Site icon Vistara News

Naatu Naatu : ಉಕ್ರೇನ್‌ನ ಯೋಧರಿಂದಲೂ ನಾಟು ನಾಟು ಡ್ಯಾನ್ಸ್‌! ಸಕತ್‌ ಆಗಿದೆ ಇಲ್ಲಿರುವ ಟ್ವಿಸ್ಟ್‌

naatu naatu dance by Ukraine soldiers

#image_title

ಎಸ್‌ ಎಸ್‌ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು (Naatu Naatu) ಆಸ್ಕರ್‌ ಪ್ರಶಸ್ತಿಯನ್ನು ಗೆದ್ದುಕೊಂಡು ಭಾರತಕ್ಕೆ ಹೆಮ್ಮೆಯ ಗರಿಯೊಂದನ್ನು ಸೇರಿಸಿದೆ. ಅಷ್ಟೇ ಅಲ್ಲದೆ ಈ ಹಾಡಂತೂ ವಿಶ್ವಾದ್ಯಂತ ಭಾರೀ ವೈರಲ್‌ ಆಗಿ, ಜನರ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯಾಗಿ ವರ್ಷಗಳೇ ಕಳೆದಿದ್ದರೂ ಇಂದಿಗೂ ಈ ನಾಟು ನಾಟು ಹಾಡಿಗೆ ನೃತ್ಯ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದೇ ರೀತಿಯಲ್ಲಿ ಇದೀಗ ಉಕ್ರೇನ್‌ನ ಯೋಧರೂ ಕೂಡ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದರೊಂದಿಗೆ ವಿಶೇಷವಾದ ಟ್ವಿಸ್ಟ್‌ ಒಂದನ್ನೂ ಸೇರಿಸಿದ್ದು, ಇನ್ನಷ್ಟು ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ಅದೇ ವಿಚಾರವನ್ನು ಇಟ್ಟುಕೊಂಡು ಉಕ್ರೇನ್‌ನ ಯೋಧರು ರಷ್ಯಾ ಯೋಧರನ್ನು ತಮ್ಮ ದೇಶದಿಂದ ಓಡಿಸುವ ಥೀಮ್‌ನಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಾಡಿನ ಸಂಗೀತಕ್ಕೆ ತಮ್ಮದೇ ಆದ ಭಾಷೆಯಲ್ಲಿ ಸಾಹಿತ್ಯ ಬರೆದುಕೊಂಡಿದ್ದಾರೆ. ಹಾಗೆಯೇ ಪೂರ್ತಿ ಹಾಡನ್ನು ಸುಂದರವಾಗಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: G20 Meeting: ಜಿ20 ಸಭೆಯಲ್ಲೂ ನಾಟು ನಾಟು ಹವಾ; ರಾಮ್‌ಚರಣ್‌ ಜತೆ ದಕ್ಷಿಣ ಕೊರಿಯಾ ರಾಯಭಾರಿ ಡಾನ್ಸ್
ಹಾಡಿನಲ್ಲಿ ಉಕ್ರೇನ್‌ನ ಹಲವಾರು ಯೋಧರು ಕುಣಿದಿದ್ದಾರೆ. ಅವರಿಗೆ ಹಲವಾರು ಹೆಣ್ಣು ಮಕ್ಕಳು ಕೂಡ ಸಾಥ್‌ ಕೊಟ್ಟಿದ್ದಾರೆ. ಯೋಧರ ಸಮವಸ್ತ್ರದಲ್ಲಿಯೇ ನಾಟು ನಾಟು ಸಿಗ್ನೇಚರ್‌ ಸ್ಟೆಪ್‌ ಮಾಡಲಾಗಿದೆ. ವಿಶೇಷವೆಂದರೆ ನಾಟು ನಾಟು ಹಾಡಿನಲ್ಲಿ ನೃತ್ಯ ಮಾಡಿರುವ ಹೆಣ್ಣು ಮಕ್ಕಳು ತೊಟ್ಟಂತಹ ರೆಟ್ರೋ ಶೈಲಿಯ ಬಟ್ಟೆಯನ್ನೇ ಈ ಹಾಡಿನಲ್ಲೂ ಹೆಣ್ಣು ಮಕ್ಕಳು ಧರಿಸಿದ್ದಾರೆ.

ಈ ವಿಡಿಯೊವನ್ನು ಮೇ 31ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡಿದೆ. ಹಾಗೆಯೇ ಸಾವಿರಾರು ಮಂದಿ ವಿಡಿಯೊವನ್ನು ಲೈಕ್‌ ಮಾಡಿದ್ದು, ತಮ್ಮ ತಮ್ಮ ವಾಲ್‌ಗಳನ್ನು ರಿಟ್ವೀಟ್‌ ಮಾಡಿಕೊಂಡಿದ್ದಾರೆ. “ನಾಟು ನಾಟು ಪ್ರೀತಿ ಎಂದಿಗೂ ಮುಗಿಯುವುದಲ್ಲ” ಎನ್ನುವಂತಹ ಹಲವಾರು ಕಾಮೆಂಟ್‌ಗಗಳು ವಿಡಿಯೊಗೆ ಬಂದಿವೆ.

Exit mobile version