Site icon Vistara News

oscars 2023 Shortlist | ಆಸ್ಕರ್ ರೇಸಿನಲ್ಲಿ ಟಾಪ್‌ಗನ್-2, ಅವತಾರ್-2 ಮುನ್ನಡೆ! ಆರ್‌ಆರ್‌ಆರ್ ಕತೆ ಏನು?

oscars 2023 Shortlist

ನವದೆಹಲಿ: 2023 ಸಾಲಿನ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ ಪ್ರಕ್ರಿಯೆಗಳು ನಡೆದಿವೆ. ಬ್ಲಾಕ್‌ಬಸ್ಟರ್ ಚಿತ್ರಗಳಾದ ಟಾಪ್ ಗನ್: ಮೇವರಿಕ್(Top Gun: Maverick), ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್(Black Panther: Wakanda Forever), ಅವತಾರ್-2 (Avatar: The Way of Water) ಸಿನಿಮಾಗಳು ಆಸ್ಕರ್ ನಾಮನಿರ್ದೇಶನ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿವೆ. ಜತೆಗೆ, ಪಾಪ್ ಸ್ಟಾರ್‌ಗಳಾದ ಲೇಡಿ ಗಾಗಾ, ಟೇಲರ್ ಸ್ವಿಫ್ಟ್, ರಿಹನ್ನಾ ಕೂಡ ನಾಮನಿರ್ದೇಶನ ರೇಸ್‌ನಲ್ಲಿ ಮುಂದಿದ್ದಾರೆ(oscars 2023 Shortlist).

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಆಸ್ಕರ್) ಸಂಸ್ಥೆಯು, 95ನೇ ಆಸ್ಕರ್‌ ನಾಮನಿರ್ದೇಶನದ ಶಾರ್ಟ್‌ಲಿಸ್ಟ್ ಪ್ರಕಟಿಸಿದೆ. ಸಾಕ್ಷ್ಯಚಿತ್ರಗಳು, ಅಂತಾರಾಷ್ಟ್ರೀಯ ಚಿತ್ರಗಳು, ಪ್ರಸಾದನ ಮತ್ತು ಕೇಶ ವಿನ್ಯಾಸ, ಸಂಗೀತ, ಓರಿಜನಲ್ ಸಾಂಗ್, ಸೌಂಡ್ ಮತ್ತು ವಿಷವಲ್ ಎಫೆಕ್ಟ್ ಮತ್ತು ಕಿರು ಚಿತ್ರಗಳ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗುತ್ತಿದೆ.

ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಪಾನ್ ನಳಿನ್ ಅವರ ಗುಜರಾತಿ ಸಿನಿಮಾ ಛೆಲ್ಲೋ ಶೋ ನಾಮನಿರ್ದೇಶನ ಮಾಡಲಾಗಿದೆ. ವಾಸ್ತವದಲ್ಲಿ ಎಸ್ ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾ ಅಧಿಕೃತವಾಗಿ ಪ್ರವೇಶ ಪಡೆಯಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದಾಗ್ಯೂ,
ಓರಿಜನಲ್ ಸಾಂಗ್ ವಿಭಾಗದಲ್ಲಿ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಸೇರಿದಂತೆ ವಿವಿಧ ಕೆಟಗರಿಯಲ್ಲಿ ಸ್ವತಂತ್ರವಾಗಿ ನಾಮನಿರ್ದೇಶನವಾಗುತ್ತಿದೆ.

ಇದನ್ನು ಓದಿ | RRR Movie | ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಆರ್‌ಆರ್‌ಆರ್‌ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗುತ್ತಾ?

Exit mobile version