Site icon Vistara News

Nawazuddin Siddiqui: 21 ವರ್ಷದ ಅವನೀತ್‌ಗೆ 49ರ ನವಾಜುದ್ದೀನ್‌ ಮುತ್ತು; ಈಗಿನವರಿಗೆ ರೊಮ್ಯಾನ್ಸ್‌ ಮಾಡೋಕೇ ಬರಲ್ಲ ಎಂದ ನಟ!

Nawazuddin Siddiqui reacts to criticism for kiss with Avneet Kaur

#image_title

ಮುಂಬೈ: ನಟ ನವಾಜುದ್ದೀನ್‌ ಸಿದ್ದಿಕಿ (Nawazuddin Siddiqui) ಮತ್ತು ನಟಿ ಅವನೀತ್‌ ಕೌರ್‌ ನಟನೆಯ ಟೀಕು ವೆಡ್ಸ್‌ ಶೇರು ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಟಿ ಕಂಗನಾ ರಣಾವತ್‌ ಬಂಡವಾಳ ಹೂಡಿರುವ ಈ ಸಿನಿಮಾದಲ್ಲಿ ನವಾಜುದ್ದೀನ್‌ ಅವರು ಅವನೀತ್‌ರೊಂದಿಗೆ ರೊಮ್ಯಾನ್ಸ್‌ ಮಾಡುತ್ತಾರೆ, ಮುತ್ತು ಕೊಡುತ್ತಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನಟ ನವಾಜುದ್ದೀನ್‌ ಅದಕ್ಕೆ ಈಗ ಉತ್ತರ ಕೊಟ್ಟಿದ್ದಾರೆ.

“ಈಗಿನ್ನೂ 21 ವರ್ಷದವರಾಗಿರುವ ಅವನೀತ್‌ ತನಗಿಂತ 28 ವರ್ಷ ಹಿರಿಯ ವ್ಯಕ್ತಿಯಿಂದ ಮುತ್ತನ್ನಿಕ್ಕಿಸಿಕೊಳ್ಳಬೇಕೇ? ಕಂಗನಾ ಆದರೂ ಈ ಬಗ್ಗೆ ಯೋಚನೆ ಮಾಡಬಾರದಿತ್ತೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಉತ್ತರಿಸಿರುವ ನವಾಜುದ್ದೀನ್‌ ಅವರು, “ಈಗಿನವರಿಗೆ ರೊಮ್ಯಾನ್ಸ್‌ ಮಾಡುವುದಕ್ಕೇ ಬರುವುದಿಲ್ಲ” ಎಂದು ಹೇಳಿದ್ದಾರೆ!

ಇದನ್ನೂ ಓದಿ: Video Viral: ಮನೆಯಾಕೆ ಅಡುಗೆ ಡಬ್ಬಿಗೆ ಕೈ ಇಟ್ಟಳು; ಹಿಂದಿದ್ದ ನಾಗಪ್ಪ ಬುಸ್‌ ಅಂದುಬಿಟ್ಟ!
“ರೊಮ್ಯಾನ್ಸ್‌ಗೆ ವಯಸ್ಸಿನ ಹಂಗಿಲ್ಲ. ಸಮಸ್ಯೆ ಏನೆಂದರೆ ಈಗಿನ ಯುವ ಸಮಾಜದಲ್ಲಿ ರೊಮ್ಯಾನ್ಸ್‌ ಉಳಿದುಕೊಂಡೇ ಇಲ್ಲ. ರೊಮ್ಯಾನ್ಸ್‌ಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದ ಕಾಲದವರು ನಾವು. ನಾವು ಪ್ರೀತಿಯಲ್ಲಿ ವರ್ಷಗಳ ಕಾಲ ಇರುತ್ತಿದ್ದೆವು. ಈಗಲೂ ಶಾರುಖ್‌ ಖಾನ್‌ ರೊಮ್ಯಾಂಟಿಕ್‌ ಪಾತ್ರಗಳಲ್ಲಿ ನಟಿಸುತ್ತಾರೆ. ಏಕೆಂದರೆ ಈಗಿನವರಿಗೆ ರೊಮ್ಯಾನ್ಸ್‌ ಬರುವುದೇ ಇಲ್ಲ” ಎಂದು ನವಾಜುದ್ದೀನ್‌ ವಾದಿಸಿದ್ದಾರೆ.

ಹಾಗೆಯೇ, “ಈಗ ಎಲ್ಲವೂ ವಾಟ್ಸ್‌ಆಪ್‌ನಲ್ಲೇ ಆಗಿಬಿಡುತ್ತದೆ. ಪ್ರೀತಿ, ಬ್ರೇಕಪ್‌ ಎಲ್ಲವೂ. ನಿಜ ಜೀವನದಲ್ಲಿ ರೊಮ್ಯಾನ್ಸ್‌ ಜತೆಗೆ ಬದುಕಿದವರಿಗೆ ಮಾತ್ರ ತೆರೆ ಮೇಲೆ ರೊಮ್ಯಾನ್ಸ್‌ ಮಾಡಲು ಸಾಧ್ಯ” ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಕಮಿನ್ಸ್​ ಬೆಂಕಿ ಚೆಂಡಿನ ವೇಗಕ್ಕೆ ಹಾರಿದ ವಿಕೆಟ್​; ವಿಡಿಯೊ ವೈರಲ್​
ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವನೀತ್‌, ಈ ಸಿನಿಮಾ ತಮ್ಮ ಬದುಕಿಗೆ ಅತ್ಯಂತ ಮುಖ್ಯ ಸಿನಿಮಾ ಎಂದು ಹೇಳಿದ್ದರು. ಈ ಸಿನಿಮಾದಿಂದಾಗಿ ನವಾಜುದ್ದೀನ್‌ ಹಾಗೂ ಕಂಗನಾರಂತಹ ಹಿರಿಯರಿಂದ ಸಾಕಷ್ಟು ಕಲಿಯುವುದಕ್ಕೆ ಅವಕಾಶ ಸಿಕ್ಕಿದಂತಾಗಿದೆ ಎಂದೂ ಹೇಳಿಕೊಂಡಿದ್ದರು.

Exit mobile version