Video Viral: ಮನೆಯಾಕೆ ಅಡುಗೆ ಡಬ್ಬಿಗೆ ಕೈ ಇಟ್ಟಳು; ಹಿಂದಿದ್ದ ನಾಗಪ್ಪ ಬುಸ್‌ ಅಂದುಬಿಟ್ಟ! Vistara News

ಕರ್ನಾಟಕ

Video Viral: ಮನೆಯಾಕೆ ಅಡುಗೆ ಡಬ್ಬಿಗೆ ಕೈ ಇಟ್ಟಳು; ಹಿಂದಿದ್ದ ನಾಗಪ್ಪ ಬುಸ್‌ ಅಂದುಬಿಟ್ಟ!

Snake in Gadag: ಗದಗ ಜಿಲ್ಲೆ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಮನೆಯೊಂದರ ಅಡುಗೆ ಮನೆಯಲ್ಲಿ ಹಾವೊಂದು ಸೇರಿಕೊಂಡಿತ್ತು. ಮನೆಯೊಡತಿ ಇನ್ನೇನು ಅಡುಗೆ ಡಬ್ಬಿಗೆ ಕೈ ಇಟ್ಟಿದ್ದರು. ಆಗ ಹಾವಿನ ಬುಸ್‌ ಶಬ್ದ ಕೇಳಿದೆ. ಹಾಗಾದರೆ ಮುಂದೇನಾಯ್ತು?

VISTARANEWS.COM


on

Video Viral Snake in the kitchen Woman saved
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗದಗ: ಇದೊಂದು ಬೆಳ್ಳಂಬೆಳ್ಳಗೆ ಮನೆಯೊಡತಿಗೆ ಬೆವರಿಳಿಸಿದ ಘಟನೆ. ಮನೆಯೊಡತಿ ಎಂದಿನಂತೆ ಎದ್ದವರು ಮನೆಯ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿಕೊಂಡು ಅವಸರವಸರವಾಗಿ ಅಡುಗೆ ಮನೆಯತ್ತ ಕಾಲಿಟ್ಟಿದ್ದಾರೆ. ಅಡುಗೆ ಮನೆಗೆ ಬರುವಾಗಲೇ ನೂರೆಂಟು ಯೋಚನೆ! ಇಂದು ಏನು ತಿಂಡಿ ಮಾಡುವುದು? ಗಂಡನಿಗೆ, ಮಕ್ಕಳಿಗೆ, ಮಾವ, ಅತ್ತೆಗೆ ಎಲ್ಲರಿಗೂ ಹಿಡಿಸುವಂತಹ ತಿಂಡಿ ಮಾಡಬೇಕು. ಎಲ್ಲವೂ ಬೇಗ ಬೇಗ ಆಗಬೇಕು ಎಂಬ ಗಡಿಬಿಡಿಯಲ್ಲೇ ಅಲ್ಲಿರುವ ಅಡುಗೆ ಸಾಮಗ್ರಿಗಳ ಡಬ್ಬಿಗೆ ಕೈ ಇಟ್ಟುಬಿಟ್ಟರು. ಅದೇನಾಯಿತೋ ಏನೋ ಒಮ್ಮೆಲೆ ಕೈಯನ್ನು ಹಿಂದೆ ತೆಗೆದುಕೊಂಡು ಬಿಟ್ಟರು. ಕಾರಣ, ಆ ಡಬ್ಬಿಯ ಹಿಂದಿನಿಂದ ಬುಸ್‌.. ಬುಸ್‌ ಎಂಬ ಶಬ್ದ ಕೇಳಿ ಬಂತು. ಮೈ ನಡುಗಿ ಹೋಯಿತು! ಪೂರಾ ಬೆವರಿಳಿದು ಹೋಯಿತು! ಈ ವಿಡಿಯೊ ಈಗ ವೈರಲ್‌ (Video Viral) ಆಗಿದೆ.

ಅಬ್ಬಾ… ಆ ಒಂದು ಕ್ಷಣ ದಿಕ್ಕೇ ತೋಚದಂತೆ ಆಗಿತ್ತು. ಏನಾಗಿದೆ? ಏನಾಗುತ್ತಿದೆ? ತಾನೆಲ್ಲಿದ್ದೇನೆಂಬುದೂ ಸಹ ತಿಳಿಯದ “ಬ್ಲಾಂಕ್‌” ಎನ್ನಿಸುವಂತಹ ಸ್ಥಿತಿ ಆ ಮಹಿಳೆಯದ್ದಾಗಿತ್ತು. ಕಾರಣ, ಆ ಡಬ್ಬಿಯ ಹಿಂದೆ ಇದ್ದಿದ್ದು ನಾಗರಹಾವು! ಒಂದು ಸ್ವಲ್ಪ ಹೆಚ್ಚು ಕಡಿಮೆಯಾಗಿ ಅದೇನಾದರೂ ಕಚ್ಚಿಬಿಟ್ಟಿದ್ದರೆ? ಅರೆ, ನನ್ನ ಪ್ರಾಣವೇ ಹೋಗಿಬಿಡುತ್ತಿತ್ತು. ಅಯ್ಯೋ.. ಏನಾಗಿ ಬಿಡುತ್ತಿತ್ತು? ಎಂದೆಲ್ಲ ಯೋಚಿಸುತ್ತಲೇ ಮನೆಯ ಜಗಲಿಗೆ ಓಡಿ ಬಂದರು. ಜಗಲಿಗೆ ಬಂದವರೇ ಮನೆಯವರನ್ನೆಲ್ಲ ಕರೆದು ವಿಷಯ ಮುಟ್ಟಿಸಿದರು.

Video Viral Snake in the kitchen Woman saved gadag
ಅಡುಗೆ ಮನೆಯ ಡಬ್ಬಿಯ ಹಿಂದೆ ಇರುವ ನಾಗರಹಾವು

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದ ಸಚಿವ ವೆಂಕಟೇಶ್;‌ ಮುಗಿಯದ ಕೈ ಕಿತ್ತಾಟ!

ಗದಗ ಜಿಲ್ಲೆ ನರಗುಂದ ತಾಲೂಕಿನ ಜಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹನುಮಂತ ಗುಂಡಳ್ಳಿ ಅವರ ನಿವಾಸದಲ್ಲಿ ಹಾವು ಪ್ರವೇಶ ಮಾಡಿ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿತ್ತು. ಮನೆಯವರೆಲ್ಲರೂ ಸೀದಾ ಅಡುಗೆ ಮನೆಗೆ ಹೋಗಿ ನೋಡಿದ್ದಾರೆ. ಅಲ್ಲಿ ಡಬ್ಬಿಯ ಹಿಂದುಗಡೆ ಹಾವೊಂದು ಅವಿತು ಕುಳಿತಿರುವುದು ಕಂಡಿದೆ. ಒಮ್ಮೆಲೆ ಅವರ ಮೈ ಸಹ ಝಲ್‌ ಎಂದಿದೆ. ಮನೆಯೊಳಗೆ ಎಲ್ಲರೂ ಇದ್ದೇವೆ. ಏನಾದರೂ ಹಾವು ಈಗ ಮನೆಯೊಳಗೆ ಎಲ್ಲೆಂದರಲ್ಲಿ ಹೋಗಿ ಅವಿತು ಕುಳಿತು ಬಿಟ್ಟರೆ? ಮನೆಯೊಳಗೆ ಇರುವುದಾದರೂ ಹೇಗೆ? ಎಂಬೆಲ್ಲ ಯೋಚನೆಗಳು ಬಂದು ಭಯಗೊಂಡಿದ್ದಾರೆ.

Video Viral Snake in the kitchen Woman saved gadag
ಮನೆಯ ಹೊರಗೆ ಹಾವನ್ನು ತಂದು ರಕ್ಷಣೆಯಲ್ಲಿ ತೊಡಗಿರುವ ಬಿಆರ್‌ ಸುರೇಬಾನ

ತಕ್ಷಣವೇ ಉರಗ ರಕ್ಷಕ ಬಿ.ಆರ್. ಸುರೇಬಾನ ಅವರ ನೆನಪಾಗಿದೆ. ಕೂಡಲೇ ಅವರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಸುರೇಬಾನ ಅವರು ಬರುವವರೆಗೂ ಮನೆಯವರಿಗೆ ಆತಂಕ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಭಯದಲ್ಲೇ ಆಗಾಗ ಇಣುಕಿ, ಇಣುಕಿ ಆ ಹಾವು ಇನ್ನೂ ಅಲ್ಲೇ ಇದೆಯೇ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: Video Viral: ಇದು ನಾರಿ ಶಕ್ತಿಯ ಸೈಡ್‌ ಎಫೆಕ್ಟ್; ‌ಸೀಟ್‌ಗಾಗಿ ಬಸ್ಸಿನಲ್ಲೇ ಬಡಿದಾಡಿಕೊಂಡ ನಾರಿಯರು!

Video Viral Snake in the kitchen Woman saved gadag
ಹಾವನ್ನು ರಕ್ಷಣೆ ಮಾಡಿದ ಸುರೇಬಾನ

ಕೊನೆಗೂ ಆಯಿತು ಹಾವಿನ ರಕ್ಷಣೆ

ಸ್ವಲ್ಪ ಹೊತ್ತಿನಲ್ಲೇ ಮನೆಗೆ ಬಂದ ಸುರೇಬಾನ ಅವರು ನಾಲ್ಕು ಅಡಿಯಷ್ಟು ಉದ್ದದ ಹಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಹಾವುಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಬಿಡುವುದರಲ್ಲಿ ಸುರೇಬಾನ್ ಅವರು ಈ‌ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸತತ ಆರು ವರ್ಷಗಳಿಂದ ಅವರು ಹಾವುಗಳನ್ನು ರಕ್ಷಿಸುತ್ತಾ ಬಂದಿದ್ದು, ಸಾವಿರಾರು ಹಾವುಗಳನ್ನು ಸೆರೆ ಹಿಡಿದು, ಅಪಾಯಗಳನ್ನು ತಪ್ಪಿಸಿದ್ದಾರೆ. ಅವರಿಗೆ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ. ಮನೆಯ ಹಿತ್ತಲ ಬಾಗಿಲ ಮೂಲಕ‌ ನಾಗರಹಾವು ಬಂದಿರಬಹುದು ಎಂದು ಶಂಕಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಗುರು ರಾಘವೇಂದ್ರ, ವಸಿಷ್ಠ, ಗುರು ಸಾರ್ವಭೌಮ ಬ್ಯಾಂಕ್‌ ಹಗರಣದ ಸಿಬಿಐ ತನಿಖೆಗೆ ಸಿಎಂ ಒಪ್ಪಿಗೆ

ಬೆಂಗಳೂರಿನ ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

VISTARANEWS.COM


on

Guru Raghavendra bank
Koo

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅನುಮೋದನೆ ನೀಡಿದ್ದಾರೆ.

ಬೆಂಗಳೂರಿನ ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿ ನಡೆಸಿರುವ ಹಗರಣದ ತನಿಖೆ ಮಾಡಿ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ತನಿಖಾಧಿಕಾರಿಗಳಿಗೆ ಸಹಕರಿಸಬೇಕು ಎಂದು ಗೃಹ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಸಿಬಿಐಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಬ್ಯಾಂಕ್‌ಗಳಿಂದ ಠೇವಣಿದಾರರಿಗೆ ಆಗಿರುವ ನಷ್ಟ ಮತ್ತು ವಂಚನೆಯ ವಿರುದ್ಧ ಪ್ರತಿಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅವರು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡಿ, ಸೂಕ್ತ ತನಿಖೆ ನಡೆಸಿ ಬ್ಯಾಂಕಿನ ಗ್ರಾಹಕರಿಗೆ ಮತ್ತು ಠೇವಣಿದಾರರಿಗೆ ನ್ಯಾಯ ಒದಗಿಸಲು ಆಗ್ರಹಿಸಿದ್ದರು. ಮೂರೂ ಬ್ಯಾಂಕ್‌ಗಳ ಠೇವಣಿದಾರರು ನಡೆಸಿದ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರಾಗಿ ಬೆಂಬಲ ಸೂಚಿಸಿದ್ದರು. ಇದೀಗ ಹಗರಣಗಳ ತನಿಖೆ ಹೊಣೆಯನ್ನು ಸಿಬಿಐಗೆ ನೀಡಲು ಅನುಮೋದನೆ ನೀಡಲಾಗಿದೆ.

ಗುರು ರಾಘವೇಂದ್ರ ಬ್ಯಾಂಕ್ ಹಗರಣದ​ ಹಿನ್ನೆಲೆ

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರೆ ಬ್ಯಾಂಕ್​​ ಸುಳ್ಳು ಸಾಲಗಾರರ ಖಾತೆ ತೆರದು ಈ ಹಣವನ್ನು ಲಾಂಡರಿಂಗ್​ ಮಾಡಿದೆ.

ಇದನ್ನೂ ಓದಿ | Murder case : ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಗೆ ಬೀಸಾಕಿದ ಕಿಡಿಗೇಡಿಗಳು!

ಫೆಬ್ರವರಿ 2022 ರಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅಧಿಕಾರಿಯೊಬ್ಬರನ್ನು ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ಬಂಧಿಸಿತು. ಈವರೆಗೆ ಸಂಸ್ಥೆಯ ಅಧ್ಯಕ್ಷ ಸೇರಿ 4 ಮಂದಿಯನ್ನು ಬಂಧಿಸಲಾಗಿದೆ. ಬ್ಯಾಂಕ್​​ನಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನವರಾಗಿದ್ದಾರೆ. ಹಿರಿಯ ನಾಗರಿಕರು ತಮ್ಮ ಉಳಿತಾಯ ಹಾಗೂ ನಿವೃತ್ತಿ ವೇತನದ ಹಣವನ್ನು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದರು.

ಗುರು ರಾಘವೇಂದ್ರ ಬ್ಯಾಂಕ್‌ ಹಾಗೂ ಗುರು ಸಾರ್ವಭೌಮ ಬ್ಯಾಂಕ್‌ನಲ್ಲಿ 1,500 ಕೋಟಿ ರೂ. ಅಕ್ರಮ, ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ನಡೆದಿರುವ ಆರೋಪವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Telangana Elections 2023 : ತೆಲಂಗಾಣ ಕೈ ಶಾಸಕರ ರಕ್ಷಣೆ; ಡಿಕೆಶಿ, ಜಮೀರ್‌ಗೆ ಹೈಕಮಾಂಡ್‌ ಹೊಣೆ

Telangana Elections 2023 : ತೆಲಂಗಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಬಿಆರ್‌ ಎಸ್‌ ಪಕ್ಷವು ಕಾಂಗ್ರೆಸ್‌ ಶಾಸಕರನ್ನು ಸೆಳೆಯಬಹುದು ಎಂಬ ಆತಂಕವಿದೆ. ಹೀಗಾಗಿ ಡಿ.ಕೆ. ಶಿವಕುಮಾರ್‌ ಮತ್ತು ಜಮೀರ್‌ ಅಹಮದ್‌ ಖಾನ್‌ ಹೈದರಾಬಾದ್‌ ಗೆ ದೌಡಾಯಿಸಿದ್ದಾರೆ.

VISTARANEWS.COM


on

Telangana KCR DK Shivakumar
Koo

ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana Elections 2023) ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದೆ ಎಂಬುದು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳ (Exit poll) ಸಾರ. ಆದರೆ, ಒಂದೊಮ್ಮೆ ಪರಿಸ್ಥಿತಿ ಬದಲಾಗಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್‌ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಮತ್ತು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಅವರಿಗೆ ಹೊಣೆಗಾರಿಕೆಯನ್ನು ನೀಡಿದೆ.

ಹಾಲಿ ಮುಖ್ಯಮಂತ್ರಿ ಹಾಗೂ ಭಾರತ್‌ ರಾಷ್ಟ್ರ ಸಮಿತಿ (Bharat Rashtra Samiti-BRS) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ (K ChandraShekhar Rao) ಅವರು ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಕೆಲವೊಂದು ಗೆಲ್ಲಬಲ್ಲ ಕಾಂಗ್ರೆಸ್‌ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂಬ ಮಾಹಿತಿ ಹೈಕಮಾಂಡ್‌ ಗೆ ತಲುಪಿದೆ. ಹೀಗಾಗಿ ಇಂಥ ಬೇಲಿ ಹಾರುವಿಕೆಯನ್ನು ತಡೆಯಲು ಕಾಂಗ್ರೆಸ್‌ ಕಾರ್ಯತಂತ್ರವನ್ನು ರೂಪಿಸಿದೆ. ಈ ಕಾರ್ಯತಂತ್ರದ ಭಾಗವಾಗಿ ಡಿ.ಕೆ. ಶಿವಕುಮಾರ್‌ ಮತ್ತು ಜಮೀರ್‌ ಖಾನ್‌ ಅವರು ಶನಿವಾರ ರಾತ್ರಿಯೊಳಗೆ ಹೈದರಾಬಾದ್‌ ತಲುಪಲಿದ್ದಾರೆ.

ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥರಾದ ಕೆ. ಚಂದ್ರಶೇಖರ ರಾವ್‌ ಅವರು ಫಲಿತಾಂಶಕ್ಕೆ ಮೊದಲೇ ನಮ್ಮ ಶಾಸಕರಿಗೆ ಬಲೆ ಬೀಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ನಮ್ಮ ಅಭ್ಯರ್ಥಿಗಳು ನಮಗೆ ಈ ಮಾಹಿತಿ ನೀಡಿದ್ದಾರೆ. ಹೀಗಾಗಿ ನಮ್ಮ ಶಾಸಕರನ್ನು ಧೈರ್ಯ ತುಂಬಿ ಉಳಿಸಿಕೊಳ್ಳುವುದು ಕೂಡಾ ತುಂಬ ಮುಖ್ಯ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯದಲ್ಲಿ ಪಕ್ಷ ಸರಳ ಬಹುಮತವನ್ನು ಪಡೆಯುವ ವಿಶ್ವಾಸವಿದೆ. ಆದರೆ, ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಇದು ನನ್ನ ಪಕ್ಷದ ಕೆಲಸ ಹಾಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದೇನೆ ಎಂದು ಶನಿವಾರ ಬೆಳಗ್ಗೆ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದ್ದರು.

ʻʻಕರ್ನಾಟಕ ಚುನಾವಣೆಯ ಸಮಯದಲ್ಲಿ ಇಡೀ ತೆಲಂಗಾಣ ತಂಡ ನಮ್ಮೊಂದಿಗೆ ಇತ್ತು. ಅದಕ್ಕಾಗಿಯೇ ನಾನು ಸಹ ಹೋಗುತ್ತಿದ್ದೇನೆ. ಫಲಿತಾಂಶದ ನಂತರ ಏನಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಯಾವುದೇ ತೊಂದರೆ ಇಲ್ಲ. ಯಾವುದೇ ಬೆದರಿಕೆ ಇಲ್ಲ, ನಮಗೆ ವಿಶ್ವಾಸವಿದೆ, ನಮ್ಮ ಪಕ್ಷ ಆರಾಮವಾಗಿ ಗೆಲ್ಲುತ್ತದೆʼʼ ಎಂದೂ ಅವರು ನುಡಿದಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಹೇಳುವುದೇನು?

ತೆಲಂಗಾಣವು ಒಟ್ಟು 119 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 60 ಸ್ಥಾನಗಳನ್ನು ಗೆಲ್ಲಬೇಕು. ಈ ಹಿಂದಿನ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಆರ್‌ಎಸ್‌ಗೆ ಈ ಭಾರಿ ಸೋಲು ಎಂದು ಬಹಳಷ್ಟು ಸಮೀಕ್ಷೆಗಳು ಹೇಳುತ್ತಿವೆ. ಮುಖ್ಯಮಂತ್ರಿ ಕೆಸಿಆರ್‌ ಈಗಲೂ ಜನಪ್ರಿಯ ನಾಯಕ. ಅವರ ಬಗ್ಗೆ ಜನರಲ್ಲಿ ಯಾವುದೇ ಅಸಮಾಧಾನವಿಲ್ಲ. ಆದರೆ, ಬಿಆರ್‌ಎಸ್‌ನ ಬಹುತೇಕ ಶಾಸಕರಿಗೆ ಆಡಳಿತ ವಿರೋಧಿ ಅಲೆ ಇದೆ. ಹಾಗಿದ್ದೂ, ಕೆಸಿಆರ್ ಹಾಲಿ ಶಾಸಕರಿಗೆ ಮಣೆ ಹಾಕಿರುವುದು ಉರುಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಅಸಲಿಗೆ, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಚ್ಚರಿಯ ಗೆಲುವಿನ ಭವಿಷ್ಯ ನುಡಿದಿವೆ. ಬಹುಶಃ ಕರ್ನಾಟಕದ ರಿಸಲ್ಟ್ ತೆಲಂಗಾಣದಲ್ಲೂ ಪ್ರಭಾವ ಬೀರಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜತೆಗೆ, ಕಾಂಗ್ರೆಸ್ ಘೋಷಿಸಿರುವ 6 ಗ್ಯಾರಂಟಿಗಳು ತೆಲಂಗಾಣ ಮತದಾರರನ್ನು ಸೆಳೆಯುವ ಸಾಧ್ಯತೆಗಳನ್ನು ಸಮೀಕ್ಷೆಗಳು ತಿಳಿಸಿವೆ.

ಎಕ್ಸಿಟ್ ಪೋಲ್‌ಗಳು ಹೇಳೋದೇನು

ಸಿಎನ್​​ಎನ್​ ಸಮೀಕ್ಷೆ: ಕಾಂಗ್ರೆಸ್: 56, ಬಿಆರ್​ಎಸ್​: 48, ಬಿಜೆಪಿ: 10: ಎಐಎಂಐಎಂ: 5
ಜನ್ ಕಿ ಬಾತ್ : ಕಾಂಗ್ರೆಸ್: 48-64, ಬಿಆರ್​ಎಸ್​: 40-55, ಬಿಜೆಪಿ: 7-13, ಎಐಎಂಐಎಂ: 4-7 ಸ್ಥಾನ
ಇಂಡಿಯಾ ಟಿವಿ- ಸಿಎನ್ಎಕ್ಸ್ ಬಿಆರ್​ಎಸ್​ 31-47, ಕಾಂಗ್ರೆಸ್: 63-79, ಬಿಜೆಪಿ 2-4,ಎಐಎಂಐಎಂ 5-7
ಜನ್ ಕಿ ಬಾತ್ ಬಿಆರ್​ಎಸ್​ 40-55, ಕಾಂಗ್ರೆಸ್ 48-64,ಬಿಜೆಪಿ 7-13,ಎಐಎಂಐಎಂ 4-7
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್​- ಆರ್​ಎಸ್​ 46-56.ಕಾಂಗ್ರೆಸ್ 58-68, ಬಿಜೆಪಿ 4-9,ಎಐಎಂಐಎಂ 5-7
ಟಿವಿ 9 ಭಾರತ್ ವರ್ಷ್ – ಪೋಲ್‌ ಸ್ಟ್ರಾಟ್‌: ಬಿಆರ್​ಎಸ್​48-58,ಕಾಂಗ್ರೆಸ್ 49-59,ಬಿಜೆಪಿ 5-10,ಎಐಎಂಐಎಂ 6-8

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಸಿದ್ಧವಾಗಿದ್ದು, ಭಾರತದ ಕಿರಿಯ ರಾಜ್ಯದಲ್ಲಿ 10 ವರ್ಷಗಳ ಆಡಳಿತದ ನಂತರ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಬಹುಮತದ ಕೊರತೆಯನ್ನು ಎದುರಿಸಲಿದೆ ಎಂದು ಶುಕ್ರವಾರ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಮತಗಳಿಕೆ ಶೇ. 42ಕ್ಕೆ ಏರಲಿದೆ, ಬಿಆರ್‌ಎಸ್ ಶೇ. 36ಕ್ಕೆ ಕುಸಿಯಲಿದೆ ಮತ್ತು ಬಿಜೆಪಿ ಶೇ. 14ರಷ್ಟು ಮತಗಳನ್ನು ಪಡೆಯಲಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಮುನ್ನೆಚ್ಚರಿಕೆ

ಒಂದೊಮ್ಮೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕೆ.ಸಿ.ಆರ್‌ ಅವರ ಬಿಆರ್‌ಎಸ್‌ ಪಕ್ಷಕ್ಕೆ ಕೆಲವೇ ಸ್ಥಾನಗಳು ಕಡಿಮೆ ಬಿದ್ದರೆ ಅವರು ಕಾಂಗ್ರೆಸ್‌ನ ಶಾಸಕರನ್ನು ಸೆಳೆದು ಬಿಡುವ ಅಪಾಯವಿರುತ್ತದೆ. ಕಳೆದ ಗೋವಾ ಚುನಾವಣೆಯಲ್ಲಿ ಅಂತಹುದೇ ಸನ್ನಿವೇಶ ನಿರ್ಮಾಣವಾಗಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕಾಂಗ್ರೆಸ್‌ ಗೆ ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ತೆಲಂಗಾಣದಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ತೆಲಂಗಾಣದಲ್ಲಿ ಯಾವುದೇ ಪರಿಸ್ಥಿತಿ ನಿರ್ಮಾಣವಾದರೂ ಎದುರಿಸಲು ಸಜ್ಜಾಗಿರುವಂತೆ ಡಿ.ಕೆ. ಶಿವಕುಮಾರ್‌ ಅವರನ್ನು ತೆಲಂಗಾಣಕ್ಕೆ ಹೋಗುವಂತೆ ಸೂಚನೆ ನೀಡಿದ್ದಾರೆ.

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕದ ಕಾರ್ಯತಂತ್ರವನ್ನೇ ರಚಿಸಿದ್ದು, ಡಿ.ಕೆ. ಶಿವಕುಮಾರ್‌, ಜಮೀರ್‌ ಅಹಮದ್‌ ಅವರು ಮುಂಚೂಣಿಯಲ್ಲಿ ನಿಂತಿದ್ದರು. ಈಗ ಶಾಸಕರ ರಕ್ಷಣೆಯ ಹೊಣೆಯೂ ಅವರ ಹೆಗಲೇರಿದೆ.

ಏನೇನು ಟಾಸ್ಕ್‌? ಸಾಧ್ಯಾಸಾಧ್ಯತೆಗಳು ಏನೇನು?

  1. ಫಲಿತಾಂಶಕ್ಕೆ ಮುನ್ನವೇ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳ ಜತೆ ನಿಕಟ ಸಂಪರ್ಕದಲ್ಲಿರುವುದು.
  2. ಗೆದ್ದ ಬಳಿಕ ಗೆದ್ದ ಎಲ್ಲ ಅಭ್ಯರ್ಥಿಗಳನ್ನು ಜತೆಯಾಗಿಟ್ಟುಕೊಳ್ಳುವುದು ಮತ್ತು ಎಲ್ಲರೂ ಒಂದೇ ಕಡೆ ಸೇರುವಂತೆ ನೋಡಿಕೊಳ್ಳುವುದು.
  3. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವುದು.
  4. ಆಮಿಷ ಒಡ್ಡುವ, ಸೆಳೆಯುವ ತಂತ್ರಗಳು ಶುರುವಾದರೆ ತಕ್ಷಣವೇ ಅವರನ್ನು ಕರ್ನಾಟಕಕ್ಕೆ ಶಿಫ್ಟ್‌ ಮಾಡುವುದು.

ಈ ರೀತಿಯಾದ ವಿಧಾನವನ್ನು ಅಳವಡಿಸಿಕೊಳ್ಳಲು ಕಾಂ‌ಗ್ರೆಸ್‌ ನಿರ್ಧರಿಸಿದೆ.

Continue Reading

ಅಂಕಣ

ವಿಸ್ತಾರ ಅಂಕಣ: ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ!

ಎನ್‌ಇಪಿ (NEP) ಹಾಗೂ ರಾಜಕೀಯ ಪ್ರತಿಷ್ಠೆಗಾಗಿ ತರಲಾಗುತ್ತಿರುವ ಎಸ್‌ಇಪಿಗಳ (SEP) ನಡುವಿನ ಸಮರದಲ್ಲಿ ಬಡವಾಗುವವರು ರಾಜ್ಯದ ಬಡ, ಸರ್ಕಾರಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು. ಇದು ಕನ್ನಡ ಶಾಲೆಗಳನ್ನು ಉಳಿಸುವ ದಾರಿಯೂ ಅಲ್ಲ.

VISTARANEWS.COM


on

kannada school
Koo
Vistara Column @ Hariprakash Konemane

ನಮ್ಮ ಶಿಕ್ಷಣ ವ್ಯವಸ್ಥೆ (Education system) ಸರಿ ಇಲ್ಲ. ಇದರಲ್ಲಿ ಎಳ್ಳಷ್ಟು ನೈತಿಕ ಶಿಕ್ಷಣ ಇಲ್ಲ. ಪ್ರಾಯೋಗಿಕ ಶಿಕ್ಷಣದ ಸೋಂಕಿಲ್ಲ. ಇಂಥಾ ಶಿಕ್ಷಣ ಹೆಚ್ಚಾದಂತೆ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ. ಇಂಥಾ ಶಿಕ್ಷಣ ಸುಧಾರಣೆಯಾಗಲೇಬೇಕು…!

ನಮ್ಮ ನಾಡಿನ ಶಿಕ್ಷಣ ತಜ್ಞರು, ಚಿಂತಕರು ಇಂಥಾ ಮಾತನ್ನು ಹೇಳುತ್ತಲೇ ಇರುತ್ತಾರೆ. ಅವರ ಬರಹ, ಭಾಷಣ- ಎಲ್ಲೆಲ್ಲೂ ಈ ಕೊರಗನ್ನು ಕಾಣಬಹುದು. ಹಾಗೆ ನೋಡಿದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಯೋಜನೆಗಳಿವೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲೆಂದೇ ಈ ಯೋಜನೆಗಳು ವಿನ್ಯಾಸಗೊಂಡಿವೆ. ಶಿಕ್ಷಣ ಹಕ್ಕೂ (Education right) ಕೂಡ ಜಾರಿಯಾಗಿ ದಶಕಗಳೇ ಸಂದಿವೆ. ಆದರೂ ಉನ್ನತ ಶಿಕ್ಷಣದ ದಾಖಲಾತಿಯ ಸರಾಸರಿ ಪ್ರಮಾಣ ನಿರೀಕ್ಷಿಸಿದಷ್ಟು ಹೆಚ್ಚುತ್ತಿ,ಲ್ಲ. ಹಾಗಾಗಿ ಶಿಕ್ಷಣದ ವ್ಯವಸ್ಥೆ ತಳ ಸಮುದಾಯದ ಮಕ್ಕಳ ಅಭಿವೃದ್ಧಿಗೆ ಸಹಕಾರಿಯಾಗಿಲ್ಲ ಎಂಬುದು ಇನ್ನೂ ಕೆಲವರು ಮುಂದಿಡುವ ಕೊರಗು. ಒಂದಿಷ್ಟು ಮಂದಿಯಂತೂ, ನಮ್ಮ ರ್ಯಾಂಕ್‌ಗಳನ್ನೇ ಗೇಲಿ ಮಾಡುವುದುಂಟು. “ರ್ಯಾಂಕ್ ಬಂದ ಮಕ್ಕಳು ಅಗ್ರ ಶ್ರೇಯಾಂಕಿತರೇ ಹೊರತು ಬುದ್ಧಿವಂತರಲ್ಲ, ಕೌಶಲಿಗಳೂ ಅಲ್ಲ!” ಎಂದು ಮೂಗು ಮುರಿಯುತ್ತಾರೆ.

ಅಂದರೆ ಏನು? ಈಗಿನ ನಮ್ಮ ಶಿಕ್ಷಣದಲ್ಲಿ ಏನೋ ಸಮಸ್ಯೆ ಇದೆ ಎನ್ನುವುದು ಎಲ್ಲರೂ ಒಪ್ಪುವ ಮಾತು. ಮೊದಲನೆಯದಾಗಿ ಶಿಕ್ಷಣದ ಗುಣಮಟ್ಟ ಸರಿಯಿಲ್ಲ. ಎರಡನೆಯದಾಗಿ, ಗುಣಮಟ್ಟದ ಶಿಕ್ಷಣವು ಬಡವರ ಕೈಗೆ ಸಿಗುತ್ತಿಲ್ಲ. ಮೂರನೆಯದಾಗಿ, ಈ ಶಿಕ್ಷಣವು ವಿದ್ಯಾರ್ಥಿಗಳನ್ನು ಮಕ್ಕಿ ಕಾ ಮಕ್ಕಿ ಗಿರಾಕಿಗಳನ್ನಾಗಿ ಮಾಡಿದೆಯೇ ಹೊರತು ಜ್ಞಾನವಂತರನ್ನಾಗಿ ಅಲ್ಲ. ಇದೆಲ್ಲವೂ ಅನೇಕರು ಒಪ್ಪುವ ಮಾತು. ಇದೇ ಕಾರಣಕ್ಕೆ, ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.

ಭಾರತದಲ್ಲಿ 34 ವರ್ಷಗಳ ನಂತರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National education policy) ಜಾರಿಗೆ ತರಲಾಗಿದೆ. ನೆನಪಿರಲಿ, ಈ ಮೂರೂವರೆ ದಶಕದಲ್ಲಿ ಶರವೇಗದಲ್ಲಿ ಬದಲಾಗಿದೆ (2000ರ ಹಿಂದಿನ ಸಾವಿರಾರು ವರ್ಗಗಳಲ್ಲಿ ಘಟಿಸದ ಬದಲಾವಣೆಯ ವೇಗದ ಪ್ರಮಾಣ, ಆ ನಂತರದ ಎರಡೂವರೆ ದಶಕದ ಅವಧಿಯಲ್ಲಿ ಸಾವಿರ ಪಟ್ಟು ಹೆಚ್ಚಿದೆ ಎಂಬ ಮಾತಿದೆ). ಬದಲಾಗದೇ ಉಳಿದಿದ್ದು ನಮ್ಮ ಅಧಿಕೃತ ಶಿಕ್ಷಣ ನೀತಿ. ಇದೇ ಇರಲಿ, ಈ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಏಕಾಏಕಿ ಜಾರಿ ಮಾಡಿದೆಯೇ? ಹಾಗೇನೂ ಇಲ್ಲ. 2015 ಫೆಬ್ರವರಿಯಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಪತ್ರಿಕಾಗೋಷ್ಠಿ ನಡೆಸಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಬಗ್ಗೆ ಘೋಷಿಸಿದ್ದರು. ಭಾರತದ ಶಿಕ್ಷಣಕ್ಕೆ ಸಂಬಂಧಿಸಿದ 39 ಅಂಶಗಳನ್ನು ಜನರ ಮುಂದೆ ಇಡುತ್ತಿದ್ದೇವೆ, ದೇಶದ ಎಲ್ಲ ಜನರೂ ಇದಕ್ಕೆ ಸಲಹೆ ಕೊಡಬೇಕು, ಅದೆಲ್ಲದರ ಆಧಾರದಲ್ಲಿ ಶಿಕ್ಷಣ ನೀತಿ ರೂಪಿಸುತ್ತೇನೆ ಎಂದು ಸಾರ್ವಜನಿಕವಾಗಿ ಪ್ರಕಟಿಸಿದ್ದರು. ನಂತರ ಐದು ವರ್ಷ ವಿಚಾರ ಮಂಥನ ನಡೆಸಲಾಗಿದೆ.

ಬಹುಶಃ ಜಗತ್ತಿನಲ್ಲಿ ಯಾವುದೇ ಶಿಕ್ಷಣ ನೀತಿ ರೂಪಿಸುವಾಗ ಇಷ್ಟು ಪ್ರಮಾಣದ ಚರ್ಚೆ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ನಡೆದಿಲ್ಲ. ದೇಶದ 30 ಕೋಟಿ ಜನರ ಬಳಿಗೆ ಇದನ್ನು ಕೊಂಡೊಯ್ಯಲಾಗಿದೆ. ಹರಿದು ಬಂದ 2 ಲಕ್ಷಕ್ಕಿಂತ ಅಧಿಕ ಸಲಹೆಗಳನ್ನು ಸೇರಿಸಿದ್ದರೆ, ಅದರ ಒಟ್ಟು ಪುಟಗಳ ಸಂಖ್ಯೆ 50 ಸಾವಿರ ದಾಟುತ್ತಿತ್ತು. ನಿವೃತ್ತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಸಮಿತಿ ಇದೆಲ್ಲವನ್ನೂ ದತ್ತಾಂಶ ರೂಪಕ್ಕೆ ಇಳಿಸಿಕೊಂಡು ಎಲ್ಲವನ್ನೂ ಅಧ್ಯಯನ ಮಾಡಿ ಕರಡು ನೀತಿಯೊಂದನ್ನು ರೂಪಿಸಿತು. ಬಳಿಕ ಮತ್ತೆ ಸಾರ್ವಜನಿಕರ ಚರ್ಚೆಗೆ ಬಿಡಲಾಯಿತು. ಅಲ್ಲಿಂದ ಬಂದ ಸಲಹೆಗಳನ್ನೂ ಅಳವಡಿಸಿ ಕೊನೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಘೋಷಣೆ ಮಾಡಲಾಯಿತು.

ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಇರುವ ಪ್ರಮುಖ ದೂರು ಯಾವುದು? ಅವರು ಮುಖ್ಯವಾಗಿ ಇರುವುದೇ ನೀತಿ ನಿರೂಪಣೆ ಮಾಡಲು. ಆದರೆ ಸಂಸತ್ತಿನಲ್ಲಿ ಕಾನೂನು ರಚನೆ, ತಿದ್ದುಪಡಿಯಂತಹ ಶಾಸನ ರಚನಾ ಕೆಲಸಕ್ಕೆ ಅವರ ಬಳಿ ಸಮಯವೇ ಇರುವುದಿಲ್ಲ. ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪ ಮಾಡಿಕೊಂಡಿರುತ್ತಾರೆ ಎನ್ನುವುದು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಅತ್ಯಂತ ವಿಸ್ತೃತವಾದ ಚರ್ಚೆ, ಸಾರ್ವಜನಿಕ ಸಹಭಾಗಿತ್ವ ನಡೆಸಲಾಗಿದೆ. ಆದರೂ ಕೇಂದ್ರದಲ್ಲಿ ಪ್ರತಿಪಕ್ಷಗಳು ಹಾಗೂ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಮಾತನಾಡುತ್ತಿದೆ.

kids study

ಕರ್ನಾಟಕದಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯ ಶಿಕ್ಷಣ ನೀತಿ ಜಾರಿ (state education policy) ಮಾಡುವುದಾಗಿಯೂ ಘೊಷಣೆ ಮಾಡಲಾಗಿದೆ. ಇದಕ್ಕಾಗಿ ಸಮಿತಿಯನ್ನೂ ರಚಿಸಿ ಮೊದಲ ಸಭೆಯೂ ನಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎನ್ನುವುದು ಸಚಿವರ ಹಾಗೂ ಸ್ವತಃ ಮುಖ್ಯಮಂತ್ರಿಗಳ ವಾದ. ಎಲ್ಲಿ ಅನ್ಯಾಯವಾಗುತ್ತದೆ ಎಂದು ಕೇಳಿದರೆ, ಇದರಲ್ಲಿ ಹಿಂದುತ್ವ ಹೇರುವ ಪಠ್ಯವಿದೆ, ನಾವು ಸಮಾನತೆಯನ್ನು ಸಾರುವ ಪಠ್ಯ ರೂಪಿಸುತ್ತೇವೆ ಎನ್ನುತ್ತಾರೆ. ಅಸಲಿಗೆ ಇವರಿಗೆಲ್ಲ, ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಎನ್ನುವುದೇ ಅರ್ಥವಾಗಿಲ್ಲ ಅಥವಾ ಅರ್ಥವಾಗಿದ್ದರೂ ಈ ರೀತಿ ನಟಿಸುತ್ತಿದ್ದಾರೆ. ಏಕೆಂದರೆ ʼನೀತಿʼಗೂ ʼಪಠ್ಯʼಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೀತಿ ಎನ್ನುವುದು ಒಟ್ಟಾರೆ ಶಿಕ್ಷಣದ ವ್ಯವಸ್ಥೆ, ಅದಕ್ಕೆ ಬೇಕಾದ ಮಾನವ ಸಂಪನ್ಮೂಲ, ಭಾಷಾ ದೃಷ್ಟಿಕೋನ, ವಿಜ್ಞಾನದ ಕುರಿತು ದೃಷ್ಟಿಕೋನ, ಸಂಶೋಧನೆಗೆ ನೀಡುವ ಒತ್ತು, ಮೂಲಸೌಕರ್ಯ ಸೇರಿ ಅನೇಕ ವಿಚಾರಗಳಲ್ಲಿ ಇರುತ್ತದೆ. ಹೆಚ್ಚೆಂದರೆ ದೇಶದ ಘನತೆ, ಸಾರ್ವಭೌಮತೆ, ಗಣತಂತ್ರದ ಮಹತ್ವ ಸಾರುವ ಪಠ್ಯ ಸೇರಿಸಬೇಕು ಎಂದಿರಬಹುದೇ ಹೊರತು, ಇಂಥದ್ದೇ ಪಠ್ಯವನ್ನು ಸೇರಿಸಿ ಎಂದಿರುವುದಿಲ್ಲ. ಇದನ್ನೇ ಹಿಂದುತ್ವ, ಕೇಸರೀಕರಣ ಎನ್ನುವುದು ಸರಿಯಲ್ಲ. ವಾಸ್ತವವಾಗಿ ಶಿಕ್ಷಣ ನೀತಿ, ಪಠ್ಯ ಹೇಗಿರಬೇಕು ಎಂಬುದನ್ನು ಹೇಳಿದಿಯೇ ಹೊರತು, ಯಾವುದಿರಬೇಕು ಎಂಬುದನ್ನು ಹೇಳುವುದಿಲ್ಲ. ಇದನ್ನು ನಿರ್ಧಾರ ಮಾಡುವುದು ಆಯಾ ರಾಜ್ಯಗಳ ಪಠ್ಯಪುಸ್ತಕ ರಚನಾ ಸಮಿತಿಗಳು. ಹಾಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯು ಕೇಸರೀಕರಣದ ಪ್ರಯತ್ನ ಎನ್ನುವುದು ಒಪ್ಪುವ ಮಾತಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಸಾಮಾನ್ಯವಾಗಿ ಪೋಷಕರ ಮನೋಭಾವವನ್ನು ನೋಡೋಣ. ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿಸಬೇಕು ಎಂಬ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರಕ್ಕೆ ಸೋಲಾಗಿ, ಶಿಕ್ಷಣ ಮಾಧ್ಯಮ ಯಾವುದು ಎನ್ನುವುದನ್ನು ಪೋಷಕರು ನಿರ್ಧರಿಸಬೇಕೆ ವಿನಃ ಸರ್ಕಾರವಲ್ಲ ಎಂದು ತೀರ್ಪು ಬಂದಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರಿಗೆ ಕನ್ನಡ ಅಭಿಮಾನ ಇಲ್ಲ ಎಂದು ಅರ್ಥವೇ? ತಮ್ಮ ಮಕ್ಕಳು ದೇಶದ ಮಟ್ಟದಲ್ಲಿ, ವಿಶ್ವದ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಸಿದ್ಧವಾಗಬೇಕು ಎನ್ನುವುದು ಎಲ್ಲ ಪೋಷಕರ ಆಸೆ, ಅದು ಸಹಜವೂ ಹೌದು. ಕನ್ನಡದಲ್ಲಿ ಓದಿದರೆ ಅವಕಾಶಗಳು ಕಡಿಮೆ ಎನ್ನುವುದು ಅವರ ಅನಿಸಿಕೆ. ಅವರ ಅನಿಸಿಕೆ ಸರಿಯೋ ತಪ್ಪೋ ಎನ್ನುವುದು ಬೇರೆ ಚರ್ಚೆಯ ವಿಷಯ. ಆದರೆ ತಮ್ಮ ಮಕ್ಕಳು ಉನ್ನತ ಮಟ್ಟದ ಸ್ಪರ್ಧೆಗೆ ಸಿದ್ಧರಾಗಬೇಕು ಎನ್ನುವುದು ಪೋಷಕರ ಆಸೆ.

kids playing in school

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿವಿಧ ರಾಜ್ಯಗಳು ಅನುಷ್ಠಾನ ಮಾಡುತ್ತವೆ. ಹಾಗೂ ವಿಶ್ವವಿದ್ಯಾಲಯಗಳಲ್ಲೂ ಜಾರಿ ಮಾಡಲಾಗುತ್ತದೆ. ಅಲ್ಲಿನ ಬೋಧನಾ ಪದ್ಧತಿ, ಪರೀಕ್ಷೆ, ಮೌಲ್ಯಮಾಪನ, ಅಂಕನೀಡಿಕೆಗಳು ಇದೀಗ ವಿಶ್ವದ ಮಟ್ಟದಲ್ಲಿ ಇರುವ ವ್ಯವಸ್ಥೆಗೆ ಅನುಗುಣವಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಾಲ್ಕು ವರ್ಷದ ಪದವಿ ಇದೆ. ಆದರೆ ಭಾರತದಲ್ಲಿ ಮಾತ್ರ ಮೂರು ವರ್ಷದ ಪದವಿ ಕೋರ್ಸ್‌ಗಳಿವೆ. ವಿದೇಶಿ ವ್ಯಾಸಂಗಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಈಗಾಗಲೆ ಅದು ಸಮಸ್ಯೆಯಾಗುತ್ತಿದೆ. ಮೂರು ವರ್ಷ ಪದವಿಯನ್ನು ಪದವಿ ಎಂದೇ ಅನೇಕ ದೇಶಗಳು ಪರಿಗಣಿಸದೇ ಇರುವುದರಿಂದ, ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಲು ಅಡ್ಡಿಯಾಗುತ್ತಿದೆ. ಹಾಗಾಗಿ ಎನ್ಇಪಿಯಲ್ಲಿ ನಾಲ್ಕು ವರ್ಷದ ಪದವಿಯನ್ನು ಪ್ರಸ್ತಾಪಿಸಲಾಗಿದೆ. ಇದೇನೂ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಅನುಕೂಲಕ್ಕೆ ತಕ್ಕಂತೆ ಕೋರ್ಸ್‌ನ ಯಾವುದೇ ವರ್ಷ ಹೊರನಡೆಯಬಹುದು. ಆಯಾ ವರ್ಷಕ್ಕೆ ಅನುಗುಣವಾಗಿ ಪ್ರಮಾಣಪತ್ರ, ಡಿಪ್ಲೊಮಾ ಮುಂತಾದ ಮಾನ್ಯತೆಯನ್ನು ನೀಡಲಾಗುತ್ತದೆ. ಉನ್ನತ ವ್ಯಾಸಂಗ ಮಾಡಬೇಕು, ವಿದೇಶಕ್ಕೆ ತೆರಳಬೇಕು ಎನ್ನುವುವವರು ನಾಲ್ಕು ವರ್ಷ ಪೂರೈಸುತ್ತಾರೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಉಪರಾಷ್ಟ್ರೀಯತೆಯನ್ನು ಬೆಂಬಲಿಸುವ ರಾಷ್ಟ್ರೀಯ ಕಾಂಗ್ರೆಸ್‌!

ಎಸ್ಇಪಿ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ, ಒಂದು ಸಮಿತಿಯನ್ನು ನೇಮಿಸಿದೆ. ಈ ಸಮಿತಿಯ ಶಿಫಾರಸಿನಂತೆ ಎನ್ಇಪಿ ಜಾರಿಯನ್ನು ಮಾಡುವುದರಿಂದ ರಾಜ್ಯ ಸರ್ಕಾರ ಹಿಂತೆಗೆಯಿತು ಎಂದೇ ಭಾವಿಸಿಕೊಳ್ಳೋಣ. ಇದು ಯಾರಿಗೆ ಅನ್ವಯವಾಗುತ್ತದೆ? ಸರ್ಕಾರದ ನಿಯಂತ್ರಣದಲ್ಲಿರುವ ಕೆಲವು ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರದ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಅಷ್ಟೆ. ಈಗಂತೂ ರಾಜ್ಯದಲ್ಲಿ ಸರ್ಕಾರದಷ್ಟೇ, ಉನ್ನತ ಶಿಕ್ಷಣದಲ್ಲಿ ಸರ್ಕಾರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಖಾಸಗಿ ಸಂಸ್ಥೆಗಳು ಸೆಳೆಯುತ್ತಿವೆ. ರಾಜ್ಯದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಎಂದು ಪರಿಗಣಿಸಲ್ಪಡುವ ಖಾಸಗಿ ವಿವಿಗಳು, ಡೀಮ್ಡ್ ವಿವಿಗಳಿಗೆ ಎಸ್ಇಪಿ ಅನ್ವಯವೇ ಆಗುವುದಿಲ್ಲ. ಜಿಲ್ಲೆ, ತಾಲೂಕು ಮಟ್ಟದಲ್ಲೂ ಇರುವ ಖಾಸಗಿ ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮಗಳಿಗೆ ಎಸ್ಇಪಿ ಅನ್ವಯ ಆಗುವುದಿಲ್ಲ. ಜಿಲ್ಲೆಗೊಂದರಂತಿರುವ ಜವಾಹರ ನವೋದಯ ವಿದ್ಯಾರ್ಥಿಗಳು, ಕೇಂದ್ರೀಯ ಶಾಲೆಗಳು, ಸೈನಿಕ ಶಾಲೆಗಳಲ್ಲಿ ಎನ್ಇಪಿಯೇ ಜಾರಿಯಾಗುತ್ತದೆ, ಅಲ್ಲಿಗೂ ಎಸ್ಇಪಿ ಅನ್ವಯ ಆಗುವುದಿಲ್ಲ. ರಾಜ್ಯ ಸರ್ಕಾರದಿಂದಲೇ ನಡೆಸುವ ಕೆಲವು ವಸತಿ ಶಾಲೆಗಳಲ್ಲೂ ಸಿಬಿಎಸ್ಸಿ ಪಠ್ಯವಿದ್ದು, ಅಲ್ಲಿಂದಲೂ ಎಸ್ಇಪಿ ಹೊರಗೇ ಇರಲಿದೆ. ಇಡೀ ದೇಶ ಎನ್ಇಪಿ ರೀತಿಯಲ್ಲಿ ನಡೆಯುತ್ತಿರುವುದರಿಂದ, ಎಸ್ಇಪಿಯಲ್ಲಿ ಓದಿದ ಕರ್ನಾಟಕ ವಿದ್ಯಾರ್ಥಿಗಳಿಗೆ ಹೊರರಾಜ್ಯಗಳಲ್ಲಿ ಉನ್ನತ ಶಿಕ್ಷಣಕ್ಕೆ, ಕೆಲಸಕ್ಕೆ ತೊಂದರೆಯಾಗಬಹುದು. ಇದೇ ಕಾರಣಕ್ಕೆ ವಿದೇಶದಲ್ಲಿ ಶಿಕ್ಷಣ ಪಡೆಯಲೂ ಅಡಚಣೆ ಆಗಬಹುದು. ಆಗ ನಷ್ಟ ಆಗುವುದು ಯಾರಿಗೆ? ಇದೇ ಸರ್ಕಾರಿ ಶಾಲೆಯಲ್ಲಿ, ಸರ್ಕಾರಿ ವಿವಿಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ.

ಈಗಾಗಲೆ ಹೇಳಿದಂತೆ, ಪೋಷಕರ ಮೊದಲ ಆದ್ಯತೆ ತಮ್ಮ ಮಕ್ಕಳ ಏಳಿಗೆ. ತಮ್ಮ ಮಕ್ಕಳು ಎಸ್ಇಪಿಯಲ್ಲಿ ಓದಿದರೆ ಭವಿದ್ಯ ಇಲ್ಲ ಎಂದು ತಿಳಿದರೆ ಅವರೂ ನಿಧಾನವಾಗಿ ಸಿಬಿಎಸ್ಇ ಶಾಲೆಗಳತ್ತ ಹೊರಳುತ್ತಾರೆ. ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿರುವ ಕಾರಣ, ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳೂ ನಿಧಾನವಾಗಿ ಸಿಬಿಎಸ್ಇ (CBSE) ಮಾನ್ಯತೆಯತ್ತ ಹೆಜ್ಜೆ ಹಾಕುತ್ತವೆ. ಅಲ್ಲಿಗೆ, ಅನುದಾನಿತ ಶಾಲೆಗಳನ್ನು ಹೊರತುಪಡಿಸಿ ಖಾಸಗಿ ವಲಯದಲ್ಲಿ ರಾಜ್ಯ ಪಠ್ಯಕ್ರಮ ದಿನೇದಿನೇ ಕಡಿಮೆಯಾಗುತ್ತದೆ. ಕೊನೆಗೆ ಉಳಿಯುವುದು ಸರ್ಕಾರಿ ಶಾಲೆ, ಕಾಲೇಜುಗಳು, ಅನುದಾನಿತ ಶಾಲೆ ಕಾಲೇಜುಗಳು. ಇವೆಲ್ಲದರಲ್ಲಿ ಓದುವ ಬಡ ಮಕ್ಕಳಿಗೆ ಇದು ಅನ್ಯಾಯ ಆಗುತ್ತದೆ. ತಾನು ಬಡವರ ಪರ, ಬಡವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ಇತ್ತ ರಾಜಕೀಯ ಕಾರಣಗಳಿಗೋಸ್ಕರ ಎನ್ಇಪಿಯನ್ನು ವಿರೋಧಿಸುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತದೆ. ರಾಜಕೀಯ ಉದ್ದೇಶದಿಂದ, ಬಡ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಲ್ಲು ಹಾಕುವುದು ಸರ್ವಥಾ ಸಮರ್ಥನೀಯವಲ್ಲ. ರಾಜ್ಯ ಸರ್ಕಾರ ಕೂಡಲೆ ಈ ಎನ್ಇಪಿ ವರ್ಸಸ್ ಎಸ್ಇಪಿ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಪೋಷಕರೆಲ್ಲ ಒತ್ತಾಯ ಮಾಡುವುದೊಂದೇ ಕನ್ನಡ ಶಾಲೆಗಳನ್ನು ಉಳಿಸಲು ಇರುವ ದಾರಿ.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತಾಂಬೆಯ ವಿರುದ್ಧ ಆಕೆಯ ತನುಜಾತೆಯನ್ನು ಎತ್ತಿಕಟ್ಟುವುದು ಏಕೆ?

Continue Reading

ಕರ್ನಾಟಕ

Cash shower: ಶರತ್ ಬಚ್ಚೇಗೌಡ ಮೇಲೆ ನೋಟುಗಳ ಸುರಿಮಳೆಗೈದ ಅಭಿಮಾನಿಗಳು!

Sharath Bachegowda: ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬ ಆಚರಣೆ ವೇಳೆ ಹೂವಿನ ಜತೆಗೆ ಹಣದ ಮಳೆ ಸುರಿಸಿ, ಅಭಿಮಾನಿಗಳು ಜೈಕಾರ ಹಾಕಿದ್ದಾರೆ.

VISTARANEWS.COM


on

MLA Sharath Bachegowda
Koo

ಬೆಂಗಳೂರು ಗ್ರಾಮಾಂತರ: ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬದಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡಿದೆ. ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಹೂವಿನ ಜತೆ ನೋಟುಗಳ ಸುರಿಮಳೆಗೈದಿರುವುದು (Cash shower) ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ನಡೆದಿದೆ.

ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬ ಆಚರಣೆ ವೇಳೆ ಹೂ ಜತೆಗೆ ಹಣದ ಮಳೆ ಸುರಿಸಿ, ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಹಣದ ಮಳೆ ಸುರಿಯುತ್ತಿದ್ದಂತೆ ಎಚ್ಚೆತ್ತ ಶಾಸಕ ಶರತ್ ಬಚ್ಚೇಗೌಡ, ಕೆಳಕ್ಕೆ‌ ಬಿದ್ದ ಹಣವನ್ನ ಸ್ವತಃ ಕೈಗೆತ್ತಿಕೊಂಡು ಜನರಿಗೆ ನೀಡಿದ್ದಾರೆ. ನಂತರ ಹಣ ಹಾಕದಂತೆ ಅಭಿಮಾನಿಗಳಿಗೆ ತಾಕೀತು ಮಾಡಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೃಹತ್‌ ಸೇಬಿನ ಹಾರದೊಂದಿಗೆ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಸ್ವಾಗತ ಕೋರಲಾಗಿದೆ. ಈ ವೇಳೆ ಹೂವಿನ ಜತೆಗೆ ನೋಟಿನ ಮಳೆ ಸುರಿಸಲಾಗಿದೆ. ಆದರೆ, ಸಂಭ್ರಮಾಚರಣೆ ವೇಳೆ ನೋಟಿನ ಸುರಿಮಳೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಹುಟ್ಟು ಹಬ್ಬವನ್ನು ಬೆಂಬಲಿಗರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿರುವ ಶರತ್ ಬಚ್ಚೇಗೌಡ ಅವರು ಮುತ್ಸಂದ್ರ ಮತ್ತು ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ 2 ಆಂಬ್ಯುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಒಟ್ಟು 30 ಲಕ್ಷ ರೂ. ಮೌಲ್ಯದ ಎರಡು ಮಿನಿ ಆ್ಯಂಬುಲೆನ್ಸ್‌ಗಳನ್ನು ಶಾಸಕರು ನೀಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಹೈದರಾಬಾದ್​​​ನಲ್ಲಿ ಸಚಿವ ಶಿವಾನಂದ ಪಾಟೀಲ್‌ ಭಾಗವಹಿಸಿದ್ದ ನಡೆದ ವಿವಾಹ ಕಾರ್ಯಕ್ರಮದಲ್ಲಿ ನೋಟಿನ ಸುರಿಮಳೆಗೈದ ಘಟನೆ ನಡೆದಿತ್ತು. ಕವ್ವಾಲಿ ವೀಕ್ಷಿಸುತ್ತಿದ್ದ ವೇಳೆ ಸಚಿವ ಶಿವಾನಂದ ಪಾಟೀಲ್ ಮೇಲೆ ವ್ಯಕ್ತಿಯೊಬ್ಬರು ನೋಟುಗಳ ಮಳೆಗೈದಿದ್ದರು. ಆದರೆ, ಯಾವುದೇ ಪ್ರತಿರೋಧ‌ ತೋರದಿದ್ದ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ವಿರೋಧ ಪಕ್ಷಗಳ ನಾಯಕರು ಆಕ್ರೋಶ ಹೊರಹಾಕಿದ್ದರು. ರಾಜ್ಯದಲ್ಲಿ ಒಂದೆಡೆ ಬರಗಾಲವಿದ್ದರೆ, ಮತ್ತೊಂದೆಡೆ ನಾಡಿನ ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಮಜಾ ಉಡಾಯಿಸುತ್ತಿದ್ದಾರೆ ಎಂದು ವಿಪಕ್ಷಗಳು ಕಿಡಿಕಾರಿದ್ದವು. ಇದೀಗ ಶರತ್ ಬಚ್ಚೇಗೌಡ ಹುಟ್ಟುಹಬ್ಬದಲ್ಲಿ ನೋಟಿನ ಸುರಿಮಳೆಗೈದಿರುವುದು ಕಂಡುಬಂದಿದೆ.

ಇದನ್ನೂ ಓದಿ | Congress politics: ಮಧು ಬಂಗಾರಪ್ಪಗೆ ಅಹಂ ತಲೆಗೇರಿದೆ; ಕಾಂಗ್ರೆಸ್‌ ಶಾಸಕ ಬೇಳೂರು ವಾಗ್ದಾಳಿ

ತಮ್ಮ ಹುಟ್ಟು ಹಬ್ಬವನ್ನು ಬೆಂಬಲಿಗರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡ ಶರತ್ ಬಚ್ಚೇಗೌಡ ಅವರು ಮುತ್ಸಂದ್ರ ಮತ್ತು ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ 2 ಆಂಬುಲೆನ್ಸ್ಗಳನ್ನು ಕೊಡುಗೆಯಾಗಿ ನೀಡಿದರು. ಇನ್ನು ರೋಗಿಗಳ ಜೀವ ಉಳಿಸಲಿಕ್ಕೆ ಈ ಆಂಬುಲೆನ್ಸ್ ಸದ್ಬಳಕೆ ಆಗಲಿ ಎಂದು ಶಾಸಕ ಶರತ್ ಬಚ್ಚೇಗೌಡ ಹಾರೈಸಿದರು. ಒಟ್ಟು 30 ಲಕ್ಷ ರೂ. ಮೌಲ್ಯದ ಎರಡು ಮಿನಿ ಆ್ಯಂಬುಲೆನ್ಸ್‌ಗಳನ್ನು ವಿತರಣೆ ಮಾಡಿದ ನಂತರ, ಆಯಾ ಗ್ರಾಮ ಪಂಚಾಯತಿ ವತಿಯಿಂದ ಆ್ಯಂಬುಲೆನ್ಸ್‌ಗಳನ್ನು ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Rohit Sharma
ಕ್ರೀಡೆ5 mins ago

Rohit Sharma : ಟಿ20 ನಾಯಕತ್ವದ ಗೊಂದಲದ ನಡುವೆಯೇ ವಿದೇಶದಲ್ಲಿ ಪತ್ತೆಯಾದ್ರು ರೋಹಿತ್ ಶರ್ಮಾ

Guru Raghavendra bank
ಕರ್ನಾಟಕ19 mins ago

ಗುರು ರಾಘವೇಂದ್ರ, ವಸಿಷ್ಠ, ಗುರು ಸಾರ್ವಭೌಮ ಬ್ಯಾಂಕ್‌ ಹಗರಣದ ಸಿಬಿಐ ತನಿಖೆಗೆ ಸಿಎಂ ಒಪ್ಪಿಗೆ

Benjamin Netanyhu
ಪ್ರಮುಖ ಸುದ್ದಿ29 mins ago

‘ಹುಡುಕು, ಕೊಲ್ಲು’; ಹಮಾಸ್‌ ಉಗ್ರರ ದಮನಕ್ಕೆ ಇಸ್ರೇಲ್‌ ಮಾಸ್ಟರ್‌ ಪ್ಲಾನ್‌ ಹೇಗಿದೆ?

Telangana KCR DK Shivakumar
ಕರ್ನಾಟಕ46 mins ago

Telangana Elections 2023 : ತೆಲಂಗಾಣ ಕೈ ಶಾಸಕರ ರಕ್ಷಣೆ; ಡಿಕೆಶಿ, ಜಮೀರ್‌ಗೆ ಹೈಕಮಾಂಡ್‌ ಹೊಣೆ

kannada school
ಅಂಕಣ48 mins ago

ವಿಸ್ತಾರ ಅಂಕಣ: ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ!

MLA Sharath Bachegowda
ಕರ್ನಾಟಕ1 hour ago

Cash shower: ಶರತ್ ಬಚ್ಚೇಗೌಡ ಮೇಲೆ ನೋಟುಗಳ ಸುರಿಮಳೆಗೈದ ಅಭಿಮಾನಿಗಳು!

Youth killed in Bidar Vijayapura
ಕರ್ನಾಟಕ1 hour ago

Murder case : ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಗೆ ಬೀಸಾಕಿದ ಕಿಡಿಗೇಡಿಗಳು!

Winter Diet Tips
ಆರೋಗ್ಯ2 hours ago

Winter Diet Tips: ಚಳಿಗಾಲದಲ್ಲಿ ನಮ್ಮನ್ನು ಆರೋಗ್ಯವಾಗಿ ಇರಿಸುವ ಆಹಾರಗಳಿವು

Rajasthan Assembly Election
ದೇಶ2 hours ago

Election Results 2023: ನಾಳೆ 4 ರಾಜ್ಯಗಳ ಚುನಾವಣೆ ಫಲಿತಾಂಶ; ಢವಢವ ಶುರು

Chinnaswamy Stadium
ಕ್ರಿಕೆಟ್2 hours ago

Ind vs Aus : ಭಾರತ – ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆಯ ಅಡಚಣೆ ಇದೆಯೇ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Cockroaches bite baby born 2 days ago in vanivilas hospital
ಆರೋಗ್ಯ2 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ1 day ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ1 day ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ2 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ2 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ5 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

ಟ್ರೆಂಡಿಂಗ್‌