Site icon Vistara News

Nayanthara’s 75th Film | ಮೆಹೆಂದಿ ರಂಗಿನ ನಡುವೆಯೇ ಹೊಸ ಚಿತ್ರಕ್ಕೆ ಬಣ್ಣ ಹಚ್ಚುತ್ತಿರುವ ನಯನತಾರಾ

Nayanthara's 75th Film

ಬೆಂಗಳೂರು: ಖ್ಯಾತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್‌ ಅವರ ಅದ್ಧೂರಿ ವಿವಾಹ ಇತ್ತೀಚೆಗೆ ಜರುಗಿತ್ತು. ಏಳು ವರ್ಷಗಳಿಂದ ಪ್ರೀತಿಸಿದ ಈ ಜೋಡಿ ಸಪ್ತಪದಿ ತುಳಿದಿತ್ತು. ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಮತ್ತೆ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಮದುವೆ ಆದ ಬಳಿಕ ಸಿನಿಮಾ ಲೋಕಕ್ಕೆ ಮರಳುತ್ತಿದ್ದಾರೆ. ಕಾಲಿವುಡ್‌ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ತಮ್ಮ 75ನೇ ಸಿನಿಮಾ (Nayanthara’s 75th Film) ಮಾಡಲು ಸಜ್ಜಾಗಿದ್ದಾರೆ.

ʻಕಾತು ವಾಕುಲಾ ರೆಂಡು ಕಾದಲ್‌ʼನಲ್ಲಿ ಕೊನೆಯದಾಗಿ ಕಾಣಿಸಿಕೊಂಡ ನಯನತಾರಾ ಇದೀಗ ಇನ್ನೂ ಹೆಸರಿಡದ ಮುಂಬರುವ ಚಿತ್ರಕ್ಕಾಗಿ ನಟಿಸುತ್ತಿದ್ದಾರೆ. ಈ ಚಿತ್ರ ನೀಲೇಶ್‌ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ನೀಲೇಶ್‌ ಕೃಷ್ಣ ಶಂಕರ್‌ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದರು.

ಇದನ್ನೂ ಓದಿ | Nayantara Marriage : ತಿಮ್ಮಪ್ಪನ ದೇಗುಲದಲ್ಲಿ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌

ಈ ಚಿತ್ರವನ್ನು NAAD ಸ್ಟುಡಿಯೋಸ್‌ ಮತ್ತು ಟ್ರೈಡೆಂಟ್‌ ಆರ್ಟ್ಸ್‌ ಸಹಯೋಗದೊಂದಿಗೆ ಜೀ ಸ್ಟುಡಿಯೋಸ್‌ ನಿರ್ಮಾಣ ಮಾಡುತ್ತಿದೆ. ನಯನಾ ಅವರ ಮುಂಬರುವ ಚಿತ್ರಕ್ಕೆ ತಾತ್ಕಾಲಿಕವಾಗಿ N75 ಎಂದು ನೀಡಿದ್ದು, ನಟ ಜೈ ಮತ್ತು ಹಿರಿಯ ನಟ ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಿನೇಶ್ ಕೃಷ್ಣನ್ ಡಿಪಿ ಈ ಸಿನಿಮಾಗೆ ಛಾಯಾಗ್ರಹಣ ಮಾಡುತ್ತಿದ್ದು, ಜೀ ಸ್ಟುಡಿಯೋಸ್‌ ಟ್ವೀಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಚೆನ್ನೈನ ರೆಸಾರ್ಟ್​ವೊಂದರಲ್ಲಿ ನಡೆದ ಅದ್ಧೂರಿ ವಿವಾಹ ಕಾರ್ಯಕ್ಕೆ ಚಿತ್ರರಂಗದ ಮೇರು ಗಣ್ಯರು ಭಾಗಿಯಾಗಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು. ಈಗ ತಮ್ಮದೇ ಲೋಕದಲ್ಲಿ ವಿಹರಿಸಬೇಕಿರುವ ಜೋಡಿ ಹಕ್ಕಿಗಳು ತಮ್ಮ ವೃತ್ತಿಗೆ ಮರಳುತ್ತಿದ್ದಾರೆ. ಶಾರುಖ್​ ಖಾನ್​​, ರಜನಿಕಾಂತ್, ಎ. ಆರ್ ರೆಹಮಾನ್, ನಟ ಸೂರ್ಯ ವಿವಾಹದಲ್ಲಿ ಭಾಗಿಯಾದ ಕೆಲವು ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದರ ಬೆನ್ನಲ್ಲೆ ಬಣ್ಣದ ಲೋಕಕ್ಕೆ ನಯನತಾರಾ ಮತ್ತೆ ಮರಳಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Nayanathara Marriage | ಪತಿ ವಿಘ್ನೇಶ್‌ಗೆ ನಯನತಾರಾ ಉಡುಗೊರೆ ನೀಡಿದ ದುಬಾರಿ ಬಂಗಲೆಯ ಬೆಲೆ ಎಷ್ಟು ಗೊತ್ತಾ?

Exit mobile version