ಬೆಂಗಳೂರು: ತೆಲುಗಿನ ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಮೊಮ್ಮಗ, ಜೂನಿಯರ್ ಎನ್‌ಟಿಆರ್ ಅಣ್ಣ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ರಂಗಾ ರೆಡ್ಡಿ ಜಿಲ್ಲೆಯ ಮೋಕಿಲಾಗೆ ರವಾನೆ ಮಾಡಲಾಗಿದೆ. ಸೋಮವಾರ (ಫೆ.20) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಬಳಿಕ ನಂದಮೂರಿ ತಾರಕ ರತ್ನ ಅಂತ್ಯಕ್ರಿಯೆ ನಡೆಯಲಿದೆ.
ಫೆ.20 ಬೆಳಗ್ಗೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ ನಂದಮೂರಿ ಅವರ ಪಾರ್ಥೀವ ಶರೀರ ಇರಿಸಲಾಗುತ್ತದೆ. ಅಲ್ಲಿಯೇ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಬೆಳಗ್ಗೆ 7 ಗಂಟೆಯಿಂದ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಸಂಜೆ 5 ಗಂಟೆ ಸುಮಾರಿಗೆ ಹೈದರಾಬಾದ್ನ ಮಹಾಪ್ರಸ್ತಾನಂನಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು.
ಇದನ್ನೂ ಓದಿ: Nandamuri Taraka Ratna: 22 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ತಾರಕರತ್ನ ರಾಜಕೀಯಕ್ಕೂ ಜೈ ಎಂದಿದ್ದರು
ನಂದಮೂರಿ ತಾರಕರತ್ನ ಅವರು ತೆಲುಗು ಚಿತ್ರರಂಗದ ೨೨ ಸಿನಿಮಾಗಳಲ್ಲಿ ನಟಿಸಿದರೂ, ಅವರು ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಸೆಳೆದಿದ್ದರು. ಅಲ್ಲದೆ, ಅಜ್ಜನಂತೆ ನಂದಮೂರಿ ತಾರಕರತ್ನ ಅವರೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಟಿಡಿಪಿ ಪರ ಅವರು ಪ್ರಚಾರ ಮಾಡುವ ವೇಳೆಯೇ ಅವರಿಗೆ ಹೃದಯಾಘಾತವುಂಟಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ದುರಂತವೇ ಸರಿ.
೧೯೮೩ರ ಫೆಬ್ರವರಿ ೨೨ರಂದು ಆಂಧ್ರಪ್ರದೇಶದ ನಿಮ್ಮಕೂರು ಗ್ರಾಮದಲ್ಲಿ ಜನಿಸಿದ ನಂದಮೂರಿ ತಾರಕರತ್ನ ಅವರ ತಂದೆ ಹೆಸರು ನಂದಮೂರಿ ಮೋಹನ ಕೃಷ್ಣ ಹಾಗೂ ತಾಯಿ ನಂದಮೂರಿ ಶಾಂತಿ ಮೋಹನ್.