Site icon Vistara News

Oscar Awards : ಆಸ್ಕರ್‌ ಪ್ರಶಸ್ತಿಯ ನಾಮ ನಿರ್ದೇಶನ ಇಂದು ಪ್ರಕಟ; ವೀಕ್ಷಿಸುವುದು ಹೇಗೆ? ಎಲ್ಲಿ?

ಬೆಂಗಳೂರು: ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತದವರಿಗೆ ಈ ಬಾರಿಯ ಆಸ್ಕರ್‌ ಪ್ರಶಸ್ತಿಗಳ (Oscar Awards) ಬಗ್ಗೆ ಹೆಚ್ಚಿನ ಕುತೂಹಲವಿದೆ. ದಕ್ಷಿಣ ಭಾರತದ ಹಲವು ಸಿನಿಮಾಗಳು ಆಸ್ಕರ್‌ ಅಂಗಳದವರೆಗೂ ತಲುಪಿವೆ. ಒಟ್ಟಾರೆಯಾಗಿ 300ಕ್ಕೂ ಅಧಿಕ ಸಿನಿಮಾಗಳು ಆಸ್ಕರ್‌ ಅಂಗಳದಲ್ಲಿದ್ದು, ಅದರಲ್ಲಿ ಪ್ರಶಸ್ತಿಗೆ ಅರ್ಹವೆನಿಸುವ ಸಿನಿಮಾಗಳನ್ನು ನಾಮ ನಿರ್ದೇಶನ ಮಾಡಲಾಗುವುದು. ಆ ರೀತಿ ನಾಮ ನಿರ್ದೇಶನಗೊಂಡ ಸಿನಿಮಾಗಳ ಹೆಸರು ಇಂದು (ಜ.24) ಪ್ರಕಟವಾಗಲಿದೆ.

ಇದನ್ನೂ ಓದಿ: RRR Movie | 2023ರ ಆಸ್ಕರ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡರಾ ಜೂ.ಎನ್‌ಟಿಆರ್‌?

ಕ್ಯಾಲಿಫೋರ್ನಿಯಾದ ಬೆವೆರ್ಲಿ ಹಿಲ್ಸ್‌ನಲ್ಲಿ ಈ ನಾಮ ನಿರ್ದೇಶನ ಘೋಷಣೆ ಕಾರ್ಯಕ್ರಮ ನಡೆಯಲಿದೆ. ಹಾಲಿವುಡ್‌ ನಟ ರಿಜ್‌ ಅಹಮದ್‌ ಮತ್ತು ಅಲಿಸನ್‌ ವಿಲಿಯಮ್ಸ್‌ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಭಾರತೀಯ ಸಮಯದ ಅನುಸಾರ ಇಂದು ಸಂಜೆ 7 ಗಂಟೆ ಹೊತ್ತಿಗೆ ಕಾರ್ಯಕ್ರಮ ನಡೆಯಲಿದೆ. ಆಸ್ಕರ್‌ ಅಕಾಡೆಮಿಯ ಫೇಸ್‌ಬುಕ್‌, ಟ್ವಿಟರ್‌ ಮತ್ತು ಯೂಟ್ಯೂಬ್‌ ಖಾತೆಗಳಲ್ಲಿ ಈ ಕಾರ್ಯಕ್ರಮ ಲೈವ್‌ ಆಗಿರಲಿದೆ. ಅದಲ್ಲದೆ oscar.org, ABC.com ಮತ್ತು Hulu Live TV ಯಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸಬಹುದು.‌

ಪ್ರಶಸ್ತಿ ಘೋಷಣೆ ಯಾವಾಗ?

ನಾಮಿನೇಷನ್‌ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲಾಗುವುದು. ಈ ರೀತಿ ಆಯ್ಕೆಯಾದ ಸಿನಿಮಾಗಳ ಘೋಷಣೆಯನ್ನು ಮಾರ್ಚ್‌ ತಿಂಗಳ 12ನೇ ತಾರೀಖಿನಂದು ನಡೆಸಲಾಗುವುದು. ಆ ಕಾರ್ಯಕ್ರಮ ಯೂಟ್ಯೂಬ್‌, Hulu Live TV ಮತ್ತು ABC.com ನಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: Oscar award | ಆಸ್ಕರ್‌ ಪ್ರಶಸ್ತಿ ಕಣದಲ್ಲಿ ಕನ್ನಡದ ಕಾಂತಾರ, ವಿಕ್ರಾಂತ್‌ ರೋಣ | ಇನ್ಯಾವ ಸಿನಿಮಾಗಳಿವೆ?

ಸಾಮಾನ್ಯ ಜನರ ಆಯ್ಕೆ

ಆಸ್ಕರ್‌ ಪ್ರಶಸ್ತಿಗೆ ಈಗಾಗಲೇ 301 ಸಿನಿಮಾಗಳ ಪಟ್ಟಿಯನ್ನು ಮಾಡಿ, ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗಳಿಗೆ ಸಾಮಾನ್ಯ ಜನರು ಹಾಗೂ ಜ್ಯೂರಿ ಸದಸ್ಯರು ವೋಟಿಂಗ್‌ ಮಾಡಿದ್ದಾರೆ. ಇಷ್ಟು ಸಿನಿಮಾಗಳ ಪೈಕಿ ಯಾವ ಸಿನಿಮಾಗಳಿಗೆ ಹೆಚ್ಚು ವೋಟ್‌ ಬಂದಿರುತ್ತದೆಯೋ ಅದನ್ನೇ ನಾಮ ನಿರ್ದೇಶನ ಮಾಡಲಾಗುವುದು. ಈ ಬಾರಿ ನಮ್ಮ ದಕ್ಷಿಣ ಭಾರತದ ಆರ್‌ಆರ್‌ಆರ್‌, ಕಾಂತಾರಾ, ವಿಕ್ರಾಂತ್‌ ರೋಣಾ, ಇರುವಿನ್ ನಿಲಳ್, ರಾಕೆಟ್ರಿ ದಿ ನಂಬಿ ಎಫೆಕ್ಟ್ ಸಿನಿಮಾಗಳು 301 ಸಿನಿಮಾಗಳ ಪಟ್ಟಿಯಲ್ಲಿದೆ. ಹಿಂದಿಯಿಂದ ಗಂಗೂಬಾಯಿ ಕಾಠಿಯಾವಾಡಿ, ದಿ ಕಾಶ್ಮೀರ್ ಫೈಲ್ಸ್, ಛೆಲ್ಲೋ ಶೋ, ಮಿ ವಸಂತ್ ರಾವ್, ದಿ ನೆಕ್ಸ್ಟ್ ಮಾರ್ನಿಂಗ್, ತುಜೆ ಸಾಥಿ ಕಹಿ.. ಹೀಗೆ ಒಂದಷ್ಟು ಸಿನಿಮಾಗಳು ಪಟ್ಟಿಯಲ್ಲಿವೆ.

Exit mobile version