National award-winning Dollu film producer Pavan Wadeyar honored in Dubai Pavan Wadeyar: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕ ಪವನ್ ಒಡೆಯರ್‌ಗೆ ದುಬೈನಲ್ಲಿ ಸನ್ಮಾನ - Vistara News

ಸಿನಿಮಾ

Pavan Wadeyar: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕ ಪವನ್ ಒಡೆಯರ್‌ಗೆ ದುಬೈನಲ್ಲಿ ಸನ್ಮಾನ

ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು 68ನೇ ರಾಷ್ಟ್ರೀಯ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.ಇಂತಹ ವಿಭಿನ್ನ ಕಥೆಯನ್ನು ನಿರ್ಮಿಸಿರುವ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ (Pavan Wadeyar) ಅವರನ್ನು ದುಬೈ ಅನಿವಾಸಿ ಕನ್ನಡಿಗರು ಸನ್ಮಾನಿಸಿ ಗೌರವಿಸಿದ್ದಾರೆ.

VISTARANEWS.COM


on

National award-winning Dollu film producer Pavan Wadeyar honored in Dubai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡ ಸಿನಿಮಾ ಪ್ರೇಮಿಗಳಿಗೆ ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸೇರಿದಂತೆ ಹಲವು ಸದಭಿರುಚಿ ಚಿತ್ರಗಳನ್ನು ಉಣಬಡಿಸಿರುವ ಪವನ್ ಒಡೆಯರ್ (Pavan Wadeyar) ನಿರ್ಮಾಣದ ಚೊಚ್ಚಲ ಸಿನಿಮಾ ಡೊಳ್ಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಹಲವು ಅಂತಾರಾಷ್ಟ್ರೀಯ ಫಿಲ್ಮ್‌ ಪ್ರದರ್ಶಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡು, ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು 68ನೇ ರಾಷ್ಟ್ರೀಯ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇಂತಹ ವಿಭಿನ್ನ ಕಥೆಯನ್ನು ನಿರ್ಮಿಸಿರುವ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಅವರನ್ನು ದುಬೈ ಅನಿವಾಸಿ ಕನ್ನಡಿಗರು ಸನ್ಮಾನಿಸಿ ಗೌರವಿಸಿದ್ದಾರೆ.

ಇಂದಿನ ಕಾಲಘಟ್ಟದಲ್ಲಿ ನಶಿಸುತ್ತಿರುವ ಜನಪದ ಕಲೆ ಡೊಳ್ಳು ಸುತ್ತ ಸಾಗುವ ಈ ಕಥೆಯನ್ನು ಪ್ರತಿಯೊಬ್ಬರು ಅಪ್ಪಿಕೊಂಡಿದ್ದಾರೆ. ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ಒಡೆಯರ್ ಮೂವೀಸ್ ನಡಿ ಪತ್ನಿ ಜತೆಗೂಡಿ ನಿರ್ಮಾಣ ಮಾಡಿದ್ದರು. ಕಮರ್ಷಿಯಲ್ ಸಿನಿಮಾಗಳ ಆರ್ಭಟದ ನಡುವೆ ಇಂತಹ ವಿಭಿನ್ನ ಕಥೆಯನ್ನು ನಿರ್ಮಿಸಿರುವ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಅವರನ್ನು ದುಬೈ ಅನಿವಾಸಿ ಕನ್ನಡಿಗರು ಸನ್ಮಾನಿಸಿ ಗೌರವಿಸಿದ್ದಾರೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಾದ ಪೀಟರ್ ಜಾಸನ್ ಮತ್ತು ರಶ್ಮಿ ಪೀಟರ್, ಮಮತಾ ಸಿಂಥಿಲ್ ಸೇರಿದಂತೆ ಹಲವರು ತಮ್ಮ ಸಿನಿಮಾ ಮೇಲಿನ ಪ್ರೀತಿಯಿಂದ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಡಿ ಭಾರತದ ಚಿತ್ರರಂಗದ ಶ್ರೇಷ್ಠ ಕಲಾವಿದರನ್ನು ಗುರುತಿಸಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-ಸ್ಯಾಂಡಲ್ ವುಡ್-2023(IIMF) ಕಾರ್ಯಕ್ರಮದ ಮೂಲಕ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಇದೇ ತಿಂಗಳ 16ರಂದು ಹಮ್ಮಿಕೊಂಡಿದ್ದ IIMF ಲೋಗೊ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಟಗರು, ಸಲಗ ಸಿನಿಮಾಗಳ ಖ್ಯಾತಿ ಸಂಭಾಷಣೆಗಾರ ಮಾಸ್ತಿ ಭಾಗಿಯಾಗಿದ್ದರು. ಚಿತ್ರರಂಗದಲ್ಲಿ ತಮ್ಮದೇ ಸೇವೆ ಸಲ್ಲಿಸಿರುವ ಇವರಿಬ್ಬರು IIMF ಲೋಗೋ ಲಾಂಚ್ ಮಾಡಿ ಟೀಂ ಸುಪ್ರೀಂ ಸಂಸ್ಥೆಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Pavan Wadeyar | ಸ್ಯಾಂಡಲ್​ವುಡ್ ಸ್ಟಾರ್ ಪವನ್ ಒಡೆಯರ್ ಈಗ ಆಸ್ಕರ್ ಜ್ಯೂರಿ

ಪವನ್‌ ಒಡೆಯರ್‌ ಪೋಸ್ಟ್‌

ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ದೇಶಕ ಕಂ ನಿರ್ಮಾಪಕ ಪವನ್ ಒಡೆಯರ್, ʻʻಇದೊಂದು ಗ್ರೇಟ್ ಇವೆಂಟ್. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ತಮ್ಮ ಕೆಲಸ ಗುರುತಿಸಿ ನೀಡಿರುವ ಗೌರವ ಖುಷಿ ಕೊಟ್ಟಿದೆ. ಡೊಳ್ಳು ಸಿನಿಮಾ ನಿರ್ಮಾಣ ಮಾಡಿರುವುದು ಹೆಮ್ಮೆ ಇದೆʼʼ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

Kannada Serials TRP: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

VISTARANEWS.COM


on

Kannada Serials TRP Lakshmi Nivasa In Top Amruthadhaare in Top 5
Koo

ಬೆಂಗಳೂರು: ಪ್ರತಿ ಬಾರಿ ಜೀ ಕನ್ನಡ ವಾಹಿನಿ ಧಾರಾವಾಹಿಯ (Kannada Serials TRP) ʻಲಕ್ಷ್ಮೀ ನಿವಾಸʼ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ ಈ ವಾರ ಈ ವಾರ ʻಪುಟ್ಟಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಕಲರ್ಸ್‌ ಕನ್ನಡದ ʻರಾಮಾಚಾರಿʼ ಸಿನಿಮಾ ಕೂಡ ಟಾಪ್‌ 5ನಲ್ಲಿ ಇದೆ.

‘ಪುಟ್ಟಕ್ಕನ ಮಕ್ಕಳು’

ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿ ಈ ಮೊದಲು ಎರಡಂಕಿ ಟಿಆರ್​ಪಿ ಪಡೆಯುತ್ತಿತ್ತು. ಆದರೆ, ಇತ್ತೀಚೆಗೆ ಟಿಆರ್​ಪಿ ಕುಸಿಯುತ್ತಿತ್ತು. ಪಾಯಿಂಟ್ ಒಂದು ಅಂಕಗಳ ಅಂತರದಲ್ಲಿ ಈ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಲಕ್ಷ್ಮೀ ನಿವಾಸ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂದು ಕಷ್ಟಪಡುವ ತಂದೆಯ ಕಥೆ-ವ್ಯಥೆಯ ಜೊತೆ ಸಾಕಷ್ಟು ಭಾವನಾತ್ಮಕ ವಿಚಾರಗಳನ್ನು ಈ ಧಾರಾವಾಹಿಯಲ್ಲಿ (Kannada Serials TRP) ತೋರಿಸಲಾಗಿದೆ. ಸದ್ಯ ಜಯಂತ್‌ನ ಅಸಲಿ ಮುಖ ಜಾಹ್ನವಿ ತಿಳಿಯಬೇಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಅದ್ಧೂರಿ ಬಜೆಟ್​ನಲ್ಲಿ ಈ ಧಾರಾವಾಹಿ ಸಿದ್ಧವಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ.

ಇದನ್ನೂ ಓದಿ: Kannada Serials TRP: ಐಪಿಎಲ್​ ಎಫೆಕ್ಟ್‌: ಯಾವ ಧಾರಾವಾಹಿ ಈ ವಾರ ಟಾಪ್‌?

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮುನ್ನಡೆ ಸಾಧಿಸಿದೆ. ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

‘ರಾಮಾಚಾರಿ’

ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮೌನ, ರುತ್ವಿಕ್ ಕೃಪಾಕರ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿಟ್ಟಿಯ ಪಾತ್ರ ಕೂಡ ಜನ ಮೆಚ್ಚಿದ್ದಾರೆ. ಈ ಧಾರಾವಾಹಿಯ ಟಿಆರ್​ಪಿಯಲ್ಲಿ ಏರಿಳಿತ ಆಗುತ್ತಲೇ ಇದೆ. ಇದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಐದನೇ ಸ್ಥಾನದಲ್ಲಿ ಈ ಬಾರಿ ಎರಡು ಧಾರಾವಾಹಿಗಳು ಸ್ಥಾನ ಪಡೆದಿವೆ. ಇತ್ತೀಚೆಗೆ ಆರಂಭ ಆಗಿರುವ ‘ಶ್ರಾವಣಿ ಸುಬ್ರಮಣ್ಯ’ ಹಾಗೂ ‘ಅಮೃತಧಾರೆ’ ಧಾರಾವಾಹಿ ಇದೆ. ಎರಡೂ ಧಾರಾವಾಹಿಗಳಿಗೆ ಈ ಬಾರಿ ಐದನೇ ಸ್ಥಾನ ಸಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಫ್ಯಾಷನ್

Ethnic Collection: ‘ಹೀರಾಮಂಡಿ’ ವೆಬ್ ಸೀರಿಸ್‌ ಪ್ರೇರಿತ ಸಾಂಪ್ರದಾಯಿಕ ಫ್ಯಾಷನ್ ಕಲೆಕ್ಷನ್‌ ಬಿಡುಗಡೆ ಮಾಡಿದ ಅಜಿಯೋ

Ethnic Collection: ನೆಟ್‌ಫ್ಲಿಕ್ಸ್‌ (Netflix) ಹಾಗೂ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ‌ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ (Heeramandi: The Diamond Bazaar) ವೆಬ್‌ ಸೀರಿಸ್‌ನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ದಿರಿಸುಗಳ (Ethnic Collection) ಎಕ್ಸ್‌ಕ್ಲೂಸಿವ್ ಸಂಗ್ರಹದ ಅನಾವರಣವನ್ನು ಭಾರತದ ಪ್ರೀಮಿಯರ್ ಫ್ಯಾಷನ್ ಇ-ಟೇಲರ್ ಆದ ಅಜಿಯೋ ಬುಧವಾರ ಘೋಷಿಸಿದೆ. ಇಂದಿನಿಂದ (ಏಪ್ರಿಲ್ 25) ಗ್ರಾಹಕರು ಖರೀದಿಸಬಹುದು.

VISTARANEWS.COM


on

Ethnic Collection
Koo

ಮುಂಬೈ: ನೆಟ್‌ಫ್ಲಿಕ್ಸ್‌ (Netflix) ಹಾಗೂ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ‌ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ (Heeramandi: The Diamond Bazaar) ವೆಬ್‌ ಸೀರಿಸ್‌ನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ದಿರಿಸುಗಳ (Ethnic Collection) ಎಕ್ಸ್‌ಕ್ಲೂಸಿವ್ ಸಂಗ್ರಹದ ಅನಾವರಣವನ್ನು ಭಾರತದ ಪ್ರೀಮಿಯರ್ ಫ್ಯಾಷನ್ ಇ-ಟೇಲರ್ ಆದ ಅಜಿಯೋ ಬುಧವಾರ ಘೋಷಿಸಿದೆ. ಅಜಿಯೋದ ಹೌಸ್ ಆಫ್ ಎಥ್ನಿಕ್ಸ್ (AJIO’s House of Ethnics) ಅಡಿಯಲ್ಲಿ ಇದನ್ನು ಆರಂಭಿಸಲಾಗಿದೆ. ನೆಟ್‌ಫ್ಲಿಕ್ಸ್‌ನ ಈ ಸರಣಿಯಿಂದ ಪ್ರೇರಣೆಗೊಂಡ 250 ಸ್ಟೈಲ್‌ನ ಸಾಂಪ್ರದಾಯಿಕ ದಿರಿಸುಗಳ ಈ ಸೀಮಿತ ಅವಧಿಯ ಸಂಗ್ರಹವು ಗ್ರಾಹಕರಿಗೆ ಒದಗಿಸಲಿದೆ. ಇಂದಿನಿಂದ (ಏಪ್ರಿಲ್ 25) ಗ್ರಾಹಕರು ಖರೀದಿಸಬಹುದು.

ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಈ ಸೀರಿಸ್‌ನಲ್ಲಿ ಬಳಸಲಾದ ಬಣ್ಣಗಳು, ಸಿಲೌಟ್‌ಗಳು, ಬಟ್ಟೆಗಳು ಮತ್ತು ಅಲಂಕಾರಗಳಿಂದ ಈ ಬಹು ನಿರೀಕ್ಷಿತ ಸಂಗ್ರಹವು ಪ್ರೇರಣೆ ಪಡೆದಿದೆ. ಈ ಸಂಗ್ರಹದ ಶ್ರೇಣಿಯಲ್ಲಿ ಬಟ್ಟೆಗಳಿಗೆ ಶುದ್ಧ ರೇಷ್ಮೆ, ಟಿಶ್ಯೂ, ಜಾರ್ಜೆಟ್‌ ಮತ್ತು ಬ್ರೋಕೇಡ್‌ಗಳನ್ನು ಬಳಸಲಾಗಿದೆ. ಇವುಗಳಲ್ಲಿ ಬಹಳ ಕೌಶಲದಿಂದ ರೂಪಿಸಿದ ಡಬ್ಕಾ ಕೈ ಕಸೂತಿ, ಪಾರ್ಸಿ ಕಸೂತಿ, ಬೀಡ್ ವರ್ಕ್ ಮತ್ತು ಇದೇ ಸೀರಿಸ್‌ನಿಂದ ಸ್ಫೂರ್ತಿಗೊಂಡ ಡಿಜಿಟಲ್ ಪ್ರಿಂಟ್ಸ್ ಇವೆ.

ಇದು ಮಹಿಳಾ ಕೇಂದ್ರಿತ ಸಂಗ್ರಹವಾಗಿದ್ದು, ಶರಾರಾ, ಕುರ್ತಾ ಸೂಟ್ ಸೆಟ್, ಲೆಹೆಂಗಾ ಮತ್ತು ಸೀರೆಗಳನ್ನು ಒಳಗೊಂಡಿದೆ. ಇವುಗಳ ಬೆಲೆ 4,000 ರೂ.ಯೊಂದ ಆರಂಭಗೊಂಡು 1,50,000 ರೂ. ತನಕ ಇರುತ್ತದೆ. ಇದನ್ನು ಸಂಜಯ್ ಲೀಲಾ ಬನ್ಸಾಲಿ ಅವರ ತಂಡ ವಿನ್ಯಾಸ ಮಾಡಿದೆ. ಅಜಿಯೋ ಹಾಗೂ ನೆಟ್‌ಫ್ಲಿಕ್ಸ್ ಮಧ್ಯೆ ಈ ಪಾಲುದಾರಿಕೆಯ ಕಲ್ಪನೆ ಮೂಡಿರುವ ಬಗೆಯೂ ಆಸಕ್ತಿದಾಯಕ. ಇದರಿಂದಾಗಿ ಅಭಿಮಾನಿಗಳು ನೆಟ್‌ಫ್ಲಿಕ್ಸ್ ಸೀರಿಸ್‌ನಿಂದ ಪ್ರೇರಣೆಗೊಂಡ ವಿಶಿಷ್ಟ ಸ್ಟೈಲ್ ಹೊಂದಬಹುದು.

ಅಜಿಯೋದ ಸಿಇಒ ವಿನೀತ್ ನಾಯರ್ ಅವರು ಮಾತನಾಡಿ, “ಸಂಜಯ್ ಲೀಲಾ ಬನ್ಸಾಲಿ ಅವರ ಸೃಷ್ಟಿಯಲ್ಲಿ ಫ್ಯಾಷನ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದರ ಥೀಮ್ ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯಲ್ಲಿ ಆಳವಾಗಿ ಬೇರೂರಿರುತ್ತದೆ. ಆದ್ದರಿಂದ ನಾವು ʼಹೀರಾಮಂಡಿʼಗಾಗಿ ನೆಟ್‌ಫ್ಲಿಕ್ಸ್‌ನೊಂದಿಗೆ ಈ ಸಹಯೋಗದ ಬಗ್ಗೆ ಯೋಚಿಸಿದಾಗ ಅದು ಬಹಳಷ್ಟು ಅರ್ಥಪೂರ್ಣ ಎನಿಸಿತು. ಅಜಿಯೋದ ಹೌಸ್ ಆಫ್ ಎಥ್ನಿಕ್ಸ್ ಈ ಸೀಮಿತ ಆವೃತ್ತಿಯ ಸಂಗ್ರಹಕ್ಕೆ ಪರಿಪೂರ್ಣ ಲಾಂಚ್‌ಪ್ಯಾಡ್ ಆಗಿದೆ. ಗ್ರಾಹಕರು ಆರಾಧಿಸುವ ಫ್ಯಾಷನ್‌ ಕೈಗೆಟುಕುವಂತೆ ಮಾಡುತ್ತದೆ. ನಿಮ್ಮ ಕನಸಿನ ಬಾಲಿವುಡ್-ಪ್ರೇರಿತ ಲುಕ್ ಪಡೆಯುವುದಕ್ಕೆ ಇದು ಸಹಾಯ ಮಾಡುತ್ತದೆʼʼ ಎಂದು ಹೇಳಿದ್ದಾರೆ.

ʼಹೀರಾಮಂಡಿ: ಡೈಮಂಡ್ ಬಜಾರ್ʼ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚೊಚ್ಚಲ ವೆಬ್ ಸೀರಿಸ್‌. ಇದು 2024ರಲ್ಲಿ ಬಹು ನಿರೀಕ್ಷಿತ ಸರಣಿಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯಪೂರ್ವ ಭಾರತಲ್ಲಿ ನಡೆಯುವ ಘಟನೆ ಇದಾಗಿದೆ. ಅಂತಿಮ ಎಳೆಯನ್ನು ತವೈಫ್‌ಗಳ ಕಲೆಯನ್ನು ಹಿಡಿದಿಟ್ಟುಕೊಳ್ಳುವ (ಮುಜ್ರಾ) ಪರೀಕ್ಷೆಗೆ ಒಳಪಡಿಸಲಾಗಿದೆ.

ನೆಟ್‌ಫ್ಲಿಕ್ಸ್‌ನ ಏಪ್ಯಾಕ್ ಮಾರ್ಕೆಟಿಂಗ್ ಪಾಲುದಾರಿಕೆಯ ಹಿರಿಯ ನಿರ್ದೇಶಕಿ ಶಿಲ್ಪಾ ಸಿಂಗ್ ಮಾತನಾಡಿ, “ಸಂಜಯ್ ಲೀಲಾ ಬನ್ಸಾಲಿ ಅವರ ಕಥೆಗಳಲ್ಲಿನ ವೇಷಭೂಷಣಗಳು ಮುಖ್ಯ ಪಾತ್ರ ವಹಿಸುತ್ತವೆ. ಕಥಾಹಂದರಕ್ಕೆ ಇನ್ನಷ್ಟು ಗಟ್ಟಿತನವನ್ನು ಸೇರಿಸುತ್ತವೆ. ʼಹೀರಾಮಂಡಿ: ಡೈಮಂಡ್ ಬಜಾರ್ʼ ಹಿಂದೆಂದೂ ನೋಡಿರದ ಕೆಲವು ಸಾಂಪ್ರದಾಯಿಕ ಶೈಲಿಗಳು ಮತ್ತು ಫ್ಯಾಷನ್‌ಗಳನ್ನು ಹೊಂದಿರುತ್ತದೆ. ʼಹೀರಾಮಂಡಿʼಯಿಂದ ಪ್ರೇರಿತವಾದ ಅಜಿಯೋ ಹೌಸ್ ಆಫ್ ಎಥ್ನಿಕ್ಸ್‌ನಿಂದ ಹೊಸ ಮತ್ತು ವಿಶೇಷ ಸಂಗ್ರಹವನ್ನು ಈ ಸಹಯೋಗವು ತರುತ್ತದೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Mens Neck Chains Fashion: ಹುಡುಗರ ಕ್ರೇಜಿ ಫ್ಯಾಷನ್‌ಗೆ ಬಂತು ಫಂಕಿ ನೆಕ್‌ ಚೈನ್ಸ್‌

ಅಜಿಯೋ ಹೌಸ್ ಆಫ್ ಎಥ್ನಿಕ್ಸ್ ಬಿಬಾ (BIBA), ಇಂಡಿ ಪಿಕ್ಸ್, ನೈರಿಕಾ (Nyrika), ಆರ್ಕೆ ರಿತು ಕುಮಾರ್, ಸತ್ಯ ಪಾಲ್, ರಿ-ವಾಹ್, ಗ್ಲೋಬಲ್ ದೇಸಿ, ಗುಲ್ಮೊಹರ್ ಜೈಪುರ್, ಸೋಚ್ ಮತ್ತು ಫ್ಯಾಬಿಂಡಿಯಾದಂತಹ ಉನ್ನತ ಸಾಂಪ್ರದಾಯಿಕ ದಿರಿಸುಗಳ ಬ್ರಾಂಡ್‌ಗಳನ್ನು ಹೊಂದಿರುವ ಕ್ಯುರೇಟೆಡ್ ಸ್ಟೋರ್ ಆಗಿದೆ. 3 ಲಕ್ಷಕ್ಕೂ ಹೆಚ್ಚು ಸ್ಟೈಲ್‌ಗಳೊಂದಿಗೆ ಅಜಿಯೋ ಹೌಸ್ ಆಫ್ ಎಥ್ನಿಕ್ಸ್ ಸಾಂಪ್ರದಾಯಿಕ ದಿರಿಸುಗಳ ಫ್ಯಾಷನ್‌ಗಾಗಿ ಭಾರತದ ಆದ್ಯತೆಯ ತಾಣವಾಗಿದೆ. ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಮೇ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆಗಲಿದೆ.

Continue Reading

ಬಾಲಿವುಡ್

Heeramandi Premiere: ʻಹೀರಾಮಂಡಿʼ ಪ್ರೀಮಿಯರ್‌ನಲ್ಲಿ ಅಪರೂಪವಾಗಿ ಕಂಡ ʻಕಭಿ ಖುಷಿ ಕಭಿ ಗಮ್ʼ ಸಿನಿಮಾ ನಟಿ!

Heeramandi Premiere: ಕಭಿ ಖುಷಿ ಕಭಿ ಗಮ್ʼ ಸಿನಿಮಾ ಮೂಲಕ ಫರೀದಾ ಹೆಚ್ಚು ಜನಪ್ರೀಯತೆ ಪಡೆದವರು. ಬಳಿ ಬಣ್ಣದ ಉಡುಗೆಯಲ್ಲಿ ನಟಿ ಫರೀದಾ ಕ್ಯೂಟ್‌ ಆಗಿ ಕಾಣುತ್ತಿದ್ದರು. ಪಾಪರಾಜಿಗಳಿಗೆ ಮುದ್ದಾಗಿ ಪೋಸ್‌ ಕೊಟ್ಟರು. ಈ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಯನ್ನು ಕಂಡು ಫ್ಯಾನ್ಸ್‌ ಸಂತಸ ಹೊರಹಾಕಿದ್ದಾರೆ.

VISTARANEWS.COM


on

Heeramandi Premiere Farida Jalal rare public appearance
Koo

ಬೆಂಗಳೂರು:  ʼದೇವ್‌ದಾಸ್‌ʼ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ. ಇದೀಗ ಸಂಜಯ್‌ ಲೀನಾ ಬನ್ಸಾಲಿ ಅವರು ʻಹೀರಾಮಂಡಿ: ದಿ ಡೈಮಂಡ್ ಬಜಾರ್‌ʼ ಸಿರೀಸ್‌ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಏ.24ರ ಬುಧವಾರದಂದು ʻಹೀರಾಮಂಡಿ: ದಿ ಡೈಮಂಡ್ ಬಜಾರ್‌ʼ (Heeramandi: The Diamond Bazaar) ಸಿರೀಸ್‌ ಪ್ರೀಮಿಯರ್‌ ಶೋ (Heeramandi Premiere) ಇತ್ತು. ಕಾರ್ಯಕ್ರಮವೊಂದರಲ್ಲಿ ಹಿರಿಯ ನಟಿ ಫರೀದಾ ಜಲಾಲ್ (Farida Jalal) ಬಹಳ ಸಮಯದ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಈ ಸಿರೀಸ್‌ನಲ್ಲಿ ಫರೀದಾ ಕೂಡ ನಟಿಸಿದ್ದಾರೆ.

ʻಕಭಿ ಖುಷಿ ಕಭಿ ಗಮ್ʼ ಸಿನಿಮಾ ಮೂಲಕ ಫರೀದಾ ಹೆಚ್ಚು ಜನಪ್ರೀಯತೆ ಪಡೆದವರು. ಬಳಿ ಬಣ್ಣದ ಉಡುಗೆಯಲ್ಲಿ ನಟಿ ಫರೀದಾ ಕ್ಯೂಟ್‌ ಆಗಿ ಕಾಣುತ್ತಿದ್ದರು. ಪಾಪರಾಜಿಗಳಿಗೆ ಮುದ್ದಾಗಿ ಪೋಸ್‌ ಕೊಟ್ಟರು. ಈ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಯನ್ನು ಕಂಡು ಫ್ಯಾನ್ಸ್‌ ಸಂತಸ ಹೊರಹಾಕಿದ್ದಾರೆ. ಅಭಿಮಾನಿಯೊಬ್ಬರು ʻʻಫರೀದಾ ಅವರ ನಟನೆ ಮರೆಯುವಂತಿಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಇಂದಿಗೂ ನಟಿ ಸುಂದರವಾಗಿ ಕಾಣುತ್ತಿದ್ದಾರೆʼʼಎಂದು ಕಮೆಂಟ್‌ ಮಾಡಿದ್ದಾರೆ. ಹೀರಾಮಂಡಿ ಚಿತ್ರದಲ್ಲಿನ ಫರೀದಾ ಪಾತ್ರವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಫರೀದಾ ಇತ್ತೀಚೆಗೆ ಅಕ್ಷಯ್ ಕುಮಾರ್ ಅವರ ʻವೆಲ್ಕಮ್ ಟು ದಿ ಜಂಗಲ್‌ʼಗೆ ಸಿನಿಮಾಗೆ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Heeramandi Trailer: ʻಹೀರಾಮಂಡಿʼ ಟ್ರೈಲರ್‌ ಕಂಡು ರಶ್ಮಿಕಾ, ಆಲಿಯಾ, ವಿಕ್ಕಿ ಕೌಶಲ್‌ ಫಿದಾ!

ಸಂಜಯ್ ಲೀಲಾ ಬನ್ಸಾಲಿಯವರ ( Sanjay Leela Bhansali) ಹದಿನಾಲ್ಕು ವರ್ಷಗಳ ಕನಸಿನ ಕೂಸಾಗಿರುವ ನೆಟ್‌ಫ್ಲಿಕ್ಸ್ ಸೀರೀಸ್ ʻಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಚಿತ್ರದ (Hiramandi: The Diamond Bazaar) ಬಹು ನಿರೀಕ್ಷಿತ ಟ್ರೈಲರ್‌ ಏಪ್ರಿಲ್‌ 10ರಂದು ಬಿಡುಗಡೆಯಾಗಿತ್ತು. ಅನೇಕ ನಟಿಯರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ನೆಟ್​ಫ್ಲಿಕ್ಸ್​ ಮೂಲಕ ಮೇ 1ರಂದು ಈ ವೆಬ್​ ಸಿರೀಸ್​ ವೀಕ್ಷಣೆಗೆ ಲಭ್ಯವಾಗಲಿದೆ.

ಹೀರಾಮಂಡಿ: ದಿ ಡೈಮಂಡ್ ಬಜಾರ್’ನ ಮೊದಲ ಹಾಡು ‘ಸಕಲ್ ಬನ್’ (Sakal Ban) ಮಿಸ್ ವರ್ಲ್ಡ್ 2024 ರ ಫಿನಾಲೆಯಲ್ಲಿ ಲಾಂಚ್‌ ಆಗಿತ್ತು. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಸೇರಿದಂತೆ ಅನೇಕರು ಈ ಹಾಡಿಗೆ ರ್‍ಯಾಂಪ್‌ ವಾಕ್‌ ಮಾಡಿದ್ದರು.

ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳೆಂದರೆ ಅಲ್ಲೊಂದು ಅದ್ಭುತ ಮಾಯಾಲೋಕವನ್ನೇ ನಾವು ನಿರೀಕ್ಷಿಸಬಹುದು. “ಹೀರಾಮಂಡಿ” ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೇಶ್ಯೆಯರ ಜೀವನದಲ್ಲಿ ಪ್ರೀತಿ ಮತ್ತು ದ್ರೋಹದ ವಿಷಯಗಳನ್ನು ಅನ್ವೇಷಿಸುತ್ತದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ, ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಮುಂತಾದವರು ‘ಹೀರಾಮಂಡಿ’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Shakhahaari Movie: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿದೆ. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವ ಒಟಿಟಿಗೆ ಲಗ್ಗೆ ಇಡುತ್ತಿದೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Shakhahaari Movie In OTT amzon Prime
Koo

ಬೆಂಗಳೂರು: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ (Shakhahaari Movie) ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿರುವ ಶಾಖಾಹಾರಿ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿತ್ತು. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವ ಒಟಿಟಿಗೆ ಲಗ್ಗೆ ಇಡುತ್ತಿದೆ. ಮೂಲಗಳ ಪ್ರಕಾರ ʻಶಾಖಾಹಾರಿʼ ಸಿನಿಮಾ (Shakhahaari Movie OTT) ಡಿಜಿಟಲ್‌ ರೈಟ್ಸ್‌ ಅಮೆಜಾನ್‌ ಪ್ರೈಂ (Amazon Prime) ಪಾಲಾಗಿದೆ. ಮುಂದಿನ ವಾರ ಒಟಿಟಿಗೆ ಕಾಲಿಡಿದೆ ಎಂದು ವರದಿಯಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’ . ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್‌ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್‌ನ ಇಮೇಜ್ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್‌ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು.

ಇದನ್ನೂ ಓದಿ: Shakhahaari Movie: ಬೆಂಗಳೂರಿನಲ್ಲೇ ಕನ್ನಡದ “ಶಾಖಾಹಾರಿʼಯನ್ನು ಕೊಂದ ಮಲಯಾಳಂ ಸಿನಿಮಾ! ಕನ್ನಡಿಗರಿಗೇ ಸವಾಲ್‌!

ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ. ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕೆ ಪುಷ್ಟಿ ನೀಡಿದೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ.ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading
Advertisement
Neha Murder Case
ಹುಬ್ಬಳ್ಳಿ2 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ICICI Bank
ದೇಶ2 mins ago

ICICI Bank: ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಎಚ್ಚರ; 17 ಸಾವಿರ ಜನರ ಕಾರ್ಡ್‌ ಮಾಹಿತಿ ಸೋರಿಕೆ!

Kannada Serials TRP Lakshmi Nivasa In Top Amruthadhaare in Top 5
ಕಿರುತೆರೆ9 mins ago

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

Lok Sabha Election 2024 No names of election officials in voter list Protest in front of the polling booth
Lok Sabha Election 202413 mins ago

Lok Sabha Election 2024: ವೋಟರ್‌ ಲಿಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳ ಹೆಸರೇ ಇಲ್ಲ; ಮತಗಟ್ಟೆ ಮುಂದೆಯೇ ಪ್ರೊಟೆಸ್ಟ್!

Reliance Smart Bazar
ವಾಣಿಜ್ಯ23 mins ago

Reliance Smart Bazar: ರಿಲಯನ್ಸ್ ಸ್ಮಾರ್ಟ್ ಬಜಾರ್ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಯಾವೆಲ್ಲ ವಸ್ತುಗಳಿಗೆ ಹೆಚ್ಚಿನ ಬೇಡಿಕೆ?

Ethnic Collection
ಫ್ಯಾಷನ್46 mins ago

Ethnic Collection: ‘ಹೀರಾಮಂಡಿ’ ವೆಬ್ ಸೀರಿಸ್‌ ಪ್ರೇರಿತ ಸಾಂಪ್ರದಾಯಿಕ ಫ್ಯಾಷನ್ ಕಲೆಕ್ಷನ್‌ ಬಿಡುಗಡೆ ಮಾಡಿದ ಅಜಿಯೋ

Self Harming in Bengaluru
ಬೆಂಗಳೂರು48 mins ago

Self Harming : ಬೆಂಗಳೂರಲ್ಲಿ ರೈಲಿಗೆ ಸಿಲುಕಿ ಮೂವರು ಸಾವು; ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು

Voting awareness by the newly married couple at the reception
ಕರ್ನಾಟಕ54 mins ago

Lok Sabha Election 2024: ಆರತಕ್ಷತೆಯಲ್ಲಿ ವಧು-ವರರಿಂದ ಮತದಾನ ಜಾಗೃತಿ

Tamannaah Bhatia and Sanjay Dutt
ಕ್ರೀಡೆ59 mins ago

IPL Streaming Case: ಏನಿದು ಐಪಿಎಲ್​ ಲೈವ್ ಸ್ಟ್ರೀಮಿಂಗ್ ಕೇಸ್​; ತಮನ್ನಾ,ಜಾಕ್ವೆಲಿನ್, ಸಂಜಯ್​ ದತ್​ಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದೇಕೆ?

World Malaria Day
ಆರೋಗ್ಯ2 hours ago

World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder case CID Officer
ಹುಬ್ಬಳ್ಳಿ3 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20245 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

ಟ್ರೆಂಡಿಂಗ್‌