ಬೆಂಗಳೂರು: ಕನ್ನಡ ಸಿನಿಮಾ ಪ್ರೇಮಿಗಳಿಗೆ ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸೇರಿದಂತೆ ಹಲವು ಸದಭಿರುಚಿ ಚಿತ್ರಗಳನ್ನು ಉಣಬಡಿಸಿರುವ ಪವನ್ ಒಡೆಯರ್ (Pavan Wadeyar) ನಿರ್ಮಾಣದ ಚೊಚ್ಚಲ ಸಿನಿಮಾ ಡೊಳ್ಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಹಲವು ಅಂತಾರಾಷ್ಟ್ರೀಯ ಫಿಲ್ಮ್ ಪ್ರದರ್ಶಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡು, ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು 68ನೇ ರಾಷ್ಟ್ರೀಯ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇಂತಹ ವಿಭಿನ್ನ ಕಥೆಯನ್ನು ನಿರ್ಮಿಸಿರುವ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಅವರನ್ನು ದುಬೈ ಅನಿವಾಸಿ ಕನ್ನಡಿಗರು ಸನ್ಮಾನಿಸಿ ಗೌರವಿಸಿದ್ದಾರೆ.
ಇಂದಿನ ಕಾಲಘಟ್ಟದಲ್ಲಿ ನಶಿಸುತ್ತಿರುವ ಜನಪದ ಕಲೆ ಡೊಳ್ಳು ಸುತ್ತ ಸಾಗುವ ಈ ಕಥೆಯನ್ನು ಪ್ರತಿಯೊಬ್ಬರು ಅಪ್ಪಿಕೊಂಡಿದ್ದಾರೆ. ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ಒಡೆಯರ್ ಮೂವೀಸ್ ನಡಿ ಪತ್ನಿ ಜತೆಗೂಡಿ ನಿರ್ಮಾಣ ಮಾಡಿದ್ದರು. ಕಮರ್ಷಿಯಲ್ ಸಿನಿಮಾಗಳ ಆರ್ಭಟದ ನಡುವೆ ಇಂತಹ ವಿಭಿನ್ನ ಕಥೆಯನ್ನು ನಿರ್ಮಿಸಿರುವ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಅವರನ್ನು ದುಬೈ ಅನಿವಾಸಿ ಕನ್ನಡಿಗರು ಸನ್ಮಾನಿಸಿ ಗೌರವಿಸಿದ್ದಾರೆ.
ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಾದ ಪೀಟರ್ ಜಾಸನ್ ಮತ್ತು ರಶ್ಮಿ ಪೀಟರ್, ಮಮತಾ ಸಿಂಥಿಲ್ ಸೇರಿದಂತೆ ಹಲವರು ತಮ್ಮ ಸಿನಿಮಾ ಮೇಲಿನ ಪ್ರೀತಿಯಿಂದ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಡಿ ಭಾರತದ ಚಿತ್ರರಂಗದ ಶ್ರೇಷ್ಠ ಕಲಾವಿದರನ್ನು ಗುರುತಿಸಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-ಸ್ಯಾಂಡಲ್ ವುಡ್-2023(IIMF) ಕಾರ್ಯಕ್ರಮದ ಮೂಲಕ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಇದೇ ತಿಂಗಳ 16ರಂದು ಹಮ್ಮಿಕೊಂಡಿದ್ದ IIMF ಲೋಗೊ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಟಗರು, ಸಲಗ ಸಿನಿಮಾಗಳ ಖ್ಯಾತಿ ಸಂಭಾಷಣೆಗಾರ ಮಾಸ್ತಿ ಭಾಗಿಯಾಗಿದ್ದರು. ಚಿತ್ರರಂಗದಲ್ಲಿ ತಮ್ಮದೇ ಸೇವೆ ಸಲ್ಲಿಸಿರುವ ಇವರಿಬ್ಬರು IIMF ಲೋಗೋ ಲಾಂಚ್ ಮಾಡಿ ಟೀಂ ಸುಪ್ರೀಂ ಸಂಸ್ಥೆಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: Pavan Wadeyar | ಸ್ಯಾಂಡಲ್ವುಡ್ ಸ್ಟಾರ್ ಪವನ್ ಒಡೆಯರ್ ಈಗ ಆಸ್ಕರ್ ಜ್ಯೂರಿ
ಪವನ್ ಒಡೆಯರ್ ಪೋಸ್ಟ್
ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ದೇಶಕ ಕಂ ನಿರ್ಮಾಪಕ ಪವನ್ ಒಡೆಯರ್, ʻʻಇದೊಂದು ಗ್ರೇಟ್ ಇವೆಂಟ್. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ತಮ್ಮ ಕೆಲಸ ಗುರುತಿಸಿ ನೀಡಿರುವ ಗೌರವ ಖುಷಿ ಕೊಟ್ಟಿದೆ. ಡೊಳ್ಳು ಸಿನಿಮಾ ನಿರ್ಮಾಣ ಮಾಡಿರುವುದು ಹೆಮ್ಮೆ ಇದೆʼʼ ಎಂದರು.