Site icon Vistara News

Oscars 2023: ಆಸ್ಕರ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಹೆಂಡತಿಯನ್ನು ಅಪ್ಪಿಕೊಂಡು ಸಂತಸ ಹೊರಹಾಕಿದ ರಾಜಮೌಳಿ!

Hugs Wife As Naatu Naatu Wins Best Song SS Rajamouli Reaction Goes Viral

ಬೆಂಗಳೂರು: ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರವು (Oscars 2023) ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ನಾಟು ನಾಟು…. ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆ ಮೂಲಕ ಆಸ್ಕರ್ ಗೆದ್ದ ಸಂಪೂರ್ಣ ಭಾರತೀಯ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ರಾಜಮೌಳಿ ಖುಷಿಯಿದ ಎದ್ದು ಕಿರುಚಾಡಿ ಹೆಂಡತಿಯನ್ನು ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವೇದಿಕೆಯ ಹಿಂದೆ ನಿರ್ದೇಶಕ ರಾಜಮೌಳಿ ಅವರು ಪತ್ನಿ ಮತ್ತು ಇತರ RRR ಚಿತ್ರತಂಡದೊಂದಿಗೆ ಕುಳಿತ್ತಿದ್ದರು. ನಾಟು ನಾಟು ಹಾಡಿಗೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ರಾಜಮೌಳಿ ಖುಷಿಯಿಂದ ಎದ್ದು, ಕಿರುಚಾಡಿ, ಮಾತ್ರವಲ್ಲದೆ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ತಮ್ಮ ಪಕ್ಕದಲ್ಲಿ ಕುಳಿತಿದ್ದ ಅವರ ಪತ್ನಿ ರಮಾ ರಾಜಮೌಳಿ ಅವರನ್ನು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ನಾಟು ನಾಟು ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ತೆಲುಗು ಹಾಡು ಮಾತ್ರವಲ್ಲದೆ ಅಕಾಡೆಮಿ ಪ್ರಶಸ್ತಿಗಳಲ್ಲಿ ಪ್ರದರ್ಶನಗೊಂಡ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ನಾಟು ನಾಟು ಹಾಡಿಗೆ ಎಂ ಎಂ ಕೀರವಾಣಿ (MM Keeravani) ಸಂಗೀತ ನಿರ್ದೇಶನ ಮಾಡಿದ್ದರೆ, ಹಾಡಿಗೆ ಚಂದ್ರಬೋಸ್ ಗೀತ ಸಾಹಿತ್ಯ ಒದಗಿಸಿದ್ದರು. ಜೂ. ಎನ್‌ಟಿಆರ್, ರಾಮ್ ಚರಣ್ ಅವರು ಅದ್ಭುತ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ: Oscars 2023: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ RRR ಚಿತ್ರತಂಡದ ಸಂಭ್ರಮದ ಕ್ಷಣಗಳು ಹೇಗಿತ್ತು?

ಹೆಂಡತಿಯನ್ನು ಅಪ್ಪಿಕೊಂಡು ಸಂತಸ ಹೊರಹಾಕಿದ ರಾಜಮೌಳಿ

ನಾಟು ನಾಟು ಹಾಡನ್ನು ಹಾಡಿದ ಕಾಲ ಭೈರವ್ ಮತ್ತು ರಾಹುಲ್ ಸಿಪ್ಲಿ ಗಂಜ್ ಅವರು ನಾಟು ನಾಟು ಹಾಡನ್ನು 95ನೇ ಅಕಾಡೆಮಿ ಅವಾರ್ಡ್ಸ್ ವೇದಿಕೆಯಲ್ಲಿ ಪ್ರದರ್ಶನ ಮಾಡಿದರು. ನಟಿ ದೀಪಿಕಾ ಪಡುಕೋಣೆ ಅವರು ವೀಕ್ಷಕರಿಗೆ ನಾಟು ನಾಟು ಹಾಡನ್ನು ಪರಿಚಯಿಸಿದರು. ಆಗ ಸಮಾರಂಭದಲ್ಲಿ ನೆರೆದಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು.

Exit mobile version