ಬೆಂಗಳೂರು: ನಯನತಾರಾ (Nayanthara) ಮತ್ತು ವಿಘ್ನೇಶ್ ಶಿವನ್ ದಂಪತಿ ಕಳೆದ ವರ್ಷ ಮದುವೆಯಾದ ನಾಲ್ಕು ತಿಂಗಳಿಗೆ ‘ ಅವಳಿ ಗಂಡು ಮಕ್ಕಳಿಗೆ ಪಾಲಕರಾಗಿದ್ದಾರೆ. ತಮ್ಮ ಮಕ್ಕಳ ಮುಖವನ್ನು ಇನ್ನೂ ಬಹಿರಂಗಪಡಿಸಿಲ್ಲ . ಜೋಡಿಯ ಅಭಿಮಾನಿಗಳು ಮಕ್ಕಳ ಮುಖವನ್ನು ನೋಡಲು ಉತ್ಸುಕರಾಗಿದ್ದಾರೆ. ಇದೀಗ ದಂಪತಿ ಮಕ್ಕಳೊಂದಿಗೆ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವಾಗ ನಯನತಾರಾ ಮತ್ತು ವಿಘ್ನೇಶ್ ತಮ್ಮ ಮಕ್ಕಳ ಮುಖವನ್ನು ಕೈಗಳಿಂದ ಮರೆಮಾಚಿದ್ದಾರೆ. ಅವಳಿ ಮಕ್ಕಳು ಕೆಂಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೆ, ನಯನತಾರಾ ರಿಪ್ಡ್ ಡೆನಿಮ್ ಮತ್ತು ಮ್ಯಾಚಿಂಗ್ ಟಿ-ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ವಿಘ್ನೇಶ್ ಹಸಿರು ಶರ್ಟ್ ಮತ್ತು ಕಪ್ಪು ಡೆನಿಮ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ನಮ್ಮ “ನಮ್ಮ ಜವಾನ್‌ನ ನಾಯಕಿʼʼಎಂದು ಬರೆದರೆ, ಮತ್ತೊಬ್ಬರು “ಒಳ್ಳೆಯ ಜೋಡಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Nayanthara | ʻʻಮದುವೆ ನಂತರ ಮಹಿಳೆಯರಿಗೇಕೆ ಹೊಸ ರೂಲ್ಸ್?ʼʼ: ನಯನತಾರಾ!
ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯ ನೇರವೇರಿತ್ತು. ಮಹಾಬಲಿಪುರಂನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಪಾಲ್ಗೊಂಡಿದ್ದರು. ಆರಂಭದಲ್ಲಿ ತಿರುಪತಿಯಲ್ಲಿ ವಿವಾಹವಾಗುವುದಾಗಿ ಈ ಜೋಡಿ ನಿರ್ಧಾರ ಮಾಡಿತ್ತು. ಈ ವಿವಾಹಕ್ಕೆ ಕೇವಲ ಆಪ್ತರು ಮತ್ತು ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ನಟ, ನಟಿಯರು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಾಶಯಗಳನ್ನು ಕೋರಿದ್ದರು.