South Cinema
Bigg Boss OTT season 2: ʻಹಿಂದಿ ಬಿಗ್ ಬಾಸ್ ಒಟಿಟಿ 2ನೇʼ ಸೀಸನ್ ಹಾಸ್ಟ್ ಮಾಡುತ್ತಿದ್ದಾರೆ ಸಲ್ಮಾನ್ ಖಾನ್; ಪ್ರೊಮೊ ಇಲ್ಲಿದೆ!
Bigg Boss OTT season 2: ಬಿಗ್ ಬಾಸ್ OTT ಸೀಸನ್ 2ವನ್ನು ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜಿಯೋ ಸಿನಿಮಾದಲ್ಲಿ ಜೂನ್ ತಿಂಗಳಲ್ಲಿ ಪ್ರಸಾರ ಕಾಣುತ್ತಿದೆ. ಇದೀಗ ಪ್ರೊಮೊ ಕೂಡ ಹೊರ ಬಿದ್ದಿದೆ.
ಬೆಂಗಳೂರು: ಬಿಗ್ ಬಾಸ್ ಹಿಂದಿ ಒಟಿಟಿ (Bigg Boss OTT season 2) ಸೀಸನ್ ಒಂದನ್ನು ಕರಣ್ ಜೋಹರ್ ಹೋಸ್ಟ್ ಮಾಡಿದ್ದರು. ‘ಬಿಗ್ ಬಾಸ್ ಒಟಿಟಿ 2ನೇ ಸೀಸನ್’ ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿತ್ತು. ಇದೀಗ ಎಲ್ಲ ವದಂತಿಗಳಿಗೆ ಫುಲ್ ಸ್ಟಾಪ್ ಬಿದ್ದಿದೆ. ಅಂತಿಮವಾಗಿ ಬಿಗ್ ಬಾಸ್ OTT ಸೀಸನ್ 2ವನ್ನು ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜಿಯೋ ಸಿನಿಮಾದಲ್ಲಿ ಜೂನ್ ತಿಂಗಳಲ್ಲಿ ಪ್ರಸಾರ ಕಾಣುತ್ತಿದೆ. ಇದೀಗ ಪ್ರೊಮೊ ಕೂಡ ಹೊರ ಬಿದ್ದಿದೆ.
ಸಲ್ಮಾನ್ ಖಾನ್ ನಟ 201 ರಿಂದ ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದರು. ಈ ನಡುವೆ, ಫರಾ ಖಾನ್ 2015ರಲ್ಲಿ ಬಿಗ್ ಬಾಸ್ʻ ಹಲ್ಲಾ ಬೋಲ್ʼ ಎಂಬ ಶೀರ್ಷಿಕೆಯ ಸ್ಪಿನ್‌ಆಫ್ ಆವೃತ್ತಿಯನ್ನು ಹೋಸ್ಟ್ ಮಾಡಿದರು. ಕರಣ್ ಜೋಹರ್ 2021ರಲ್ಲಿ ಬಿಗ್ ಬಾಸ್ OTT ಸೀಸನ್ ಒಂದನ್ನು ಹೋಸ್ಟ್ ಮಾಡಿದರು. ಇದೀಗ ಈ ಬಾರಿ ‘ಬಿಗ್ ಬಾಸ್ ಒಟಿಟಿ 2ನೇ ಸೀಸನ್’ ನಿರೂಪಕರ ಸ್ಥಾನಕ್ಕೆ ಕರಣ್ ಜೋಹರ್ ಬದಲಿಗೆ ಸಲ್ಮಾನ್ ಖಾನ್ (Salman Khan) ಬಂದಿದ್ದಾರೆ. ಬಿಗ್ ಬಾಸ್ ಅತ್ಯಂತ ಯಶಸ್ವಿ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ ಹಾಗೂ ನಂಬರ್ ಒನ್ ಸ್ಥಾನವನ್ನು ಪಡೆದಿದೆ.
ಈ ಸೀಸನ್‌ನಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎಂಬ ಹಲವು ಹೆಸರುಗಳು ಹರಿದಾಡುತ್ತಿದ್ದು, ಮುಂಬರುವ ಸೀಸನ್‌ನಲ್ಲಿ ನಟ ತನುಜ್ ಕೇವಲರಮಣಿ ಕೂಡ ಕಾಣಿಸಿಕೊಳ್ಳಬಹುದು ಎಂಬ ವದಂತಿಗಳು ಹಬ್ಬಿವೆ. ಬಿಗ್ ಬಾಸ್ OTT ಸೀಸನ್ 2ಗಾಗಿ ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಅವರನ್ನು ಸಂಪರ್ಕಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇ-ಟೈಮ್ಸ್ ಪ್ರಕಾರ, ʻʻರಾಜೀವ್ ಸೇನ್ ಶೋನಲ್ಲಿ ಭಾಗವಹಿಸಲು ತುಂಬ ಉತ್ಸುಕರಾಗಿದ್ದಾರೆʼʼಎಂದು ವರದಿ ಮಾಡಿತ್ತು.
ಇದನ್ನೂ ಓದಿ : Bigg Boss OTT : ಬರಲಿದೆ ಹಿಂದಿ ಬಿಗ್ ಬಾಸ್ ಒಟಿಟಿ 2 ನೇ ಸೀಸನ್: ನಿರೂಪಕರು ಯಾರು?
ಹಿಂದಿ ಬಿಗ್ ಬಾಸ್ ಒಟಿಟಿ 2ನೇ ಸೀಸನ್ ಪ್ರೊಮೊ
#SalmanKhan the host is back with #BiggBossOTT2. The promo is here..🔥pic.twitter.com/xrCEojk3jA
— MASS (@Freak4Salman) May 25, 2023
ಉರ್ಫಿ ಜಾವೇದ್, ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಜೀಶನ್ ಖಾನ್, ನಿಶಾಂತ್ ಭಟ್ ಮತ್ತು ನೇಹಾ ಭಾಸಿನ್ ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು. ಎಂಸಿ ಸ್ಟಾನ್ ಬಿಗ್ ಬಾಸ್ 16ರ ಅಂತಿಮ ವಿಜೇತರಾಗಿದ್ದರು. ಶಿವ ಠಾಕರೆ ಮತ್ತು ಪ್ರಿಯಾಂಕಾ ಚಾಹರ್ ಚೌಧರಿ ರನ್ನರ್ಸ್ ಅಪ್ ಆಗಿ ಬಂದರು. ಟಿವಿಗೆ ಹೋಲಿಸಿದರೆ ಒಟಿಟಿಯಲ್ಲಿ ನಿರ್ಬಂಧಗಳು ಕಡಿಮೆ. ಸೆನ್ಸಾರ್ನ ಹಂಗಿಲ್ಲದೇ ಕೆಲವು ಟಾಸ್ಕ್ಗಳನ್ನು ನಡೆಸಬಹುದು. ಹಾಗಾಗಿ ‘ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮ ಕಳೆದ ವರ್ಷ ಹೈಪ್ ಪಡೆದುಕೊಂಡಿತ್ತು.
ಸಲ್ಮಾನ್ ಪ್ರಸ್ತುತ ಟೈಗರ್ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಕೊನೆಯ ಬಾರಿಗೆ ಫ್ಯಾಮಿಲಿ ಎಂಟರ್ಟೈನರ್ ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. .
South Cinema
Jr NTR: ಜ್ಯೂನಿಯರ್ ಎನ್‌ಟಿಆರ್ ಜತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್? ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್!
Jr NTR: ಈಗಾಗಲೇ ಜ್ಯೂನಿಯರ್ ಎನ್‌ಟಿಆರ್ ʻದೇವರʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ NTR 31 ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಬೆಂಗಳೂರು: ಈಗಾಗಲೇ ಜ್ಯೂನಿಯರ್ ಎನ್‌ಟಿಆರ್ ʻದೇವರʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ NTR 31 ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಕೆಲವು ದಿನಗಳ ಹಿಂದೆ ಪ್ರಶಾಂತ್ ನೀಲ್ ಅವರ ಜನ್ಮದಿನಕ್ಕೆ ಶುಭಹಾರೈಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿತ್ತು. ಜ್ಯೂನಿಯರ್ ಎನ್‌ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅವರ ನಿರ್ಮಾಣ ಸಂಸ್ಥೆಯಾಗಿರುವ ಎನ್ ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ವರದಿಯಾಗಿದೆ.
ಜ್ಯೂನಿಯರ್ ಎನ್‌ಟಿಆರ್ NTR 31 ಚಿತ್ರದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ ಜೋನಸ್ ಅವರನ್ನು ಸಂಪರ್ಕಿಸಲಾಗಿದೆ ಎಂಬುದು ಇತ್ತೀಚಿನ ಸುದ್ದಿ. ಜ್ಯೂನಿಯರ್ ಎನ್‌ಟಿಆರ್ ಜತೆ ಪಿಗ್ಗಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. NTR 31 2024ರಲ್ಲಿ ತೆರೆಗೆ ಬರಲಿದೆ. ಪ್ರಿಯಾಂಕಾ ಅವರು ಸಿಟಾಡೆಲ್‌ನಲ್ಲಿ ಈಗಾಗಲೇ ಆ್ಯಕ್ಷನ್ ಸಿಕ್ವೆನ್ಸ್‌ಗಳಲ್ಲಿ ನಟಿಸಿದ್ದಾರೆ. NTR 31 ಸಿನಿಮಾ ಕೂಡ ಆ್ಯಕ್ಷನ್ ಸಿನಿಮಾ ಆಗಿದ್ದು. ಪಾತ್ರಗಳು ಕೂಡ ರೋಮಾಂಚನಕಾರಿಯಾಗಿರಲಿದೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಪ್ರಶಾಂತ್ ನೀಲ್ ಚಿತ್ರವು ಭಾರತ-ಪಾಕಿಸ್ತಾನ ಗಡಿಯ ಸುತ್ತ ಸುತ್ತುವ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾವಾಗಿದೆ. ಜೂನ್ 4ರಂದು ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬದ ಕೆಲವು ದಿನಗಳ ನಂತರ ಜೂನ್ 6 ರಂದು ಪ್ರಿಯಾಂಕಾ ಚೋಪ್ರಾ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ್ದರು ಎಂಬ ಸುದ್ದಿ ಹೊರಬಿದ್ದಿದೆ. ಆದರೆ, ಚಿತ್ರ ನಿರ್ಮಾಪಕರು ಈ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.
Team #NTR31 wishes the Sensational Director #PrashanthNeel a very Happy Birthday 🔥
— Mythri Movie Makers (@MythriOfficial) June 4, 2023
Can't wait for the world to see your MASSive vision for #NTR31 💥💥#HBDPrashanthNeel 🔥@tarak9999 @NANDAMURIKALYAN @NTRArtsOfficial pic.twitter.com/ol9WcZydSM
ಇದನ್ನೂ ಓದಿ: Devara Movie: ಜ್ಯೂನಿಯರ್ ಎನ್‌ಟಿಆರ್ ʻದೇವರʼ ಸಿನಿಮಾದಲ್ಲಿ ಕನ್ನಡಿಗ ತಾರಕ್ ಪೊನ್ನಪ್ಪ
ದೇವರ ಚಿತ್ರೀಕರಣದಲ್ಲಿ ಜ್ಯೂನಿಯರ್ ಎನ್‌ಟಿಆರ್
ಜೂನಿಯರ್ ಎನ್‌ಟಿಆರ್ ಸದ್ಯ ಜಾಹ್ನವಿ ಕಪೂರ್ ಅವರೊಂದಿಗೆ ಕೊರಟಾಲ ಶಿವ ನಿರ್ದೇಶನದ ದೇವರ ಚಿತ್ರೀಕರಣದಲ್ಲಿದ್ದಾರೆ. ಹೃತಿಕ್ ರೋಷನ್ ಅವರ ವಾರ್ -2 ಸಿನಿಮಾವನ್ನೂ ಹೊಂದಿದ್ದಾರೆ. ಜ್ಯೂ.ಎನ್‌ಟಿಆರ್ ಅಭಿನಯದ ಈ ದೇವರ ಸಿನಿಮಾವನ್ನು ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್‌ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್‌ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ. ಇದೀಗ ‘ದೇವರ’ ಮೂಲಕ ಒಂದಾಗಿದ್ದಾರೆ.
ಇನ್ನು ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಾಣಿಸುತ್ತಿದೆ. ಈ ಸಿನಿಮಾ 2024ರ ಏಪ್ರಿಲ್ 5ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಏಪ್ರಿಲ್ 5, 2024 ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಪ್ರತಿಸ್ಪರ್ಧಿಯಾಗಿ ನಟಿಸಿದ್ದಾರೆ.
South Cinema
Dhoomam Film: ನಾಳೆ ಫಹಾದ್ ಫಾಸಿಲ್ ಅಭಿನಯದ ಧೂಮಂ ಸಿನಿಮಾದ ಟ್ರೈಲರ್ ರಿಲೀಸ್!
Dhoomam Film: ʻಧೂಮಂʼ ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ.
ಬೆಂಗಳೂರು: ಲೂಸಿಯಾ ಪವನ್ (Lucia Pawan) ನಿರ್ದೇಶನದ ʻಧೂಮಂʼ (Dhoomam Film) ಸಿನಿಮಾದ ಟ್ರೈಲರ್ ಜೂನ್ 8ರಂದು ಬಿಡುಗಡೆಗೊಳ್ಳಲಿದೆ. ʻಧೂಮಂʼ ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಪವನ್ ಕುಮಾರ್ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಜೂನ್ 8ರ 12.59ಕ್ಕೆ ಮೊದಲ ಟ್ರೈಲರ್ (Trailer) ರಿಲೀಸ್ ಮಾಡುವುದಾಗಿ ಬರೆದುಕೊಂಡಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡು ಫಹಾದ್ ಫಾಸಿಲ್ ಲುಕ್‌ಗೆ (Fahadh Faasil) ಫ್ಯಾನ್ಸ್ ಫಿದಾ ಆಗಿದ್ದಾರೆ. ʻಬೆಂಕಿಯಿಲ್ಲದೆ ಹೊಗೆ ಇಲ್ಲʼ ಎಂಬ ಕ್ಯಾಪ್ಷನ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಫಸ್ಟ್ ಲುಕ್ ಹಂಚಿಕೊಂಡಿತ್ತು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಹಾದ್ ಫಾಸಿಲ್ ನಟಿಸಿದ್ದಾರೆ. ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಪರ್ಣಾ ಬಾಲಮುರಳಿ ಜತೆಯಾಗಿದ್ದಾರೆ.
ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮಾ, ಅಕ್ಟೋಬರ್ 9ರಂದು ಮುಹೂರ್ತ ಮಾಡಿತ್ತು. ಮಾಲಿವುಡ್ ನಟ ಫಹಾದ್ ಮಲಯಾಳಂ ಹೊರತುಪಡಿಸಿ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಮ್ ಸಿನಿಮಾಗಳಲ್ಲಿ ಕೂಡ ಖ್ಯಾತಿ ಪಡೆದ ಫಹಾದ್ ಬೇಡಿಕೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ.
ಇದನ್ನೂ ಓದಿ: Fahadh Faasil: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʻಧೂಮಂʼ ಸಿನಿಮಾದ ಫಸ್ಟ್ ಲುಕ್ ಔಟ್! ಫ್ಯಾನ್ಸ್ ಏನಂದರು?
𝐖𝐞 𝐜𝐚𝐧 𝐚𝐬𝐬𝐮𝐫𝐞 𝐲𝐨𝐮 𝐢𝐭'𝐬 𝐠𝐨𝐢𝐧𝐠 𝐭𝐨 𝐛𝐞 𝐋𝐈𝐓 🔥#DhoomamTrailer on June 8th at 12:59 PM.#Dhoomam #FahadhFaasil @pawanfilms #VijayKiragandur @aparnabala2 @hombalefilms @HombaleGroup @Poornac38242912 #PreethaJayaraman @AneesNadodi @roshanmathew2… pic.twitter.com/dCNQXdzxga
— Hombale Films (@hombalefilms) June 6, 2023
ತಾರಾಗಣ
ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣವಿದೆ.
ಹೊಂಬಾಳೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಹೀಗೆ ಹೊಸ ಚಿತ್ರಗಳು ಸದ್ಯದಲ್ಲೇ ಶುರುವಾಗಲಿವೆ.
ಬೇರೆ ಭಾಷೆಯ ಚಿತ್ರಗಳ ವಿಷಯಕ್ಕೆ ಬಂದರೆ, ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದೆ. ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದು ಚಿತ್ರದ ಘೋಷಣೆ ಶೀಘ್ರದಲ್ಲೇ ಆಗಲಿದೆ. ಹಿಂದಿ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.
South Cinema
Meghana Raj: ʻʻನನ್ನ ನಿನ್ನೆ, ಇಂದು ಹಾಗೂ ನಾಳೆಗಳು ನೀನೇ ಚಿರುʼ ಭಾವುಕ ಪೋಸ್ಟ್ ಹಂಚಿಕೊಂಡ ಮೇಘನಾ ರಾಜ್!
Meghana Raj: ಮೇಘನಾ ರಾಜ್ ಆಗಾಗ ಚಿರು ಫೋಟೊವನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ಮೇಘನಾ ರಾಜ್ ಚಿರು ಜತೆಗಿನ ಖುಷಿಯ ಫೋಟೊ ಹಂಚಿಕೊಂಡು ‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು, ಎಂದೆಂದಿಗೂ ನೀನೇʼʼಎಂದು ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರು: ಚಿರಂಜೀವಿ ಸರ್ಜಾ (Chiranjeevi Sarja Death Anniversary) ಅಗಲಿ (ಜೂನ್ 7) ಮೂರು ವರ್ಷ ಕಳೆದಿವೆ. ಕನಕಪುರ ರಸ್ತೆ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಚಿರು ಸಮಾದಿ ಇದ್ದು, ಮೂರನೇ ಪುಣ್ಯ ತಿಥಿಯಂದು ಅಲ್ಲಿಗೆ ತೆರಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಮೇಘನಾ ರಾಜ್ (Meghana Raj) ಆಗಾಗ ಚಿರು ಫೋಟೊವನ್ನು ಹಂಚಿಕೊಳ್ಳುತ್ತ ಭಾವುಕರಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ಮೇಘನಾ ರಾಜ್ ಚಿರು ಜತೆಗಿನ ಖುಷಿಯ ಫೋಟೊ ಹಂಚಿಕೊಂಡು ‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು, ಎಂದೆಂದಿಗೂ ನೀನೇʼ ʼಎಂದು ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೇಘನಾ ರಾಜ್ ಹಾಗೂ ಚಿರು ಅವರದ್ದು ಹತ್ತು ವರ್ಷಗಳ ಸ್ನೇಹ. ಮೊದಲು ಸ್ನೇಹಿತರಾಗಿದ್ದ ಈ ಜೋಡಿ ನಂತರದಲ್ಲಿ ಪ್ರೀತಿಸಲಾರಂಭಿಸಿತು. ಪ್ರೀತಿಯ ವಿಷಯ ಮನೆಯವರಿಗೆ ತಿಳಿಸಿ, ಹಿರಿಯ ಸಮ್ಮತಿ ಮೇರೆಗೆ ಮದುವೆಯಾಗಿದ್ದರು. ಕ್ರೈಸ್ತ ಹಾಗೂ ಹಿಂದು ಸಂಪ್ರದಾಯಂತೆ ಮದುವೆ ನೆರವೇರಿತ್ತು. 2018 ಏ. 29ರಂದು ಚಿರು ಹಾಗೂ ಮೇಘನಾ ಅವರ ಮದುವೆ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆಂಥೋನೀಸ್ ಫೈರಿ ಚರ್ಚ್ನಲ್ಲಿ ನಡೆದಿತ್ತು.
ಚಿರಂಜೀವಿ ಸರ್ಜಾ ಅವರು 2020ರ ಜೂನ್ 7ರಂದು ಹೃದಯಾಘಾತದಿಂದ ಮೃತಪಟ್ಟರು. ಅವರ ಸಾವು ಇಡೀ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ದುಃಖ ತಂದಿತ್ತು. ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಬೆಂಗಳೂರಿನ ಹೊರವಲಯದಲ್ಲಿರುವ ಧ್ರುವ ಸರ್ಜಾ ಫಾರ್ಮ್ಹೌಸ್ನಲ್ಲಿ ಮಾಡಲಾಗಿತ್ತು.
ಇದನ್ನೂ ಓದಿ: Meghana Raj: ಸ್ನೇಹಿತರ ಜತೆ ಎಂಜಾಯ್ ಮಾಡಿದ ಮೇಘನಾ ರಾಜ್- ರಾಯನ್; ಫೋಟೊಗಳು ವೈರಲ್!
ಇದೀಗ ಪುಣ್ಯಸ್ಮರಣೆಗೆ ಮೇಘನಾ ರಾಜ್, ಧ್ರುವ ಸರ್ಜಾ, ರಾಯನ್ ರಾಜ್ ಸರ್ಜಾ ಚಿರು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಚಿರು ಸಮಾಧಿಗೆ ಪೂಜೆ ಮಾಡಲಾಗಿದೆ. ಚಿರು ಅಭಿಮಾನಿಗಳು ಕೂಡ ಇಲ್ಲಿ ನೆರೆದಿದ್ದರು.
ಮೇಘನಾ ಬಾಳಿನಲ್ಲಿ ಜೂನಿಯರ್ ಚಿರು
ಕುಟುಂಬದವರ ಬಾಳಿನಲ್ಲಿ ಖುಷಿ ತಂದಿದ್ದು ಜೂನಿಯರ್ ಚಿರು. ಮೇಘನಾ ಅಕ್ಟೋಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಆಗಲೇ ಕುಟುಂಬದವರು ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಖುಷಿ ಪಟ್ಟರು. ಸದ್ಯ ಮೇಘನಾ ರಾಜ್ ಮಗುವಿನ ಲಾಲನೆ ಹಾಗೂ ಪಾಲನೆ ಜತೆಗೆ ಸಿನಿಮಾ ನಟನೆ, ಕಿರುತೆರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
South Cinema
Kannada New Movie: ಅಮೋಘ ಪ್ರದರ್ಶನ ಕಾಣುತ್ತಿದೆ ‘ಡೇರ್‌ಡೆವಿಲ್ ಮುಸ್ತಾಫಾ’! ಸಕ್ಸೆಸ್ ಖುಷಿ ಹೀಗಿತ್ತು
Kannada New Movie: ಸಿನಿಮಾ ಪ್ರೇಮಿಗಳಿಂದ ಹಾಗೂ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿರುವ ಹೃದಯ ಬೆಸೆಯುವ ಕಥೆ ಯಶಸ್ವಿಯಾಗಿ ಮೂರನೇ ವಾರ ಪ್ರದರ್ಶನ ಕಂಡಿದೆ.
ಬೆಂಗಳೂರು: ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಕಥೆಯಾಧಾರಿತ ಸಿನಿಮಾವಾಗಿರುವ (Kannada New Movie) ಡೇರ್‌ಡೆವಿಲ್ ಮುಸ್ತಾಫಾ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರೇಮಿಗಳಿಂದ ಹಾಗೂ ವಿಮರ್ಶಕರಿಂದಲೂ ಅಪ್ಪುಗೆ ಪಡೆದಿರುವ ಹೃದಯ ಬೆಸೆಯುವ ಕಥೆ ಯಶಸ್ವಿಯಾಗಿ ಮೂರನೇ ವಾರ ಪ್ರದರ್ಶನ ಕಂಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಯಶಸ್ವಿ ಕಾರ್ಯಕ್ರಮ ಆಯೋಜಿಸಿತ್ತು. ಕೇಕ್ ಕಟ್ ಮಾಡಿ ಸಕ್ಸೆಸ್ ಖುಷಿಯನ್ನು ಮಾಧ್ಯಮದರ ಜತೆ ಹಂಚಿಕೊಂಡರು.
ಡಾಲಿ ಧನಂಜಯ್ ಮಾತನಾಡಿ, ʻʻನಾನು ಇಲ್ಲಿ ಕುಳಿತು ಈ ಗೆಲುವನ್ನು ಸಂಭ್ರಮವನ್ನು ನೋಡಲು ಬಂದೆ. ನಾನು ಮಾತನಾಡುವುದು ಏನು ಇಲ್ಲ. ಎಲ್ಲಾ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್‌ಗೆ ಪಾತ್ರ ಸಿನಿಮಾಗಳು ಖರ್ಚು ಮಾಡಲು ಆಗುವುದಿಲ್ಲ. ಮಾಧ್ಯಮದವರು ಸಿನಿಮಾ ಜತೆಗೆ ನಿಂತಿದ್ದೀರಾ. ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೆಟ್ ಮಾಡಲು ಸಿಕ್ಕ ಅವಕಾಶ ಇದು. ನನ್ನ ಕಟೌಟ್ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕಿದೆʼʼ ಎಂದು ತಿಳಿಸಿದರು.
ನಿರ್ದೇಶಕ ಶಶಾಂಕ್ ಸೋಗಲ್ ಮಾತನಾಡಿ, ʻʻಒಳ್ಳೆಯ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದ್ದೆ. ನನ್ನ ಸಿನಿಮಾ ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆ ಕೃತಿಯಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಸಿನಿಮಾಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೊರ ದೇಶದಲ್ಲಿಯೂ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆʼʼ ಎಂದರು.
ಇದನ್ನೂ ಓದಿ: Kannada New Movie: ʻಡೇರ್‌ಡೆವಿಲ್ ಮುಸ್ತಾಫಾʼ ಅಮೋಘ ಪ್ರದರ್ಶನ; ಹೊರದೇಶದಲ್ಲಿ ತೆರೆಕಾಣಲಿದೆ ಸಿನಿಮಾ
ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ.
ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ರಾಜ್ಯ ಹಾಗೂ ಹೊರ ದೇಶದಲ್ಲಿ 80ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಮೂರನೇ ವಾರವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದುಬೈ, ಅಮೆರಿಕ, ಯುರೋಪ್ ದೇಶದಲ್ಲಿ ರಿಲೀಸ್ ಆಗಿರುವ ಪೂರ್ಣಚಂದ್ರ ತೇಜಸ್ವಿ ಕಥೆಗೆ ಭರಪೂರ ಪ್ರತಿಕ್ರಿಯೆ ದೊರೆಯುತ್ತಿದೆ.
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ24 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
-
ಪ್ರಮುಖ ಸುದ್ದಿ24 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?