ಬೆಂಗಳೂರು: ನಟಿ ನಯನತಾರಾ (Nayanthara ) ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕುರಿತು ಸುದ್ದಿಯಲ್ಲಿದ್ದಾರೆ. ಕಳೆದ ಜೂನ್ 2ರಂದು ಮದುವೆಯಾದ ಈ ಜೋಡಿಗೆ 4 ತಿಂಗಳಲ್ಲಿ ಮಗು ಹೇಗೆ ಸಾಧ್ಯ ಎಂದು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಸರಕಾರ ರೂಪಿಸಿರುವ ನಿಯಮಗಳಂತೆ ಅವರು ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆದಿಲ್ಲ ಎಂದು ಆರೋಪಿಸಿ, ಸರಕಾರವು ತನಿಖೆಗೆ ಆದೇಶಿಸಿತ್ತು. ಇದೀಗ ವರದಿಗೆ ಸ್ಪಷ್ಟನೆ ದೊರೆತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹಲವರು ತನಿಖಾ ತಂಡ ವಿಚಾರಣೆ ನಡೆಸಿದೆ ಎನ್ನಲಾಗಿದೆ. ಬಾಡಿಗೆ ತಾಯಿಗೂ ಮದುವೆ ಆಗಿದೆ ಎಂದು ಸಮಿತಿ ವರದಿ ಮಾಡಿದೆ. 2021ರ ನಯನತಾರಾ ಅವರ ಫ್ಯಾಮಿಲಿ ಡಾಕ್ಟರ್ ವಿದೇಶದಲ್ಲಿ ಇದ್ದ ಕಾರಣ ಅವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ. 2016 ಮಾರ್ಚ್ 11ರಂದು ದಂಪತಿ ಮದುವೆ ಆಗಿರುವುದಾಗಿ ಅಫೀಡವಿಟ್ ಸಲ್ಲಿಸಿದ್ದಾರೆ.
ಇದನ್ನೂ ಓದಿ | Nayanthara | ನಯನತಾರಾ ದಂಪತಿ ಸರೋಗಸಿ ಕೇಸ್‌ಗೆ ಟ್ವಿಸ್ಟ್, 6 ವರ್ಷದ ಹಿಂದೆಯೇ ಇಬ್ಬರ ಮದುವೆ?
“ದಂಪತಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ತನಿಖೆ ನಡೆಸಿದಾಗ, ದಂಪತಿಯ ಕುಟುಂಬ ವೈದ್ಯರು 2020ರಲ್ಲಿ ಯಾವ ಚಿಕಿತ್ಸೆಯನ್ನು ಒದಗಿಸಿದ್ದಾರೆ ಎಂಬುದರ ಆಧಾರದ ಮೇಲೆ ಶಿಫಾರಸು ಪತ್ರವನ್ನು ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ನಯನತಾರಾ ದಂಪತಿ ಆರು ವರ್ಷಗಳ ಹಿಂದೆಯೇ ರಿಜಿಸ್ಟರ್ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. 2021ರಲ್ಲಿಯೇ ಬಾಡಿಗೆ ತಾಯ್ತತನದ ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವ ದಾಖಲೆಯನ್ನು ಸಲ್ಲಿಸಿದ್ದಾರೆ. ಕಳೆದ ಜೂನ್ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದು, ಆರು ವರ್ಷಗಳ ಹಿಂದೆಯೇ ರಿಜಿಸ್ಟರ್ ಮದುವೆ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.
ಇದನ್ನೂ ಓದಿ | Nayanthara | ಅವಳಿ ಮಕ್ಕಳೊಂದಿಗೆ ಕ್ಯೂಟ್ ವಿಡಿಯೊ ಹಂಚಿಕೊಂಡ ನಯನತಾರಾ ದಂಪತಿ!