Site icon Vistara News

ತಮಿಳುನಾಡು ಮುಖ್ಯಮಂತ್ರಿ ಭೇಟಿ: ಮದುವೆ ಯಾವಾಗ Lady Superstar ನಯನತಾರ ? 

ನಯನತಾರ

ಬೆಂಗಳೂರು : ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್‌ ಅವರನ್ನು ಲೇಡಿ ಸೂಪರ್‌ ಸ್ಟಾರ್‌ (Lady Superstar ) ನಯನತಾರ ಮತ್ತು ವಿಘ್ನೇಶ್‌ ಭೇಟಿಯಾಗಿರುವ ಪೋಟೋ ವೈರಲ್‌ ಆಗಿದೆ. ಮದುವೆಗೆ ಆಹ್ವಾನಿಸಲೆಂದೇ ಇವರಿಬ್ಬರು ಭೇಟಿ ಮಾಡಿದ್ದಾರೆ ಎಂದು ಗಾಸಿಪ್‌ಗಳು ಹರಿದಾಡುತ್ತಿದೆ.

ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್‌ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ 7 ವರ್ಷಗಳ ಸಾಂಗತ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ ಎಂದು ಚಿತ್ರರಂಗದಲ್ಲಿ ವದಂತಿಗಳು ಕೇಳಿ ಬರುತ್ತಿದೆ. ಜೂನ್‌ 9ರಂದು ವಿವಾಹವಾಗಲಿದ್ದಾರೆ ಎಂದು ಕೇಳಿಬರುತ್ತಿದ್ದು, ಈ ಬಗ್ಗೆ ಜೋಡಿ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ವಿಘ್ನೇಶ್‌ ನಿರ್ದೇಶನದ ʼರೌಡಿ ಧಾನ್‌ʼ ಚಿತ್ರದಲ್ಲಿ ನಯನತಾರಾ ನಾಯಕನಟಿಯಾಗಿದ್ದರೆ, ವಿಜಯ್‌ ಸೇತುಪತಿ ನಾಯಕ ನಟನಾಗಿದ್ದರು. ಸಿನಿಮಾ ನಿರ್ಮಾಣದ ಸಮಯದಲ್ಲಿ ವಿಘ್ನೇಶ್‌ ಮತ್ತು ನಯನತಾರಾ ಪ್ರೀತಿಯಲ್ಲಿ ಮುಳುಗಿದ್ದರು ಎಂದು ಗಾಸಿಪ್ ಹರಿದಾಡಿತ್ತು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಿ ಹಿಟ್‌ ಕೂಡ ಆಗಿತ್ತು.

ಇದನ್ನೂ ಓದಿ | Jawan Teaser: ಲಿಯಾಮ್ ನೀಸನ್ ಅವರ 1990ರ ಚಿತ್ರ ಡಾರ್ಕ್‌ಮ್ಯಾನ್ ಕಾಪಿ ಮಾಡಿದ್ರಾ SRK?

ನಯನತಾರ ಅಭಿನಯದ ರೋಮ್ಯಾಂಟಿಕ್ ಕಾಮಿಡಿ ಚಿತ್ರವಾದ ʼಕಾತು ವಾಕುಲಾ ರೆಂಡು ಕಾದಲ್‌ʼ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸಮಂತಾ ರುತ್‌ ಪ್ರಭು ಮತ್ತು ವಿಜಯ್‌ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮದುವೆ ಸಿದ್ದತೆಗಳು ಭಲೇ ಜೋರು ?

ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್, ಅಜಿತ್, ಸೂರ್ಯ, ಕಾರ್ತಿ ಮತ್ತು ವಿಜಯ್ ಸೇತುಪತಿ ಅವರಂತಹ ಕಾಲಿವುಡ್ ಮತ್ತು ಟಾಲಿವುಡ್ ಘಟಾನುಘಟಿಗಳು ನಯನತಾರಾ-ವಿಘ್ನೇಶ್ ವಿವಾಹ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಕೇಳಿಬರುತ್ತಿದೆ.

ಇವರಿಬ್ಬರ ಮದುವೆ ಸಮಾರಂಭವು OTT ಪ್ಲಾಟ್‌ ಫಾರ್ಮ್‌ನಲ್ಲಿ ಸ್ಟ್ರೀಮ್‌ ಅಗಲಿದೆ ಎಂಬ ಸುದ್ದಿಯೂ ಇದೆ. ಹಾಗೂ ನೆಟ್‌ಫ್ಲಿಕ್ಸ್‌ ಕೂಡ ಖರೀದಿ ಮಾಡಿದ್ದು, ಕಾಲಿವುಡ್ ಚಲನಚಿತ್ರ ನಿರ್ಮಾಪಕ ಗೌತಮ್ ಮೆನನ್ ಸಾಕ್ಷ್ಯಚಿತ್ರ ಶೈಲಿಯಲ್ಲಿ ಚಿತ್ರೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ದಂಪತಿಗಳು ಎಲ್ಲಿಯೂ ಹೇಳಿಕೊಂಡಿಲ್ಲ.

ನಯನತಾರ ಹಾಗೂ ವಿಘ್ನೇಶ್‌ ಪ್ರೇಮ ಕಹಾನಿ

2017 ರಲ್ಲಿ ವಿಘ್ನೇಶ್‌ ಮತ್ತು ನಯನತಾರಾ ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಮೊದಲು ಅಧಿಕೃತವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಘ್ನೇಶ್‌ ಅವರು ಅತ್ಯುತ್ತಮ ನಿರ್ದೇಶಕ ಎಂದು ಪ್ರಶಸ್ತಿ ಸ್ವೀಕರಿಸಿದಾಗ, ನಯನತಾರ ಅವರಿಗೆ ವೇದಿಕೆಯಲ್ಲಿಯೇ ಧನ್ಯವಾದ ಹೇಳಿದ್ದರು. ಅಂತೆಯೇ ನಯನತಾರ ಕೂಡ ಬೆಸ್ಟ್‌ ನಟಿ ಎಂದು ಅವಾರ್ಡ್‌ ಪಡೆದುಕೊಳ್ಳುವಾಗ ನಯನತಾರ ಕೂಡ ಸ್ಪೆಷಲ್‌ ಥ್ಯಾಂಕ್ಸ್‌ ಹೇಳಿದ್ದಾರೆ.

ಮಾರ್ಚ್‌ 25, 2021ರಂದು ಇಬ್ಬರೂ ರಿಂಗ್‌ ಹಾಕಿದ ಪೋಟೋವನ್ನು ಹಂಚಿಕೊಂಡಿದ್ದರು. 2022ರಲ್ಲಿ ಕಾಲ್ಗಂಬಳ್‌ ದೇವಸ್ಥಾನಕ್ಕೆ ಇಬ್ಬರೂ ಭೇಟಿ ನೀಡಿದಾಗ, ಮದುವೆಯಾಗಿದ್ದಾರೆ ಎಂಬ ವದಂತಿಗಳೂ ಹಬ್ಬಿತ್ತು. ಹುಟ್ಟು ಹಬ್ಬದಂದೂ ಸೋಷಿಯಲ್‌ ಮಿಡಿಯಾದಲ್ಲಿ ನಯನತಾರ ವಿಘ್ನೇಶ್‌ ಅವರಿಗೆ ಸ್ಪೆಷಲ್‌ ಗಿಫ್ಟ್‌, ದುಬಾರಿ ಕೊಡುಗೆಗಳನ್ನು ನೀಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.

ವಿಘ್ನೇಶ್‌ ಯಾರು ?

ತಮಿಳು ಚಿತ್ರರಂಗದ ನಿರ್ದೇಶಕ, ನಟ ಹಾಗೂ ಗೀತ ರಚನೆಕಾರ. ಇವರ ತಂದೆ ತಾಯಿ ಇಬ್ಬರೂ ಕೂಡ ಪೊಲೀಸ್‌ ಅಧಿಕಾರಿಗಳಾಗಿದ್ದಾರೆ.

ವಿಘ್ನೇಶ್‌ ಮೊದಲು ಕಿರುಚಿತ್ರವನ್ನು ಮಾಡಿದ್ದು, ಧರನ್‌ ಆ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೆಮಿನಿ ಫಿಲ್ಮ್‌ ಸರ್ಕ್ಯೂಟ್‌ಗೆ ಚಿತ್ರವನ್ನು ತೋರಿಸಿದಾಗ ಈ ಕಿರುಚಿತ್ರವನ್ನು ಫೀಚರ್‌ ಫಿಲ್ಮ್‌ ಮಾಡುವುದಾಗಿ ನಿರ್ಧಾರ ತೆಗೆದುಕೊಂಡರು. ನಿರ್ಮಾಪಕರು ಹಾಗೂ ಬಾಲ್ಯದ ಗೆಳೆಯ ಸಿಲಂಬರಸನ್‌ ಸಹಾಯದ ಮೇರೆಗೆ ಈ ಕಿರುಚಿತ್ರಕ್ಕೆ ʼಪೋಡಾ ಪೋಡಿʼ ಎಂದು ಟೈಟಲ್‌ ಇಟ್ಟು ಮರು ನಾಮಕರಣ ಮಾಡಿದರು.

2012ರಲ್ಲಿ ನಾಲ್ಕು ವರ್ಷಗಳ ನಂತರ ಬಿಡುಗಡೆಗೊಂಡಿತು. ಗೀತರಚನೆಕಾರನಾಗಿಯೂ ಸಕ್ರಿಯವಾಗಿ ಮುಂದುವರೆದ ನಂತರ, ಎರಡನೇ ಚಿತ್ರ ʼನಾನುಮ್‌ ರೌಡಿಧಾನ್‌ʼ (2015)ಗೆ ಕೈ ಹಾಕಿದರು. ಇದರ ಯಶಸ್ಸಿನ ಬಳಿಕ ಈಗ ನಯನತಾರಾ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಸದ್ಯ ಪೃಥ್ವಿರಾಜ್‌ ಹಾಗೂ ನಯನತಾರ ಅಭಿನಯದ ಗೋಲ್ಡ್‌ ಫಿಲ್ಮ್‌ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದೆ.

ಇದನ್ನೂ ಓದಿ | ಕರ್ನಾಟಕದಲ್ಲಿ ಬಾಯ್ಕಾಟ್‌ ಆಗಲಿದೆಯಾ Vikram movie?

Exit mobile version