Site icon Vistara News

Actor Suriya : ʻಸೂರ್ಯ 42ʼದಲ್ಲಿ ದಿಶಾ ಪಟಾನಿ ಜತೆ ಸ್ಕ್ರೀನ್‌ ಶೇರ್‌ ಮಾಡಲಿದ್ದಾರಾ ಮೃಣಾಲ್ ಠಾಕೂರ್‌?

Actor Suriya 42

ಬೆಂಗಳೂರು : ಕಾಲಿವುಡ್ ಸ್ಟಾರ್ ಸೂರ್ಯ ಅವರು ಹೆಸರಿಡದ ʻಸೂರ್ಯ 42 ನೇʼ (Actor Suriya) ಸಿನಿಮಾಗಾಗಿ ದಿಶಾ ಪಟಾನಿ ಜತೆ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸಿರುತೈ ಶಿವ ನಿರ್ದೇಶನದ ಈ ಚಿತ್ರದಲ್ಲಿ ಯೋಗಿ ಬಾಬು, ಕೋವಲ್ ಸರಳಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಸೂರ್ಯ ಐದು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಮೃಣಾಲ್ ಠಾಕೂರ್ ʼಸೂರ್ಯ 42ʼ ಸಿನಿಮಾಗೆ ಸಹಿ ಹಾಕಿದ್ದಾರೆ ಎಂದು ವರದಿ ಆಗಿದೆ.

ಮೃಣಾಲ್ ಠಾಕೂರ್‌ ಅವರು ಸೂರ್ಯ ಜತೆ ಸುಧಾ ಕೊಂಗರ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ಮಾಧ್ಯಮಗಳು ಪ್ರಕಟಿಸಿದ್ದವು. ಆದರೆ ಈ ಎರಡೂ ಚಿತ್ರಗಳ ಗಾಸಿಪ್‌ ಬಗ್ಗೆ ಮೃಣಾಲ್‌ ಯಾವುದೇ ರೀತಿ ಸ್ಪಷ್ಟನೆ ನೀಡಿಲ್ಲ. 42 IMDB ಪ್ರಕಾರ, ಸೂರ್ಯ ಅವರು ಯೋಧನ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: Alia Bhatt: 108 ಸೂರ್ಯ ನಮಸ್ಕಾರ ಮಾಡಿದ ಆಲಿಯಾ ಭಟ್‌: ಫೋಟೊಗಳು ವೈರಲ್‌!

ಚಿತ್ರದಲ್ಲಿ ಸೂರ್ಯ ಅರತಾರ್, ವೆಂಕಟೆಟರ್, ಮಂದಾಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಗೋವಾ ಮತ್ತು ಚೆನ್ನೈನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಈ ಚಿತ್ರವು 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಸೂರ್ಯ ಅವರ ಕೆರಿಯರ್‌ನಲ್ಲಿಯೇ ಇದು ಹೈ ಬಜೆಟ್‌ ಸಿನಿಮಾ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Ratha Saptami 2023: ರಾಜ್ಯಾದ್ಯಂತ ಸೃಷ್ಟಿಕರ್ತನಿಗೆ ಶ್ರದ್ಧಾ ಯೋಗ; ಓ ಸೂರ್ಯ ನಿನಗೆ ನಮನ

‘ಸೂರ್ಯ 42’ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರಕ್ಕೆ ವೀರ್ ಎಂದು ಶೀರ್ಷಿಕೆ ಇಡಲಾಗುವುದು ಎಂಬ ಸುದ್ದಿ ಇತ್ತು. ಆದರೆ ಈ ಬಗ್ಗೆ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಕೆ ಇ ಜ್ಞಾನವೇಲರಾಜ ಮತ್ತು ವಂಶಿ ಪ್ರಮೋದ್ ಈ ಚಿತ್ರದ ನಿರ್ಮಾಪಕರು. ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Exit mobile version