Site icon Vistara News

Pathaan Movie: ಮೂರು ದಿನಗಳಲ್ಲಿ ಬಾಹುಬಲಿ-2, ಕೆಜಿಎಫ್‌-2 ದಾಖಲೆ ಮುರಿದ ಪಠಾಣ್‌!

Pathaan Movie Beats SS Rajamouli's Baahubali 2, KGF 2

ಬೆಂಗಳೂರು : ಶಾರುಖ್ ಖಾನ್ ಅಭಿನಯದ ಪಠಾಣ್‌ ಸಿನಿಮಾ (Pathaan Movie) ಮೂರು ದಿನಗಳಲ್ಲಿ ಭಾರತದಲ್ಲಿ 150 ಕೋಟಿ ರೂ. ಗಳಿಕೆ ಮೂಲಕ ಮುನ್ನುಗ್ಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಆರಂಭಿಕ ಅಂದಾಜಿನ ಪ್ರಕಾರ ಜನವರಿ 25ರಂದು ಥಿಯೇಟರ್‌ಗೆ ಬಂದ ಈ ಚಿತ್ರವು ಈಗ ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಎಸ್‌ಎಸ್ ರಾಜಮೌಳಿ ಅವರ ಬಾಹುಬಲಿ 2 ಬಾಕ್ಸ್ ಆಫೀಸ್ ದಾಖಲೆಯನ್ನು ಸೋಲಿಸಿದೆ ಎಂದು ವರದಿಯಾಗಿದೆ.

ಪಿಂಕ್‌ವಿಲ್ಲಾ ವರದಿ ಪ್ರಕಾರ, ಚಿತ್ರ ಜನವರಿ 27 ಶುಕ್ರವಾರದಂದು 35 ಕೋಟಿ ರೂ. ಗೂ ಅಧಿಕ ಗಳಿಕೆ ಕಂಡಿದೆ ಎಂದು ಹೇಳಿದೆ. ಈ ಹಿಂದೆ ಬಾಹುಬಲಿ- 2, 127 ಕೋಟಿ ರೂ. ಗಳಿಕೆ ಕಂಡರೆ, ಕನ್ನಡದ ಕೆಜಿಎಫ್- 2, 140 ಕೋಟಿ ಗಳಿಸಿತ್ತು. ವಾರಾಂತ್ಯದ ದಾಖಲೆಗಳನ್ನು ಇದೀಗ ಪಠಾಣ್‌ ಮೀರಿಸಿದೆ ಎಂದು ವರದಿಯಾಗಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಅಭಿನಯದ ಈ ಚಿತ್ರವು ಮೊದಲ ದಿನವೇ 55 ಕೋಟಿ ರೂ. ಕಲೆಕ್ಷನ್‌ ಮಾಡಿ ಕೆಜಿಎಫ್‌-2 ದಾಖಲೆಯನ್ನು ಮುರಿದಿತ್ತು.

ಇದನ್ನೂ ಓದಿ: Pathaan Movie: ಮೂರು ದಿನಗಳಲ್ಲಿ ಭಾರತದಲ್ಲಿ 150 ಕೋಟಿ ರೂ. ಕ್ಲಬ್‌ ಸೇರಿದ ʻಪಠಾಣ್‌ʼ

ಇದನ್ನೂ ಓದಿ: Pathaan Movie: ʻಪಠಾಣ್‌ʼನಲ್ಲಿ ಆಮಿರ್ ಖಾನ್‌ ಸಹೋದರಿ ನಿಖತ್ ಖಾನ್ ಹೆಗ್ಡೆ ನಿರ್ವಹಿಸಿದ ಪಾತ್ರವಾದರೂ ಏನು?

ಮೊದಲ ದಿನ ಪಠಾಣ್‌ನ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್‌ 57 ಕೋಟಿ ರೂ. ಹಾಗೂ ಹಿಂದಿಯಲ್ಲಿ 55 ಕೋಟಿ ರೂ. ಡಬ್ಬಿಂಗ್ ಆವೃತ್ತಿಯಲ್ಲಿ 2 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version