Site icon Vistara News

Nandita Swetha: ಸಮಂತಾರಂತೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ʻಜಿಂಕೆ ಮರಿʼ ನಂದಿತಾ ಶ್ವೇತಾ

Nandita Swetha

ಬೆಂಗಳೂರು: ಅಭಿಮಾನಿಗಳಿಗೆ ಅವರ ಮೆಚ್ಚಿನ ನಾಯಕಿಯ ಬಗ್ಗೆ ವಿಶೇಷವಾದ ಕ್ರೇಜ್ ಇರುತ್ತದೆ. ಅದಕ್ಕೇ ಕಾರಣ ಸುಂದರವಾಗಿ ಕಾಣುವುದರ ಜತೆಗೆ ತಮ್ಮ ಅಭಿನಯದಿಂದ ಇಂಪ್ರೆಸ್ ಮಾಡುತ್ತಾರೆ. ಬೆಳ್ಳಿತೆರೆಯಲ್ಲಿ ಪ್ರೇಕ್ಷಕರನ್ನು ಮೆಚ್ಚಿಸಲು ನಾಯಕಿಯರು ಮಾಡುವ ಹರಸಾಹಸ ಅಷ್ಟೆ ಅಲ್ಲ. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿದ್ದರೂ ಅವುಗಳನ್ನು ಬಹಿರಂಗಪಡಿಸದೆ ನಿರ್ವಹಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಅವರು ತಮ್ಮ ಸಮಸ್ಯೆಗಳನ್ನು ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಸಮಂತಾ. ಇದೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪಟ್ಟಿಗೆ ಮತ್ತೊಬ್ಬ ನಾಯಕಿ ಸೇರಿಕೊಂಡಿದ್ದಾರೆ. ಅವರು ಯಾರು ಅಲ್ಲ ‘ನಂದ ಲವ್ಸ್ ನಂದಿತಾ’ (Nanda Loves Nanditha) ಸಿನಿಮಾ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಿತರಾದ ನಂದಿತಾ ಶ್ವೇತಾ (Nandita Swetha).

ತಮಿಳಿನಲ್ಲಿ ಹೆಚ್ಚಾಗಿ ಸಿನಿಮಾ ಮಾಡುತ್ತಿರುವ ನಂದಿತಾ ಶ್ವೇತಾ ಈಗ ಕನ್ನಡದ ʻಹಿಡಿಂಬʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ, ಈ ಚಿತ್ರದಲ್ಲಿ ಅವರು ಗ್ಲಾಮರ್ ಆಗಿ ಕಂಡಿದ್ದಾರೆ. ಜುಲೈ 20ಕ್ಕೆ ತೆರೆಗೆ ಬರಲು ಸಿದ್ಧವಾಗಿರುವ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಹಿನ್ನಲೆಯಲ್ಲಿ ನಂದಿತಾ ಶ್ವೇತಾ ತಮ್ಮ ಆರೋಗ್ಯದ ಸಮಸ್ಯೆಯನ್ನು ಬಹಿರಂಗಪಡಿಸಿದ್ದಾರೆ. ಲೂಸ್ ಮಾದ ಯೋಗಿಗೆ ಜೋಡಿಯಾಗಿ ‘ನೀ ಜಿಂಕೆ ಮರಿ ನಾ’ ಎಂದು ಹಾಡಿಗೆ ಸೊಂಟ ಬಳುಕಿಸಿದ್ದರು. ನಂದಿತಾ ಶ್ವೇತಾ ಅವರು ಫೈಬ್ರೊ ಮೈಲ್ಜಿಯಾ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸ್ವಲ್ಪ ಕೆಲಸ ಮಾಡಿದರೂ ಸ್ನಾಯುಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಭಾರವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾಗಿರುವ ನಟಿ, ತಾವು ಈ ರಹಸ್ಯ ವಿಷಯವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Samantha Ruth Prabhu: ಮೈಯೋಸಿಟಿಸ್ ಕಾಯಿಲೆ ಕುರಿತಾಗಿ ಮನಬಿಚ್ಚಿ ಮಾತನಾಡಿದ ಸಮಂತಾ

ಟಿ ನಂದಿತಾ ಶ್ವೇತಾ ಅವರು ತಮ್ಮ ‘ಹಿಡಿಂಬಾ’ (Hidimba) ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕಾಗಿ ಸಖತ್ ವರ್ಕೌಟ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ʻʻ‘ಹಿಡಿಂಬಿ’ ಚಿತ್ರಕ್ಕಾಗಿ ಇದನ್ನೆಲ್ಲಾ ಮೀರಿ ಕಸರತ್ತು ಮಾಡಿದ್ದೇನೆ. ನಿದ್ದೆಯಿಲ್ಲದೆ ದುಡಿದಿದ್ದೇನೆ. ಚಿತ್ರಕ್ಕಾಗಿ ಇಷ್ಟೆಲ್ಲ ಸಹಿಸಿಕೊಂಡು ತೂಕ ಇಳಿಸಿಕೊಂಡೆ ಎಂದಿದ್ದಾರೆʼʼ. ಈ ಚಿತ್ರವನ್ನು ಅನಿಲ್ ಕನ್ನೆಗಂಟಿ ನಿರ್ದೇಶಿಸಿದ್ದಾರೆ ಮತ್ತು ಎಕೆ ಎಂಟರ್‌ಟೈನ್‌ಮೆಂಟ್ಸ್, ಎಸ್‌ವಿಕೆ ಸಿನಿಮಾಸ್ ಮತ್ತು ಓಎಕೆ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ಗಳಲ್ಲಿ ನಿರ್ಮಿಸಲಾಗಿದೆ.

Exit mobile version