ಬೆಂಗಳೂರು : ದಕ್ಷಿಣ ಭಾರತದ ಖ್ಯಾತ ನಟಿ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Actress Shruti Haasan) ನೆಪೋಟಿಸಂ (ಸ್ವಜನ ಪಕ್ಷಪಾತ) ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾ ಹಾಗೂ ಶ್ರುತಿ ಹಾಸನ್ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ.
ಶ್ರುತಿ ಹಾಸನ್ ಮಾತನಾಡಿದ್ದು ʻʻನನಗೆ ಒಂದು ವಿಚಾರದ ಬಗ್ಗೆ ಹೆಮ್ಮೆ ಇದೆ. ನನ್ನ ತಂದೆ-ತಾಯಿ ಚಿತ್ರರಂಗದವರಿಗೆ ಕರೆ ಮಾಡಿ ಅವಕಾಶ ಕೊಡಿ ಎಂದು ಕೇಳಿಲ್ಲ. ಸ್ಟಾರ್ ಮಕ್ಕಳಾಗಿ ಹುಟ್ಟಿ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂದು ಅವಕಾಶ ಕೊಡುತ್ತಾರೆ. ಆದರೆ ಅದನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ನನ್ನ ಸಿನಿ ರಂಗದ ಜರ್ನಿ ರೋಚಕವಾಗಿತ್ತು. ಪ್ರತಿ ಹಂತದಲ್ಲಿ ಪೋಷಕರು ಸಪೋರ್ಟ್ ಮಾಡುತ್ತಾರೆʼʼ ಎಂದರು.
ನನ್ನ ತಂದೆ-ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ!
ʻʻನಾನು ಸಿನಿಮಾ ರಂಗಕ್ಕೆ ಪದರ್ಪಾಣೆ ಮಾಡುವಾಗ ಒಬ್ಬರನ್ನೂ ನೋಡಿ ಕಲಿತಿಲ್ಲ. ನನಗೆ ಇವರಂತೆ ನಟಿಸಬೇಕು ಎಂತಲೂ ಆಸೆ ಪಟ್ಟವಳು ಅಲ್ಲ. ನನ್ನ ತಂದೆ-ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ. ಎಲ್ಲವೂ ನಾನೇ ಕಲಿಯಬೇಕಿತ್ತು. ಕ್ಯಾಮೆರಾ ಕಂಡರೆ ಹೇಗಿರಬೇಕು, ಜನರಿದ್ದರೆ ಹೇಗಿರಬೇಕು, ಒಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ರೀತಿ ಇವೆಲ್ಲ ನನಗೆ ಚಾಲೆಂಜಿಂಗ್ ಆಗಿತ್ತು. ಜೀವನದಲ್ಲಿ ಈ ಸ್ಥಾನಕ್ಕೆ ಬರಲು ನಡೆದುಕೊಂಡು ಬಂದ ಹಾದಿಯನ್ನು ಮರೆಯುವುದಿಲ್ಲʼʼ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ | Mega 154 : ಆಚಾರ್ಯ ಬಳಿಕ ಮೆಗಾ ಸ್ಟಾರ್ ಮತ್ತೊಂದು ಮೆಗಾ ಮೂವಿ
ತಂದೆ ತಾಯಿಗೆ ಎಷ್ಟು ಪ್ರೀತಿ ಕೊಡಬೇಕು ಕೊಡುತ್ತಿದ್ದೇವೆ!
ಶ್ರುತಿ ಹಾಸನ್ ತಂದೆ ತಾಯಿ ಕುರಿತು ಮಾತನಾಡಿದ್ದು, “ನನ್ನ ತಂದೆ ತಾಯಿಯಿಂದ ನಾವು ಬೇರೆ ಬೇರೆ ರೀತಿಯ ಪ್ರೀತಿ ಪಡೆದುಕೊಂಡಿದ್ದೇವೆ. ಹಾಗಂತ ನಾನು ಅವರಿಗೆ ಬೇರೆ ಬೇರೆ ಪ್ರೀತಿ ಕೊಟ್ಟಿಲ್ಲ. ಈ ವಿಚಾರದ ಬಗ್ಗೆ ಮಾತನಾಡಬೇಕು ಅಂದರೆ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ನನ್ನ ಸ್ಥಾನದಲ್ಲಿ ನಿಂತ ಹಲವರಿಗೆ ಈ ಭಾವನೆ ಅರ್ಥವಾಗುತ್ತದೆ. ತಂಗಿ ಅಕ್ಷರಾ ಮತ್ತು ನಾನು ಹೇಗೆ ಇರಬೇಕು ಹಾಗೆ ಇದ್ದೇವೆ. ತಂದೆ ತಾಯಿಗೆ ಎಷ್ಟು ಪ್ರೀತಿ ಕೊಡಬೇಕು ಕೊಡುತ್ತಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.
ನಾನು ಮತ್ತು ಕಮಲ್ ಬಂದ ಹಾದಿಯಲ್ಲಿ ಮಕ್ಕಳು ಬೆಳೆಯಬೇಕಿಲ್ಲ!
ತಾಯಿ ಸಾರಿಕಾ ಮಾತನಾಡಿ ʻʻಪ್ರತಿಯೊಬ್ಬರಿಗೂ ಅವರದ್ದೇ ಆದ ಟ್ಯಾಲೆಂಟ್ ಇದೆ. ನನಗೆ ಹಾಡಲು ಬರುವುದಿಲ್ಲ. ಆದರೆ ಕಮಲ್ ಅವರು ಚೆನ್ನಾಗಿ ಹಾಡುತ್ತಾರೆ. ಅದೇ ರೀತಿ ಶ್ರುತಿ ಧ್ವನಿ ತುಂಬಾ ಚೆನ್ನಾಗಿದೆ. ಚೆಂದವಾಗಿ ಹಾಡುತ್ತಾಳೆ. ಸಂಗೀತವನ್ನು ಸರಿಯಾದ ಕ್ರಮದಲ್ಲಿ ಒಳ್ಳೆ ಗುರುಗಳ ಬಳಿ ಕಲಿತಿದ್ದಾಳೆ. ಕಿರಿಯ ಮಗಳು ಅಕ್ಷರಾ ನಟನೆ, ಡ್ಯಾನ್ಸಿಂಗ್ ಮತ್ತು ಫುಟ್‌ಬಾಲ್‌ನಲ್ಲಿ ಒಳ್ಳೆ ಇದ್ದಾಳೆ. ನಾನು ಮತ್ತು ಕಮಲ್ ಬಂದ ಹಾದಿಯಲ್ಲಿ ಮಕ್ಕಳು ಬೆಳೆಯಬೇಕಿಲ್ಲ. ಅಗತ್ಯವೂ ಇಲ್ಲ. ಅವರಿಗೆ ಏನು ಬೇಕು ಆ ಆಯ್ಕೆ ಮಾಡಿಕೊಳ್ಳುವ ಅವಕಾಶ ಮಕ್ಕಳಿಗೆ ಕೊಟ್ಟಿದ್ದೇವೆʼʼಎಂದರು.
ಇದನ್ನೂ ಓದಿ | Kamal Haasan | 35 ವರ್ಷಗಳ ನಂತರ ಮತ್ತೆ ಒಂದಾದ ಮಣಿರತ್ನಂ-ಕಮಲ್ ಹಾಸನ್