Site icon Vistara News

Jailer Movie: ರಜನಿಕಾಂತ್‌ ಸೈಲಿಶ್‌ ಎಂಟ್ರಿ ಕೊಡುತ್ತಿದ್ದಂತೆ ತೆರೆ ಮೇಲೆ ಪ್ರದರ್ಶನ ಸ್ತಬ್ಧ!ಏನಿದು ಘಟನೆ?

Rajinikanth stylish entry

ಮುಂಬೈ: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ʻಜೈಲರ್‌ʼ ಸಿನಿಮಾ (Jailer Movie) ಹವಾ ದೇಶ ವಿದೇಶದಲ್ಲೂ ಸಖತ್‌ ಸೌಂಡ್‌ ಮಾಡುತ್ತಿದೆ. ರಜನಿ ಅವರನ್ನು ಸ್ಕ್ರೀನ್‌ ಮೇಲೆ ಕಂಡರೆ ಸಾಕು ಅವರ ಫ್ಯಾನ್ಸ್‌ ಹುಚ್ಚೆದ್ದು ಕುಣಿಯುತ್ತಾರೆ. ಈ ಘಟನೆ ಚೆನ್ನೈನಲ್ಲಿ ಸಾಮಾನ್ಯ. ಆದರೆ ಇದೀಗ ಮುಂಬೈನ ಚಿತ್ರಮಂದಿರವೊಂದರಲ್ಲಿ ರಜನಿ ಎಂಟ್ರಿ ಕಂಡೊಡನೆ ಫ್ಯಾನ್ಸ್‌ ಜೈಕಾರ ಹಾಕಿ ಹುಚ್ಚೆದ್ದು ಕುಣಿಯುತ್ತಿದ್ದಂತೆ ಪ್ರದರ್ಶನವನ್ನು ಸ್ವಲ್ಪ ಹೊತ್ತು ಕಾಲ ನಿಲ್ಲಿಸಿದ್ದಾರೆ. ಮುಂಬೈನ ಸಿಯಾನ್‌ನಲ್ಲಿರುವ ಸಿನಿಮಾ ಹಾಲ್‌ನಲ್ಲಿ ಪ್ರದರ್ಶನವನ್ನು ಇದ್ದಕ್ಕಿದ್ದಂತೆ ಸ್ವಲ್ಪ ಹೊತ್ತು ಕಾಲ ನಿಲ್ಲಿಸಿರುವುದು ಇದೇ ಮೊದಲು ಎಂದು ವರದಿಯಾಗಿದೆ. ರಜನಿಕಾಂತ್‌ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ ಈ ಫೋಟೊ ಇದೀಗ ವೈರಲ್‌ ಆಗಿದೆ.

ಈಗಾಗಲೇ ಜೈಲರ್‌ ಮೊದಲ ದಿನವೇ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇದರ ಬೆನ್ನಲ್ಲೇ ಫ್ಯಾನ್ಸ್‌ನ ಅಭಿಮಾನದ ಫೋಟೊ ಕೂಡ ಸಖತ್‌ ವೈರಲ್‌ ಆಗುತ್ತಿದೆ. ಈ ಹಿಂದೆ ಚೆನ್ನೈನಲ್ಲಿ ಸ್ಪಲ್ಪ ಹೊತ್ತು ಕಾಲ ಪ್ರದರ್ಶನ ನಿಲ್ಲಿಸಿರುವುದು ನಡೆದಿದ್ದರೂ ಮುಂಬೈನ ಚಿತ್ರಮಂದಿರವೊಂದರಲ್ಲಿ ನಡೆದದ್ದು ಇದೇ ಮೊದಲು. ಇದಾದ ಬಳಿಕ ರಜನಿಕಾಂತ್ ಪಾತ್ರದ “ಟೈಗರ್’ ಮುತ್ತುವೇಲ್ ಪಾಂಡಿಯನ್ʼʼ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಫ್ಯಾನ್ಸ್‌ ಸುಮ್ಮನಾಗಿದ್ದಾರೆ. ಮುಂಬೈನ ಥಿಯೇಟರ್‌ನಲ್ಲಿ ಈ ಮಟ್ಟದ ಪ್ರತಿಕ್ರಿಯೆ ಆಶ್ಚರ್ಯವನ್ನುಂಟುಮಾಡಿದ್ದರೂ, ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗೆ ಹಿಂದಿ ಬೆಲ್ಟ್‌ನಲ್ಲಿ ಸಾಕಷ್ಟು ಡಿಮ್ಯಾಂಡ್‌ ಬರಲಾರಂಭಿಸಿದೆ.

‘ಜೈಲರ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಹಾಗೂ ಫಸ್ಟ್ ಡೇ ಫಸ್ಟ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಭಾರತ ಹಾಗೂ ವಿದೇಶದಲ್ಲಿಯೂ ಅಡ್ವಾನ್ಸ್ ಬುಕಿಂಗ್‌ನಿಂದ ಸುಮಾರು 19 ಕೋಟಿ ರೂ. ಅಧಿಕ ಗಳಿಕೆ ಕಂಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ವರದಿ ಮಾಡಿದ್ದರು.

ಇದನ್ನೂ ಓದಿ: Jailer Movie: ʻತಲೈವಾʼ ರಜನಿಯನ್ನೇ ಓವರ್ ಟೇಕ್ ಮಾಡಿದ ʻಶಿವಣ್ಣʼ! ತಮಿಳು ಪ್ರೇಕ್ಷಕರಿಂದ ಜೈಕಾರ!

ಜೈಲರ್‌’ಗೆ ಕಾಂಪಿಟೇಷನ್!

ಆಗಸ್ಟ್ 11 ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಭೋಳಾ ಶಂಕರ್’ ರಿಲೀಸ್ ಆಗಿದೆ. ಹಾಗೇ ಉತ್ತರ ಭಾರತದಲ್ಲಿ ಅಂದರೆ, ಹಿಂದಿ ಬೆಲ್ಟ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್ 2’ ಹಾಗೂ ಸನ್ನಿ ಡಿಯೋ, ಅಮಿಷಾ ಪಟೇಲ್ ಸಿನಿಮಾ ‘ಗದರ್ 2’ ರಿಲೀಸ್ ಆಗುತ್ತಿದೆ. ಹೀಗಾಗಿ ಈ ಸಿನಿಮಾಗಳ ಮಧ್ಯೆ ‘ಜೈಲರ್’ ಪೈಪೋಟಿಗೆ ಇಳಿಯಬೇಕಿದೆ.

ಬೆಂಗಳೂರಿನಲ್ಲಿ ಜೈಲರ್ ತಮಿಳು, ತೆಲುಗು ಹಾಗೂ ಕನ್ನಡ ಈ ಮೂರೂ ಭಾಷೆಗಳಲ್ಲಿಯೂ ಬಿಡುಗಡೆಯಾಗಿದ್ದು, ಮೊದಲ ದಿನ ತಮಿಳು ವರ್ಷನ್ 1,021 ಶೋಗಳನ್ನು ಪಡೆದುಕೊಂಡಿದ್ದರೆ, ತೆಲುಗು ವರ್ಷನ್ 41 ಶೋಗಳನ್ನು ಪಡೆದುಕೊಂಡಿದೆ ಹಾಗೂ ಕನ್ನಡ ವರ್ಷನ್ ಕೇವಲ‌ 30 ಪ್ರದರ್ಶನಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Jailer Movie: ʻಜೈಲರ್‌ʼ ಫೀವರ್;‌ ತಲೈವಾ ಸಿನಿಮಾ ನೋಡಲು ಚೆನ್ನೈಗೆ ಬಂದ ಜಪಾನ್‌ ದಂಪತಿ!

ತಮ್ಮ ಎರಡು ವರ್ಷಗಳ ವಿರಾಮದ ನಂತರ ಸೂಪರ್‌ಸ್ಟಾರ್ ರಜನಿಕಾಂತ್ ಬೆಳ್ಳಿ ಪರದೆಯ ಮೇಲೆ ಜೈಲರ್‌ ಮೂಲಕ ಮರಳಿದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡದ್ದು ʼಅಣ್ಣಾತ್ತೆʼಯಲ್ಲಿ. ಜೈಲರ್‌ನ ಪಾತ್ರವರ್ಗದಲ್ಲಿ ಶಿವ ರಾಜ್‌ಕುಮಾರ್‌, ಮೋಹನ್‌ಲಾಲ್‌, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ವಸಂತ್ ರವಿ, ಯೋಗಿ ಬಾಬು ಮತ್ತು ರೆಡಿಂಗ್ ಕಿಂಗ್ಸ್‌ಲಿ ಕೂಡ ಇದ್ದಾರೆ. ಕಾವಾಲಯ್ಯಾ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರ ಆಕರ್ಷಕ ನೃತ್ಯ ಚಲನೆಗಳು ಈಗಾಗಲೇ ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ಆವರಿಸಿವೆ.

Exit mobile version