌ನಲ್ಲಿರುವ ಅಮಿತಾಭ್‌ರಿಂದ ಬಂತು ಹೊಸ ಟ್ವೀಟ್; ನನಗಾಗಿ ಪ್ರಾರ್ಥಿಸಿ ಎಂದ ಬಿಗ್ ಬಿ
ಅಮಿತಾಭ್ ಬಚ್ಚನ್ ಪೋಸ್ಟ್
ʼಪ್ರಾಜೆಕ್ಟ್ ಕೆʼ ಸಿನಿಮಾ
ಸಿನಿಮಾ ನಿರ್ಮಾಣ ಸಂಸ್ಥೆ ವೈಜಯಂತಿ ಮೂವಿಸ್‌ನ 50ನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾವಾಗಿದೆ. ವಿಶೇಷವೆಂದರೆ ಈ ಸಿನಿಮಾ ಒಂದು ಪಾರ್ಟ್‌ನಲ್ಲಿ ಬರದೆ ಎರಡು ಭಾಗಗಳಲ್ಲಿ ಬರಲಿದೆ ಎಂದು ಮೂಲಗಳು ತಿಳಿಸಿವೆ.ಸಿನಿಮಾದಲ್ಲಿ ಪ್ರಭಾಸ್ ಬೇರೆಯದ್ದೇ ರೀತಿಯ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಾಜೆಕ್ಟ್ ಕೆ ಸಿನಿಮಾದ ದೃಷ್ಟಿ ಮತ್ತು ಕಥಾವಸ್ತುವು ತುಂಬಾ ದೊಡ್ಡದಾಗಿದೆ. ಹಾಗಾಗಿ ತಯಾರಕರು ಇದನ್ನು 2 ಭಾಗದ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.ಎಂದು ಮೂಲವು ತಿಳಿಸಿದೆ.
-
ಕರ್ನಾಟಕ14 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ15 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ18 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ13 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ9 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್10 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ12 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ16 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?