ಬೆಂಗಳೂರು: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಚಿಕ್ಕ ಮಗಳು ಶ್ರೀಜಾ ಡಿವೋರ್ಸ್ ನಡೆದ ಬೆನ್ನಲ್ಲೇ ಸಹೋದರ ನಾಗಬಾಬು (Nagababu) ಅವರ ಪುತ್ರಿ ನಿಹಾರಿಕಾ (Niharika Konidela) ಕೂಡ ತಮ್ಮ ಗಂಡನಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ಜೂನ್ 5ರಂದೇ ಕೋರ್ಟ್ ಡಿವೋರ್ಸ್ ನೀಡಿದೆ. ನಿಹಾರಿಕಾ ಯಾವಾಗಲೂ ಪಾರ್ಟಿ, ಪಬ್ ಎಂದು ಸುತ್ತುತ್ತಿದ್ದಳು. ತಮ್ಮ ತಪ್ಪು ಇದ್ದುಕೊಂಡು ಈಗ ಮೆಗಾ ಕುಟುಂಬದವರು ಹಾಗೂ ಅವರ ಅಭಿಮಾನಿಗಳು ನಮ್ಮತ್ತ ಬೆರಳು ಮಾಡಿ ತೋರಿಸುತ್ತಿರುವುದು ನಮಗೆ ಬಹಳ ಬೇಸರವಾಗುತ್ತಿದೆ ಎಂದು ಚೈತನ್ಯ ತಂದೆ ಸ್ನೇಹಿತರ ಬಳಿ ಹೇಳಿರುವುದಾಗಿ ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ರಿ ನಿಹಾರಿಕಾ ಮತ್ತು ಚೈತನ್ಯ ಜೋನ್ನಲಗಡ್ಡ ಅವರ ಮದುವೆ 2020ರಲ್ಲಿ ನಡೆದಿತ್ತು. ಮದುವೆಯಾದ ಎರಡು ವರ್ಷಕ್ಕೆ ಸಂಸಾರವು ಹಾಳಾಗಿತ್ತು. ಅವರಿಬ್ಬರು ಪರಸ್ಪರ ಡಿವೋರ್ಸ್ ಬಯಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಡಿವೋರ್ಸ್ ಪಡೆದುಕೊಂಡಿದ್ದಾರೆ. ಕೆಲವು ದಿನಗಳಿಂಗದ ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯ ಜೋನ್ನಲಗಡ್ಡ ಅವರು ಪರಸ್ಪರ ದೂರವಾಗಿದ್ದರು. ಜೂನ್ 5ರಂದು ಕೋರ್ಟ್ ಇವರಿಬ್ಬರಿಗೂ ಡಿವೋರ್ಸ್ ನೀಡಿದೆ.
ಚೈತನ್ಯ ತಂದೆ ಐಜಿ ಪ್ರಭಾಕರ್ ರಾವ್, ನಿಹಾರಿಕಾ ಬಗ್ಗೆ ಅಸಮಾಧಾನದ ಮಾತುಗಳನ್ನು ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ. ”ನಾವು ಗೌರವದಿಂದ ಬದುಕಿದವರು. ಮನೆಗೆ ಬರುವ ಸೊಸೆ ಕೂಡಾ ನಮ್ಮೊಂದಿಗೆ ಚೆನ್ನಾಗಿರಬೇಕೆಂದು ನಾವು ಆಸೆ ಪಟ್ಟಿದ್ದೆವು. ಆದರೆ ನಿಹಾರಿಕಾ ನಮ್ಮ ಮನೆಗೆ ಬಂದ ನಂತರ ಹಿರಿಯರೊಂದಿಗೆ ಒಂದು ದಿನವೂ ಗೌರವದಿಂದ ನಡೆದುಕೊಳ್ಳಲಿಲ್ಲ. ಆಕೆಗೆ ಅತ್ತೆ, ಮಾವ, ಪತಿ ಎಂಬ ಗೌರವ ಆಗಲೀ, ಪ್ರೀತಿ ಆಗಲೀ ಇರಲಿಲ್ಲ. ಯಾವಾಗಲೂ ಪಾರ್ಟಿ, ಪಬ್ ಎಂದು ಸುತ್ತುತ್ತಿದ್ದಳು. ತಮ್ಮ ತಪ್ಪು ಇದ್ದುಕೊಂಡು ಈಗ ಮೆಗಾ ಕುಟುಂಬದವರು ಹಾಗೂ ಅವರ ಅಭಿಮಾನಿಗಳು ನಮ್ಮತ್ತ ಬೆರಳು ಮಾಡಿ ತೋರಿಸುತ್ತಿರುವುದು ನಮಗೆ ಬಹಳ ಬೇಸರವಾಗುತ್ತಿದೆ” ಎಂದು ಸ್ನೇಹಿತರ ಬಳಿ ಹೇಳಿರುವುದಾಗಿ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಪ್ರಭಾಕರ್ ರಾವ್ ಹೀಗೆ ಹೇಳಿದ್ದಾರೋ ಇಲ್ಲವೋ ಅದ್ಯಾವುದರ ಬಗ್ಗೆ ಮಾಹಿತಿ ಇಲ್ಲ.
ಇದನ್ನೂ ಓದಿ: Niharika Konidela: ನಿಹಾರಿಕಾ ದಾಂಪತ್ಯದಲ್ಲಿ ಬಿರುಕು ಪಕ್ಕಾ ಅಂದ್ರು ನೆಟ್ಟಿಗರು; ಫೋಟೊದಿಂದಾಗಿ ಹೆಚ್ಚಾಯ್ತು ಗಾಸಿಪ್!
ಮೆಗಾಸ್ಟಾರ್ ಮನೆಯ ಮುದ್ದಿನ ಮಗಳು ನಿಹಾರಿಕಾ ಅವರ ಮದುವೆಯನ್ನ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಹಲವು ವರ್ಷಗಳ ಪ್ರೀತಿ, ಎರಡೂವರೆ ವರ್ಷದ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ. ನಿಹಾರಿಕಾ- ಚೈತನ್ಯ ಇಬ್ಬರು ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.