Site icon Vistara News

Actress Nayanthara: ಪೂಜೆ ಮಾಡುತ್ತಿರುವ ಫೋಟೊ ಹಂಚಿಕೊಂಡ ನಯನತಾರಾ ದಂಪತಿ!

Nayanthara Vignesh Shivan perform puja together

ಬೆಂಗಳೂರು: ಸೂಪರ್‌ ಸ್ಟಾರ್‌ ನಯನತಾರಾ (Actress Nayanthara) ಅವರು ಪತಿ ವಿಘ್ನೇಶ್ ಶಿವನ್ ಜತೆಗಿನ ಹೊಸ ಪೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಘ್ನೇಶ್ ಶಿವನ್ ದೇವರ ಫೋಟೊ ಹಿಡಿದು ನಿಂತರೆ, ನಯನತಾರಾ ದೀಪವನ್ನು ಹಿಡಿದು ಪ್ರಾರ್ಥಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ಸಾದಾ ಕೆಂಪು ಸೀರೆಯನ್ನು ಧರಿಸಿದ್ದರೆ, ವಿಘ್ನೇಶ್ ಹಳದಿ ಕುರ್ತಾ ಧರಿಸಿದ್ದರು.

ವಿಘ್ನೇಶ್ ಶಿವನ್ ಅವರೊಂದಿಗಿನ ಚಿತ್ರಗಳನ್ನು ಹಂಚಿಕೊಂಡ ನಯನತಾರಾ, “ಪ್ರೀತಿ, ದೇವರು ಮತ್ತು ಒಳ್ಳೆಯತನದ ಶಕ್ತಿಯನ್ನು ನಂಬಿರಿ” ಎಂದು ತನ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಫೋಟೊ ವೈರಲ್‌ ಆಗುತ್ತಿದ್ದಂತೆ “35ರ ವಯಸ್ಸಿನಲ್ಲೂ ನೀವು ಎಷ್ಟು ಸುಂದರವಾಗಿ ಕಾಣುತ್ತೀರಿ ಎಂದರೆ ನಂಬಲಾಗುತ್ತಿಲ್ಲ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ʻʻನಿಮ್ಮ ಪ್ರತಿಯೊಂದು ಚಿತ್ರದೊಂದಿಗೆ ನೀವು ಪಾಸಿಟಿವಿಟಿಯನ್ನು ಹಂಚಿಕೊಳ್ಳುತ್ತೀರಿ… ದೇವರು ನಿಮ್ಮನ್ನು ಆಶೀರ್ವದಿಸಲಿ.” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ವಿಘ್ನೇಶ್ ಅವರಂತಹ ರತ್ನವನ್ನು ಪಡೆಯಲು ನಯನತಾರಾ ತುಂಬಾ ಅದೃಷ್ಟಶಾಲಿʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ʼಅನ್ನಪೂರ್ಣಿ’ ನಯನತಾರಾ ಅವರ ವೃತ್ತಿ ಜೀವನದಲ್ಲಿ ಅವರ 75ನೇ ಚಿತ್ರವಾಗಿದೆ. ಈ ಚಿತ್ರವನ್ನು ನೀಲೇಶ್ ಕೃಷ್ಣ ಅವರು ನಿರ್ದೇಶಿಸಿದ್ದಾರೆ. ಜೈ, ಸತ್ಯರಾಜ್, ಕೆಎಸ್ ರವಿಕುಮಾರ್, ರೆಡಿನ್ ಕಿಂಗ್ಸ್ಲಿ, ಕುಮಾರಿ ಸಚ್ಚು, ಕಾರ್ತಿಕ್ ಕುಮಾರ್ ಮತ್ತು ಸುರೇಶ್ ಚಕ್ರವರ್ತಿ ತಾರಾಬಳಗವಿದೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ ಪ್ರವೀಣ್ ಆಂಟೋನಿ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ: Actress Nayanthara: ನಯನತಾರಾಗೆ ಬರೋಬ್ಬರಿ 3 ಕೋಟಿ ರೂ. ಬೆಲೆಯ ಕಾರು ಗಿಫ್ಟ್‌

ʼಬೈಜು ಬವ್ರಾ’ ಚಿತ್ರದಲ್ಲಿ ನಟಿಸುತ್ತಾರಾ ನಯನತಾರಾ?

ಸದ್ಯ ಕೇಳಿ ಬಂದಿರುವ ಸುದ್ದಿಯ ಪ್ರಕಾರ ನಯನತಾರಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ‘ಬೈಜು ಬವ್ರಾ’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣವೀರ್‌ ಸಿಂಗ್‌ ಮತ್ತು ಆಲಿಯಾ ಭಟ್‌ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಬಹಳ ಹಿಂದಿನಿಂದಲೇ ಕೇಳಿ ಬರುತ್ತಿತ್ತು. ಇದೀಗ ಈ ಬಹು ನಿರೀಕ್ಷಿತ ಪ್ರಾಜೆಕ್ಟ್‌ನಲ್ಲಿ ನಯನತಾರಾ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ತಮ್ಮ ಎರಡನೇ ಬಾಲಿವುಡ್‌ ಚಿತ್ರದ ಬಗ್ಗೆ ಸಂಜಯ್‌ ಲೀಲಾ ಬನ್ಸಾಲಿ ಜತೆ ಈಗಾಗಲೇ ನಯನತಾರಾ ಚರ್ಚೆ ನಡೆಸಿ ನಟಿಸಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಣವೀರ್‌ ಸಿಂಗ್‌ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1952ರಲ್ಲಿ ತೆರೆಕಂಡ ‘ಬೈಜು ಬವ್ರಾ’ ಚಿತ್ರದ ರಿಮೇಕ್‌ ಎನ್ನಲಾಗಿದ್ದು, ಮೂಲ ಚಿತ್ರದಲ್ಲಿ ಭರತ್ ಭೂಷಣ್-ಮೀನಾ ಕುಮಾರಿ ನಟಿಸಿದ್ದರು. ಸಂಗೀತಗಾರನೊಬ್ಬನ ಜೀವನದ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಿತ್ತು. ಈ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸುವಂತೆ ನಯನತಾರಾ ಅವರನ್ನು ಸಂಪರ್ಕಿಸಲಾಗಿದೆ. ಅವರು ಇನ್ನೂ ತಮ್ಮ ನಿರ್ಧಾರವನ್ನು ಅಂತಿಮಗೊಳಿಸಿಲ್ಲ. ಮಾರ್ಚ್‌ನಲ್ಲಿ ನಯನತಾರಾ, ಪತಿ ವಿಘ್ನೇಶ್‌ ಶಿವನ್‌ ಜತೆ ಸಂಜಯ್‌ ಲೀಲಾ ಬನ್ಸಾಲಿ ಅವರನ್ನು ಭೇಟಿಯಾಗಿ ಈ ಸಿನಿಮಾ ಕುರಿತು ಮಾತುಕತೆ ನಡೆಸಿದ್ದರು ಎಂದು ಮೂಲಗಳು ವರದಿ ಮಾಡಿವೆ.

Exit mobile version