Site icon Vistara News

Film on Vajpayee | ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್‌ನಲ್ಲಿ ಪಂಕಜ್ ತ್ರಿಪಾಠಿ

Film on Vajpayee

ಬೆಂಗಳೂರು : ಬಾಲಿವುಡ್‌ನ ಪ್ರತಿಭಾನ್ವಿತ ನಟ ಪಂಕಜ್ ತ್ರಿಪಾಠಿ ಈಗ ಮತ್ತೊಂದು ಬಯೋಪಿಕ್‌ನ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ʼಲುಡೋʼ ಚಿತ್ರದಲ್ಲಿನ ಅಭಿನಯಕ್ಕೆ 2022ರಲ್ಲಿ ಇಂಟರ್‌ನ್ಯಾಷನಲ್‌ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ ಪಡೆದಿದ್ದ ಈ ನಟ ಈಗ ʻಅಟಲ್‌ ಮೈನ್‌ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇʼ (Atal- Main RahoonYa Na Rahoon, Yeh Desh Rehna Chahiye) ಎಂಬ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ಭಾರತದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ (Film on Vajpayee) ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾ ಇದಾಗಿದೆ.

ಇನ್ನೂ ವಿಶೇಷ ಎಂದರೆ ಪಂಕಜ್ ತ್ರಿಪಾಠಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ನಿರ್ವಹಿಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Film on Vajpayee | ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ ತೆರೆಯ ಮೇಲೆ ಬರಲು ಸಜ್ಜು

ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬಲ್ಲ ಸೂಕ್ತ ನಟನ ಹುಡುಕಾಟದಲ್ಲಿದ್ದ ಚಿತ್ರತಂಡ ಪಂಕಜ್ ತ್ರಿಪಾಠಿ ಅವರನ್ನು ಆಯ್ಕೆ ಮಾಡಿದೆ ಎಂಬ ಮಾಹಿತಿ ಬಂದಿದೆ. ಪಂಕಜ್​ ಪ್ರತಿಯೊಂದು ಸಿನಿಮಾದಲ್ಲಿ ಅದ್ಭುತ ನಟನೆಯ ಮೂಲಕ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾ ಬಂದಿದ್ದಾರೆ. ಹಾಗಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ನಿರ್ವಹಿಸಲು ಇವರೇ ಸರಿ ಎಂದು ಚಿತ್ರತಂಡ ತೀರ್ಮಾನಿಸಿದೆ ಎಂದು ಹೇಳಲಾಗಿದೆ.  

ಉಲ್ಲೇಖ್‌ ಎನ್ ಪಿ ಅವರ ಪುಸ್ತಕ ʻದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಆ್ಯಂಡ್‌ ಪ್ಯಾರಡಾಕ್ಸ್ʼ (‘The Untold Vajpayee: Politician and Paradox’) ಅನ್ನು ಆಧಾರವಾಗಿಟ್ಟು ಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಚಿತ್ರವನ್ನು ಭಾನುಶಾಲಿ ಸ್ಟುಡಿಯೋಸ್‌ ಹಾಗೂ ಲೆಜೆಂಡ್‌ ಸ್ಟುಡಿಯೋಸ್‌ ನಿರ್ಮಿಸಲಿವೆ.

ಜನ್ಹಿತ್ ಮೇ ಜಾರಿ ಖ್ಯಾತಿಯ ನಿರ್ಮಾಪಕ ವಿನೋದ್ ಭಾನುಶಾಲಿ ಮತ್ತು ಪಿಎಂ ನರೇಂದ್ರ ಮೋದಿ (2019) ಚಿತ್ರವನ್ನು ನಿರ್ಮಿಸಿದ ಸಂದೀಪ್ ಸಿಂಗ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಮುಂದಿನ ವರ್ಷ ಕ್ರಿಸ್‌ಮಸ್‌ ದಿನದಂದು ಅಂದರೆ ವಾಜಪೇಯಿ ಹುಟ್ಟಿದ ದಿನದಂದು ಈ ಚಿತ್ರವನ್ನು ರಿಲೀಸ್‌ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.‌

ಇದನ್ನೂ ಓದಿ | Shivanna Birthday | ಜೀ ಟಿವಿಯಲ್ಲಿ ಶಿವರಾಜೋತ್ಸವ; 60 ಗಂಟೆ ಪ್ರಸಾರವಾಗಲಿದೆ ಶಿವಣ್ಣನ ಸಿನಿಮಾ

Exit mobile version