Site icon Vistara News

Nayanthara | ಅವಳಿ ಮಕ್ಕಳೊಂದಿಗೆ ಕ್ಯೂಟ್‌ ವಿಡಿಯೊ ಹಂಚಿಕೊಂಡ ನಯನತಾರಾ ದಂಪತಿ!

Nayanthara

ಬೆಂಗಳೂರು : ಕಾಲಿವುಡ್‌ ನಟಿ ನಯನತಾರಾ (Nayanthara) ಹಾಗೂ ವಿಘ್ನೇಶ್‌ ಶಿವನ್‌ ಈ ಬಾರಿ ತಮ್ಮ ಅವಳಿ ಮಕ್ಕಳೊಂದಿಗೆ ದೀಪಾವಳಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ದಂಪತಿ ಪಡೆದಿದ್ದರು. ತೋಳಿನಲ್ಲಿ ದಂಪತಿ ಮಕ್ಕಳನ್ನು ಹಿಡಿದು ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಹೇಳಿರುವ ವಿಡಿಯೊ ವೈರಲ್‌ ಆಗಿದೆ.‌

ಇನ್‌ಸ್ಟಾ ವಿಡಿಯೊ ಹಂಚಿಕೊಂಡ ವಿಘ್ನೇಶ್ ಶಿವನ್, “ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು. ಈ ದೀಪಾವಳಿ ಸಂತೋಷ, ನೆಮ್ಮದಿ ತರಲಿ. ದೇವರಲ್ಲಿ ನಂಬಿಕೆ, ಪ್ರೀತಿಯಲ್ಲಿ ನಂಬಿಕೆ ಇರಲಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Nayanthara | ಒಟಿಟಿಯಲ್ಲಿ ಬರುತ್ತಿದೆ ನಯನತಾರಾ-ವಿಘ್ನೇಶ್ ಶಿವನ್ ಮದುವೆಯ ಸಾಕ್ಷ್ಯಚಿತ್ರ

ದಂಪತಿ ಬಾಡಿಗೆ ತಾಯ್ತನದ ವಿವಾದದ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ಕಳೆದ ಜೂನ್ 2ರಂದು ಮದುವೆಯಾದ ಈ ಜೋಡಿಗೆ 4 ತಿಂಗಳಲ್ಲಿ ಮಗು ಹೇಗೆ ಸಾಧ್ಯ ಎಂದು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಮೂಲಗಳ ಪ್ರಕಾರ ದಂಪತಿ ಕಾನೂನು ಬದ್ಧವಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿತ್ತು. ನಯನತಾರಾ ದಂಪತಿ ಆರು ವರ್ಷಗಳ ಹಿಂದೆಯೇ ರಿಜಿಸ್ಟರ್ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿತ್ತು.

2021ರಲ್ಲಿಯೇ ಬಾಡಿಗೆ ತಾಯ್ತತನದ ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವ ದಾಖಲೆ ಸಲ್ಲಿಸಿದ್ದಾರೆ ಎನ್ನಲಾಗಿತ್ತು. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಬಾಡಿಗೆ ತಾಯಿ ಯುಎಇ ನಿವಾಸಿಯಾಗಿರುವ ನಯನತಾರಾ ಅವರ ಸಂಬಂಧಿ ಎಂದು ಉಲ್ಲೇಖಿಸಿದೆ ಎಂಬ ಮಾಹಿಯೂ ಇದೆ.ಈ ಬಗ್ಗೆ ದಂಪತಿ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ | Nayanthara | ನಯನತಾರಾ ದಂಪತಿ ಸರೋಗಸಿ ಕೇಸ್‌ಗೆ ಟ್ವಿಸ್ಟ್‌, 6 ವರ್ಷದ ಹಿಂದೆಯೇ ಇಬ್ಬರ ಮದುವೆ

Exit mobile version