ಲಾಸ್‌ಏಂಜಲೀಸ್: ಹಾಲಿವುಡ್‌ನ ಖ್ಯಾತ ನಟ, ಜಾಗತಿಕ ಖ್ಯಾತಿ ಪಡೆದಿರುವ ಓಪನ್‌ಹೈಮರ್ (Oppenheimer) ಸಿನಿಮಾದ ಹೀರೊ ಸಿಲಿಯನ್ ಮರ್ಫಿ (Cillian Murphy) ಅವರಿಗೆ 2024ನೇ ಸಾಲಿನ ಆಸ್ಕರ್ (Oscars 2024) ಪ್ರಶಸ್ತಿ ದೊರೆತಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಲಿಯನ್ ಮರ್ಫಿ ಅವರಿಗೆ ಓಪನ್‌ಹೈಮರ್ ಸಿನಿಮಾದ ನಟನೆಗಾಗಿ ಅತ್ಯುತ್ತನ ನಟ (Best Actor) ಪ್ರಶಸ್ತಿ ದೊರೆತಿದೆ. ಇದರೊಂದಿಗೆ ಓಪನ್‌ಹೈಮರ್ ಸಿನಿಮಾಗೆ ಮತ್ತೊಂದು ಜಾಗತಿಕ ಗರಿ ಮೂಡಿದಂತಾಗಿದೆ. ಈ ಬಾರಿ ಓಪನ್‌ಹೈಮರ್ ಸಿನಿಮಾಗೆ ಏಳು ಆಸ್ಕರ್ ಪ್ರಶಸ್ತಿಗಳು ದೊರೆತಿವೆ.
ಓಪನ್‌ಹೈಮರ್ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರಿಗೂ ಆಸ್ಕರ್ ದೊರೆತಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಕ್ರಿಸ್ಟೋಫರ್ ನೋಲನ್ ಭಾಜನರಾಗಿದ್ದಾರೆ. ಇದೇ ಮೊದಲ ಬಾರಿಗೆ ಸಿಲಿಯನ್ ಮರ್ಫಿ ಅವರ ಹೆಸರು ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು. ಅಷ್ಟೇ ಅಲ್ಲ, ಮೊದಲ ನಾಮನಿರ್ದೇಶನದಲ್ಲೇ ಅವರು ಮೊದಲ ಆಸ್ಕರ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
He deserves it, One of our Fav actor, Cillian Murphy's speech after winning Best Actor award at the #Oscars pic.twitter.com/K3CjY70ug0
— Just My Thoughts (@NoContextLifeX) March 11, 2024
ಓಪನ್‌ಹೈಮರ್ ಸಿನಿಮಾವು ಹಲವು ಜಾಗತಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅಷ್ಟೇ ಅಲ್ಲ, ʻಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ಸ್ʼಫಿಲ್ಮ್ ಅವಾರ್ಡ್ಸ್ 2024ರಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ನಟ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕ್ರಿಸ್ಟೋಫರ್ ನೊಲನ್ ನಿರ್ದೇಶನದ ಓಪನ್‌ಹೈಮರ್ ಭಾರತದಲ್ಲಿ ಬಿಡುಗಡೆಗೊಂಡಿದ್ದಾಗ ಮಿಷನ್ ಇಂಪಾಸಿಬಲ್ 7ರ ದಾಖಲೆಯನ್ನು ಮುರಿದು ಹಾಕಿತ್ತು. ಓಪನ್‌ಹೈಮರ್ ಸಿನಿಮಾ ಭಾರತದಲ್ಲಿ ಬಿಡುಗಡೆಯಾದ ದಿನದಂದೇ 13 ಕೋಟಿ ರೂ.ಗೂ ಅಧಿಕ ಸಂಪಾದನೆಯನ್ನು ಮಾಡಿಕೊಂಡಿತ್ತು. ಓಪನ್‌ಹೈಮರ್ʼ ಸಿನಿಮಾವು ಪರಮಾಣು ಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಭೌತಶಾಸ್ತ್ರಜ್ಞ ಜೆ. ರೆಬಾರ್ಟ್ ʻಓಪನ್‌ಹೈಮರ್ʼ ಅವರ ಜೀವನ ಚರಿತ್ರೆಯ ಕತೆಯಾಗಿದೆ. ʻಓಪನ್‌ಹೈಮರ್ʼ ಅವರು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಆವಿಷ್ಕರಿಸಲು ಸಹಾಯ ಮಾಡಿದ್ದರು. ಅವರ ಜೀವನದ ಕುರಿತಾಗಿ ಈಗ ಬಿಡುಗಡೆಯಾಗಿರುವ ಚಿತ್ರದಲ್ಲಿ ತೋರಿಸಲಾಗಿದೆ.
ನಟ ಸಿಲಿಯನ್ ಮರ್ಫಿ ಅವರು ಈ ಸಿನಿಮಾದಲ್ಲಿ ಓಪನ್‌ಹೈಮರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆಯೇ ನಟ ಮ್ಯಾಟ್ ಡ್ಯಾಮನ್ ಅವರು ಮ್ಯಾನ್‌ಹ್ಯಾಟನ್ ಪ್ರಾಜೆಕ್ಟ್‌ನ ಮುಖ್ಯಸ್ಥರಾಗಿದ್ದ ಜನರಲ್ ಲೆಸ್ಲಿ ಗ್ರೋವ್ಸ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎಮಿಲಿ ಬ್ಲಂಟ್ ಅವರು ಓಪನ್ಹೈಮರ್ ಅವರ ಪತ್ನಿ ಕ್ಯಾಥರೀನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ