Site icon Vistara News

Pavitra Lokesh | ಪೊಲೀಸ್ ಠಾಣೆ ಮೆಟ್ಟಿಲೇರಿದ ಪವಿತ್ರಾ ಲೋಕೇಶ್‌: ದೂರಿನಲ್ಲೇನಿದೆ?

Pavitra Lokesh

ಬೆಂಗಳೂರು: ಈ ಹಿಂದೆಯಷ್ಟೇ ಟಾಲಿವುಡ್‌ ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ (Pavitra Lokesh ) ಸೋಷಿಯಲ್‌ ಮೀಡಿಯಾದಲ್ಲಿ ತಾವಿಬ್ಬರೂ ನಟಿಸಿದ ಚಿತ್ರದ ಕುರಿತು ಮಾತನಾಡಿದ್ದರು. ಮಾತನಾಡುವಾಗ ಪವಿತ್ರಾ ಲೋಕೇಶ್‌ ಅವರ ಭುಜದ ಮೇಲೆ ನರೇಶ್‌ ಕೈ ಹಾಕಿರುವುದನ್ನು ನೋಡಿ ನೆಟ್ಟಿಗರು ಕಾಲೆಳೆದಿದ್ದರು. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ಕೃಷ್ಣ ಅವರ ಅಂತಿಮ ದರ್ಶನದ ಸಮಯದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಈ ಜೋಡಿ ಘನತೆ ಮರೆತು ವರ್ತಿಸಿದೆ ಎಂದು ಕೆಲವು ವೆಬ್‌ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳು ವರದಿ ಮಾಡಿದ್ದವು. ತಮ್ಮ ವಿರುದ್ಧ ಪ್ರಸಾರವಾದ ಸುದ್ದಿಗಳ ವಿರುದ್ಧ ಪವಿತ್ರಾ ಲೋಕೇಶ್ ಹಾಗೂ ನರೇಶ್‌ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕೃಷ್ಣ ಅವರು ನರೇಶ್‌ ಅವರ ಮಲತಂದೆ. ಅಂತಿಮ ದರ್ಶನದ ವೇಳೆ ನರೇಶ್‌ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ದುಃಖದ ಸಂದರ್ಭದಲ್ಲಿಯೂ ಇವರು ತಮ್ಮ ಸಿನಿಮಾ ಪ್ರಚಾರ ಮಾಡಿದ ಬಗ್ಗೆ ಸುದ್ದಿಯಾಗಿತ್ತು. ಈ ಕುರಿತ ವಿಡಿಯೊ ವೈರಲ್‌ ಆಗಿತ್ತು. ಇದೀಗ ತಮ್ಮ ಬಗ್ಗೆ ಕೆಟ್ಟದ್ದಾಗಿ ಬರೆದ ವಿಡಿಯೊ ಹಾಗೂ ಸುದ್ದಿ ಪ್ರಕಟಿಸಿದ ವೆಬ್‌ಸೈಟ್‌ ಮತ್ತು ಯುಟ್ಯೂಬ್‌ ಚಾನಲ್‌ಗಳ ವಿರುದ್ಧ ತೆಲಂಗಾಣ ಸೈಬರ್‌ ಪೊಲೀಸರಿಗೆ ಪವಿತ್ರಾ ಲೋಕೇಶ್‌ ದೂರು ದಾಖಲಿಸಿದ್ದಾರೆ. ʻʻತಮ್ಮಿಬ್ಬರ ಬಗ್ಗೆ ಇಲ್ಲಸಲ್ಲದ್ದನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದುʼʼ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ | Pavitra Lokesh | ಪವಿತ್ರಾ ಲೋಕೇಶ್‌ ಭುಜದ ಮೇಲೆ ನರೇಶ್‌ ಕೈ: ವಿಡಿಯೊದಲ್ಲಿ ಹೇಳಿದ್ದೇನು?

ಸೈಬರ್‌ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ʻʻಕೆಲವು ಮಾಧ್ಯಮ ಸಂಸ್ಥೆಗಳು ನನ್ನ ವಿರುದ್ಧ ವೈಯಕ್ತಿಕ ದ್ವೇಷದಿಂದ ಈ ರೀತಿಯ ಸುದ್ದಿಗಳನ್ನು ಪ್ರಕಟಿಸಿವೆʼʼ ಎಂದು ಪವಿತ್ರಾ ಲೋಕೇಶ್‌ ದೂರಿನಲ್ಲಿ ಹೇಳಿದ್ದಾರೆ. ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ʻʻಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಚಿತ್ರದಲ್ಲಿ ಗಂಡ – ಹೆಂಡತಿ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಮತ್ತಷ್ಟು ಸುದ್ದಿಯಲ್ಲಿದೆ ಜೋಡಿ.

ಇದನ್ನೂ ಓದಿ | Pavitra Lokesh | ಪವಿತ್ರಾ ಲೋಕೇಶ್‌-ನರೇಶ್‌ ನಡುವೆ ಬ್ರೇಕಪ್‌ ಆಗಿದೆ ಅಂತಿದೆ ಟಾಲಿವುಡ್‌!

Exit mobile version