Actress Nayanthara: ನಯನತಾರಾ -ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ಬರ್ತ್‌ಡೇ; ಕ್ಯೂಟ್ ಫೋಟೊಸ್ ಔಟ್! Yashaswi Devadiga 1 ವರ್ಷ ago ನಯನತಾರಾ (Actress Nayanthara) ಮತ್ತು ವಿಘ್ನೇಶ್ ಶಿವನ್ ಅವರ ಅವಳಿ ಮಕ್ಕಳಿಗೆ ಮೊದಲ ವರ್ಷದ ಬರ್ತ್ ಡೇ. ಮುದ್ದಾದ ಅವಳಿ ಮಕ್ಕಳ ಚೆಂದದ ಫೋಟೊಗಳನ್ನು ದಂಪತಿ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದೆ. ಸೆಪ್ಟೆಂಬರ್ 26ರಂದು ದಂಪತಿ ತನ್ನ ಇಬ್ಬರು ಮಕ್ಕಳಾದ ಉಯಿರ್ ಹಾಗೂ ಉಳಗ ಜತೆ ಬರ್ತಡೇ ಆಚರಿಸಿಕೊಂಡಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದು ಒಂದು ವರ್ಷವಾಗಿದೆ. ಮಕ್ಕಳ ಬಗ್ಗೆ ಹಲವು ಪೋಸ್ಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ದಂಪತಿ ಹಾಕುತ್ತ ಇರುತ್ತಾರೆ. ಇದನ್ನೂ ಓದಿ: Actress Nayanthara: ಯೂಟ್ಯೂಬರ್ ಸಿನಿಮಾಗೆ ನಯನತಾರಾ ನಾಯಕಿ; ಅಚ್ಚರಿಗೊಂಡ ಫ್ಯಾನ್ಸ್! ಇದೀಗ ದಂಪತಿ ಅವಳಿ ಮಕ್ಕಳ ಫೋಟೊಗಳನ್ನು ಹಂಚಿಕೊಂಡು ʻʻಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಮಕ್ಕಳೇ. ನೀವು ನಮ್ಮ ಜಗತ್ತುʼʼಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನಯನತಾರಾ ಸದ್ಯ ‘ಜವಾನ್’ ಚಿತ್ರದ ಯಶಸ್ಸಿನಲ್ಲಿದ್ದಾರೆ. ನಟಿಯ ಕೈಯಲ್ಲಿ ಹಲವು ಸಿನಿಮಾಗಳು ಇವೆ.