ಟಾಲಿವುಡ್
Oscars 2023: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ RRR ಚಿತ್ರತಂಡದ ಸಂಭ್ರಮದ ಕ್ಷಣಗಳು ಹೇಗಿತ್ತು?
ಎಸ್‌ಎಸ್ ರಾಜಮೌಳಿ, ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತು ಇಡೀ ಆರ್‌ಆರ್‌ಆರ್ ತಂಡವು ಕುಟುಂಬದೊಂದಿಗೆ ಆಸ್ಕರ್ 2023 (Oscars 2023) ರಲ್ಲಿ ಭಾಗವಹಿಸಿದೆ. ಈವೆಂಟ್‌ನ ಕೆಲವು ಚಿತ್ರಗಳು ಇಲ್ಲಿವೆ.
ಎಸ್‌ಎಸ್ ರಾಜಮೌಳಿ ಅವರು ನಾಯಕರಾದ ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರೊಂದಿಗೆ ಪೋಸ್ ಕೊಟ್ಟಿದ್ದು ಹೀಗೆ.
ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್, ಆಸ್ಕರ್ ಪ್ರಶಸ್ತಿ ಸ್ವೀಕಾರ ಭಾಷಣದ ಸಂತಸದ ಕ್ಷಣ.
ರಾಮ್ ಚರಣ್, ಎಸ್ ಎಸ್ ರಾಜಮೌಳಿ, ಎಸ್ ಎಸ್ ಕಾರ್ತಿಕೇಯ ತಮ್ಮ ಕುಟುಂಬದ ಜತೆ ಇದ್ದ ಕ್ಷಣ.
ರಾಮ್ ಚರಣ್ ಮತ್ತು ಉಪಾಸನಾ ಅವರು ಎಸ್ಎಸ್ ರಾಜಮೌಳಿ ಮತ್ತು ಅವರ ಪತ್ನಿ ರಮಾ ರಾಜಮೌಳಿ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಯಂಗ್ ಟೈಗರ್ ಎಂದು ಕರೆಯುತ್ತಾರೆ. ಹುಲಿಯ ಮೋಟಿಫ್‌ಗಳೊಂದಿಗೆ ಸೂಟ್ ಧರಿಸಿ ಪೋಸ್ ಕೊಟ್ಟ ನಟ.
ಕಪ್ಪು ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ ರಾಮ್ ಚರಣ್.
95ನೇ ಅಕಾಡೆಮಿ ಪ್ರಶಸ್ತಿಯಲ್ಲಿ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಕಂಡದ್ದು ಹೀಗೆ.
ಜ್ಯೂನಿಯರ್ ಎನ್‌ಟಿಆರ್ ಸಮಾರಂಭಕ್ಕೂ ಮುನ್ನ ಕಾಣಿಸಿಕೊಂಡದ್ದು ಹೀಗೆ.
ಸಂಯೋಜಕ ಎಂಎಂ ಕೀರವಾಣಿ ಮತ್ತುಪತ್ನಿ ಶ್ರೀವಲ್ಲಿ.
ಡಾಲ್ಬಿ ಥಿಯೇಟರ್‌ನಲ್ಲಿ ಗೀತರಚನೆಕಾರ ಚಂದ್ರಬೋಸ್ ಪೋಸ್ಟ್ ಕೊಟ್ಟಿದ್ದು ಹೀಗೆ.
ವೇದಿಕೆಯಲ್ಲಿ ನೇರಪ್ರಸಾರ ನೀಡಿದ ನಾಟು ನಾಟು ಗಾಯಕರಾದ ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್.
ಎಸ್ ಎಸ್ ಕಾರ್ತಿಕೇಯ ಮತ್ತು ಅವರ ಪತ್ನಿಯೊಂದಿಗೆ, ರಾಮ್ ಚರಣ್ ದಂಪತಿ.
South Cinema
Actor Nani: ನಾನಿ ಅಭಿನಯದ ʻದಸರಾʼ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ 36 ಕಟ್ ಸೂಚನೆ
ಸೆನ್ಸಾರ್ (Actor Nani) ಮಂಡಳಿಯು 36 ಕಟ್ಗಳನ್ನು ಸೂಚಿಸಿದೆ. ಇದೀಗ ಯು/ಎ ಪ್ರಮಾಣಪತ್ರವನ್ನು ನೀಡಿದ್ದು, ತೆಲುಗುವಿನಲ್ಲಿ ಸೆನ್ಸಾರ್ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದು ವರದಿಯಾಗಿದೆ. .
ಬೆಂಗಳೂರು: ತೆಲುಗು ನಟ ನಾನಿ (Actor Nani) ಅಭಿನಯದ ದಸರಾ ಸಿನಿಮಾ ಮಾರ್ಚ್ 30ರಂದು ಬಿಡುಗಡೆಯಾಗುತ್ತಿದೆ. ನಿರ್ದೇಶಕ-ಲೇಖಕ ಶ್ರೀಕಾಂತ್ ಒಡೆಲಾ ಅವರು ನಾನಿ ಅಭಿನಯದ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾನಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆನ್ಸಾರ್ ಮಂಡಳಿಯು 36 ಕಟ್ಗಳನ್ನು ಸೂಚಿಸಿದೆ. ಇದೀಗ ಯು/ಎ ಪ್ರಮಾಣಪತ್ರವನ್ನು ನೀಡಿದ್ದು, ತೆಲುಗಿನಲ್ಲಿ ಸೆನ್ಸಾರ್ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದು ವರದಿಯಾಗಿದೆ. .
ದೃಶ್ಯಗಳನ್ನು ತೆಗೆಯುವ ಹೊರತಾಗಿ, ವಿವಿಧ ಫ್ರೇಮ್‌ಗಳಿಂದ ಕೆಲವು ಆಡಿಯೊ ಮತ್ತು ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ. ಸೆನ್ಸಾರ್ ಮಂಡಳಿ ಸದಸ್ಯರು ಕೆಲವು ಸೀಕ್ವೆನ್ಸ್‌ಗಳಿಂದ ಸಬ್‌ಟೈಟಲ್ ತೆಗೆದುಹಾಕಲು ಸೂಚಿಸಿದ್ದಾರೆ. ಅದರಲ್ಲಿಯೂ ಕುಡಿತವನ್ನು ವೈಭವೀಕರಿಸುವ ಹಲವು ದೃಶ್ಯಗಳಿಗೆ ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳಿಗೆ ಹಲವು ಕಟ್ಗಳನ್ನು ಸೂಚಿಸಿದೆ. ಇವಲ್ಲದೆ ಸಿನಿಮಾದ ಪ್ರಚಾರದಲ್ಲಿಯೂ ಬಳಸಲಾಗುತ್ತಿರುವ ಬಾಂಚೆತ್ ಹಾಗೂ ಬದ್ದಲು ಬಾಸಿಂಗಾಲೈತಾಯ್ ಸಂಭಾಷಣೆಗಳನ್ನು ಸಹ ಮ್ಯೂಟ್ ಮಾಡಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.
ಮಾರ್ಚ್ 26 ರಂದು ಆಂಧ್ರಪ್ರದೇಶದ ಅನಂತಪುರದ ಆರ್ಟ್ಸ್ ಕಾಲೇಜು ಮೈದಾನದಲ್ಲಿ ದಸರಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ ಎಂದು ಎಸ್‌ಎಲ್‌ವಿ ಸಿನಿಮಾಸ್ ಹೇಳಿಕೊಂಡಿದೆ. “ಧೂಮ್ ಧಾಮ್ ದಸರಾ ಆಚರಣೆಗೆ ಸಿದ್ಧರಾಗಿ. ಮಾರ್ಚ್ 26 ರಂದು ಅನಂತಪುರದ ಆರ್ಟ್ಸ್ ಕಾಲೇಜ್ ಮೈದಾನದಲ್ಲಿ ದಸರಾ ಗ್ರ್ಯಾಂಡ್ ಪ್ರಿ-ರಿಲೀಸ್ ಈವೆಂಟ್” ಎಂದು ಪ್ರೊಡಕ್ಷನ್ ಹೌಸ್ ಟ್ವೀಟ್ ಮಾಡಿದೆ.
ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Dasara Movie: ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ದಲ್ಲಿ ಮಿಂಚಲಿದ್ದಾರೆ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ
ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.
South Cinema
Samantha Ruth Prabhu: `ಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಬೇಕಂತಿದ್ದ ಸಮಂತಾ: ಕಾರಣವೇನು?
ನಟಿ (Samantha Ruth Prabhu) ಸಂದರ್ಶನವೊಂದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಯವನ್ನು ಹೇಗೆ ಎದುರಿಸಿದ್ದೆ ಹಾಗೂ ʻಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಿ, ಬಳಿಕ ಯಾಕೆ ಒಪ್ಪಿಕೊಂಡೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಅವರ ಮುಂಬರುವ ಪೌರಾಣಿಕ ಚಿತ್ರ ಶಾಕುಂತಲಂ (Shaakuntalam) ಏಪ್ರಿಲ್ 14 ರಂದು ತೆರೆ ಕಾಣುತ್ತಿದೆ. ಸ್ಯಾಮ್ ಅಭಿಮಾನಿಗಳು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ನಟಿ ಸಂದರ್ಶನವೊಂದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಯವನ್ನು ಹೇಗೆ ಎದುರಿಸಿದ್ದೆ ಹಾಗೂ ʻಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಿ, ಬಳಿಕ ಯಾಕೆ ಒಪ್ಪಿಕೊಂಡೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಸಮಂತಾ ಮಾತನಾಡಿ ʻʻನಾನು ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ ಸಮಯದಲ್ಲಿ ನನಗೆ ಈ ಆಫರ್ ಬಂದಿತು. ನಾನು ಆಗಷ್ಟೇ ಶಾಕುಂತಲೆಗಿಂತ ವಿಭಿನ್ನವಾದ ರಾಜಿ ಪಾತ್ರವನ್ನು ನಿರ್ವಹಿಸಿದ್ದೆ. ಶಾಕುಂತಲೆ ಪಾತ್ರ ಪಾವಿತ್ರ್ಯತೆ, ಮುಗ್ಧತೆ ಮತ್ತು ಘನತೆಯ ಸಂಕೇತವಾಗಿದೆ. ಆ ಸಮಯದಲ್ಲಿ ನಾನು ಶಾಕುಂತಲೆ ಆಗಿ ಬದಲಾಗಬಹುದೇ ಎಂದು ನನಗೆ ಖಚಿತ ಇರಲಿಲ್ಲʼʼಬಎಂದು ಸಮಂತಾ ಹೇಳಿದ್ದಾರೆ.
ʻಬಳಿಕ ನಾನು ಶಾಕುಂತಲೆ ಪಾತ್ರ ನನಗೊಂದು ಅವಕಾಶ ಎಂದು ಸಹಿ ಹಾಕಿದೆ. ಕಳೆದ 3 ವರ್ಷಗಳಲ್ಲಿ, ನಾನು ತುಂಬ ಭಯದಿಂದ ಬದುಕಿದ್ದೇನೆ. ಶಾಕುಂತಲೆ ಕೂಡ ತುಂಬ ಕಷ್ಟಗಳನ್ನು ಎದುರಿಸಿದ್ದಳು. ಆದರೆ ಅವಳು ಎಲ್ಲವನ್ನೂ ಘನತೆಯಿಂದ ಎದುರಿಸಿದಳು. ನನ್ನ ಭಯವನ್ನು ಎದುರಿಸಲು ನಾನು ಈ ಸಿನಿಮಾ ತೆಗೆದುಕೊಂಡೆ. ಕಳೆದ ಮೂರು ವರ್ಷಗಳಲ್ಲಿ ನನ್ನ ಭಯವನ್ನು ನಾನು ಹೇಗೆ ಎದುರಿಸಿದೆ ಎಂಬುದು ನಟಿಯಾಗಿ ನನ್ನ ವಿಕಾಸವನ್ನು ವಿವರಿಸುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: Samantha: ಸಮಂತಾ ಅಭಿನಯದ ʻಶಾಕುಂತಲಂʼ ಸಿನಿಮಾದಲ್ಲಿ ನಟ ಜಿಶು ಸೇನಗುಪ್ತಾ ಪಾತ್ರವೇನು?
ಏಪ್ರಿಲ್ 14 ರಂದು ತೆರೆಗೆ
ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ. ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
South Cinema
Junior NTR: NTR 30 ಸೆಟ್‌ನಿಂದ ವೈರಲ್ ಆಯ್ತು ರಕ್ತದಿಂದ ತುಂಬಿದ ವಾಟರ್ ಟ್ಯಾಂಕರ್!
ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, “NTR30” (Junior NTR) ಎಂದು ಬರೆದಿರುವ ಬೃಹತ್ ನೀರಿನ ಟ್ಯಾಂಕರ್ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ರೆಗ್ಯುಲರ್ ಶೂಟಿಂಗ್ ನಡೆಯಲಿದೆ ಎಂಬ ಊಹಾಪೋಹಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬೆಂಗಳೂರು: ಜ್ಯೂನಿಯರ್ ಎನ್‌ಟಿಆರ್ ಅವರ ಮುಂದಿನ ಸಿನಿಮಾ NTR30 (Junior NTR) ಎಂದು ತಾತ್ಕಾಲಿಕವಾಗಿ ಹೆಸರನ್ನು ಇಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಿನಿಮಾ ಮುಹೂರ್ತ ನೆರವೇರಿದೆ. ಕೊರಟಾಲ ಶಿವ ಈ ಸಿನಿಮಾ ನಿರ್ದೇಶಿಸಿದ್ದಾರೆ. ಇವೆಂಟ್‌ನಲ್ಲಿ ಜೂನಿಯರ್ ಎನ್‌ಟಿಆರ್ ಅವರಿಗೆ ಆರ್‌ಆರ್‌ಆರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಕ್ಲಾಪ್ ಮಾಡಿ ಚಾಲನೆ ನೀಡಿದ್ದಾರೆ. ಜಾಹ್ನವಿ ಕಪೂರ್ ಹಾಗೂ ಪ್ರಶಾಂತ್ ನೀಲ್ ಕೂಡ ಭಾಗಿಯಾಗಿದ್ದರು. ಇದೀಗ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, “NTR30” ಎಂದು ಬರೆದಿರುವ ಬೃಹತ್ ನೀರಿನ ಟ್ಯಾಂಕರ್ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.
ಪ್ರೊಡಕ್ಷನ್ ಮತ್ತು ಪ್ರಿ-ಪ್ರೊಡಕ್ಷನ್ ಏಕಕಾಲದಲ್ಲಿ ಕೆಲಸ ಮಾಡುತ್ತಿರುವುದರಿಂದ, ಹೈದರಾಬಾದ್‌ನಲ್ಲಿ ಬೃಹತ್ ಸೆಟ್ ಅನ್ನು ನಿರ್ಮಿಸಲಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಎನ್‌ಟಿಆರ್ 30ರ ಸೆಟ್‌ನಿಂದ ಬೃಹತ್ ನೀರಿನ ಟ್ಯಾಂಕರ್ ಚಿತ್ರವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಟ್ಯಾಂಕರ್‌ನ ಮೇಲೆ ಕೆಂಪು ಬಣ್ಣದ ದ್ರವ ಸುರಿಯುತ್ತಿಂದ್ದಂತೆ ಕಂಡಿದೆ. ಆಕ್ಷನ್ ಸೀಕ್ವೆನ್ಸ್‌ಗಾಗಿ ಫೇಕ್ ಬ್ಲಡ್ ಸುರಿಯುವಂತೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ರೆಗ್ಯುಲರ್ ಶೂಟಿಂಗ್ ನಡೆಯಲಿದೆ ಎಂಬ ಊಹಾಪೋಹಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ; NTR 30: ಎನ್‌ಟಿಆರ್ 30 ಮುಹೂರ್ತ; ರಾಜಮೌಳಿಗೆ ಜೂನಿಯರ್ ಎನ್‌ಟಿಆರ್ ಬೆಚ್ಚಗಿನ ಅಪ್ಪುಗೆ
ಖ್ಯಾತ ಚಲನಚಿತ್ರ ನಿರ್ಮಾಣ ವಿನ್ಯಾಸಕ ಸಾಬು ಸಿರಿಲ್ ಅವರು ಮೊದಲ ಶೆಡ್ಯೂಲ್‌ಗಾಗಿ ಹೈದರಾಬಾದ್‌ನ ಹೊರವಲಯದಲ್ಲಿ ಸೆಟ್ ಅನ್ನು ನಿರ್ಮಿಸಲಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್, ಗೋವಾ ಮತ್ತು ವಿಶಾಖಪಟ್ಟಣಂನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.
2024ರ ಏಪ್ರಿಲ್ 5 ರಂದು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.
ಅನಿರುದ್ಧ ಸಂಗೀತ ನಿರ್ದೇಶಕರಾಗಿದ್ದು, ರತ್ನವೇಲು ಛಾಯಾಗ್ರಹಣ ಮಾಡಲಿದ್ದಾರೆ. ನಂದಮೂರಿ ಕಲ್ಯಾಣರಾಮ್ ಪ್ರಸ್ತುತಪಡಿಸಿದ್ದು, ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ನಡಿಯಲ್ಲಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿ ಕೃಷ್ಣ ಕೆ ನಿರ್ಮಿಸಿದ್ದಾರೆ. 300 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ: NTR 30: ತಾರಕರತ್ನ ನಿಧನದಿಂದಾಗಿ ಎನ್‌ಟಿಆರ್ 30 ಸಿನಿಮಾದ ಈವೆಂಟ್ ಮುಂದೂಡಿಕೆ
ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಜ್ಯೂನಿಯರ್ ಎನ್‌ಟಿಆರ್
ಜ್ಯೂನಿಯರ್ ಎನ್‌ಟಿಆರ್ ಕೊನೆಯಾದಾಗಿ ಆರ್‌ಆರ್‌ಆರ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಸಿನಿಮಾ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಇದೀಗ NTR 30ಯಲ್ಲಿ ನಟ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರಶಾಂತ್ ನೀಲ್ ಜತೆ NTR 31 ಸಿನಿಮಾ ಕೂಡ ನಟ ಹೊಂದಿದ್ದಾರೆ.
South Cinema
Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ
Viral Video: ಆರ್‌ಆರ್‌ಆರ್ ಸಿನಿಮಾದ ಕಥೆಯನ್ನು ಹೇಳುವಂತಹ ಪುಸ್ತಕವೊಂದನ್ನು ಜಪಾನ್‌ನಲ್ಲಿ ತಾಯಿಯೊಬ್ಬರು ತಮ್ಮ ಮಗನಿಗಾಗಿ ಸಿದ್ಧ ಮಾಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟೋಕಿಯೊ: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ವಿಶ್ವಾದ್ಯಂತ ಭಾರಿ ಸದ್ದು ಮಾಡಿದೆ. ಅದರಲ್ಲೂ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ಮೇಲಂತೂ ಸಿನಿಮಾದ ಖ್ಯಾತಿ ಇನ್ನಷ್ಟು ಹೆಚ್ಚಿದೆ ಎಂದೇ ಹೇಳಬಹುದು. ವಿದೇಶಗಳಲ್ಲೂ ಆರ್‌ಆರ್‌ಆರ್ ಹವಾ ಭಾರಿ ಪ್ರಮಾಣದಲ್ಲಿದೆ. ವಿದೇಶದಲ್ಲಿನ ಆರ್‌ಆರ್‌ಆರ್ ಪ್ರೀತಿಯನ್ನು ಬಿಂಬಿಸುವಂತಹ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್ ದಾಖಲಿಸಿದ ಪುತ್ರಿ!
ಜಪಾನ್‌ನಲ್ಲಿ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾಗಿ ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಅನೇಕರು ಅವರದ್ದೇ ಭಾಷೆಯಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಅಲ್ಲಿ ಏಳು ವರ್ಷದ ಮಗನ ತಾಯಿಯೊಬ್ಬರು ಕೂಡ ವಿಶೇಷ ರೀತಿಯಲ್ಲಿ ಮಗನಿಗೆ ಆರ್‌ಆರ್‌ಆರ್ ಕಥೆ ಹೇಳಿದ್ದಾರೆ. ಮಗನಿಗೆ ಮೂರು ತಾಸು ಕುಳಿತು ಸಿನಿಮಾ ನೋಡುವುದು ಕಷ್ಟವೆನ್ನುವ ಕಾರಣಕ್ಕೆ ಅವರು ಆರ್‌ಆರ್‌ಆರ್ ಸಿನಿಮಾ ಕಥೆಯ ಪುಸ್ತಕವನ್ನೇ ಸಿದ್ಧ ಮಾಡಿದ್ದಾರೆ. ಅದರಲ್ಲಿ ಸಿನಿಮಾದ ದೃಶ್ಯಗಳನ್ನೂ ಕೂಡ ಚಿತ್ರವಾಗಿ ಬಳಸಿಕೊಳ್ಳಲಾಗಿದೆ.
ಈ ಪುಸ್ತಕದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಎರಡು ತಿಂಗಳ ಹಿಂದೆಯೇ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಲೈಕ್ ಮಾಡಿದ್ದಾರೆ. “ನಮ್ಮ ದಕ್ಷಿಣ ಭಾರತದ ಸಿನಿಮಾಗಳು ವಿದೇಶದಲ್ಲೂ ರಾರಾಜಿಸುತ್ತಿವೆ” ಎಂದು ಅನೇಕರು ಕಾಮೆಂಟ್ ಮೂಲಕ ಹೇಳಿಕೊಂಡಿದ್ದಾರೆ. ಮಗನಿಗೆ ಕಥೆ ಹೇಳಿಕೊಡಲು ತಾಯಿ ಮಾಡಿದ ಪ್ರಯತ್ನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.
-
ಅಂಕಣ21 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ21 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ21 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ22 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ19 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ19 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ15 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ20 hours ago
Congress First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ವರುಣಾದಿಂದ ಸಿದ್ದರಾಮಯ್ಯ, ದೇವನಹಳ್ಳಿಯಲ್ಲಿ ಮುನಿಯಪ್ಪ