Site icon Vistara News

Niveditha Gowda : ಬೇಡ ನಾವು ಜತೆಯಾಗಿ ಇರಲ್ಲ; ಸಂಧಾನಕ್ಕೆ ಒಪ್ಪದ ಚಂದನ್​- ನಿವೇದಿತಾ

Chandan Shetty, Niveditha Gowda

ಬೆಂಗಳೂರು: ಕ್ಯೂಟ್​ ಕಪಲ್ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಬಗ್ಗೆ ಯಾವುದೇ ಸುಳಿವು ಇರದ ಕಾರಣ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ದಾಂಪತ್ಯದ ಬಿರುಕಿನ ಸುದ್ದಿಯೇ ಹರಿದಾಡಲು ಆರಂಭಿಸಿದೆ. ಈ ಬಗ್ಗೆ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಕುಟುಂಬದವರು ಹೇಳಿಕೆ ನೀಡಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಸ್ಪಷ್ಟನೆ ಕೊಟ್ಟರೆ ನಮಗೂ ಸತ್ಯ ತಿಳಿಯುತ್ತದೆ ಎಂಬುದೇ ಅವರ ಒತ್ತಾಸೆಯಾಗಿದೆ.

ಇವೆಲ್ಲದರ ನಡುವೆ ಅವರಿಬ್ಬರೂ ಪ್ರತ್ಯೇಕವಾಗಲು ಅರ್ಜಿ ಸಲ್ಲಿಸಿದ್ದು ನಿಜ ಎಂಬ ಮಾಹಿತಿ ಬಂದಿದೆ. ಅಲ್ಲದೆ ನ್ಯಾಯಾಲಯದ ಪ್ರಕ್ರಿಯೆ ವೇಳೆ ತಾವಿಬ್ಬರೂ ಮುಂದೆ ಜತೆಯಾಗಿ ಬಾಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಚಂದನ್​ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ (ಕೇಸ್ ನಂಬರ್-Mc 3388-/2024) ಕೋರ್ಟ್​ ಮುಂದಕ್ಕೆ ಬಂದಿತ್ತು.ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್ ಜ್ಯೋತಿ ಶ್ರೀ ಅವರು ಬೆಂಚ್​ ಮುಂದೆ ಈ ಪ್ರಕರಣ ಬಂದಿತ್ತು. ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಷನ್ ಪ್ರಕ್ರಿಯೆ ಒಳಪಡಬೇಕಾಯಿತು.

ಚಂದನ್ ಹಾಗೂ ನಿವೇದಿತಾ ಅವರಿಗೆ ಕೌಟುಂಬಿಕ ಕೋರ್ಟ್‌ನ ಮಿಡಿಯೇಷನ್​ ಸೆಂಟರ್​ನಲ್ಲಿ ಮಾತುಕತೆ ನಡೆಸಲಾಯಿತು. ವಿಚ್ಛೇದನ ಪ್ರಕ್ರಿಯೆ ಮೊದಲು ಈ ಸಂಧಾನ ನಡೆಯಲೇಬೇಕು. ಅಂತೆಯೇ ಸಂಧಾನಕಾರರು ಮಾತುಕತೆ ನಡೆಸಿದಾಗ ಅವರಿಬ್ಬರು ತಮ್ಮ ನಿರ್ಧಾರದಿಂದ ವಾಪಸ್ ಬರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Chandan Shetty: ತಂಗಿ ತಂಗಿ ಎಂದೇ ಮದುವೆಯಾಗಿದ್ದ ಚಂದನ್‌! ಇವರ ಬಾಳಲ್ಲಿ ವಿಲನ್‌ ಆಗಿದ್ದು ಯಾರು?

ಮೀಡಿಯೇಷನ್ ಸೆಂಟರ್​ನಲ್ಲಿ ವಿಚ್ಛೇದನ ನೀಡದಂತೆ ಸಲಹೆ ಕೊಡುತ್ತಾರೆ. ಪರಸ್ಪರ ಒಂದಾಗಿ ಬಾಳಿ ಎಂದು ಸಲಹೆ ನೀಡುತ್ತಾರೆ. ಇಬ್ಬರು ಒಪ್ಪದೇ ಇದ್ದರೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾರೆ. ಬಳಿಕ ನ್ಯಾಯಾಧೀಶರು ನಿರ್ಧಾರದ ಬಗ್ಗೆ ಕೇಳುತ್ತಾರೆ. ಬಳಿಕ ವಿಚ್ಛೇಧನಕ್ಕೆ ಒಪ್ಪಿಗೆ ಕೊಡುತ್ತಾರೆ.

ದಸರಾ ವೇದಿಕೆ ಮೇಲೆ ಪ್ರಪೋಸ್‌ ಮಾಡಿದ್ದೇ ವಿಚ್ಛೇದನಕ್ಕೆ ಕಾರಣವೇ?

ಬೆಂಗಳೂರು: ಬಿಗ್‌ ಬಾಸ್‌ ಜೋಡಿ, ಕ್ಯೂಟ್‌ ಕಪಲ್‌ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ದಂಪತಿ ವಿಚ್ಛೇದನ ಪಡೆದುಕೊಂಡಿದೆ. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಲವ್ ಪ್ರೊಪೋಸಲ್ ಮಾಡಿ ಸುದ್ದಿಯಾಗಿದ್ದರು. ಚಂದನ್ ವರ್ತನೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೇ ವರ್ಷ ಮೇ 12 ರಂದು ನಿವೇದಿತಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಚಂದನ್‌. ಆರು ದಿನಗಳ ಹಿಂದೆಯಷ್ಟೇ ʻಕೋಟಿʼ ಸಿನಿಮಾ ಪ್ರಚಾರಕ್ಕೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಇಬ್ಬರೂ ಬೇರೆಯಾಗಿದ್ದಾರೆ. ಇದೀಗ ಜೋಡಿಯ ಫ್ಯಾನ್ಸ್‌ ಕಮೆಂಟ್‌ ಮೂಲಕ ಬೇಸರ ಹೊರ ಹಾಕಿದ್ದಾರೆ.

ಯುವ ದಸರಾ ಕಾರ್ಯಕ್ರಮದಲ್ಲಿ ಪ್ರಪೋಸ್‌ ಮಾಡಿದ್ದ ಚಂದನ್‌

ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಕನ್ನಡದ ‘ಬಿಗ್‌ ಬಾಸ್-5’ರ ಸ್ಪರ್ಧಿಗಳು. ಈ ಕಾರ್ಯಕ್ರಮದಲ್ಲಿ ಜೊತೆಯಾದ ಇಬ್ಬರ ಪರಿಚಯ ನಂತರ ಸ್ನೇಹ ಹಾಗೂ ಪ್ರೀತಿಯಾಗಿ ಬದಲಾಗಿತ್ತು. ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಂದನ್ ಶೆಟ್ಟಿ, ಅದೇ ವೇದಿಕೆ ಮೇಲೆ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು. ನಿವೇದಿತಾ ಗೌಡ ಅವರಿಗೆ ಪ್ರಪೋಸ್‌ ಮಾಡಲು ಮುಂದಾಗಿದ್ದ ಚಂದನ್, ಮೊದಲು ಫಾರಿನ್ ಲೊಕೇಷನ್‌ ಆರಿಸಿಕೊಂಡಿದ್ರಂತೆ. ಆದರೆ ಆ ನಂತರ ದೇವಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಮೈಸೂರು ಯುವ ದಸರಾ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಲು ಮುಂದಾಗಿದ್ದರು ಎಂದು ವರದಿಯಾಗಿತ್ತು.

Exit mobile version