ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರುವ ಹಲವು ಸರಣಿ ಚಿತ್ರಗಳು ಈ ವಾರ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ (OTT Release) ತೆರೆ ಕಾಣುತ್ತಿದೆ. ನೆಟ್‌ಫ್ಲಿಕ್ಸ್ (Netflix), ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar), ಜಿಯೋ ಸಿನಿಮಾ (Jio Cinema) ಮತ್ತು ಇತರ ವೇದಿಕೆಯಲ್ಲಿ ಈ ಬಾರಿ ಪ್ರೇಕ್ಷರನ್ನು ರಂಜಿಸಲು ಹಲವು ಚಲನಚಿತ್ರಗಳು ಬಿಡುಗಡೆಯಾಗಲಿದೆ.
ಬ್ರಿಡ್ಜರ್ಟನ್ ಮತ್ತು ಬಾಹುಬಲಿ ಸರಣಿಯು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಪೆನೆಲೋಪ್ ಫೆದರಿಂಗ್‌ಟನ್ ಮತ್ತು ಕಾಲಿನ್ ಬ್ರಿಡ್ಜರ್‌ಟನ್‌ರ ಪ್ರೇಮಕಥೆಯನ್ನು ಹೇಳುವ ನೆಟ್‌ಫ್ಲಿಕ್ಸ್‌ನ ಬ್ರಿಡ್ಜರ್‌ಟನ್‌ನ ಸೀಸನ್ 3 ಸಾಕಷ್ಟು ಕುತೂಹಲ ಮೂಡಿಸಿದೆ. ಇದರೊಂದಿಗೆ ಎಸ್.ಎಸ್. ರಾಜಮೌಳಿ ಅವರ ಪೂರ್ವಭಾವಿ ಸರಣಿಯಾದ ಬಾಹುಬಲಿ: ಕ್ರೌನ್ ಆಫ್ ಬ್ಲಡ್ ಕೂಡ ಎಲ್ಲರೂ ಕಾತರದಿಂದ ಕಾಯುವಂತೆ ಮಾಡಿದೆ.
ಬ್ರಿಡ್ಜರ್ಟನ್ ಸೀಸನ್ 3 ಭಾಗ 1
ಬ್ರಿಡ್ಜರ್ಟನ್ ಭಾಗ 2 ಕಳೆದ ಜೂನ್ 13ರಂದು ಬಿಡುಗಡೆಯಾಗಿತ್ತು. ಇದೀಗ ಇದರ ಮುಂದುವರಿದ ಸರಣಿ ಬಿಡುಗಡೆಯಾಗಿದೆ.
ನಿಕೋಲಾ ಕೋಗ್ಲಾನ್, ಲ್ಯೂಕ್ ನ್ಯೂಟನ್, ಕ್ಲೌಡಿಯಾ ಜೆಸ್ಸಿ, ಲ್ಯೂಕ್ ಥಾಂಪ್ಸನ್, ಜೊನಾಥನ್ ಬೈಲಿ, ಸಿಮೋನ್ ಆಶ್ಲೇ ಮುಖ್ಯ ಭೂಮಿಕೆಯಲ್ಲಿರುವ ಈ ಸರಣಿ ಮೇ 16ರಿಂದ ನೆಟ್ ಫ್ಲಿಕ್ಸ್ ನಲ್ಲಿ ತೆರೆ ಕಾಣುತ್ತಿದೆ. ಇದು ಜೂಲಿಯಾ ಕ್ವಿನ್‌ನ ಹೆಚ್ಚು ಮಾರಾಟವಾದ ಕಾದಂಬರಿಗಳನ್ನು ಆಧರಿಸಿದ ಪ್ರೇಮಕಥೆಯಾಗಿದೆ. ಲೇಡಿ ವಿಸ್ಲ್‌ಡೌನ್ ಮೇಲೆ ಚಿತ್ರ ಕೇಂದ್ರೀಕೃತವಾಗಿದೆ. ಕುಟುಂಬದ ಒತ್ತಡದಿಂದ ಪೆನೆಲೋಪ್ ಫೆದರಿಂಗ್‌ಟನ್ (ನಿಕೋಲಾ ಕಾಗ್ಲಾನ್) ತನಗಾಗಿ ಗಂಡನನ್ನು ಹುಡುಕಲು ಪ್ರಾರಂಭಿಸುತ್ತಾಳೆ. ಆಗ ಕಾಲಿನ್ ಬ್ರಿಡ್ಜರ್ಟನ್ (ಲ್ಯೂಕ್ ನ್ಯೂಟನ್) ಅವಳ ಬದುಕಿನಲ್ಲಿ ಆಗಮಿಸುತ್ತಾನೆ. ಅವರಿಬ್ಬರು ಉತ್ತಮ ಸ್ನೇಹಿತರಾಗಿ ಜೀವನವನ್ನು ಕಾಣಲು ಬಯಸುತ್ತಾರೆ.
ಬಾಹುಬಲಿಕೆ ಕ್ರೌನ್ ಆಫ್ ಬ್ಲಡ್
ಶರದ್ ಕೇಳ್ಕರ್, ಸಮಯ್ ಠಕ್ಕರ್, ರಾಜೇಶ್ ಖಟ್ಟರ್ ಅವರು ಧ್ವನಿ ನೀಡಿರುವ ಸರಣಿ ಮೇ 17ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ. ಇದು ಮಾಹಿಷ್ಮತಿ ರಾಜ್ಯದ ಕಥೆಯನ್ನು ಆಧರಿಸಿದೆ. ಎಸ್.ಎಸ್. ರಾಜಮೌಳಿ ಅವರ ಇತ್ತೀಚಿನ ಚಿತ್ರದ ಅನಿಮೇಟೆಡ್ ಸರಣಿ ಇದಾಗಿದೆ. 2D ಅನಿಮೇಟೆಡ್ ಸರಣಿಯು ಒಂದು ಮಹಾಕಾವ್ಯದ ಕಥೆಯನ್ನು ಹೊಂದಿದೆ. ಭವ್ಯವಾದ ಯುದ್ಧದ ಸರಣಿಗಳು ಮತ್ತು ಕೆಲವು ಸಾಂಪ್ರದಾಯಿಕ ಪಾತ್ರಗಳು ಇದರಲ್ಲಿ ಗಮನ ಸೆಳೆಯಲಿದೆ.
ಜರಾ ಹಟ್ಕೆ ಜರಾ ಬಚ್ಕೆ
ವಿಕ್ಕಿ ಕೌಶಲ್, ಸಾರಾ ಅಲಿ ಖಾನ್, ಇನಾಮುಲ್ಹಾಕ್, ಸುಶ್ಮಿತಾ ಮುಖರ್ಜಿ ಅಭಿನಯದ ಈ ಚಿತ್ರ ಜಿಯೋ ಸಿನಿಮಾದಲ್ಲಿ ಮೇ 17ರಂದು ಬಿಡುಗಡೆಯಾಗಲಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಹಿಂದಿ ಚಿತ್ರ. ಇದರಲ್ಲಿ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ವಿವಾಹಿತ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಸ್ವಂತ ಮನೆಯನ್ನು ಮಾಡಿಕೊಳ್ಳಲು ಅವರು ಮಾಡುವ ಪರಿಶ್ರಮ ಚಿತ್ರದಲ್ಲಿದೆ. ಚಿತ್ರ ಕಳೆದ ವರ್ಷ ಜೂನ್ 2 ರಂದು ಬಿಡುಗಡೆಯಾಗಿದ್ದು, ಇದೀಗ ಒಟಿಟಿಗೆ ಪಾದಾರ್ಪಣೆ ಮಾಡುತ್ತಿದೆ.
ಇದನ್ನೂ ಓದಿ: Single Screen Theaters: ಹತ್ತು ದಿನ ತೆಲಂಗಾಣದ ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳು ಬಂದ್; ಕಾರಣ ವಿಚಿತ್ರ!
ಗ್ರೇಟ್ ಇಂಡಿಯನ್ ಕಪಿಲ್ ಶೋ
ಕಪಿಲ್ ಶರ್ಮಾ, ಅರ್ಚನಾ ಪುರಾಣ್ ಸಿಂಗ್, ಕೃಷ್ಣಾ ಅಭಿಷೇಕ್ ಅವರ ಈ ಸರಣಿ ಮೇ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಕಪಿಲ್ ಶರ್ಮಾ ತನ್ನ ಹೊಸ ನೆಟ್‌ಫ್ಲಿಕ್ಸ್ ಸರಣಿಗೆ ಅಂತಾರಾಷ್ಟ್ರೀಯ ಅತಿಥಿ ಬ್ರಿಟಿಷ್ ಪಾಪ್ ಐಕಾನ್ ಎಡ್ ಶೀರಾನ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ಎಡ್ ಅವರು ಭಾರತಕ್ಕೆ ಭೇಟಿ ನೀಡಿದಾಗ ಹಲವಾರು ಬಾರಿ ಹಾಸ್ಯನಟರನ್ನು ಭೇಟಿ ಮಾಡಿದ್ದಾರೆ ಮತ್ತು ಈ ಬಾರಿ ಅವರು ಶರ್ಮಾ ಅವರ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೂರ್ವಸಿದ್ಧತೆಯಿಲ್ಲದ ಸಂಗೀತ ಕಛೇರಿಯನ್ನು ಅವರು ಇಲ್ಲಿ ನಡೆಸಿಕೊಡಲಿದ್ದಾರೆ.