Olle Huduga Pratham Post about His Marriage Olle Huduga Pratham: ನನ್ನ ಮದುವೆ ಆಗೋಳು ಸಿದ್ದರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ತರ ಎಂದ ಒಳ್ಳೆ ಹುಡ್ಗ ಪ್ರಥಮ್ Vistara News

South Cinema

Olle Huduga Pratham: ನನ್ನ ಮದುವೆ ಆಗೋಳು ಸಿದ್ದರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ತರ ಎಂದ ಒಳ್ಳೆ ಹುಡ್ಗ ಪ್ರಥಮ್

ಬಿಗ್‌‌ ಬಾಸ್ ಸೀಸನ್‌-4ರ ವಿಜೇತ,‌ ನಟ ಪ್ರಥಮ್ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾನ್ ಸ್ಟಾಪ್ ಮಾತು, ನೇರ ನುಡಿಯಿಂದಲೇ ಹೆಸರಾಗಿರುವ ಒಳ್ಳೆ ಹುಡ್ಗ ಪ್ರಥಮ್‌ (Olle Huduga Pratham), ಬಿಗ್‌ ಬಾಸ್‌-4ರಲ್ಲಿ ವಿಜೇತರಾಗಿದ್ದರು.

VISTARANEWS.COM


on

Olle Huduga Pratham
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌‌ ಬಾಸ್ ಸೀಸನ್‌-4ರ ವಿಜೇತ,‌ ನಟ ಪ್ರಥಮ್ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾನ್ ಸ್ಟಾಪ್ ಮಾತು, ನೇರ ನುಡಿಯಿಂದಲೇ ಹೆಸರಾಗಿರುವ ಒಳ್ಳೆ ಹುಡ್ಗ ಪ್ರಥಮ್‌ (Olle Huduga Pratham), ಬಿಗ್‌ ಬಾಸ್‌-4ರಲ್ಲಿ ವಿಜೇತರಾಗಿದ್ದರು. ಇದೀಗ ಕುಟುಂಬದವರು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದಾರೆ. ಅಲ್ಲದೆ, ತಮ್ಮ ಮದುವೆಯ ಬಗ್ಗೆ ಹೊಸ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

ಸದ್ಯ ಪ್ರಥಮ್ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಮದುವೆ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ. “ನನ್ನದು ಕಂಪ್ಲೀಟ್ ಅರೇಂಜ್ ಮ್ಯಾರೇಜ್; ಯಾವುದೇ ಆಡಂಬರ, ವೈಭವ ಇರುವುದಿಲ್ಲ. ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ… ನನ್ನ ಕೈಹಿಡಿಯುವವರು ಮಾಧ್ಯಮ, ಸೋಷಿಯಲ್ ಮೀಡಿಯಾ, ಪಬ್ಲಿಸಿಟಿಯಿಂದ ತುಂಬಾ ದೂರ… ಸಿದ್ದರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ.”

ʻʻಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ; ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್‌ ಬೀಗರ ಊಟ‌. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್‌ವೆಜ್‌ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು. ನೀವು ಹರಸಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Pratham: ಒಳ್ಳೆ ಹುಡ್ಗ ಪ್ರಥಮ್ ಮದುವೆಯಾಗಲಿರುವ ಹುಡುಗಿಯ ಹಿನ್ನೆಲೆ ಏನು?

ಟ್ವಿಟ್ಟರ್‌ನಲ್ಲಿ ತಮ್ಮ ಎಂಗೇಜ್‌ಮೆಂಟ್ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. “ಎಂಗೇಜ್‌ಮೆಂಟ್ ಮೊನ್ನೆ ಆಯ್ತು. ನಾಲ್ಕು ಜನರನ್ನು ಕರೆದು ಊಟ ಹಾಕಿಸಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ. ಇನ್ನೆರಡು ದಿನದಲ್ಲಿ ವೃದ್ಧಾಶ್ರಮವೊಂದರ 138 ಜನರಿಗೆ ಸಿಹಿ ಊಟ. ಚಳಿಗಾಲದ ಆಸರೆಗಾಗಿ ಒಂದು ಶಾಲು. ಮದುವೆ ಅವ್ರಿಷ್ಟದಂತೆ ಅವ್ರು ಮಾಡಬಹುದು”. ಎಂದಿದ್ದಾರೆ.

ಕಳೆದ ವರ್ಷ ‘ನಟ ಭಯಂಕರ’ ಸಿನಿಮಾ ನಿರ್ದೇಶಿಸಿ, ನಟಿಸಿದ್ದರು .’ಎಂಎಲ್‌ಎ’, ‘ದೇವರಂಥ ಮನುಷ್ಯ’, ‘ರಾಜು ಕನ್ನಡ ಮೀಡಿಯಂ’ ಸಿನಿಮಾಗಳಲ್ಲಿ ನಟಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

South Cinema

Rashmika Mandanna: ಅನಿಮಲ್‌ನಲ್ಲಿ ಮಿತಿ ಮೀರಿದ ರಶ್ಮಿಕಾ ಬೋಲ್ಡ್‌ನೆಸ್‌; ಡೀಪ್ ಫೇಕ್‌ ಅನ್ನೋದಲ್ಲ ಎಂದು ಟ್ರೋಲ್‌!

Rashmika Mandanna: ರಶ್ಮಿಕಾ ಮಂದಣ್ಣ ಅವರು ಸಖತ್ ಬೋಲ್ಡ್ ಆಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಕೆಲ ಪ್ರಮುಖ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಅಷ್ಟೇ ಅಲ್ಲ ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

VISTARANEWS.COM


on

Rashmika Mandanna On Innerwear Animal Movie Scene
Koo

ಬೆಂಗಳೂರು: ಅನಿಮಲ್ (Rashmika Mandanna) ಡಿಸೆಂಬರ್ 1ರ ಶುಕ್ರವಾರದಂದು ದೇಶಾದ್ಯಂತ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲನ ದಿನವೇ ಸಖತ್‌ ಕಲೆಕ್ಷನ್‌ ಮಾಡಿದೆ ಚಿತ್ರತಂಡ. ಆದರೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಚರ್ಚೆಯಲ್ಲಿರುವುದು ರಶ್ಮಿಕಾ ಮಂದಣ್ಣ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಿನಿಮಾದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಇರುತ್ತವೆ. ರಶ್ಮಿಕಾ ಮಂದಣ್ಣ ಅವರು ಸಖತ್ ಬೋಲ್ಡ್ ಆಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಕೆಲ ಪ್ರಮುಖ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಅಷ್ಟೇ ಅಲ್ಲ ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಅವರು ರಣಬಿರ್ ಕಪೂರ್ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪತಿಯ ಎದುರು ಬಟ್ಟೆ ಬಿಚ್ಚಿ ನಿಂತಿದ್ದಾರೆ. ಈ ವಾರದ ಆರಂಭದಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಎ ಪ್ರಮಾಣಪತ್ರವನ್ನು ಸಿನಿಮಾಗೆ ನೀಡಿತ್ತು. ಕೆಲವು ಬದಲಾವಣೆಗಳನ್ನು ಮಾಡಲು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರಿಗೆ ಸೂಚಿಸಿತ್ತು ಎಂದು ವರಿಯಾಗಿದೆ. ಅದರಲ್ಲಿಯೂ ಇಂಟಿಮೇಟ್ ದೃಶ್ಯಗಳನ್ನು ಕಡಿಮೆ ಮಾಡಬೇಕು ಎಂದು ಹೇಳಿತ್ತು ಎನ್ನಲಾಗಿದೆ.

ಸಿನಿಮಾ ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದೆ. ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿಯುತ್ತಿದೆ. ಅಂದಹಾಗೆ, ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾ ಎರಡನೇ ಭಾಗದಲ್ಲಿ ಬರಲಿದೆ ಎಂಬ ವದಂತಿಗಳು ಶುರುವಾಗಿವೆ. ಅಭಿಮಾನಿಗಳು ಈ ಬಗ್ಗೆ ಪೋಸ್ಟ್‌ ಹಾಕಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡಿಂಗ್‌ ಆಗಿದೆ.ಸಿನಿಮಾ ಆರಂಭಿಕ ಅಂದಾಜಿನ ಪ್ರಕಾರ ಭಾರತದಲ್ಲಿ ಒಟ್ಟೂ ಎಲ್ಲಾ ಭಾಷೆಗಳಲ್ಲಿ 61 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಬೆಲ್ಟ್‌ಗಳಲ್ಲಿ 50.50 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ಚಿತ್ರದ ತೆಲುಗು ಆವೃತ್ತಿಯೂ 10 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಅನಿಮಲ್ ಸಿನಿಮಾ ಮೂಲಕ ರಣಬೀರ್ ಕಪೂರ್ ಮತ್ತೊಮ್ಮೆ ದೊಡ್ಡ ಓಪನರ್ ಆಗಿ ಹೊರಹೊಮ್ಮಿದ್ದಾರೆ. ಬ್ರಹ್ಮಾಸ್ತ್ರ ಮೊದಲ ಭಾಗದ ಮೊದಲನೇ ದಿನ ಆರಂಭಿಕ ದಿನದಲ್ಲಿ 36 ಕೋಟಿ ಗಳಿಸಿತ್ತು.

ಇದನ್ನೂ ಓದಿ: Rashmika Mandanna: ರಶ್ಮಿಕಾ- ವಿಜಯ್‌ ಟ್ವಿನ್ನಿಂಗ್‌; ತೆಲಂಗಾಣ ಎಲೆಕ್ಷನ್‌ನಲ್ಲಿ ಸಿಕ್ಕಿಬಿದ್ದ ನಟ!

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಾಯಕಿಯಾಗಿದ್ದಾರೆ. ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ ನಟನೆಯ ಅನಿಮಲ್‌ ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ನಿರ್ದೇಶನವಿದೆ. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿದೆ.

Continue Reading

South Cinema

Kavya Gowda: ʻಮೀರಾ ಮಾಧವʼ ಧಾರಾವಾಹಿ ಖ್ಯಾತಿಯ ಕಾವ್ಯ ಗೌಡ ಬೇಬಿ ಬಂಪ್‌ ಫೋಟೊಗಳು ವೈರಲ್‌!

Kavya Gowda: 2024ರಲ್ಲಿ ಮಗು ಜನಿಸಲಿದೆ ಎಂದು ಕಾವ್ಯ ಗೌಡ ಅವರು ಹೇಳಿಕೊಂಡಿದ್ದಾರೆ. ಬೇಬಿ ಬಂಪ್‌ ಫೋಟೊಗಳನ್ನು ನಟಿ ಹಂಚಿಕೊಂಡಿದ್ದು, ಅವರ ಫ್ಯಾನ್ಸ್‌ ಶುಭ ಹಾರೈಸುತ್ತಿದ್ದಾರೆ.

VISTARANEWS.COM


on

Kavya Gowda of Meera Madhav serial fame baby bump photos are viral
Koo
Kavya Gowda

ರಾಧಾ ರಮಣ (Radha Ramana), ಮೀರಾ ಮಾಧವ, ಶುಭವಿವಾಹ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ನಟಿ ಕಾವ್ಯ ಗೌಡ ಆ್ಯನಿವರ್ಸರಿ ದಿನವೇ ಅಭಿಮಾನಿಗಳ ಜತೆ ಗುಡ್​ನ್ಯೂಸ್ ಹಂಚಿಕೊಂಡಿದ್ದಾರೆ.

Kavya Gowda

2024ರಲ್ಲಿ ಮಗು ಜನಿಸಲಿದೆ ಎಂದು ಕಾವ್ಯ ಗೌಡ ಅವರು ಹೇಳಿಕೊಂಡಿದ್ದಾರೆ. ಬೇಬಿ ಬಂಪ್‌ ಫೋಟೊಗಳನ್ನು ನಟಿ ಹಂಚಿಕೊಂಡಿದ್ದು, ಅವರ ಫ್ಯಾನ್ಸ್‌ ಶುಭ ಹಾರೈಸುತ್ತಿದ್ದಾರೆ.

Kavya Gowda

ಕಾವ್ಯ ಹಾಗೂ ಸೋಮಶೇಖರ್ ಅವರು 2021ರ ಡಿಸೆಂಬರ್ 2ರಂದು ಮದುವೆ ಆದರು. ಮದುವೆಯ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡು ಜ್ಯುವೆಲ್ಲರಿ ಡಿಸೈನರ್ ಆಗಿ ಕಾವ್ಯ ಗುರುತಿಸಿಕೊಂಡಿದ್ದಾರೆ.

Kavya Gowda

‘ರಾಧಾ ರಮಣ’ ಧಾರಾವಾಹಿಯಲ್ಲಿ ರಾಧಾ ಆಗಿ ಕಾಣಿಸಿಕೊಂಡರು. ‘ಗಾಂಧಾರಿ’ ಧಾರಾವಾಹಿಯಲ್ಲೂ ಕಾವ್ಯ ಗೌಡ ಬಣ್ಣ ಹಚ್ಚಿದ್ದಾರೆ.ಕಿರುತೆರೆ ಅಲ್ಲದೇ ನಟಿ ʻಬಕಾಸುರʼ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು. 

Kavya Gowda

ಇದೀಗ ನಟಿಯ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

Continue Reading

South Cinema

Salaar Trailer: ʻಸಲಾರ್ʼ ಟ್ರೈಲರ್‌ ಔಟ್‌ ಆದ್ರೂ ಟ್ರೆಂಡಿಂಗ್‌ನಲ್ಲಿ ಉಗ್ರಂ, ಕೆಜಿಎಫ್‌! ಏನಂತಿದ್ದಾರೆ ನೆಟ್ಟಿಗರು?

Salaar Trailer: ‘ಆದಿಪುರುಷ್’ ಹೀನಾಯ ಸೋಲು ಕಂಡ ಬಳಿಕ ‘ಸಲಾರ್’ ಮೇಲೆ ನಿರೀಕ್ಷೆ ಇಟ್ಟಿಕೊಂಡಿದ್ದವರಿಗೆ ಕೊನೆಗೂ ಟ್ರೈಲರ್ ನೋಡುವುದಕ್ಕೆ ಸಿಕ್ಕಿದೆ. ಜತೆಗೆ ಮಾಲಿವುಡ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ ಕೂಡ ಮಿಂಚು ಹರಿಸಿದ್ದಾರೆ.

VISTARANEWS.COM


on

prashanth neel, Prabhas
Koo

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರ ಸಲಾರ್: ಭಾಗ 1-ಸೀಸ್‌ಫೈರ್‌ (Salaar: Part 1 – Ceasefire)ನ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕೆಜಿಎಫ್‌ (KGF) ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಈ ಪ್ಯಾನ್‌ ಇಂಡಿಯಾ ಚಿತ್ರಕ್ಕಾಗಿ ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಅದಕ್ಕೆ ತಕ್ಕಂತೆ ಟ್ರೈಲರ್‌ ಮೂಡಿ ಬಂದಿದ್ದು, ನಿರೀಕ್ಷೆ ಹೆಚ್ಚಿಸಿದೆ. ‘ಆದಿಪುರುಷ್’ ಹೀನಾಯ ಸೋಲು ಕಂಡ ಬಳಿಕ ‘ಸಲಾರ್’ ಮೇಲೆ ನಿರೀಕ್ಷೆ ಇಟ್ಟಿಕೊಂಡಿದ್ದವರಿಗೆ ಕೊನೆಗೂ ಟ್ರೈಲರ್ ನೋಡುವುದಕ್ಕೆ ಸಿಕ್ಕಿದೆ.

ʻʻರಕ್ತಸಿಕ್ತವಾಗಿತ್ತು ಟ್ರೈಲರ್‌. ಪ್ರಭಾಸ್ ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಲೈವ್ಲಿಯಾಗಿ, ವಾಸ್ತವಕ್ಕೆ ಹತ್ತಿರವಿದ್ದಂತೆ ಕಾಣುತ್ತಾರೆ. ಪ್ರಶಾಂತ್ ನೀಲ್ ಕಟ್ಟುತ್ತಿರುವ ಪ್ರಪಂಚ ಮತ್ತಷ್ಟು ಕುತೂಹಲಕಾರಿಯಾಗಿದೆʼʼ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ.

ಸಲಾರ್‌ ದೃಶ್ಯಗಳು ಹಾಲಿವುಡ್ ಮಾರ್ಕ್‌ನಷ್ಟಿದ್ದವು. ಪ್ರಭಾಸ್ ಅಂತೂ ಸೂಪರ್‌. ಸಿನಿಮಾ ಹಿಟ್ ಆಗಲಿʼʼ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Salaar Trailer: ಸಲಾರ್ ಟ್ರೈಲರ್ ಔಟ್, ಹೊಸ ಪ್ರಪಂಚದ ಝಲಕ್‌ ತೆರೆದಿಟ್ಟ ಪ್ರಶಾಂತ್‌ ನೀಲ್‌

ʻʻಪ್ರಶಾಂತ್‌ ನೀಲ್ ಆಕ್ಷನ್ ಹಾಗೂ ನಿರ್ದೇಶನದ ಬಗ್ಗೆ ಯಾರೂ ಏನೂ ಹೇಳುವುದಕ್ಕೆ ಆಗುವುದಿಲ್ಲ. ಫಸ್ಟ್‌ ಡೇ ಫಸ್ಟ್ ಶೋ ಟಿಕೆಟ್ ಬುಕ್ ಮಾಡಿದ್ದೇನೆʼʼ ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.

ಸಲಾರ್ ಟ್ರೇಲರ್ ಡೀಸೆಂಟ್‌ ಆಗಿದೆ .ಪ್ರಶಾಂತ್ ನೀಲ್ ಅವರ ಅಭಿಮಾನಿಯಾಗಿ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿದ್ದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರ್ ಚೆನ್ನಾಗಿ ಕಾಣಿಸುತ್ತಾರೆ. ಆದರೆ, ಕೆಜಿಎಫ್ ಹಾಗೂ ರಾಕಿಭಾಯ್ ಹ್ಯಾಂಗೋವರ್‌ನಲ್ಲಿದ್ದಾರೆ ಅನಿಸುತ್ತೆ. ಸಿನಿಮಾದ ಮೇಕಿಂಗ್ ಸ್ಕೇಲ್, ಹಿನ್ನೆಲೆ ಸಂಗೀತ, ಆಕ್ಷನ್ ಪ್ರಿಯರಿಗಾಗಿ ಇರುವ ಸೀಕ್ವೆನ್ಸ್.. ನಾನು ಆಗಲೇ ಹೇಳಿದ ಹಾಗೆ ಎಲ್ಲೋ ನೋಡಿದಂತೆ ಭಾಸವಾಗುತ್ತವೆ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ಈ ಚಿತ್ರದಲ್ಲಿ ಅಬ್ಬರಿಸಿರುವುದು ಟ್ರೈಲರ್‌ ಮೂಲಕ ಕಂಡು ಬಂದಿದೆ. ಜತೆಗೆ ಮಾಲಿವುಡ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ ಕೂಡ ಮಿಂಚು ಹರಿಸಿದ್ದಾರೆ. ರವಿ ಬಸ್ರೂರ್‌ ಸಂಗೀತ ಮತ್ತೊಮ್ಮೆ ಮ್ಯಾಜಿಕ್‌ ಮಾಡಿದೆ. ಛಾಯಾಗ್ರಾಹಕ ಭವನ್‌ ಗೌಡ್‌ ‘ಸಲಾರ್‌’ನ ಬೇರೆಯದೇ ಪ್ರಪಂಚವನ್ನು ಕಟ್ಟಿಕೊಟ್ಟಿದ್ದಾರೆ. ಖಾನ್‌ಸಾರ್‌ ಸಾಮ್ರಾಜ್ಯದಲ್ಲಿ ಕಥೆ ನಡೆಯಲಿದೆ.

ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ್ದ ಪ್ರಶಾಂತ್‌ ನೀಲ್‌ ಸಲಾರ್‌ ಚಿತ್ರದಲ್ಲಿ ಸ್ನೇಹವೇ ಪ್ರಮುಖ ತಿರುಳು ಎಂದಿದ್ದರು. ʼʼಇದು ಸ್ನೇಹಿತರಿಬ್ಬರು ಶತ್ರುಗಳಾಗುವ ಕಥೆಯನ್ನು ಒಳಗೊಂಡಿದೆ. ಸ್ನೇಹವೇ ʼಸಲಾರ್‌ʼನ ಪ್ರಮುಖ ಭಾವನೆ. ಡಿಸೆಂಬರ್‌ 1ರಂದು ಬಿಡುಗಡೆಯಾಗುವ ಟ್ರೈಲರ್‌ನಲ್ಲಿ ʼಸಲಾರ್‌ʼ ಪ್ರಪಂಚದ ಚಿಕ್ಕ ಪರಿಚಯ ನಿಮಗಾಗಲಿದೆʼʼ ಎಂದು ಸುಳಿವು ನೀಡಿ ಕುತೂಹಲ ಹೆಚ್ಚಿಸಿದ್ದರು.

“ಸಲಾರ್‌ನಿಂದ ಪ್ರೇಕ್ಷಕರು ಮತ್ತೊಂದು ʼಕೆಜಿಎಫ್ʼ ಅನ್ನು ನಿರೀಕ್ಷಿಸಬಾರದು. ಯಾಕೆಂದರೆ ʼಸಲಾರ್ʼ ತನ್ನದೇ ಆದ ಜಗತ್ತು, ಅದಕ್ಕೆ ತನ್ನದೇ ಆದ ಭಾವನೆ ಮತ್ತು ಪಾತ್ರಗಳಿವೆ. ʼಸಲಾರ್‌ʼನ ಮೊದಲ ದೃಶ್ಯದಿಂದಲೇ ನಾವು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯಲಿದ್ದೇವೆʼʼ ಎಂದು ಪ್ರಶಾಂತ್‌ ನೀಲ್‌ ಈ ಹಿಂದಿನ ಸಂದರ್ಶನದಲ್ಲಿ ತಿಳಿಸಿದ್ದರು. ʼʼಸಲಾರ್‌ʼನ ಕಥೆಯನ್ನು ಸುಮಾರು 6 ಗಂಟೆಗಳ ಚಲನಚಿತ್ರವನ್ನಾಗಿಸಬಹುದು. ಅದಕ್ಕಾಗಿ ಎರಡು ಪಾರ್ಟ್‌ ಮಾಡಿದ್ದೇನೆʼʼ ಎಂದು ಅವರು ಹೇಳಿದ್ದರು.

ʼಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Salaar Movie: ದೀಪಾವಳಿಗೆ ಡಬಲ್‌ ಗುಡ್‌ನ್ಯೂಸ್‌ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌!

2014ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಮುರಳಿ-ಹರಿಪ್ರಿಯಾ ಅಭಿನಯದ ʼಉಗ್ರಂʼ ಚಿತ್ರ ನಿರ್ದೇಶನದ ಮೂಲಕ ಪ್ರಶಾಂತ್‌ ನೀಲ್‌ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುವ ಜತೆಗೆ ವಿಮರ್ಶಕರ ಮೆಚ್ಚುಗೆಯೂ ಗಳಿಸಿತ್ತು. ಬಳಿಕ ಅವರು ರಾಕಿಂಗ್‌ ಸ್ಟಾರ್‌ ಯಶ್‌ ಜತೆ ʼಕೆಜಿಎಫ್‌ʼ ಚಿತ್ರ ಮಾಡುವ ಮೂಲಕ ತೆರೆ ಮೇಲೆ ಮ್ಯಾಜಿಕ್‌ ಸೃಷ್ಟಿಸಿದ್ದರು. ʼಉಗ್ರಂʼ ಚಿತ್ರ ಕೂಡ ಸ್ನೇಹಿತರಿಬ್ಬರ ಕಥೆಯನ್ನೊಳಗೊಂಡಿತ್ತು. ಇತ್ತ ʼಕೆಜಿಎಫ್‌ʼನಲ್ಲಿ ತಾಯಿ-ಮಗನ ಸೆಂಟಿಮೆಂಟ್‌ ಗಮನ ಸೆಳೆದಿತ್ತು. ʼಸಲಾರ್‌ ಪಾರ್ಟ್‌ 1ʼ ಡಿಸೆಂಬರ್‌ 22ರಂದು ವಿಶ್ವಾದ್ಯಂತ ತೆರೆ ಕಾಣಲಿದ್ದು, ದಾಖಲೆಯ ಕಲೆಕ್ಷನ್‌ ಮಾಡುವ ನಿರೀಕ್ಷೆ ಇದೆ.


Continue Reading

South Cinema

Salaar Trailer: ಸಲಾರ್ ಟ್ರೈಲರ್ ಔಟ್, ಹೊಸ ಪ್ರಪಂಚದ ಝಲಕ್‌ ತೆರೆದಿಟ್ಟ ಪ್ರಶಾಂತ್‌ ನೀಲ್‌

Salaar Trailer: ಕೆಜಿಎಫ್‌ ಸರಣಿ ಚಿತ್ರಗಳ ಮೂಲಕ ಸಂಚಲನ ಮೂಡಿಸಿದ್ದ ಪ್ರಶಾಂತ್‌ ನೀಲ್‌ ನಿರ್ದೇಶನದ, ಪ್ರಭಾಸ್‌ ಅಭಿನಯದ ಬಹು ನಿರೀಕ್ಷಿತ ಸಲಾರ್‌ ಚಿತ್ರ ಟ್ರೈಲರ್‌ ಬಿಡುಗಡೆಯಾಗಿದೆ.

VISTARANEWS.COM


on

salaar
Koo

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರ ಸಲಾರ್: ಭಾಗ 1-ಸೀಸ್‌ಫೈರ್‌ (Salaar: Part 1 – Ceasefire)ನ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕೆಜಿಎಫ್‌ (KGF) ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಈ ಪ್ಯಾನ್‌ ಇಂಡಿಯಾ ಚಿತ್ರಕ್ಕಾಗಿ ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಅದಕ್ಕೆ ತಕ್ಕಂತೆ ಟ್ರೈಲರ್‌ ಮೂಡಿ ಬಂದಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ಈ ಚಿತ್ರದಲ್ಲಿ ಅಬ್ಬರಿಸಿರುವುದು ಟ್ರೈಲರ್‌ ಮೂಲಕ ಕಂಡು ಬಂದಿದೆ. ಜತೆಗೆ ಮಾಲಿವುಡ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ ಕೂಡ ಮಿಂಚು ಹರಿಸಿದ್ದಾರೆ. ರವಿ ಬಸ್ರೂರ್‌ ಸಂಗೀತ ಮತ್ತೊಮ್ಮೆ ಮ್ಯಾಜಿಕ್‌ ಮಾಡಿದೆ. ಛಾಯಾಗ್ರಾಹಕ ಭವನ್‌ ಗೌಡ್‌ ‘ಸಲಾರ್‌’ನ ಬೇರೆಯದೇ ಪ್ರಪಂಚವನ್ನು ಕಟ್ಟಿಕೊಟ್ಟಿದ್ದಾರೆ. ಖಾನ್‌ಸಾರ್‌ ಸಾಮ್ರಾಜ್ಯದಲ್ಲಿ ಕಥೆ ನಡೆಯಲಿದೆ.

ಸ್ನೇಹದ ಕಥೆ ಎಂದ ಪ್ರಶಾಂತ್‌ ನೀಲ್‌

ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ್ದ ಪ್ರಶಾಂತ್‌ ನೀಲ್‌ ಸಲಾರ್‌ ಚಿತ್ರದಲ್ಲಿ ಸ್ನೇಹವೇ ಪ್ರಮುಖ ತಿರುಳು ಎಂದಿದ್ದರು. ʼʼಇದು ಸ್ನೇಹಿತರಿಬ್ಬರು ಶತ್ರುಗಳಾಗುವ ಕಥೆಯನ್ನು ಒಳಗೊಂಡಿದೆ. ಸ್ನೇಹವೇ ʼಸಲಾರ್‌ʼನ ಪ್ರಮುಖ ಭಾವನೆ. ಡಿಸೆಂಬರ್‌ 1ರಂದು ಬಿಡುಗಡೆಯಾಗುವ ಟ್ರೈಲರ್‌ನಲ್ಲಿ ʼಸಲಾರ್‌ʼ ಪ್ರಪಂಚದ ಚಿಕ್ಕ ಪರಿಚಯ ನಿಮಗಾಗಲಿದೆʼʼ ಎಂದು ಸುಳಿವು ನೀಡಿ ಕುತೂಹಲ ಹೆಚ್ಚಿಸಿದ್ದರು.

“ಸಲಾರ್‌ನಿಂದ ಪ್ರೇಕ್ಷಕರು ಮತ್ತೊಂದು ʼಕೆಜಿಎಫ್ʼ ಅನ್ನು ನಿರೀಕ್ಷಿಸಬಾರದು. ಯಾಕೆಂದರೆ ʼಸಲಾರ್ʼ ತನ್ನದೇ ಆದ ಜಗತ್ತು, ಅದಕ್ಕೆ ತನ್ನದೇ ಆದ ಭಾವನೆ ಮತ್ತು ಪಾತ್ರಗಳಿವೆ. ʼಸಲಾರ್‌ʼನ ಮೊದಲ ದೃಶ್ಯದಿಂದಲೇ ನಾವು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯಲಿದ್ದೇವೆʼʼ ಎಂದು ಪ್ರಶಾಂತ್‌ ನೀಲ್‌ ಈ ಹಿಂದಿನ ಸಂದರ್ಶನದಲ್ಲಿ ತಿಳಿಸಿದ್ದರು. ʼʼಸಲಾರ್‌ʼನ ಕಥೆಯನ್ನು ಸುಮಾರು 6 ಗಂಟೆಗಳ ಚಲನಚಿತ್ರವನ್ನಾಗಿಸಬಹುದು. ಅದಕ್ಕಾಗಿ ಎರಡು ಪಾರ್ಟ್‌ ಮಾಡಿದ್ದೇನೆʼʼ ಎಂದು ಅವರು ಹೇಳಿದ್ದರು.

Prashanth Neel: ʼಸಲಾರ್‌ʼ ಬಿಗ್‌ ಅಪ್‌ಡೇಟ್‌; ಕಥೆಯ ಗುಟ್ಟು ಬಿಟ್ಟುಕೊಟ್ಟ ಪ್ರಶಾಂತ್‌ ನೀಲ್‌!

ʼಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

2014ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಮುರಳಿ-ಹರಿಪ್ರಿಯಾ ಅಭಿನಯದ ʼಉಗ್ರಂʼ ಚಿತ್ರ ನಿರ್ದೇಶನದ ಮೂಲಕ ಪ್ರಶಾಂತ್‌ ನೀಲ್‌ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುವ ಜತೆಗೆ ವಿಮರ್ಶಕರ ಮೆಚ್ಚುಗೆಯೂ ಗಳಿಸಿತ್ತು. ಬಳಿಕ ಅವರು ರಾಕಿಂಗ್‌ ಸ್ಟಾರ್‌ ಯಶ್‌ ಜತೆ ʼಕೆಜಿಎಫ್‌ʼ ಚಿತ್ರ ಮಾಡುವ ಮೂಲಕ ತೆರೆ ಮೇಲೆ ಮ್ಯಾಜಿಕ್‌ ಸೃಷ್ಟಿಸಿದ್ದರು. ʼಉಗ್ರಂʼ ಚಿತ್ರ ಕೂಡ ಸ್ನೇಹಿತರಿಬ್ಬರ ಕಥೆಯನ್ನೊಳಗೊಂಡಿತ್ತು. ಇತ್ತ ʼಕೆಜಿಎಫ್‌ʼನಲ್ಲಿ ತಾಯಿ-ಮಗನ ಸೆಂಟಿಮೆಂಟ್‌ ಗಮನ ಸೆಳೆದಿತ್ತು. ʼಸಲಾರ್‌ ಪಾರ್ಟ್‌ 1ʼ ಡಿಸೆಂಬರ್‌ 22ರಂದು ವಿಶ್ವಾದ್ಯಂತ ತೆರೆ ಕಾಣಲಿದ್ದು, ದಾಖಲೆಯ ಕಲೆಕ್ಷನ್‌ ಮಾಡುವ ನಿರೀಕ್ಷೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
JP Nadda And BY Vijayendra
ಕರ್ನಾಟಕ26 mins ago

BY Vijayendra: ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ನಡ್ಡಾ ಭೇಟಿಯಾದ ವಿಜಯೇಂದ್ರ; ಏನೇನು ಚರ್ಚೆ?

police protest in Chikkamagaluru
ಪ್ರಮುಖ ಸುದ್ದಿ53 mins ago

ಕಾಫಿನಾಡಲ್ಲಿ ವಕೀಲರ ವಿರುದ್ಧ ಪೊಲೀಸರ ಪ್ರತಿಭಟನೆ; ಸಾಮೂಹಿಕ ರಾಜೀನಾಮೆ ಎಚ್ಚರಿಕೆ

Man Kills Girlfriend
ಕ್ರೈಂ2 hours ago

ಪ್ರೇಯಸಿಯನ್ನು ಕೊಂದು, ಆಕೆಯ ಶವದ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್‌ ಇಟ್ಟ ಯುವಕ

Pro Pak Slogans
ಕರ್ನಾಟಕ2 hours ago

Pro Pak Slogan: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಇಬ್ಬರ ಬಂಧನ

home
ಧಾರ್ಮಿಕ2 hours ago

Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ

december
ಮನಿ-ಗೈಡ್2 hours ago

Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

Tsunami
ಪ್ರಮುಖ ಸುದ್ದಿ2 hours ago

Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್‌!

ABD Villiars
ಕ್ರಿಕೆಟ್2 hours ago

AB de Villiers : ನನ್ನ ಹೃದಯ ಆರ್​​ಸಿಬಿಯಲ್ಲೇ ಇದೆ ಎಂದ ಮಿಸ್ಟರ್​ 360

Dr Sankara Guha Dwarakanath
ಬೆಂಗಳೂರು3 hours ago

ಬ್ಯಾಂಕ್‌ ಹಗರಣಗಳ ಸಿಬಿಐ ತನಿಖೆ; ನನ್ನ ಹೋರಾಟಕ್ಕೆ ಸಿಕ್ಕ ಜಯ ಎಂದ ಡಾ. ಶಂಕರ್ ಗುಹಾ ದ್ವಾರಕನಾಥ್

Rohit Sharma1
ಕ್ರಿಕೆಟ್3 hours ago

Team India : ವಿಶ್ವಕಪ್​ ಫೈನಲ್​ನಲ್ಲಿ ಸೋತಿದ್ದು ಯಾಕೆ? ದ್ರಾವಿಡ್, ರೋಹಿತ್​ಗೆ ಪ್ರಶ್ನೆಗಳ ಸುರಿಮಳೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Cockroaches bite baby born 2 days ago in vanivilas hospital
ಆರೋಗ್ಯ6 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ1 day ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ1 day ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ2 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ2 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ5 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

ಟ್ರೆಂಡಿಂಗ್‌