Site icon Vistara News

Nayanthara | ʻʻಮದುವೆ ನಂತರ ಮಹಿಳೆಯರಿಗೇಕೆ ಹೊಸ ರೂಲ್ಸ್‌?ʼʼ: ನಯನತಾರಾ!

Nayanthara questions restrictions for women post marriage

ಬೆಂಗಳೂರು : ಕಾಲಿವುಡ್‌ ಸೂಪರ್‌ ಸ್ಟಾರ್‌ ನಯನತಾರಾ (Nayanthara ) ಈ ಹಿಂದೆ ಅಷ್ಟೇ ಸಿನಿಮಾದಿಂದ ದೂರ ಆಗುತ್ತಿದ್ದಾರೆ ಎಂಬ ಗಾಸಿಪ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಇದೀಗ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾ ಪ್ರಚಾರ ವೇಳೆ ವೈವಾಹಿಕ ಜೀವನದ ಕುರಿತು ಮಾತನಾಡಿದ್ದಾರೆ ನಯನತಾರಾ.

ʻʻಮದುವೆ ನಂತರ ಮಹಿಳೆಯರು ಕೆಲಸ ಮಾಡಬೇಕು ಬೇಡ ಎನ್ನುವ ಚರ್ಚೆ ಯಾಕೆ? ಮಹಿಳೆಯರಿಗೆ ಮಾತ್ರ ಯಾಕೆ ರೂಲ್ಸ್‌ ಹಾಕುತ್ತಾರೆ? ನನ್ನ ಪ್ರಕಾರ ಇದೆಲ್ಲ ತಪ್ಪು. ಮದುವೆ ಮರು ದಿನವೇ ಗಂಡಸರು ಕೆಲಸಕ್ಕೆ ಹೋಗುತ್ತಾರೆ. ಮದುವೆ ನಮ್ಮ ಜೀವನದಲ್ಲಿ ಇಂಟರ್ವಲ್‌ ಪಾಯಿಂಟ್‌ ಅಲ್ಲ. ಮದುವೆ ನಂತರ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ ಹಾಗೂ ಜೀವನದಲ್ಲಿ ನಾವು ಬೇಗ ಸೆಟಲ್ ಆಗುತ್ತೀವಿ. ಜೀವನದಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲವಿದ್ದರೆ ಮಾತ್ರ ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಇಷ್ಟು ವರ್ಷಗಳಲ್ಲಿ ನಾನು ಭೇಟಿ ಮಾಡಿರುವ ಪ್ರತಿಯೊಂದು ಹೆಣ್ಣಿಗೂ ಇದೇ ಮೈಂಡ್‌ ಸೆಟ್‌ ಇರುವುದು’ ಎಂದು ನಯನತಾರಾ ಮಾತನಾಡಿದ್ದಾರೆ. 

ಇದನ್ನೂ ಓದಿ | Nayanthara | ನಯನತಾರಾ ದಂಪತಿ ಬಾಡಿಗೆ ತಾಯ್ತನದ ಪ್ರಕರಣ: ವರದಿ ಹೇಳಿದ್ದೇನು?

ಮಾತು ಮುಂದುವರಿಸಿ ʻʻಮದುವೆ ನಂತರ ನನ್ನ ಜೀವನದಲ್ಲಿ ಏನೂ ಬದಲಾಗಿಲ್ಲ. ನನ್ನ ಜೀವನ ಹೊಸ ಅಧ್ಯಾಯಕ್ಕೆ ಅದ್ಭುತ ಆರಂಭ ಸಿಕ್ಕಿದೆ. ಸಿನಿಮಾ ಕಥೆಗಳನ್ನು ಅರ್ಥ ಮಾಡಿಕೊಂಡು ಹೆಚ್ಚಿನ ಸಮಯ ನೀಡಬಹುದು. ಮದುವೆ ನಂತರ ಯಾವ ರೂಲ್ಸ್‌ ಇರಬಾರದು. ಯಾರೂ ರೂಲ್ಸ್‌ ಮಾಡಬಾರದು. ಮದುವೆ ಎನ್ನುವುದೇ ಒಂದು ಬ್ಯೂಟಿಫುಲ್ ಜರ್ನಿ. ಹೀಗಿರುವಾಗ ಇದನ್ನು ಯಾಕೆ ಸೆಲೆಬ್ರೇಟ್ ಮಾಡಬಾರದು?’ಎಂದು ಮದುವೆ ಬಗ್ಗೆ ನಯನತಾರಾ ಹೇಳಿದ್ದಾರೆ. 

ನೆಟ್ಟಿಗರು ಗರಂ ಆಗಿದ್ಯಾಕೆ?
ವಿಘ್ನೇಶ್‌ ಶಿವನ್‌ ಅವರ ರೌಡಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ‘ಕನೆಕ್ಟ್’ ಎನ್ನುವ ಹಾರರ್ ಥ್ರಿಲ್ಲರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಲೀಡ್ ರೋಲ್‌ನಲ್ಲಿ ನಯನತಾರಾ ಮಿಂಚಿದ್ದಾರೆ. ಅಶ್ವಿನ್ ಸರವಣನ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಡಿಸೆಂಬರ್‌ 22ರಂದು ಬಿಡುಗಡೆ ಆಗಿದೆ. ಈ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ನಯನತಾರಾ ಭಾಗಿಯಾಗಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸಿನಿಮಾ ಎನ್ನುವ ಕಾರಣಕ್ಕಾಗಿ ನಟಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಬೇರೆ ಸಿನಿಮಾಗಳಿಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂದು ಗರಂ ಆಗಿದ್ದಾರೆ.

ಹಾರರ್ ಥ್ರಿಲ್ಲರ್ ‘ಕನೆಕ್ಟ್’ ಟ್ರೈಲರ್ ಭಯ ಹುಟ್ಟಿಸುವಂತಿದೆ. ಚಿತ್ರದಲ್ಲಿ ನಯನತಾರಾ ಜತೆಗೆ ಸತ್ಯರಾಜ್, ಅನುಪಮ್ ಖೇರ್‌ ಹಾಗೂ ವಿನಯ್ ರೈ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!

Exit mobile version