Site icon Vistara News

Naga Shaurya Marriage | ಬೆಂಗಳೂರಿನ ಅನುಷಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ನಾಗ ಶೌರ್ಯ

Actor Naga Shaurya Marriage

ಬೆಂಗಳೂರು: ತೆಲುಗು ನಟ ನಾಗ ಶೌರ್ಯ ಅವರು ಬೆಂಗಳೂರಿನ ಅನುಷಾ ಶೆಟ್ಟಿ ಜತೆ ದಾಂಪತ್ಯ (Naga Shaurya Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಸಾಂಪ್ರದಾಯಿಕವಾದರೂ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ನಾಗ ಶೌರ್ಯ ಮದುವೆಯ ಫೋಟೊ ಹಾಗೂ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಕುಟುಂಬಸ್ಥರು, ಆಪ್ತರು ಮದುವೆಗೆ ಸಾಕ್ಷಿಯಾದರು.

ವೃತ್ತಿಯಲ್ಲಿ ಇಂಟೀರಿಯರ್‌ ಡಿಸೈನರ್‌ ಆಗಿರುವ ಅನುಷಾ ಅವರನ್ನು ವರಿಸಿರುವ ನಾಗ ಶೌರ್ಯ, ಶನಿವಾರವೇ (ನವೆಂಬರ್‌ 19) ಗೆಳೆಯರಿಗೆಲ್ಲ ಬ್ಯಾಚುಲರ್‌ ಪಾರ್ಟಿ ಕೊಟ್ಟಿದ್ದರು. ಭಾನುವಾರ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ಬಿಳಿ ಶರ್ಟ್‌ ಹಾಗೂ ಪಂಚೆಯಲ್ಲಿ ನಾಗ ಶೌರ್ಯ ಮಿಂಚಿದರೆ, ಸೀರೆ, ಒಡವೆ ಧರಿಸಿ, ಹೂ ಮುಡಿದು ಅನುಷ್ಕಾ ಗಮನ ಸೆಳೆದರು.

ಇತ್ತೀಚೆಗೆ ‘ಕೃಷ್ಣ ವೃಂದ ವಿಹಾರಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಾಗ ಶೌರ್ಯ, ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಇದುವರೆಗೆ 23 ಸಿನಿಮಾಗಳಲ್ಲಿ ನಟಿಸಿದ್ದು, 2018ರಲ್ಲಿ ಬಿಡುಗಡೆಯಾಗಿದ್ದ ‘ಚಲೋ’ ಸಿನಿಮಾ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತ್ತು. ಇದರಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ರಶ್ಮಿಕಾ ಮಂದಣ್ಣ ಅವರಿಗೆ ಕಾಲಿವುಡ್‌ನಲ್ಲಿ ಇದು ಮೊದಲ ಸಿನಿಮಾ ಆಗಿದೆ.

ಇದನ್ನೂ ಓದಿ | Actor Taylor Lautner | ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಟ್ವಿಲೈಟ್‌ ಸಾಗಾʼ ಖ್ಯಾತಿಯ ನಟ ಟೇಲರ್ ಲೌಟ್ನರ್!

Exit mobile version