Site icon Vistara News

Kiccha Sudeep : ನನ್ನ ಒಳ್ಳೆಯತನ ದುರುಪಯೋಗದ ಟೂಲ್‌ ಅಲ್ಲ! ಖಡಕ್‌ ಸಂದೇಶ ಕೊಟ್ಟ ಕಿಚ್ಚ ಸುದೀಪ್

Kichcha Sudeep tweet on Producer Kumar allegation

ಬೆಂಗಳೂರು: ಸ್ಯಾಂಡಲ್‌ವುಡ್‌ ಬಾದ್‌ಶಾ, ಕಿಚ್ಚ ಸುದೀಪ್‌ (Kiccha Sudeep) ಮೇಲೆ ಆಗಾಗ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಜತೆಗೆ ಅವರೂ ಸಹ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಸುದೀಪ್, “ದುಡ್ಡು ಪಡೆದು ಸಿನಿಮಾ ಮಾಡಿಲ್ಲ” ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಈಗ ಅದಕ್ಕೆ ಕಿಚ್ಚ ಬಹಳ ಕೂಲ್‌ ಆಗಿ ಚಾಟಿ ಬೀಸಿದ್ದಾರೆ. “ಈ ಕೋಟ್‌ ಓದಿ, ಬಹಳ ಚೆನ್ನಾಗಿದೆ..” ಎಂಬ ಅಡಿ ಬರಹದೊಂದಿಗೆ ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿದ್ದು, ವ್ಯಂಗ್ಯವಾಗಿಯೇ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ನಿರ್ಮಾಪಕ ಎಂ.ಎನ್‌. ಕುಮಾರ್‌ಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಫಿಲ್ಮ್ ಚೇಂಬರ್‌ನಲ್ಲಿ ಸೋಮವಾರ (ಜುಲೈ 3) ನಿರ್ಮಾಪಕ ಎಂ.ಎನ್‌. ಕುಮಾರ್‌ ಸುದ್ದಿಗೋಷ್ಠಿ ನಡೆಸಿ, ʻʻಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ನಾನು ಸುದೀಪ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್‌ ಅವರು ಕೈಗೆ ಸಿಗುತ್ತಿಲ್ಲ. ‌ಈಗಾಗಲೇ ಸುದೀಪ್‌ ಅವರಿಗೆ ಅಡ್ವಾನ್ಸ್‌ ಕೂಡ ಕೊಟ್ಟಿದ್ದೇನೆʼʼ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ (ಜುಲೈ 3) ಸುದೀಪ್‌ ಟ್ವೀಟ್‌ ಮಾಡಿ ಪರೋಕ್ಷ ಉತ್ತರ ಕೊಟ್ಟಿದ್ದಾರೆ.‌

ಟ್ವೀಟ್‌ ಮಾಡಿರುವ ಸುದೀಪ್

ಇದನ್ನೂ ಓದಿ: Tamannaah Bhatia : ಪ್ರಿಯತಮ ವಿಜಯ್‌ ವರ್ಮಾ ಅಂಥವನಲ್ಲ ಅಂತಾರೆ ತಮನ್ನಾ ಭಾಟಿಯಾ

ಸುದೀಪ್‌ ಟ್ವೀಟ್‌ನಲ್ಲೇನಿದೆ?

“ನನ್ನ ಒಳ್ಳೆಯತನವು ನಿಮಗೆ ಬೇಕಾದಂತೆ ತಿರುಚಿಕೊಳ್ಳುವ, ದುರುಪಯೋಗ ಪಡಿಸಿಕೊಳ್ಳುವ ಸಾಧನವಲ್ಲ. ನಿಜಾಂಶ ಇದ್ದಾಗ ಅದು ಪ್ರಕಾಶಮಾನವಾಗಿಯೇ ಹೊಳೆಯುತ್ತದೆ. ಹಾಗಾಗಿ ಅಹಂಕಾರವು ಇದರ ಹೊಳಪಿಗೆ ಕಳಂಕ ತರಲು ನಾನು ಬಿಡುವುದಿಲ್ಲ. ಇರಲಿ ವಿನಮ್ರತೆ, ಸತ್ಯದ ದಾರಿಯಲ್ಲಿ ನಡೆಯಿರಿ” ಎಂದು ಸುದೀಪ್‌ ಬರೆದುಕೊಂಡಿದ್ದಾರೆ.

ಖಡಕ್‌ ಎಚ್ಚರಿಕೆ ಕೊಟ್ಟರಾ ಸುದೀಪ್?‌

ತಮ್ಮ ಒಳ್ಳೆಯತನವನ್ನು ಬೇಕಾದಂತೆ ತಿರುಚಿಕೊಳ್ಳುವ ಟೂಲ್‌ ಅಲ್ಲ ಎಂದು ಹೇಳುವ ಮೂಲಕ, “ಇದೇ ರೀತಿ ಮಾತನಾಡುತ್ತಿದ್ದರೆ, ತಾವು ಸುಮ್ಮನೆ ಕೂರುವವರಲ್ಲ” ಎಂಬ ಸಂದೇಶವನ್ನು ಈ ಟ್ವೀಟ್‌ ಮೂಲಕ ಕಿಚ್ಚ ಸುದೀಪ್‌ ರವಾನೆ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ. ಇನ್ನು ತಮ್ಮ ತೇಜಸ್ಸಿಗೆ ಕಳಂಕ ತರಲು ಹೊರಟರೆ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಸುದೀಪ್‌ ಅವರ ಮುಂದಿನ ನಡೆ ಏನೆಂಬುದು ಸದ್ಯದ ಕುತೂಹಲವಾಗಿದೆ.

My goodness is not a tool of abuse Kichcha Sudeep tweet on Kumar allegation

ನಿರ್ಮಾಪಕ ಎಂ.ಎನ್‌. ಕುಮಾರ್‌ ಆರೋಪವೇನು?

ನಿರ್ಮಾಪಕ ಎಂ.ಎನ್‌. ಕುಮಾರ್‌ ಸೋಮವಾರ ಮಾಧ್ಯಮದ ಮುಂದೆ ಮಾತನಾಡಿ ʻʻಈಗಾಗಲೇ ಸುದೀಪ್‌ ಅವರಿಗೆ ಒಂದು ಸಿನಿಮಾದ ಅಡ್ವಾನ್ಸ್ ಕೂಡ ಕೊಟ್ಟಿದ್ದೇವೆ. ಆದರೆ, ಸಿನಿಮಾ ಮಾಡಲು ಒಪ್ಪುತ್ತಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ನಾನು ಸುದೀಪ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್‌ ಅವರು ಕೈಗೆ ಸಿಗುತ್ತಿಲ್ಲ, ‌ಗೊಂದಲ ಮಾಡುತ್ತಿದ್ದಾರೆ. ಸುದೀಪ್‌ ಅವರ ಮೇಲಿನ ನಂಬಿಕೆ ಮೇಲೆ ಹಣ ಕೊಟ್ಟಿದ್ದೇನೆ. ನಾನು ಯಾಕೆ ವಾಪಸ್ ಹಣ ಕೇಳಬೇಕು? ಅವರು‌ ಹೇಳಿದಂತೆ ಸಿನಿಮಾ ಮಾಡಿಕೊಡಲಿ‌. ‘ಮುತ್ತತ್ತಿ ಸತ್ಯರಾಜ್’ ಎಂಬ ಟೈಟಲ್ ಫಿಕ್ಸ್ ಆಗಿತ್ತು. ಅವರು ವಾಣಿಜ್ಯ ಮಂಡಳಿಗೆ ಬರಲಿ. ಸುದೀಪ್‌ ಅವರು ನನ್ನ ಎದುರಿಗೆ ಬಂದು ಮಾತನಾಡಲಿ. ನಾವೇ ದುಡ್ಡು ಕೊಟ್ಟು ನಾವೇ ಬೇಡಬೇಕು. ಸುದೀಪ್ ಅವರು ಮಾಡಿರುವ ಈ ಕೆಲಸದಿಂದ ನನಗೆ 8 ವರ್ಷ ಹಾಳಾಗಿದೆ. ಹಣಕೊಟ್ಟು ಬೇಡುವಂತಹ ಸ್ಥಿತಿ ನನಗೆ ಬಂದಿದೆʼʼ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕುಮಾರ್‌ ಅವರು ವಾಣಿಜ್ಯ ಮಂಡಳಿಗೆ ಮನವಿ ಪತ್ರ ಕೂಡ ಸಲ್ಲಿಸಿದ್ದರು.

ಫ್ರೀ ಆಗಿ ಯಾವ ಸಿನಿಮಾವನ್ನೂ ಮಾಡಿಕೊಟ್ಟಿಲ್ಲ!

ʻʻಹಣ ವಾಪಸ್ ಕೊಟ್ಟರೂ ಸರಿ, ಸಿನಿಮಾ ಮಾಡಲು ಒಪ್ಪಿಕೊಂಡರೂ ಸರಿ. ಆದರೆ ನಮ್ಮ‌ ಸಮಸ್ಯೆ ಬಗೆಹರಿಯಬೇಕು. ಪ್ರಿಯಾ ಸುದೀಪ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಳಿದರೆ ಮೊಬೈಲ್ ನಂಬರ್ ಚೇಂಜ್ ಮಾಡುತ್ತಾರೆ. ಮನೆಗೆ ಹೋದರೆ ಅವರಿಲ್ಲ ಎಂದು ಸುಳ್ಳು ಹೇಳಿ ಕಳುಹಿಸುತ್ತಾರೆ. ಯಾವ ಸಿನಿಮಾದಲ್ಲೂ ಸುದೀಪ್ ಒಂದು ಪೈಸೆಯನ್ನೂ ಬಿಟ್ಟಿಲ್ಲ. ನಂದಕಿಶೋರ್ ಅವರೇ ಸುದೀಪ್ ಅವರನ್ನು ಭೇಟಿ ಮಾಡಿಸಿದ್ದು, 46 ಸಾವಿರ ರೂ. ಅಡ್ವಾನ್ಸ್ ಅನ್ನು ನಂದಕಿಶೋರ್ ಅವರಿಗೆ ಕೊಟ್ಟಿದ್ದೇನೆ. 7-8 ವರ್ಷದ ವ್ಯವಹಾರ ನಮ್ಮ ಇಬ್ಬರದ್ದು. ರಂಗ SSLC ಸಿನಿಮಾದ ಪೂರ್ತಿ ಪೇಮೆಂಟ್ ತೆಗೆದುಕೊಂಡಿದ್ದರು. ಅವರು ಫ್ರೀ ಆಗಿ ಯಾವ ಸಿನಿಮಾವನ್ನೂ ಮಾಡಿಕೊಟ್ಟಿಲ್ಲʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Actress Kajol : ಮಾಧ್ಯಮದವರನ್ನು ಹ್ಯಾಂಡಲ್‌ ಮಾಡುವಲ್ಲಿ ನನಗಿಂತ ನನ್ನ ಮಗಳೇ ಬೆಸ್ಟ್‌ ಎಂದ ಕಾಜೊಲ್‌

ಸುದೀಪ್‌ ಮನೆ ಮುಂದೆ ಧರಣಿ ಮಾಡ್ತೇವೆ!

ʻʻಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಬೇಕು. ಇಲ್ಲವಾದರೆ ಸುದೀಪ್ ಅವರ ಮನೆ ಮುಂದೆ ಧರಣಿ ಮಾಡುತ್ತೇವೆ. ನಾವು ಯಾರನ್ನೂ ಬ್ಯಾನ್ ಮಾಡುವುದಿಲ್ಲ. ಎಂಟು ವರ್ಷಗಳಿಂದ ನಾನು ಸಿನಿಮಾ ಮಾಡಲೆಂದು ಕಾಯುತ್ತಿದ್ದೇನೆ. ಸುದೀಪ್ ಲೈವ್ ಬಂದರೆ ನಾನು ಪ್ರತಿ ದಾಖಲೆ ಕೊಡುತ್ತೇನೆ. ಸುದೀಪ್ ಅವರ ಕಾಲು ಹಿಡಿದುಕೊಂಡರೂ ಕರುಣೆ ತೋರಿಲ್ಲʼʼ ಎಂದು ನಿರ್ಮಾಪಕ ಕುಮಾರ್ ಕಣ್ಣೀರು ಹಾಕಿದ್ದರು. ಅಲ್ಲದೆ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿ ʻʻವಾಣಿಜ್ಯ ಮಂಡಳಿಯಿಂದ ಪತ್ರ ಕಳಿಸಿದ್ದರೂ ಸುದೀಪ್ ಬಂದಿಲ್ಲ. ಅವರು ಮಾತೃ ಸಂಸ್ಥೆಗೆ ಅಗೌರವ ತೋರಿಸಿದ್ದಾರೆʼʼ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

Exit mobile version