Nandamuri Taraka Ratna: ನಂದಮೂರಿ ತಾರಕರತ್ನ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಎಲ್ಲಿ? - Vistara News

ಟಾಲಿವುಡ್

Nandamuri Taraka Ratna: ನಂದಮೂರಿ ತಾರಕರತ್ನ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಎಲ್ಲಿ?

ಸೋಮವಾರ (ಫೆ.20) ಅಂತಿಮ ದರ್ಶನಕ್ಕೆ (Nandamuri Taraka Ratna) ವ್ಯವಸ್ಥೆ ಮಾಡಲಾಗುತ್ತಿದೆ. ಬಳಿಕ ನಂದಮೂರಿ ತಾರಕ ರತ್ನ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ.

VISTARANEWS.COM


on

Nandamuri Taraka Ratna’s funeral to be held on February 20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತೆಲುಗಿನ ಖ್ಯಾತ ನಟ ಎನ್‌.ಟಿ.ರಾಮರಾವ್‌ ಅವರ ಮೊಮ್ಮಗ, ಜೂನಿಯರ್‌ ಎನ್‌ಟಿಆರ್‌ ಅಣ್ಣ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ರಂಗಾ ರೆಡ್ಡಿ ಜಿಲ್ಲೆಯ ಮೋಕಿಲಾಗೆ ರವಾನೆ ಮಾಡಲಾಗಿದೆ. ಸೋಮವಾರ (ಫೆ.20) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಬಳಿಕ ನಂದಮೂರಿ ತಾರಕ ರತ್ನ ಅಂತ್ಯಕ್ರಿಯೆ ನಡೆಯಲಿದೆ.

ಫೆ.20 ಬೆಳಗ್ಗೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ ನಂದಮೂರಿ ಅವರ ಪಾರ್ಥೀವ ಶರೀರ ಇರಿಸಲಾಗುತ್ತದೆ. ಅಲ್ಲಿಯೇ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಬೆಳಗ್ಗೆ 7 ಗಂಟೆಯಿಂದ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಸಂಜೆ 5 ಗಂಟೆ ಸುಮಾರಿಗೆ ಹೈದರಾಬಾದ್​ನ ಮಹಾಪ್ರಸ್ತಾನಂನಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು.

ಇದನ್ನೂ ಓದಿ: Nandamuri Taraka Ratna: 22 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ತಾರಕರತ್ನ ರಾಜಕೀಯಕ್ಕೂ ಜೈ ಎಂದಿದ್ದರು

ನಂದಮೂರಿ ತಾರಕರತ್ನ ಅವರು ತೆಲುಗು ಚಿತ್ರರಂಗದ ೨೨ ಸಿನಿಮಾಗಳಲ್ಲಿ ನಟಿಸಿದರೂ, ಅವರು ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಸೆಳೆದಿದ್ದರು. ಅಲ್ಲದೆ, ಅಜ್ಜನಂತೆ ನಂದಮೂರಿ ತಾರಕರತ್ನ ಅವರೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಟಿಡಿಪಿ ಪರ ಅವರು ಪ್ರಚಾರ ಮಾಡುವ ವೇಳೆಯೇ ಅವರಿಗೆ ಹೃದಯಾಘಾತವುಂಟಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ದುರಂತವೇ ಸರಿ.

೧೯೮೩ರ ಫೆಬ್ರವರಿ ೨೨ರಂದು ಆಂಧ್ರಪ್ರದೇಶದ ನಿಮ್ಮಕೂರು ಗ್ರಾಮದಲ್ಲಿ ಜನಿಸಿದ ನಂದಮೂರಿ ತಾರಕರತ್ನ ಅವರ ತಂದೆ ಹೆಸರು ನಂದಮೂರಿ ಮೋಹನ ಕೃಷ್ಣ ಹಾಗೂ ತಾಯಿ ನಂದಮೂರಿ ಶಾಂತಿ ಮೋಹನ್‌.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Pushpa 2: ʻಪುಷ್ಪ 2ʼ ಅನಸೂಯಾ ಭಾರದ್ವಾಜ್ ಪಾತ್ರದ ಫಸ್ಟ್ ಲುಕ್ ಔಟ್!

Pushpa 2: ಅನಸೂಯಾ ಅವರ ಹುಟ್ಟುಹಬ್ಬಕ್ಕೆ (ಮೇ 15) ದಾಕ್ಷಾಯಿಣಿ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಫಸ್ಟ್ ಲುಕ್‌ಗೆ ಫಿದಾ ಆಗಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ಮಾಸ್ ಆಗಿ ಕಂಡಿದ್ದಾರೆ. ಅನಸೂಯಾ ಸೀರೆಯುಟ್ಟು ಮೈ ತುಂಬಾ ಆಭರಣ ಧರಿಸಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.

VISTARANEWS.COM


on

Pushpa 2 Allu Arjun anasuya bharadwaj poster look out
Koo

ಬೆಂಗಳೂರು: ಐಕಾನ್ ಸ್ಟಾರ್​ ಅಲ್ಲು ಅರ್ಜುನ್ (Allu Arjun) ಮತ್ತು ನ್ಯಾಷನಲ್ ಕ್ರಶ್​ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2: ದಿ ರೂಲ್’ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದ ನಡುವೆ ಪುಷ್ಪ 2 ಮುಂದೂಡಲ್ಪಡಬಹುದು (Pushpa 2) ಎಂಬ ವದಂತಿಗಳು ಅವರನ್ನು ಬೇಸರಕ್ಕೆ ತಳ್ಳಿತ್ತು. ಆದರೆ ತಯಾರಕರು ಅಂತಿಮವಾಗಿ ಅದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಒಂದಾದ ಅನಸೂಯಾ ಭಾರದ್ವಾಜ್ ಅವರ ಜನ್ಮದಿನದಂದು ತಂಡ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಅನಸೂಯಾ ಅವರ ಹುಟ್ಟುಹಬ್ಬದ ಗೌರವಾರ್ಥವಾಗಿ, ಚಿತ್ರ ನಿರ್ಮಾಪಕರು ಅವರ ಫಸ್ಟ್‌ ಲುಕ್‌ ಅನಾವರಣಗೊಳಿಸಿದ್ದಾರೆ.

ಅನಸೂಯಾ ಅವರ ಹುಟ್ಟುಹಬ್ಬಕ್ಕೆ (ಮೇ 15) ದಾಕ್ಷಾಯಿಣಿ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಫಸ್ಟ್ ಲುಕ್‌ಗೆ ಫಿದಾ ಆಗಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ಮಾಸ್ ಆಗಿ ಕಂಡಿದ್ದಾರೆ. ಅನಸೂಯಾ ಸೀರೆಯುಟ್ಟು ಮೈ ತುಂಬಾ ಆಭರಣ ಧರಿಸಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.

ಹೀರೋ ಅಲ್ಲು ಅರ್ಜುನ್‌ಗೆ (Allu Arjun) ಅನಸೂಯಾ ಖಡಕ್ ವಿಲನ್ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಜೊತೆಗೆ ಫಹಾದ್ ಫಾಸಿಲ್, ಡಾಲಿ ಸೇರಿದಂತೆ ಹಲವರು ನಟಿಸಿದ್ದಾರೆ.

ಇದನ್ನೂ ಓದಿ: Allu Arjun: ʻಪುಷ್ಪ 2ʼ ಸಿನಿಮಾಗೆ ಹೆದರಿತಾ ʻಸಿಂಗಂʼ? ಅಜಯ್ ದೇವಗನ್ ಸಿನಿಮಾ ಮುಂದೂಡಿಕೆ!

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಪುಷ್ಪ 2 ತಯಾರಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದರು. ಟೀಸರ್​ನಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಮುಖವನ್ನು ನೀಲಿ ಮತ್ತು ಕೆಂಪು ಬಣ್ಣಗಳನ್ನು ಮೆತ್ತಿಕೊಂಡಿದ್ದಾರೆ. ಅವರು ಭಾರವಾದ ಸಾಂಪ್ರದಾಯಿಕ ಚಿನ್ನ ಮತ್ತು ಹೂವಿನ ಆಭರಣಗಳೊಂದಿಗೆ ಮೇಕಪ್ ಧರಿಸಿದ್ದರು. ಅವರು ಗೂಂಡಾಗಳನ್ನು ಹೊಡೆಯುತ್ತಿರುವುದು ಕಂಡುಬಂದಿದೆ.

ಪುಷ್ಪಾ 2 ಅನ್ನು ಚಿತ್ರಮಂದಿರಗಳಲ್ಲಿ ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಚಿತ್ರವು ಖಂಡಿತವಾಗಿಯೂ ಬಾಕ್ಸ್ ಆಫೀಸ್ ಆಳುತ್ತಿದೆ. ಪುಷ್ಪಾ 2 ಚಿತ್ರದ ಥಿಯೇಟರ್ ಹಕ್ಕುಗಳನ್ನು ಅನಿಲ್ ತಡಾನಿ 200 ಕೋಟಿ ರೂ.ಗೆ ಮುಂಗಡವಾಗಿ ಖರೀದಿಸಿದ್ದಾರೆ ಎಂದು ಪಿಂಕ್​ವಿಲ್ಲಾ ಇತ್ತೀಚೆಗೆ ವರದಿ ಮಾಡಿತ್ತು.

`ಪುಷ್ಪ 2′ ಸಿನಿಮಾದ ಈ ಒಂದು ದೃಶ್ಯಕ್ಕೆ 50 ಕೋಟಿ ರೂ. ಖರ್ಚು!

ಪುಷ್ಪ 2 ಸಿನಿಮಾ ಕಂಡು ಸಿನಿಪ್ರಿಯರು ಬೆರಗಾಗಿದ್ದಾರೆ. ಟೀಸರ್‌ನಲ್ಲಿ ಹೆಚ್ಚು ಹೈಲೈಟ್‌ ಆಗಿದ್ದು, ಗಂಗಮ್ಮ ಜಾತ್ರೆ. ಈ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಸೀರೆ ಧರಿಸಿ ಸಖತ್‌ ರಗಡ್‌ ಲುಕ್‌ನಲ್ಲಿ ಕಂಡಿದ್ದರು. ಈ ಸೆಟ್‌ಗೆ ಚಿತ್ರತಂಡ ಖರ್ಚು ಮಾಡಿದ್ದು ಐವತ್ತು ಕೋಟಿ ರೂ. ಎಂದು ವರದಿಯಾಗಿದೆ.

ಹೈದಬಾರಾದ್‌ನ ಗಂದಿಪೇಟ್‌ನಲ್ಲಿರುವ ಅಲ್ಲು ಸ್ಟುಡಿಯೋಸ್‌ನಲ್ಲಿ ಹಾಕಲಾದ ಈ ಸೆಟ್ ನಲ್ಲಿ ಪ್ರತಿ ದಿನ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಕಂಡು ಬರುತ್ತಿದ್ದರು ಎಂದು ವರದಿಯಾಗಿದೆ. ಮುಂಬೈನಿಂದ ಮೋಕೊಬೋಟ್ ಕ್ಯಾಮೆರಾವನ್ನು ಸುಕುಮಾರ್ ತರಿಸಿಕೊಂಡಿದ್ದರು. ಇದೆಲ್ಲದಕ್ಕೂ ಖರ್ಚಾಗಿದ್ದು ಮೂವತ್ತು ಕೋಟಿ ರೂ. ಎನ್ನಲಾಗಿದೆ. ವಿಶೇಷ ಏನೆಂದರೆ, ನಿರ್ದೇಶಕ ಸುಕುಮಾರ್ ಅವರು ಈ ಜಾತ್ರೆಯ ಸನ್ನಿವೇಶವನ್ನು ಸುಮಾರು 30ಕ್ಕೂ ಅಧಿಕ ದಿನಗಳ ಕಾಲ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಸೆಟ್‌ ಅಲ್ಲದೇ ಕಲಾವಿದರ ಸಂಭಾವನೆ, ಮೇಕಪ್‌, ನೂರಾರು ಕಲಾವಿದರ ಸಂಭಾವನೆ, ವಿಶುವಲ್ ಎಫೆಕ್ಟ್ಸ್, ಪೋಸ್ಟ್ ಪ್ರೊಡಕ್ಷನ್ ವರ್ಕ್‌, ಸೌಂಡ್ ಡಿಸೈನ್ ಹೀಗೆ ಎಲ್ಲವೂ ಸೇರಿ ಬರೋಬ್ಬರಿ 50 ಕೋಟಿ ರೂ. ಖರ್ಚಾಗಿದೆ ಎಂದು ವರದಿಯಾಗಿದೆ.

Continue Reading

ಟಾಲಿವುಡ್

Anushka Shetty: ಕನ್ನಡ ನಿರ್ಮಾಪಕನ ಜತೆ ʻಟಾಲಿವುಡ್‌ ಸ್ವೀಟಿʼ ಅನುಷ್ಕಾ ಶೆಟ್ಟಿ ಮದುವೆ?

Anushka Shetty: ಕನ್ನಡದ ದೊಡ್ಡ ನಿರ್ಮಾಪಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಎರಡೂ ಕುಟುಂಬಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ ನಿರ್ಮಾಪಕನಿಗೂ 42 ವರ್ಷ ಎಂದು ವರದಿಗಳಾಗಿವೆ. ಅನುಷ್ಕಾ ಶೆಟ್ಟಿ ಕನ್ನಡದ ನಟಿಯೇ ಆಗಿದ್ದರೂ, ತೆಲುಗು ಸಿನಿಮಾಗಳಿಂದ ವೃತ್ತಿ ಬದುಕನ್ನು ಆರಂಭಿಸಿದ್ದರು.ಇದೀಗ ತೆಲುಗು ಮಾಧ್ಯಮಗಳು ಅನುಷ್ಕಾ ಶೆಟ್ಟಿ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎಂದು ವರದಿ ಮಾಡಿವೆ.

VISTARANEWS.COM


on

Anushka Shetty producer marriage news viral
Koo

ಬೆಂಗಳೂರು: ನಟಿ ಅನುಷ್ಕಾ ಶೆಟ್ಟಿ (Anushka Shetty) ಮದುವೆ ವದಂತಿಗಳು ಹೊಸದೇನಲ್ಲ. ಹಲವು ಬಾರಿ ಪ್ರಭಾಸ್  ಜತೆ ನಟಿಯ ಹೆಸರು ತುಳುಕು ಹಾಕಿಕೊಂಡಿತ್ತು. ಕಳೆದ ಕೆಲವು ವರ್ಷಗಳಿಂದ ಜೋಡಿ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಬಳಿಕ ತಾವು ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಇದೀಗ ತೆಲುಗು ಮಾಧ್ಯಮಗಳು ಅನುಷ್ಕಾ ಶೆಟ್ಟಿ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎಂದು ವರದಿ ಮಾಡಿವೆ.

ಕನ್ನಡದ ದೊಡ್ಡ ನಿರ್ಮಾಪಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಎರಡೂ ಕುಟುಂಬಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ ನಿರ್ಮಾಪಕನಿಗೂ 42 ವರ್ಷ ಎಂದು ವರದಿಗಳಾಗಿವೆ. ಅನುಷ್ಕಾ ಶೆಟ್ಟಿ ಕನ್ನಡದ ನಟಿಯೇ ಆಗಿದ್ದರೂ, ತೆಲುಗು ಸಿನಿಮಾಗಳಿಂದ ವೃತ್ತಿ ಬದುಕನ್ನು ಆರಂಭಿಸಿದ್ದರು. ಅಕ್ಕಿನೇನಿ ನಾಗಾರ್ಜುನ ನಟಿಸಿದ್ದ ‘ಸೂಪರ್’ ಸಿನಿಮಾ ಮೂಲಕ ಟಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.’ಅರುಂಧತಿ’, ‘ಬಾಹುಬಲಿ’ ಅಂತಹ ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿ ಬದುಕಿಗೆ ಹೊಸ ತಿರುವನ್ನು ಕೊಟ್ಟಿತ್ತು. ಅದರಲ್ಲೂ ‘ಬಾಹುಬಲಿ’ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡಿತ್ತು.

ಇದನ್ನೂ ಓದಿ: Anushka Shetty: ಬಿಜೆಪಿ ಬೆಂಬಲಿತ ಪವನ್ ಕಲ್ಯಾಣ್ ಪಕ್ಷ ಸೇರಲಿದ್ದಾರಂತೆ ನಟಿ ಅನುಷ್ಕಾ ಶೆಟ್ಟಿ!

ಕೆಲ ದಿನಗಳ ಹಿಂದೆ ನಿರ್ದೇಶಕ ಕ್ರಿಶ್ ಅವರು ಅನುಷ್ಕಾ ಶೆಟ್ಟಿ (Anushka Shetty) ಜತೆ ಗುಟ್ಟಾಗಿ ಹೊಸ ಸಿನಿಮಾ ಶುರು ಮಾಡಿದ್ದಾರೆ ಎಂದು ವರದಿ ಆಗಿದ್ದವು. ಯುವಿ ಕ್ರಿಯೇಷನ್ಸ್ ಈ ಚಿತ್ರ ಮಹಿಳಾ ಪ್ರಧಾನ ಸಿನಿಮಾವಾಗಿದೆ. 14 ವರ್ಷಗಳ ಹಿಂದೆ ಬಂದಿದ್ದ ‘ವೇದಂ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಕ್ರಿಶ್ ಆ್ಯಕ್ಷನ್ ಕಟ್ ಹೇಳಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಹೊಸದೊಂದು ಸಿನಿಮಾ ಮೂಡಿ ಬರುತ್ತಿದೆ. ಇದೀಗ ಆ ಚಿತ್ರದ ಟೈಟಲ್ ರಿವೀಲ್ ಆಗಿದೆ. ‘ಘಾಟಿ’ ಎನ್ನುವ ಟೈಟಲ್ (Ghaati Title) (UV Creations) ಫೈನಲ್ ಮಾಡಲಾಗಿದೆ. ಇದು ತೆಲುಗು ಸಿನಿಮಾ. ಅಷ್ಟೇ ಅಲ್ಲ ಪೋಸ್ಟ್ ಥ್ರಿಯೇಟ್ರಿಕಲ್ ಒಟಿಟಿ ಪಾರ್ಟ್‌ನರ್‌ ಕೂಡ ಫಿಕ್ಸ್ ಆಗಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಈಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನುಷ್ಕಾ.

ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಕ್ರಿಶ್ ಒಬ್ಬರು. ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರದ್ದು ವೇಶ್ಯೆ ಪಾತ್ರ ಎಂದು ಹೇಳಲಾಗುತ್ತಿದೆ. ಅನುಷ್ಕಾ ಶೆಟ್ಟಿ ಜತೆ ಈ ಚಿತ್ರಕ್ಕೆ ಕ್ರಿಶ್ ಈ ಸಿನಿಮಾ ಮಾಡಿದ ಬಳಿಕ ಪವನ್‌ ಕಲ್ಯಾಣ್‌ ಜತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

ಅಮೆಜಾನ್ ಪ್ರೈಂ ಸಂಸ್ಥೆ ಮುಂದಿನ 2 ವರ್ಷಗಳಲ್ಲಿ ಸ್ಟ್ರೀಮಿಂಗ್ ಮಾಡುವ ಸಿನಿಮಾ ಹಾಗೂ ವೆಬ್‌ ಸೀರಿಸ್ ಲಿಸ್ಟ್ ಬಿಡುಗಡೆ ಮಾಡಿದೆ. ಆ ಲಿಸ್ಟ್‌ನಲ್ಲಿ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ ಕೂಡ ಇದೆ. ಇನ್ನು ಯುವಿ ಕ್ರಿಯೇಷನ್ಸ್ ಜತೆಗೆ ಫಸ್ಟ್ ಫ್ರೇಮ್ಸ್ ಎಂಟರ್‌ಟ್ರೈನ್‌ಮೆಂಟ್ಸ್ ಸಂಸ್ಥೆ ಕೂಡ ಸಿನಿಮಾ ನಿರ್ಮಾಣಕ್ಕೆ ಕೈಜೋಡಿಸಿದೆ.

ಚಿಂತಕಿಂಡಿ ಶ್ರೀನಿವಾಸ್ ರಾವ್, ಕ್ರಿಶ್ ಹಾಗೂ ಸಾಯಿಮಾಧವ ಬುರ್ರಾ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆಂಧ್ರ ಮತ್ತು ಒಡಿಶಾ ಗಡಿಯಲ್ಲಿ ‘ಘಾಟಿ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ ರಮ್ಯಾ ಕೃಷ್ಣನ್ ಛತ್ತೀಸ್‌ಗಢದ ತಿರತ್‌ಗಢದಲ್ಲಿ ನಡೆದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು.

Continue Reading

ಟಾಲಿವುಡ್

Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಪೋಸ್ಟ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ!

Rashmika Mandanna: ಮುಂಬೈ ಅಟಲ್ ಸೇತುವೆ ಮಾರ್ಗಮಧ್ಯೆ ಪ್ರಯಾಣಿಸುತ್ತ ರಶ್ಮಿಕಾ ಮೋದಿ ಸಾಧನೆಯನ್ನು ಕೊಂಡಾಡಿದ್ದರು. ಇದೀಗ ರಶ್ಮಿಕಾ ಶೇರ್‌ ಮಾಡಿಕೊಂಡಿರುವ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಅವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸಿನಿಮಾ ವಿಚಾರಕ್ಕೆ ಬಂದರೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಲ್ಮಾನ್ ಖಾನ್ (Salman Khan) ಅವರ ಹೊಸ ಪ್ರಾಜೆಕ್ಟ್ ʻಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ.

VISTARANEWS.COM


on

Rashmika Madanna Appreciation Post PM Modi Reacts
Koo

ಮುಂಬೈ: ಈ ಬಾರಿಯ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನದ ಹೊಸ್ತಿಲಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿವೃದ್ದಿಗೆ ಮತ ನೀಡಿ ಎಂದು ಹೇಳಿದ್ದರು. ವಾಣಿಜ್ಯ ನಗರಿ ಮುಂಬೈಯಲ್ಲಿ ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್‌ ಸೇತು (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ (Mumbai Trans Harbour Link-MTHL) ಅನ್ನು ಪ್ರಧಾನಿ ನರೇಂದ್ರ ಮೋದಿ ಜನವರಿಯಲ್ಲಿ ಲೋಕಾರ್ಪಣೆ ಮಾಡಿದ್ದರು. ಈ ಅಟಲ್‌ ಸೇತು ದೇಶದ ಅತೀ ದೊಡ್ಡ ಮತ್ತು ಜಗತ್ತಿನ 12ನೇ ಅತೀ ದೊಡ್ಡ ಸಮುದ್ರ ಸೇತುವೆ ಎನಿಸಿಕೊಂಡಿದೆ. ಮುಂಬೈ ಅಟಲ್ ಸೇತುವೆ ಮಾರ್ಗಮಧ್ಯೆ ಪ್ರಯಾಣಿಸುತ್ತ ರಶ್ಮಿಕಾ ಮೋದಿ ಸಾಧನೆಯನ್ನು ಕೊಂಡಾಡಿದ್ದರು. ಇದೀಗ ರಶ್ಮಿಕಾ ಶೇರ್‌ ಮಾಡಿಕೊಂಡಿರುವ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಅವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿ ಪ್ರತಿಕ್ರಿಯೆ

ರಶ್ಮಿಕಾ ಮಂದಣ್ಣ ಸೇತುವೆ ಕುರಿತು ʻʻದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ… ಪಶ್ಚಿಮ ಭಾರತದಿಂದ ಪೂರ್ವ ಭಾರತಕ್ಕೆ… ಜನರನ್ನು ಸಂಪರ್ಕಿಸುತ್ತಿದೆ, ಹೃದಯಗಳನ್ನು ಸಂಪರ್ಕಿಸುತ್ತಿದೆʼʼಎಂದು ವಿಡಿಯೊವನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದೀಗ ಪ್ರಧಾನಿ ಮೋದಿ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಖಂಡಿತವಾಗಿಯೂ! ಜನರನ್ನು ಸಂಪರ್ಕಿಸುವುದು ಮತ್ತು ಅವರ ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದು ಬೇರೇನೂ ಇಲ್ಲ.”ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ʻನಮೋʼ ಸಾಧನೆಗೆ ಕಿರಿಕ್‌ ಬ್ಯೂಟಿ ರಶ್ಮಿಕಾ ಕ್ಲೀನ್‌ ಬೋಲ್ಡ್‌!

ರಶ್ಮಿಕಾ ವಿಡಿಯೊದಲ್ಲಿ ಏನಿದೆ?

“ಕೇವಲ 7 ವರ್ಷಗಳಲ್ಲಿ ಈ ಭವ್ಯವಾದ ಅದ್ಭುತವನ್ನು ನಿರ್ಮಿಸಿದ್ದೇವೆ. ಅಟಲ್ ಸೇತು ಭವಿಷ್ಯದ ಬಾಗಿಲುಗಳನ್ನು ಎಷ್ಟು ಬಲವಾಗಿ ತಟ್ಟಿದ್ದಾರೆ ಎಂದರೆ ಭಾರತಕ್ಕೆ ಹೊಸ ಬಾಗಿಲುಗಳು ತೆರೆದಿವೆ. ಅಟಲ್ ಸೇತು ಸೇತುವೆ ಅಷ್ಟೇ ಅಲ್ಲ ಯುವ ಭಾರತಕ್ಕೆ ಗ್ಯಾರಂಟಿ. ನಮ್ಮ ರಾಷ್ಟ್ರವನ್ನು ಈಗ ತಡೆಯಲಾಗದು. ನೀವು ಇಂತಹ 100ರಷ್ಟು ಅಟಲ್ ಸೇತು ಸೇತುವೆಗಳನ್ನು ಪಡೆಯಲು ಬಯಸುವಿರಾ? ಎಚ್ಚೆತ್ತುಕೊಂಡು ಅಭಿವೃದ್ಧಿಗಾಗಿ ಮತ ಚಲಾಯಿಸಿ’ ಎಂದು ರಶ್ಮಿಕಾ ವಿಡಿಯೊದಲ್ಲಿ ಹೇಳಿದ್ದರು.

ರಶ್ಮಿಕಾ ಸಾಥ್‌

ಈ ಮುಂಚೆ ಮುಂಬೈ ಅಟಲ್ ಸೇತುವೆ ಮಾರ್ಗಮಧ್ಯೆ ಪ್ರಯಾಣಿಸುತ್ತ ರಶ್ಮಿಕಾ ಮಾತನಾಡಿ “ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಮಾಡಬಹುದು. ಹಾಗೆ, ನೀವು ಅದನ್ನು ನಂಬುವುದಿಲ್ಲ! ಈ ರೀತಿಯ ಏನಾದರೂ ಸಾಧ್ಯ ಎಂದು ಯಾರು ಭಾವಿಸಿದ್ದರು. ಮುಂಬೈಯಿಂದ ಮುಂಬೈಗೆ, ಗೋವಾದಿಂದ ಮುಂಬೈವರೆಗೆ ಹಾಗೂ ಬೆಂಗಳೂರುನಿಂದ ಮುಂಬೈವರೆಗೆ ಎಲ್ಲಾ ಪ್ರಯಾಣಗಳನ್ನು ತುಂಬಾ ಸುಲಭವಾಗಿ ಮಾಡಲಾಗಿದೆ. ಅದೂ ಕೂಡ ಅದ್ಭುತ ಮೂಲಸೌಕರ್ಯದೊಂದಿಗೆ ಇದು ನನಗೆ ಹೆಮ್ಮೆ ತರುತ್ತದೆ” ಎಂದು ರಶ್ಮಿಕಾ ಹೇಳಿದ್ದರು.

ರಶ್ಮಿಕಾ ಮಾತು ಮುಂದುವರಿಸಿ ʻʻಕಳೆದ 10 ವರ್ಷಗಳಲ್ಲಿ ನಮ್ಮ ದೇಶದ ಅಭಿವೃದ್ಧಿ ಗಮನಿಸಿದರೆ ಇನ್ನು ತಡೆಯಲು ಸಾಧ್ಯವಿಲ್ಲ. “ಈಗ ಭಾರತ ಯಾವುದಕ್ಕೂ ನೋ ಎನ್ನುವುದಿಲ್ಲ. ನಮ್ಮ ದೇಶದ ಮೂಲಸೌಕರ್ಯ, ಯೋಜನೆ, ರಸ್ತೆ ಯೋಜನೆ ಅದ್ಭುತವಾಗಿದೆ. ಈಗ ಇದು ನಮ್ಮ ಸಮಯ ಎಂದು ನಾನು ಭಾವಿಸುತ್ತೇನೆ! ಏಳು ವರ್ಷಗಳಲ್ಲಿ 20 ಕಿ.ಮೀ ಸೇತುವೆ ನಿರ್ಮಾಣವಾಗಿದೆ. ಚೆನ್ನಾಗಿಯೂ ಇದೆ. ಇದನ್ನು ನೋಡಿ ನನಗೆ ಮಾತೇ ಬರುತ್ತಿಲ್ಲ” ಎಂದು ಹೇಳಿದ್ದರು.

ಸಿನಿಮಾ ವಿಚಾರಕ್ಕೆ ಬಂದರೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಲ್ಮಾನ್ ಖಾನ್ (Salman Khan) ಅವರ ಹೊಸ ಪ್ರಾಜೆಕ್ಟ್ ʻಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಇದು ರಶ್ಮಿಕಾ ಅವರ ನಾಲ್ಕನೇ ಬಾಲಿವುಡ್ ಚಿತ್ರ. ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ: Rashmika Mandanna: ಸಲ್ಮಾನ್ ಖಾನ್ ಜತೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ರೊಮ್ಯಾನ್ಸ್‌!

ರಶ್ಮಿಕಾ ಮುಂದೆ ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

Continue Reading

ಸಿನಿಮಾ

Single Screen Theaters: ಹತ್ತು ದಿನ ತೆಲಂಗಾಣದ ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳು ಬಂದ್; ಕಾರಣ ವಿಚಿತ್ರ!

ಕ್ಷೀಣಿಸುತ್ತಿರುವ ಬಾಕ್ಸ್ ಆಫೀಸ್ ಆದಾಯದ ನಡುವೆ, ಐಪಿಎಲ್ ಮತ್ತು ಸಾರ್ವತ್ರಿಕ ಚುನಾವಣೆಗಳಿಂದ ಟಾಲಿವುಡ್ ನಲ್ಲಿ ಯಾವುದೇ ಚಲನಚಿತ್ರ ತೆರೆಗೆ ಬಂದಿಲ್ಲ. ಹೀಗಾಗಿ ನಷ್ಟದ ಹಾದಿಯನ್ನು ಸರಿಪಡಿಸಿಕೊಳ್ಳಲು ತೆಲಂಗಾಣದಲ್ಲಿ ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳು (Single Screen Theaters) ಹತ್ತು ದಿನಗಳ ಕಾಲ ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ.

VISTARANEWS.COM


on

By

Single Screen Theaters
Koo

ಪ್ರಮುಖ ಚಲನಚಿತ್ರಗಳ ಬಿಡುಗಡೆ (movie releases) ಕೊರತೆಯಿಂದಾಗಿ ತೆಲಂಗಾಣದಾದ್ಯಂತ (Telangana) ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು (Single Screen Theaters) 10 ದಿನಗಳ ಕಾಲ ತಾತ್ಕಾಲಿಕ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಯಾವುದೇ ಗಮನಾರ್ಹ ಚಲನಚಿತ್ರ ಬಿಡುಗಡೆಗೆ ಇಲ್ಲದಿರುವ ಪರಿಣಾಮ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಯಾವುದೇ ದೊಡ್ಡ ಬಜೆಟ್ ನ ಚಿತ್ರಗಳು ಬಾರದೇ ಇರುವುದರಿಂದ ಥಿಯೇಟರ್ ಗಳನ್ನು ಮುಚ್ಚುತ್ತಿರುವುದಾಗಿ ಥಿಯೇಟರ್ ಮಾಲೀಕರು ಉಲ್ಲೇಖಿಸಿದ್ದಾರೆ. ಪ್ರೇಕ್ಷಕರನ್ನು ಆಕರ್ಷಿಸಲು ಯಾವುದೇ ಪ್ರಮುಖ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಚಲನಚಿತ್ರ ಪ್ರದರ್ಶನ ಕಾರ್ಯಾಚರಣೆಯ ವೆಚ್ಚ ಮತ್ತು ಕಡಿಮೆಯಾದ ಆದಾಯ ಸೇರಿದಂತೆ ಹಣಕಾಸಿನ ಸವಾಲುಗಳ ನಡುವೆ 2024ರ ಸಂಕ್ರಾಂತಿ ನಂತರ ಯಾವುದೇ ದೊಡ್ಡ ಚಿತ್ರಗಳು ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ.

ಏನು ಕಾರಣ?

ಕಳೆದ ಕೆಲವು ವಾರಗಳಲ್ಲಿ ತೆಲಂಗಾಣದಲ್ಲಿ ಚಲನಚಿತ್ರ ವ್ಯಾಪಾರಿಗಳು ಮೇ 17ರಿಂದ ಥಿಯೇಟರ್ ಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡರು. ಒಂದೆಡೆ ಲೋಕ ಸಭಾ ಚುನಾವಣೆ, ಇನ್ನೊಂದೆಡೆ ದೊಡ್ಡ ಚಿತ್ರಗಳ ಬಿಡುಗಡೆಗಳ ಕೊರತೆ, ಇಂಡಿಯನ್ ಪ್ರೀಮಿಯರ್ ಲೀಗ್ ಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಥಿಯೇಟರ್‌ಗಳ ಮೇಲೆ ಭಾರಿ ಪ್ರಭಾವವನ್ನು ಬೀರಿದೆ.

ಮತ್ತೆ ತೆರೆಯುವ ನಿರೀಕ್ಷೆ

ಮೇ 31 ರಂದು ವಿಶ್ವಕ್ ಸೇನ್ ಅವರ ‘ಗ್ಯಾಂಗ್ಸ್ ಆಫ್ ಗೋದಾವರಿ’ಗಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮತ್ತೆ ತೆರೆಯಲ್ಪಡುತ್ತವೆ. ಅಲ್ಲದೆ ಅನೇಕ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ‘ಕಲ್ಕಿ’ಯಂತಹ ದೊಡ್ಡ-ಬಜೆಟ್ ಚಿತ್ರಗಳ ಮೇಲೆ ಭರವಸೆ ಇಡುತ್ತಿವೆ. 2898 AD’, ‘ಪುಷ್ಪ: ದಿ ರೂಲ್’, ‘ಗೇಮ್ ಚೇಂಜರ್’, ‘ವಿಶ್ವಂಭರ’ ಮತ್ತು ‘ಇಂಡಿಯನ್ 2’ ಸೇರಿದಂತೆ ಈ ಬಾರಿ ಹಲವು ಚಿತ್ರಗಳು ತೆರೆಗೆ ಬರುವ ನಿರೀಕ್ಷೆಯಲ್ಲಿದೆ.

ಹತ್ತು ದಿನ ಬಂದ್

ತೆಲಂಗಾಣದಲ್ಲಿ ಚಲನಚಿತ್ರ ವ್ಯವಹಾರವು ಕೆಲವು ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದೆ. ಇದು ರಾಜ್ಯದ ಮನರಂಜನಾ ವಲಯದಾದ್ಯಂತ ತಲ್ಲಣ ಉಂಟು ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಆದಾಯ ಕಡಿಮೆಯಾಗುತ್ತಿರುವ ಕಾರಣ ತೆಲಂಗಾಣದಾದ್ಯಂತ ಹಲವಾರು ಏಕ-ಪರದೆಯ ಚಿತ್ರಮಂದಿರಗಳು ಮೇ 17ರಿಂದ ಮೇ 26ರವರೆಗೆ ಹತ್ತು ದಿನಗಳ ಕಾಲ ಬಾಗಿಲು ಮುಚ್ಚಲು ಯೋಜಿಸಿದೆ.

ಈ ಬಾರಿ ಬೇಸಿಗೆಯಲ್ಲಿ ಪ್ರಮುಖ ಚಲನಚಿತ್ರ ಬಿಡುಗಡೆಯಾಗಿಲ್ಲ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ದೊಡ್ಡ ಜನಸಮೂಹವನ್ನು ಸೆಳೆಯುವ ಬ್ಲಾಕ್‌ಬಸ್ಟರ್ ಹಿಟ್‌ ಚಿತ್ರಗಳು ತೆರೆಗೆ ಬರುತ್ತದೆ. ಆದರೆ ಈ ಬಾರಿ ಯಾವುದೇ ಅಂತಹ ಚಿತ್ರಗಳು ಬಂದಿಲ್ಲ. ಇದು ಸಿಂಗಲ್ ಸ್ಕ್ರೀನ್‌ಗಳ ಮೇಲೆ ಗಂಭೀರ ಪರಿಣಾಮವನ್ನೇ ಬೀರಿದೆ.

ಇದನ್ನೂ ಓದಿ: Cannes 2024: ಕಾನ್ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಊರ್ವಶಿ ರೌಟೇಲಾ: ದೀಪಿಕಾ ಸ್ಟೈಲ್ ಕಾಪಿ ಮಾಡಿದ್ರಾ?

ಥಿಯೇಟರ್‌ಗಳು ತಮ್ಮ ಆದಾಯವನ್ನು ಸಂಗ್ರಹಿಸಲು ಕಡಿಮೆ ಅವಕಾಶಗಳನ್ನು ಹೊಂದಿರುತ್ತದೆ. ಚಲನಚಿತ್ರದ ವೇಳಾಪಟ್ಟಿ ಮತ್ತು ಪ್ರೇಕ್ಷಕರ ಸಂಖ್ಯೆಯಲ್ಲಿನ ಏರಿಳಿತಗಳಿಗೆ ಹೆಚ್ಚು ಗುರಿಯಾಗುತ್ತವೆ. ಕಳೆದ ಎರಡು ತಿಂಗಳುಗಳಲ್ಲಿ ಸಣ್ಣ ಮತ್ತು ಮಧ್ಯಮ-ಬಜೆಟ್ ಚಲನಚಿತ್ರಗಳ ಸರಣಿಯು ಛಾಪು ಮೂಡಿಸುವಲ್ಲಿ ವಿಫಲವಾಗಿದೆ. ಇದರಿಂದ ಚಿತ್ರೋದ್ಯಮ ವ್ಯಾಪಾರವನ್ನು ಮತ್ತಷ್ಟು ತಗ್ಗಿದೆ.

ನಷ್ಟ ತಡೆಗೆ ಕ್ರಮ

ತೆಲಂಗಾಣ ಥಿಯೇಟರ್ಸ್ ಅಸೋಸಿಯೇಷನ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ಮೂಲಕ ಮತ್ತಷ್ಟು ನಷ್ಟವನ್ನು ತಡೆಯಲು ತಡೆಗಟ್ಟಲು ನಿರ್ಧರಿಸಿದೆ.

Continue Reading
Advertisement
Tatkal Tickets
ದೇಶ15 mins ago

Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

Prajwal Revanna Case DK Shivakumar offers Rs 100 crore to get involved in pen drive case Devaraje Gowda allegations
ಕ್ರೈಂ17 mins ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

Delhi Airport
ದೇಶ20 mins ago

Delhi Airport: ಹಾರುತ್ತಿದ್ದ ವಿಮಾನದಲ್ಲಿ ಅಗ್ನಿ ಅವಘಡ; ದೆಹಲಿ ಏರ್‌ಪೋರ್ಟ್‌ನಲ್ಲಿ ಎಮರ್ಜನ್ಸಿ ಘೋಷಣೆ!

water aerator
ಬೆಂಗಳೂರು25 mins ago

Water Aerator : ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ಮನೆ ತಲುಪುತ್ತದೆ ವಾಟರ್ ಏರಿಯೇಟರ್​

Holenarasipura sexual assault case lot of confusion in the victim statement against HD Revanna Case
ಕ್ರೈಂ57 mins ago

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌; ರೇವಣ್ಣ ವಿರುದ್ಧ ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!

Bhatkal News
ಕರ್ನಾಟಕ1 hour ago

Bhatkal News: ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು

Dubbing Premier League
ಕ್ರಿಕೆಟ್1 hour ago

Dubbing Premier League : ಶನಿವಾರದಿಂದ 3ನೇ ಆವೃತ್ತಿಯ ಡಬ್ಬಿಂಗ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ

Uttar Pradesh
ದೇಶ1 hour ago

Uttar Pradesh: ಉತ್ತರ ಪ್ರದೇಶದಲ್ಲಿ ಲೋಕಸಭೆ ಸಮರ; ನೀವು ತಿಳಿಯಲೇಬೇಕಾದ 5 ಕುತೂಹಲಕರ ಅಂಶಗಳು ಇಲ್ಲಿವೆ

Prajwal Revanna Case
ಕರ್ನಾಟಕ1 hour ago

Prajwal Revanna Case: ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿಗೆ

theft Case
ಕ್ರೈಂ2 hours ago

Theft Case : ಪೊಲೀಸ್‌ ಬಸ್ಸನ್ನೇ ಕದಿಯಲು ಬಂದ ಕುಡುಕ; ಪೇಡ ಕೇಳಿದವ 15 ಕೆಜಿ ತುಪ್ಪ ಎಗರಿಸಿದ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ14 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌