Site icon Vistara News

Olle Huduga Pratham: `ಕರ್ನಾಟಕದ ಅಳಿಯ’ ಒಳ್ಳೆ ಹುಡುಗ ಪ್ರಥಮ್ ಹಾಟ್‌ ಸಾಂಗ್‌ ಔಟ್‌!

Olle Huduga Pratham

ಬೆಂಗಳೂರು: ಬಿಗ್‌‌ ಬಾಸ್ ಸೀಸನ್‌-4ರ ವಿಜೇತ,‌ ನಟ, ಒಳ್ಳೆ ಹುಡುಗ ಪ್ರಥಮ್ (Olle Huduga Pratham) ಅವರ ಕೈಯಲ್ಲಿ ಹಲವಾರು ಸಿನಿಮಾಗಳು ಇವೆ. ಕಳೆದ ವರ್ಷ ‘ನಟ ಭಯಂಕರ’ ಸಿನಿಮಾ ನಿರ್ದೇಶಿಸಿ, ನಟಿಸಿದ್ದರು. ‘ಎಂಎಲ್‌ಎ’, ‘ದೇವರಂಥ ಮನುಷ್ಯ’, ‘ರಾಜು ಕನ್ನಡ ಮೀಡಿಯಂ’ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು. ಇದೀಗ ʻಕರ್ನಾಟಕದ ಅಳಿಯʼ ಚಿತ್ರದ ‘ಮನಸಿಗೆ ಹಿಡಿಸಿದನು ಇವನು ಹಾಡು ರಿಲೀಸ್‌ ಆಗಿದೆ. ಪ್ರಥಮ್ (Pratham) ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಈ ಸಿನಿಮಾದ ಹಾಡಿಗೆ ಕೆ. ರಾಮನಾರಾಯಣ್ ಗೀತ ರಚನೆ ಮಾಡಿದ್ದು, ಪ್ರದ್ಯೋತನ್ ಸಂಗೀತ ನೀಡಿದ್ದಾರೆ‌. ಅದಿತಿ ಸಾಗರ್ ಹಾಡಿದ್ದಾರೆ.

ಸಿನಿಮಾ ಕುರಿತು ಮಾತನಾಡಿದ ಪ್ರಥಮ್, ʻʻವಿದೇಶದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಅಣಜಿ ನಾಗರಾಜ್ ಅವರ ಛಾಯಾಗ್ರಹಣ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರದ್ಯೋತನ್ ಸಂಗೀತ ನಿರ್ದೇಶನದಲ್ಲಿ ರಾಮನಾರಾಯಣ್ ಬರೆದಿರುವ ಈ ಹಾಡನ್ನು ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಡಿದ್ದಾರೆ. ಇದೊಂದು ವಾಮಾಚಾರದ ಕುರಿತಾದ ಸಿನಿಮಾವಾಗಿದ್ದು, ಮೂವತ್ತು ವರ್ಷಗಳ ಹಿಂದೆ “ತುಳಸಿದಳ” ಎಂಬ ಸಿನಿಮಾ ಬಂದಿತ್ತು. ಆನಂತರ ದೀರ್ಘವಾಗಿ ವಾಮಾಚಾರದ ಕುರಿತು ಬಂದಿರುವ ಸಿನಿಮಾ ಇದೇ ಇರಬಹುದು. ನಾನು ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿದ್ದೇನೆ. ರಾಘವೇಂದ್ರ ರಾಜಕುಮಾರ್ ಅವರು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ‌ʼʼ ಎಂದು ಮಾಹಿತಿ ನೀಡಿದರು.

ಈ ಸಿನಿಮಾದಲ್ಲಿ ಅಕ್ಷಿತ ಬೋಪಯ್ಯ, ಜ್ಯೋತಿ, ಸ್ಪರ್ಶ ರೇಖಾ, ಓಂಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ವಿ.ಮನೋಹರ್, ರಮೇಶ್ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: Olle Huduga Pratham: ಅಪ್ಪು ನನಗೆ ಮಾರ್ಕೆಟಿಂಗ್‌ ವಸ್ತುವಲ್ಲ, ಯಾರನ್ನೋ ನೋಡಿ ಸಿನಿಮಾ ಮಾಡ್ತಿಲ್ಲ ಎಂದ ಪ್ರಥಮ್‌!

ʻಡ್ರೋನ್‌ ಪ್ರಥಮ್‌ʼ ಸಿನಿಮಾ ಕೂಡ ಸೆಟ್ಟೇರಲು ಸಜ್ಜಾಗಿದ್ದು, ವಿದೇಶದಲ್ಲಿ ಮುಹೂರ್ತ ನೆರವೇರಲಿದೆ ಎಂದು ವಿಸ್ತಾರ ನ್ಯೂಸ್‌ ಜತೆ ಈ ಹಿಂದೆ ಪ್ರಥಮ್‌ ಹೇಳಿಕೊಂಡಿದ್ದರು. ಡ್ರೋನ್‌ ಪ್ರತಾಪ್‌ ಅವರ ಕಥೆಗೆ ಏನಾದರೂ ಸಾಮ್ಯತೆ ಇದೆಯಾ ಎಂಬ ಪ್ರಶ್ನೆಗೆ ಪ್ರಥಮ್‌ ಮಾತನಾಡಿ ʻʻವಿಶ್ವೇಶ್ವರಯ್ಯ, ಭಗತ್‌ಸಿಂಗ್‌, ಹೀಗೆ ಮುಂತಾದವರ ಬಗ್ಗೆ ಸಿನಿಮಾ ಬಂದಿದ್ಯಾ? ಅವರೆಲ್ಲರಕ್ಕಿಂತ ಇವರು ದೊಡ್ಡ ಸಾಧಕರಾ? ನಾನು ಮಾಡುತ್ತಿರುವುದು ಡ್ರೋನ್‌ ಪ್ರಥಮ್‌ ಸಿನಿಮಾ. ಸುಭಾಷ್‌ ಚಂದ್ರ ಭೋಸ್‌ ಹೀಗೆ ಅನೇಕ ಮಹಿನಿಯರ ಬಗ್ಗೆ ಸಿನಿಮಾ ಬಂದಿಲ್ಲ, ಅವರಿಗಿಂತಲೂ ದೊಡ್ಡ ಮಹನಿಯರು ಡ್ರೋನ್‌ ಪ್ರತಾಪ್‌ ಆಗಿದ್ದರೆ, ಇವರದ್ದೇ ಫಸ್ಟ್‌ ಸಿನಿಮಾ ಮಾಡಿರುತ್ತಿದ್ದೆʼʼ ಎಂದಿದ್ದರು.

Exit mobile version