Site icon Vistara News

Bigg Boss OTT 3: ‘ಬಿಗ್ ಬಾಸ್’ ಒಟಿಟಿ ಪ್ರಸಾರಕ್ಕೆ ಡೇಟ್‌ ಫಿಕ್ಸ್!

Bigg Boss OTT 3 Set To Premiere On Next Month

ಬೆಂಗಳೂರು:ಬಿಗ್ ಬಾಸ್ 17‘ ಬಳಿಕ ಅಭಿಮಾನಿಗಳು ಬಿಗ್‌ ಬಾಸ್‌ ಒಟಿಟಿ (Bigg Boss OTT 3) ಯಾವಾಗ ಎಂದು ಒಂದೇ ಸಮನೆ ಕಾಯುತ್ತಿದ್ದರು. ಇದೀಗ ಬಿಗ್ ಬಾಸ್ ಹಿಂದಿ ಒಟಿಟಿ 3 ಪ್ರಸಾರಕ್ಕೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಮೇ 15 ರಂದು ಕಾರ್ಯಕ್ರಮ ಸ್ಟ್ರೀಮಿಂಗ್‌ ಆಗಲಿದೆ ಎಂದು ವರದಿಯಾಗಿದೆ. ಬಿಗ್ ಬಾಸ್ ಒಟಿಟಿ ನಿರೂಪಣೆಗೆ ಈ ಬಾರಿಯೂ ಸಲ್ಮಾನ್ ಖಾನ್ (Salman Khan) ಸಾಥ್ ನೀಡುತ್ತಿದ್ದಾರೆ.‌ ಈ ಬಗ್ಗೆ ಇನ್ನು ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಬರಬೇಕಿದೆ.

ಕಾರ್ಯಕ್ರಮದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬರದೇ ಇದ್ದರೂ ಭಾಗವಹಿಸಲಿರುವ ಸ್ಪರ್ಧಿಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಪ್ರಮುಖ ವ್ಯಕ್ತಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ದಲ್ಜಿತ್ ಕೌರ್, ಶೆಹಜಾದಾ ಧಾಮಿ, ಪ್ರತೀಕ್ಷಾ ಹೊನ್ಮುಖೆ ಮತ್ತು ಅರ್ಹಾನ್ ಬೆಹ್ಲ್ ಅವರಂತಹ ಸೆಲೆಬ್ರಿಟಿಗಳು ‘ಬಿಗ್ ಬಾಸ್ OTT 3’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಈ ಬಾರಿ ಒಟಿಟಿ ಸೀಸನ್‌ಗೆ ಸೋಷಿಯಲ್ ಮೀಡಿಯಾ ಸ್ಟಾರ್ ಜಾಸ್ಮಿನ್ ಕೌರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ʻಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್ʼ ಎಂದು ಹೇಳುವ ಮೂಲಕ ರಾತ್ರೋ ರಾತ್ರಿ ಫೇಮಸ್ ಆದವರು ಜಾಸ್ಮಿನ್ ಕೌರ್.

ಇದನ್ನೂ ಓದಿ: Elvish Yadav: ಹಾವಿನ ವಿಷ ಬಳಕೆ; ಬಿಗ್‌ ಬಾಸ್‌ ಒಟಿಟಿ 2 ವಿಜೇತ ಎಲ್ವಿಶ್ ಯಾದವ್ ವಿರುದ್ಧ ಕೇಸ್‌!

ಸಲ್ಮಾನ್ ಖಾನ್ ‘ಬಿಗ್ ಬಾಸ್ OTT 2’ ಅನ್ನು ಆಯೋಜಿಸಿದ್ದರು. ಇದರಲ್ಲಿ ಎಲ್ವಿಶ್ ಯಾದವ್ ವಿಜೇತರಾಗಿ ಹೊರಹೊಮ್ಮಿದ್ದರು. ಅಭಿಷೇಕ್ ಮಲ್ಹಾನ್ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಮನೀಶಾ ರಾಣಿ ಎರಡನೇ ರನ್ನರ್ ಅಪ್ ಆಗಿದ್ದರು. ಎಲ್ವಿಶ್ ಯಾದವ್ ಗೆಲುವಿನ ನಂತರ ಹಲವು ವಿವಾದಗಳನ್ನು ಎದುರಿಸಿದ್ದರು. ವಿಶೇಷವಾಗಿ ಹಾವಿನ ವಿಷದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದರು, ಜಾಮೀನಿನ ಬಳಿಕ ಎಲ್ವಿಶ್ ಯಾದವ್ ಅವರನ್ನು ಬಿಡುಗಡೆ ಮಾಡಿದ್ದರು.

Exit mobile version