Site icon Vistara News

OTT Releases: ಒಟಿಟಿಯಲ್ಲಿ ಈ ವಾರ ತೆರೆ ಕಾಣುತ್ತಿವೆ ಬಹು ನಿರೀಕ್ಷೆಯ ಈ ಐದು ಚಿತ್ರಗಳು

OTT Releases

ನಿಧಾನಕ್ಕಾದರೂ ಸರಿ ಮಳೆ (rain) ಮೆಲ್ಲನೆ ಅಡಿಯಿಡುತ್ತಿದೆ. ಬೇಸಿಗೆಯ (summer) ಬಿಸಿಲಿನಿಂದ ಬೇಸತ್ತು ತಂಪಾದ ವಾತಾವರಣದಲ್ಲಿ ಹೊದಿಕೆ ಹೊದ್ದು ಮಲಗುವುದು ಬೇಸರ ಮೂಡಿಸುತ್ತದೆ. ಇನ್ನು ಮನೆಯಲ್ಲಿ ರಜೆಯನ್ನು ಕಳೆಯುವುದಂತೂ ತುಂಬಾ ಬೋರು ಎಂದೆನಿಸುವುದು ಉಂಟು. ಆದರೆ ಈ ವಾರ ಐದು ಚಿತ್ರಗಳು (movies) ಒಟಿಟಿಯಲ್ಲಿ (OTT) ಬಿಡುಗಡೆಯಾಗುತ್ತಿದ್ದು (OTT Releases), ರಜೆಯನ್ನು ಖುಷಿಯಿಂದ ಕಳೆಯಬಹುದು.

ಚಿತ್ರಮಂದಿರಗಳಿಗೆ ಹೋಗಿ ಸರತಿಯಲ್ಲಿ ನಿಂತು ಟಿಕೆಟ್ ಪಡೆದು ಜನಜಂಗುಳಿಯ ಮಧ್ಯೆ ಚಿತ್ರ ವೀಕ್ಷಿಸಲು ಇಷ್ಟ ಪಡದವರಿಗೆ ಒಟಿಟಿಗಳು, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಹೊಸಹೊಸ ಚಲನಚಿತ್ರಗಳು ಮತ್ತು ಪ್ರದರ್ಶನಗಳು ಕಾಣಿಸುತ್ತಿವೆ. ಆದರೆ ಇತ್ತೀಚಿಗೆ ಪ್ರದರ್ಶನಗಳು ಕಡಿಮೆಯಾಗಿದ್ದರೂ ಈ ವಾರಾಂತ್ಯದಲ್ಲಿ ಭರ್ಜರಿಯಾಗಿ ಚಿತ್ರಗಳು ಸಿನಿ ಪರದೆಯ ಮೇಲೆ ಬಂದಿದೆ.

ದೇಧ್ ಭೀಗಾ ಜಮೀನ್ (Dedh Bhiga Zameen)

ಜಿಯೋ ಸಿನಿಮಾದಲ್ಲಿ (JioCinema) ಮೇ 31ರಿಂದ ಪ್ರದರ್ಶನ ಕಾಣಲಿರುವ ಈ ಚಿತ್ರದಲ್ಲಿ ಪ್ರತೀಕ್ ಗಾಂಧಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಕ್ಯಾಮ್ 1992ನ ಬಳಿಕ ಈ ಚಿತ್ರದಲ್ಲಿ ಪ್ರತೀಕ್ ಅವರ ಪ್ರತಿಭೆ ಮತ್ತಷ್ಟು ಪ್ರೇಕ್ಷಕರ ಮನ ಗೆಲ್ಲಲಿದೆ. ಮಡಗಾಂವ್ ಎಕ್ಸ್‌ಪ್ರೆಸ್‌ನ ಯಶಸ್ಸು ಮತ್ತು ದೋ ಔರ್ ದೋ ಪ್ಯಾರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅನಂತರ ಪ್ರತೀಕ್ ಈಗ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಖುಶಾಲಿ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ಜೊತೆಯಾಗಿರುವ ಪ್ರತೀಕ್ ಸ್ವಂತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ಮ ಮೀಡಿಯಾ ಆಂಡ್ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ನಡಿಯಲ್ಲಿ ಶೈಲೇಶ್ ಆರ್ ಸಿಂಗ್, ಸುನಿಲ್ ಜೈನ್ ಮತ್ತು ಹಿತೇಶ್ ಠಕ್ಕರ್ ನಿರ್ಮಿಸಿದ ಪುಲ್ಕಿತ್ ಬರೆದು ನಿರ್ದೇಶಿಸಿದ ಈ ಚಿತ್ರವು ಭ್ರಷ್ಟ ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದ ಸಾಮಾನ್ಯ ಜನರ ಹೋರಾಟದ ಮೇಲೆ ಬೆಳಕು ಚೆಲ್ಲಿದೆ.


ವಿಗಿಲಿ 2 (Vigil 2)

ನೆಟ್‌ಫ್ಲಿಕ್ಸ್ (Netflix) ಮೇ 31ರಂದು ತೆರೆ ಕಾಣುವ ಟಾಮ್ ಎಡ್ಜ್ ಅವರ ಪೊಲೀಸ್ ಕಾರ್ಯಾಚರಣೆಯ ಎರಡನೇ ಸರಣಿ ಇದಾಗಿದೆ. 2021ರಲ್ಲಿ ಮೊದಲ ಸೀಸನ್ ಕೊನೆಗೊಂಡಾಗ ನಿಖರವಾಗಿ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿತ್ತು. ಸುರನ್ನೆ ಜೋನ್ಸ್ ಅವರು ಡಿಟೆಕ್ಟಿವ್ ಚೀಫ್ ಇನ್‌ಸ್ಪೆಕ್ಟರ್ ಆಮಿ ಸಿಲ್ವಾ ಪಾತ್ರದಲ್ಲಿ ಈ ಸರಣಿಯಲ್ಲೂ ಕಾಣಿಸಿಕೊಂಡಿದ್ದಾರೆ. ಖಾಸಗಿ ಸಂಸ್ಥೆಗಳೊಂದಿಗೆ ಸೇರಿ ಯುಕೆ ಸರ್ಕಾರ ನಡೆಸುವ ಪಿತೂರಿಯ ಕಥೆಯನ್ನು ಇದು ಒಳಗೊಂಡಿದೆ.


ಎ ಪಾರ್ಟ್ ಆಫ್ ಯು (A Part of You )

ನೆಟ್‌ಫ್ಲಿಕ್ಸ್ ನಲ್ಲಿ ಮೇ 31ರಿಂದ ತೆರೆ ಕಾಣುವ ಈ ಚಿತ್ರದಲ್ಲಿ ಹದಿಹರೆಯದವರು ತಮ್ಮನ್ನು ಮತ್ತು ತಮ್ಮ ಹೊಸ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಹೆಣಗಾಡುವ ಕಥೆಯನ್ನು ಒಳಗೊಂಡಿದೆ. ಸಿಗ್ಗೆ ಎಕ್ಲುಂಡ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಫೆಲಿಸಿಯಾ ಮ್ಯಾಕ್ಸಿಮ್, ಎಡ್ವಿನ್ ರೈಡಿಂಗ್, ಇಡಾ ಎಂಗ್ವೊಲ್, ಅಲ್ವಾ ಬ್ರಾಟ್ ಮತ್ತು ಜರಾ ಲಾರ್ಸನ್ ಅವರ ಮೊದಲ ಬಾರಿಗೆ ಅಭಿನಯಿಸಿದ್ದಾರೆ.


ರೈಸಿಂಗ್ ವಾಯ್ಸೆಸ್‌ (Raising Voices )

ನೆಟ್‌ಫ್ಲಿಕ್ಸ್ ನಲ್ಲಿ ಮೇ 31ರಂದು ತೆರೆ ಕಾಣಲಿರುವ ಈ ಚಿತ್ರದಲ್ಲಿ 17 ವರ್ಷದ ಬಾಲಕಿ ಪ್ರೌಢಶಾಲೆಯಲ್ಲಿ ಲೈಂಗಿಕ ದೌರ್ಜನ್ಯವನ್ನು ವರದಿ ಮಾಡಿದಾಗ ತನಿಖೆಯಿಂದ ಅವಳ ಜೀವನವನ್ನು ಹೆಚ್ಚು ಚರ್ಚೆಯಾಗುತ್ತಿದೆ. ಅವಳ ಸಂಬಂಧಗಳನ್ನು ಪರೀಕ್ಷಿಸಲಾಗುತ್ತದೆ. ಜೋಸ್ ಮ್ಯಾನುಯೆಲ್ ಲೊರೆಂಜೊ ಮತ್ತು ಮಿಗುಯೆಲ್ ಸಾಯೆಜ್ ಕ್ಯಾರಲ್ ಅವರ ನಿರ್ದೇಶನದ ಈ ಚಿತ್ರದಲ್ಲಿ ನಿಕೋಲ್ ವ್ಯಾಲೇಸ್, ಕ್ಲಾರಾ ಗಲ್ಲೆ, ಐಚಾ ವಿಲ್ಲಾವರ್ಡೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ:Kannada New Movie: ಹಾಡಿನ ಮೂಲಕ ಸದ್ದು ಮಾಡ್ತಿದೆ ʻಬ್ಯಾಕ್ ಬೆಂಚರ್ಸ್ʼ ಸಿನಿಮಾ!

ಎರಿಕ್ (Eric)

ನೆಟ್‌ಫ್ಲಿಕ್ಸ್ ನಲ್ಲಿ ಮೇ 30ರಿಂದ ಪ್ರದರ್ಶನ ಕಾಣುತ್ತಿರುವ ಈ ಚಿತ್ರದಲ್ಲಿ ಎರಿಕ್ ಬೆನೆಡಿಕ್ಟ್ ಕಂಬರ್ಬ್ಯಾಚ್, ಗೇಬಿ ಹಾಫ್ಮನ್ ಮತ್ತು ಮೆಕಿನ್ಲೆ ಬೆಲ್ಚರ್ III ನಟಿಸಿದ್ದಾರೆ. ಅಬಿ ಮೋರ್ಗನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಒಂಬತ್ತು ವರ್ಷದ ಮಗು ಒಂದು ದಿನ ಬೆಳಗ್ಗೆ ಶಾಲೆಗೆ ಹೋಗುವ ದಾರಿಯಲ್ಲಿ ಕಣ್ಮರೆಯಾಗುತ್ತದೆ. ತಂದೆ ತನ್ನ ಮಗನಿಗಾಗಿ ಹುಡುಕುವ ಕಥೆ ಇದರಲ್ಲಿದೆ.

Exit mobile version