ಮುಂಬೈ: ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC Launch) ಗ್ರ್ಯಾಂಡ್ ಲಾಂಚ್‌ನಲ್ಲಿ, ಅಂಬಾನಿ ಕುಟುಂಬಕ್ಕೆ ಆತ್ಮೀಯರಾಗಿರುವ ಶಾರುಖ್ ಖಾನ್ ನೃತ್ಯ ಪ್ರದರ್ಶನಗಳನ್ನು ನೀಡುವುದರ ಮೂಲಕ ವೇದಿಕೆಯನ್ನು ರಂಜಿಸಿದ್ದಾರೆ. ಏಪ್ರಿಲ್ 1 ರಂದು ಅಂಬಾನಿ ಕುಟಂಬ ದೊಡ್ಡ ಗಾಲಾವನ್ನು ಆಯೋಜಿಸಿದ್ದರು. ಶಾರುಖ್ ಖಾನ್ ಅವರು ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಹೆಜ್ಜೆ ಹಾಕುವುದರೊಂದಿಗೆ ಪಠಾಣ್ ಸಿನಿಮಾದ ಜೂಮ್ ಜೋ ಪಠಾಣ್ ಹಾಡಿಗೂ ಸ್ಟೆಪ್ಸ್ ಹಾಕಿದ್ದಾರೆ.
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಪ್ರಾರಂಭಕ್ಕಾಗಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳ ಸೇರಿದ್ದರು. ಶಾರುಖ್ ಖಾನ್ ಸಹ ಅತಿಥಿಯಾಗಿ ಉಪಸ್ಥಿತರಿದ್ದರು. ಇತ್ತೀಚೆಗೆ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿನ ಹುಕ್ ಸ್ಟೆಪ್ ಶಾರುಖ್ ಖಾನ್ ಪ್ರದರ್ಶಿಸಿದರು.
ಜೂಮ್ ಜೋ ಪಠಾಣ್‌ಗೆ ಶಾರುಕ್ ಡ್ಯಾನ್ಸ್
ಪ್ರೇಕ್ಷಕರ ಕಿರುಚಾಟ ಮತ್ತು ಹರ್ಷೋದ್ಗಾರಗಳ ನಡುವೆ ಶಾರುಖ್ ಖಾನ್ ಅವರು ಜೂಮ್ ಜೋ ಪಠಾನ್‌ಗೆ ನೃತ್ಯ ಮಾಡುವುದರ ಮೂಲಕ ಸಖತ್ ರಂಜಿಸಿದ್ದಾರೆ. ವೇದಿಕೆಯಲ್ಲಿ ಶಾರುಖ್ ಜತೆಗೆ ವರುಣ್ ಧವನ್ ಮತ್ತು ರಣವೀರ್ ಸಿಂಗ್ ಜತೆಯಾಗಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದ್ದು, ಕಾಮೆಂಟ್ ಮೂಲಕ ಶಾರುಖ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: NMACC Launch: ನೀತಾ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಿಯಾಂಕಾ -ರಣವೀರ್ ಸಖತ್ ಸ್ಟೆಪ್ಸ್!
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC)?
ಮುಂಬಯಿಯ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿರುವ ರಿಲಯನ್ಸ್ ಜಿಯೊ ವರ್ಲ್ಡ್ ಸೆಂಟರ್ನೊಳಗೆ ನೂತನವಾಗಿ ನಿರ್ಮಿಸಲಾಗಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಅದ್ಧೂರಿಯಾಗಿ ಮಾರ್ಚ್ 31ರಂದು ನಡೆಯಿತು. ನೀತಾ ಅಂಬಾನಿ, ಮುಕೇಶ್ ಅಂಬಾನಿ ಮತ್ತು ಅವರ ಇಡೀ ಕುಟುಂಬದವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ಬಾಲಿವುಡ್ ಗಣ್ಯರಾದ ಶಾರುಖ್ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಲಿಯಾ ಭಟ್, ಜಾನ್ವಿ ಕಪೂರ್, ವರುಣ್ ಧವನ್, ಕೀರ್ತಿ ಸನೂನ್, ಕರೀನಾ ಕಪೂರ್, ಆಮೀರ್ ಖಾನ್, ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಆಗಮಿಸಿದ್ದರು.
ರಜನಿಕಾಂತ್ ಅವರೂ ಪಾಲ್ಗೊಂಡಿದ್ದರು. ಅಂಬಾನಿ ಕುಟುಂಬದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಕೂಡ ಉಪಸ್ಥಿತರಿದ್ದರು. ಇವರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು, ಸಂಭ್ರಮಸಿದರು. ಅಂದಹಾಗೇ, ಈ ಸಾಂಸ್ಕೃತಿಕ ಕೇಂದ್ರ ನೀತಾ ಅಂಬಾನಿಯವರ ಕನಸಿನ ಕೂಸು. ಭಾರತದ ಕಲಾ ಪ್ರಕಾರಗಳನ್ನು ಪಸರಿಸುವ, ಉತ್ತೇಜಿಸುವ ಸಲುವಾಗಿ ಅವರು ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿ ಮೂರು ಕಲಾ ಪ್ರದರ್ಶನ ವೇದಿಕೆಗಳು ಇವೆ. ಅದರಲ್ಲಿ ಒಂದು 2000 ಆಸನಗಳುಳ್ಳ ಭವ್ಯವಾದ ಥಿಯೇಟರ್. ಇನ್ನೊಂದು 250 ಸೀಟ್ಗಳಿರುವ ಸ್ಟುಡಿಯೋ ಥಿಯೇಟರ್ ಮತ್ತು ಇನ್ನೊಂದು 125 ಕ್ಯೂಬ್ ಸೀಟ್ಗಳುಳ್ಳ ವೇದಿಕೆ. ಇಲ್ಲಿ ಆರ್ಟ್ ಹೌಸ್ ಕೂಡ ಇದೆ.