ಬೆಂಗಳೂರು: ಧೋನಿ ಎಂಟರ್ಟೈನ್ಮೆಂಟ್ (MS Dhoni) ಮೂಲಕ ತಮಿಳು ಸಿನಿಮಾವೊಂದನ್ನು ನಿರ್ಮಾಣ ಮಾಡಲು ಎಂ ಎಸ್ ಧೋನಿ ಮುಂದಾಗಿದ್ದಾರೆ. ಇದೀಗ ಸಿನಿಮಾದ ತಾರಾಗಣವನ್ನು ಹಾಗೂ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ. ಜನವರಿ 27ರಂದು ಎಂ ಎಸ್ ಧೋನಿ ಒಡೆತನದ ಎಂಟರ್ಟೈನ್ಮೆಂಟ್ ಕಂಪನಿ ಚಿತ್ರದ ಶೀರ್ಷಿಕೆ ‘ಎಲ್‌ಜಿಎಂ – ಲೆಟ್ಸ್ ಗೆಟ್ ಮ್ಯಾರೀಡ್’ ಅನಾವರಣಗೊಳಿಸಿದೆ. ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ನಾಯಕ, ನಾಯಕಿಯಾಗಿ ನಟಿಸಲಿದ್ದಾರೆ.
ಚಿತ್ರತಂಡವು ಮೋಷನ್ ಪೋಸ್ಟರ್ ಅನಾವರಣಗೊಳಿಸಿದೆ. ಪತ್ನಿ ಸಾಕ್ಷಿ ಸಿಂಗ್ ಧೋನಿ ಅವರು ಈ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕರಾಗಿದ್ದು, ಅವರು ಸಿನಿಮಾ ನಿರ್ಮಿಸಲಿದ್ದಾರೆ. ಅಥರ್ವ- ದಿ ಒರಿಜಿನ್ ಎಂಬ ಹೊಸ ಯುಗದ ಕಾದಂಬರಿ ಬರೆದಿರುವ ರಮೇಶ್ ತಮಿಳ್‌ಮಣಿ ಎಂಬುವರು ಈ ಚಲನಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದೊಂದು ಕೌಟುಂಬಿಕ ಮನರಂಜನಾ ಸಿನಿಮಾವಾಗಿದ್ದು, ಸಾಕ್ಷಿ ಸಿಂಗ್ ಧೋನಿ ಅವರು ರೂಪ ಕೊಟ್ಟಿದ್ದಾರೆ. ಇದು ತಮಿಳಿನ ಅಚ್ಚುಮೆಚ್ಚಿನ ತಮಿಳು ಸಿನಿಮಾವಾಗಲಿದೆ ಎಂದು ತಮಿಳ್‌ಮಣಿ ಅವರು ಹೇಳಿದ್ದಾರೆ.
ಇದನ್ನೂ ಓದಿ: Vijay Antony | ಶೂಟಿಂಗ್ ವೇಳೆ ಅಪಘಾತ: ಕಾಲಿವುಡ್ ನಟ ವಿಜಯ್ ಆ್ಯಂಟೊನಿ ಗಂಭೀರ
ಇದನ್ನೂ ಓದಿ: Dhoni Entertainment | ಧೋನಿ ಬ್ಯಾನರ್‌ನಡಿ ಮೊದಲ ಸಿನಿಮಾ ತಮಿಳಿನಲ್ಲಿ, ಪತ್ನಿ ಸಾಕ್ಷಿಯದ್ದೇ ಕತೆ
ಧೋನಿ ಎಂಟರ್ಟೈನ್ಮೆಂಟ್ ಮೋಷನ್ ಪೋಸ್ಟ್‌ರ್ ಹಂಚಿಕೊಂಡು ʻʻಎಲ್‌ಜಿಎಂ – ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾ ಧೋನಿ ಎಂಟರ್‌ಟೈನ್‌ಮೆಂಟ್‌ನ ಮೊದಲ ನಿರ್ಮಾಣ! ಮೋಷನ್ ಪೋಸ್ಟರ್ ಈಗ ಹೊರಬಂದಿದೆ.” ಎಂದು ಬರೆದುಕೊಂಡಿದ್ದಾರೆ. ಜನವರಿ 26 ರಂದು ಚಿತ್ರದ ಘೋಷಣೆಗೆ ಸಂಬಂಧಿಸಿದಂತೆ ಅವರು ಸಾಮಾನ್ಯ ಪೋಸ್ಟರ್ ಅನ್ನು ಟ್ವೀಟ್ ಮಾಡಿದ್ದರು.