Pathaan Movie: ಮೂರು ದಿನಗಳಲ್ಲಿ ಭಾರತದಲ್ಲಿ 150 ಕೋಟಿ ರೂ. ಕ್ಲಬ್‌ ಸೇರಿದ ʻಪಠಾಣ್‌ʼ - Vistara News

ಬಾಲಿವುಡ್

Pathaan Movie: ಮೂರು ದಿನಗಳಲ್ಲಿ ಭಾರತದಲ್ಲಿ 150 ಕೋಟಿ ರೂ. ಕ್ಲಬ್‌ ಸೇರಿದ ʻಪಠಾಣ್‌ʼ

ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಕೂಡ ಇದ್ದಾರೆ. ಜನವರಿ 27 ರಂದು, ಪಠಾಣ್ (Pathaan Movie) ಭಾರತದಲ್ಲಿ 34 ರಿಂದ 36 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ.

VISTARANEWS.COM


on

Pathaan Movie 3rd day collection in india
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಶಾರುಖ್ ಖಾನ್ ಪಠಾಣ್ (Pathaan Movie) ಮೂಲಕ ಪ್ರೇಕ್ಷಕರನ್ನು ಮತ್ತೆ ಥಿಯೇಟರ್‌ಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರವು ಭಾರತ ಹಾಗೂ ವಿಶ್ವಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಶಾರುಖ್‌ ಅವರ ವೃತ್ತಿ ಜೀವನದ ಒಟ್ಟೂ ಸಿನಿಮಾಗಳಲ್ಲಿ ಪಠಾಣ್‌ ಬ್ಲಾಕ್‌ಬಸ್ಟರ್‌ ಆಗಿ ಹೊರಹೊಮ್ಮಿದೆ. ಕೇವಲ ಮೂರೇ ದಿನಗಳಲ್ಲಿ ಭಾರತದಲ್ಲಿ 150 ಕೋಟಿ ರೂ.ಗಳ ದಾಖಲೆ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಕೂಡ ಇದ್ದಾರೆ. ಜನವರಿ 27ರಂದು, ಪಠಾಣ್ ಭಾರತದಲ್ಲಿ 34ರಿಂದ 36 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ. ರಮೇಶ್ ಬಾಲಾ ಅವರು ಟ್ವೀಟ್‌ನಲ್ಲಿ, “ಪಠಾಣ್‌ ಮೂರನೇ ದಿನ 34ರಿಂದ 36 ಕೋಟಿ ರೂ. ಕಲೆಕ್ಷನ್‌ ಮಾಡಿದೆ.” ಎಂದಿದ್ದಾರೆ.

ಇದನ್ನೂ ಓದಿ: Pathaan Movie : ಬ್ಯಾನ್‌ ಬಾಲಿವುಡ್‌ ಎನ್ನುತ್ತಿದ್ದವರಿಗೆ ಕುಟುಕಿದ ಅಲಿಯಾ ಭಟ್‌!

ಇದನ್ನೂ ಓದಿ: Pathaan Movie: 2ನೇ ದಿನ ʻಪಠಾಣ್‌ʼ ‌ವಿಶ್ವಾದ್ಯಂತ ದಾಖಲೆ ಕಲೆಕ್ಷನ್!

ಒಟ್ಟು ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ 157 ಕೋಟಿ ರೂ. ಕೇವಲ ಮೂರೇ ದಿನಗಳಲ್ಲಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್ 150 ಕೋಟಿ ರೂಪಾಯಿಗಳ ಗಡಿ ದಾಟಿದ್ದು ಸಂಭ್ರಮಿಸಲು ಕಾರಣವಾಗಿದೆ ಎಂದು ಬಾಕ್ಸ್ ಆಫೀಸ್ ಇಂಡಿಯಾ ಬರೆದುಕೊಂಡಿದೆ. 3ನೇ ದಿನದಂದು, ಪಠಾಣ್ ವಿಶ್ವಾದ್ಯಂತ 300 ಕೋಟಿ ರೂ. ದಾಟಿದೆ ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವಿಟ್‌ನಲ್ಲಿ ಹೇಳಿಕೊಂಡಿದ್ದಾರೆ,

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಸಿನಿಮಾ

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ ಬರಲಿದೆ.

VISTARANEWS.COM


on

Action Prince Dhruva Sarja much awaited film Martin to hit the screens on October 11

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ, ಪ್ಯಾನ್‌ ವರ್ಲ್ಡ್‌ ಸಿನಿಮಾ ಮಾರ್ಟಿನ್‌ ರಿಲೀಸ್‌ಗೆ ಕೌಂಟ್‌ ಡೌನ್‌ ಶುರುವಾಗಿದೆ. ಅಕ್ಟೋಬರ್ 11 ರಂದು ಭಾರತದಾದ್ಯಂತ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಮಾರ್ಟಿನ್‌ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

Action Prince Dhruva Sarjas much-awaited film 'Martin' to hit the screens on October 11

ಭರ್ಜರಿ ಬರ್ತ್‌ ಡೇ ಸೆಲೆಬ್ರೆಷನ್‌ಗೆ ಫ್ಯಾನ್ಸ್‌ ಸಜ್ಜು

ಮಾರ್ಟಿನ್‌ ಸಿನಿಮಾಗೂ ಮೊದಲೇ ಧ್ರುವ ಸರ್ಜಾರ ಬರ್ತ್ ಡೇ ಸೆಲೆಬ್ರೆಷನ್‌‌ಗೆ ಫ್ಯಾನ್ಸ್ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಆಟಂ ಬಾಂಬ್ ಧ್ರುವ ಸರ್ಜಾ ನಟನೆಯಲ್ಲಿ ರಿಲೀಸ್ ಆಗಿರುವುದುದು ನಾಲ್ಕೇ ಸಿನಿಮಾವಾದರೂ, 40 ಸಿನಿಮಾ ಮಾಡಿರುವಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅಭಿಮಾನಿಗಳನ್ನು ವಿಐಪಿ ಅಂತೇಳು ಧ್ರುವ, ಅವರಿಗಾಗಿಯೇ ಒಂದು ದಿನ ಮೀಸಲಿಟ್ಟಿದ್ದಾರೆ. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿಯಾಗುವ ಬಹದ್ಧೂರ್, ಈ ಬಾರಿ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಇರುವ ಜಾಗಕ್ಕೆ ಭೇಟಿ ಕೊಡುತ್ತಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ಧ್ರುವ ಮನೆಯ ರಸ್ತೆಯು, ಅಭಿಮಾನಿಗಳಿಂದ ತುಂಬಿ ಹೋಗಿತ್ತು.

Action Prince Dhruva Sarjas much-awaited film 'Martin' to hit the screens on October 11

ಧ್ರುವ ಹುಟ್ಟುಹಬ್ಬಕ್ಕೂ ಮೊದಲು ಮಾರ್ಟಿನ್ ಚಿತ್ರತಂಡ ಅಕ್ಟೋಬರ್ 4ರಂದು ಹೈದರಾಬಾದ್‌ನಲ್ಲಿ ಧ್ರುವ ಅವರ ಇಂಟ್ರೋಡಕ್ಷನ್ ಸಾಂಗ್ ರಿಲೀಸ್ ಮಾಡುತ್ತಿದೆ. ಅಕ್ಟೋಬರ್ 5ರಂದು ಹುಬ್ಬಳಿಯಲ್ಲಿ ಧ್ರುವ ತಮ್ಮ ಫ್ಯಾನ್ಸ್‌ನ ಮೀಟ್ ಮಾಡಲಿದ್ದಾರೆ. ತಮ್ಮ ಹುಟ್ಟುಹಬ್ಬದಂದು ದಾವಣಗೆರೆಯಲ್ಲಿ ಮಾರ್ಟಿನ್ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿದ್ದಾರೆ. ಒಟ್ಟಾರೆ ಉತ್ತರ ಕರ್ನಾಟಕ ಜನರ ಜತೆ ಧ್ರುವ ಈ ಬಾರಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ಮುಂಬೈನಲ್ಲಿ ಸಾಂಗ್‌ ರಿಲೀಸ್‌

ಹುಟ್ಟುಹಬ್ಬದ ನಂತರ ಅಕ್ಟೋಬರ್ 8ರಂದು ಮುಂಬೈನಲ್ಲಿ ಮಾರ್ಟಿನ್ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗುತ್ತಿದೆ. ಅಂದ‌ ಹಾಗೆ ಮಾರ್ಟಿನ್ ಒಂದಲ್ಲ ಒಂದು ಕಾರಣಕ್ಕೆ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.ಇದೇ ತಿಂಗಳ 11ರಂದು ಮಾರ್ಟಿನ್ ಆಲ್ ಓವರ್ ಇಂಡಿಯಾ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಅತಿ ಹೆಚ್ಚು ಬಜೆಟ್‌ನ ಮಾರ್ಟಿನ್‌, ಶೇಖಡಾ 80ರಷ್ಟು ಚಿತ್ರವನ್ನು ಸೆಟ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಹಾಲಿವುಡ್‌ನ ಫಾಸ್ಟ್ ಆ್ಯಂಡ್ ಪ್ಯೂರಿಯಸ್ ಚಿತ್ರ ನೋಡಿದ ಅನುಭವ ಆಗುತ್ತೆ ಎನ್ನುವ ಮಾತನ್ನು ಸಿನಿಮಾ ತಂಡ ಹೇಳಿಕೊಂಡಿದೆ.

Action Prince Dhruva Sarjas much-awaited film 'Martin' to hit the screens on October 11

ಮಾರ್ಟಿನ್ ತಂಡದಿಂದ ನಿರ್ದೇಶಕರೇ ಔಟ್!

ಮಾರ್ಟಿನ್ ಗೆಲ್ಲುತ್ತೆ ಎಂಬ ಭರವಸೆ ಕೂಡ ಗಾಂಧಿನಗರಕ್ಕಿದೆ. ಆದರೆ ಈ ಸಮಯದಲ್ಲಿ ಜತೆಯಾಗಿರಬೇಕಿದ್ದ ತಂಡದಲ್ಲಿ ಬಿರುಕು ಮೂಡಿದೆ. ಚಿತ್ರದ ಪ್ರಚಾರದಿಂದ ನಿರ್ದೇಶಕ ಎಪಿ ಅರ್ಜುನ್ ಅವರನ್ನು ದೂರ ಇಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮಾರ್ಟಿನ್‌ಗೆ ದ್ರೋಹದ ವಿಚಾರ ಜಗಜ್ಜಾಹೀರಾಗಿತ್ತು. ಚಿತ್ರದ ಹೆಸರಿನಲ್ಲಿ ನಿರ್ಮಾಪಕ ಉದಯ್ ಮೆಹ್ತಾಗೆ ನಿರ್ದೇಶಕ ಎ.ಪಿ.ಅರ್ಜುನ್ ಅವರಿಂದ ಮೋಸವಾಗಿದೆ. ಕೇವಲ ಸಿಜಿ ಮತ್ತು ವಿಎಫ್‌ಎಕ್ಸ್ ಒಂದರಲ್ಲೇ 73 ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕೆ ಉದಯ್ ಮೆಹ್ತಾ ಮತ್ತು ಎಪಿ ಅರ್ಜುನ್ ನಡುವೆ ಸಂಬಂಧ ಹಳಸಿದೆ. ತಮ್ಮದೇ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಎಪಿ ಅರ್ಜುನ್ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ಅರ್ಜಿ ವಜಾ ಆಗಿದೆ ಎಂದು ಹೊಸ ಬಾಂಬ್ ಕೂಡ ಉದಯ್ ಮೆಹ್ತಾ ಸಿಡಿಸಿದ್ದಾರೆ.

Action Prince Dhruva Sarja  much awaited film Martin to hit the screens on October 11

ಮಾರ್ಟಿನ್ ಚಿತ್ರದ ಕಥೆ ಚಿತ್ರಕಥೆಯನ್ನು ಆ್ಯಕ್ಷನ್ ಹೀರೋ ಅರ್ಜುನ್ ಸರ್ಜಾ ಬರೆದಿದ್ದಾರೆ. ಹೀಗಿರುವಾಗ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಬೇಕಿದ್ದ ”ಮಾರ್ಟಿನ್‌” ಚಿತ್ರತಂಡದಲ್ಲಿ, ಸಿನಿಮಾ ರಿಲೀಸ್‌ಗೂ ಮೊದಲೇ ಬಿರುಕು ಮೂಡಿದೆ. ಇವೆಲ್ಲದರ ನಡುವೆ ಅಕ್ಟೋಬರ್ 6 ರಂದು ಧ್ರುವ ಸರ್ಜಾ ಬರ್ತ್ ಡೇ ಸೆಲೆಬ್ರೇಶನ್ ಮಾಡಿ ಮತ್ತೊಂದು ಮೆಗಾ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಾಲಿವುಡ್

Actor Govinda : ಬಾಲಿವುಡ್​ ನಟ ಗೋವಿಂದ ಕಾಲಿಗೆ ಗುಂಡೇಟು! ಮುಂಬೈ ಆಸ್ಪತ್ರೆಗೆ ದಾಖಲು

Actor Govinda : ಬಾಲಿವುಡ್​ ನಟ ಗೋವಿಂದ ಕಾಲಿಗೆ ಗುಂಡು ತಗುಲಿದ್ದು, ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

VISTARANEWS.COM


on

Actor Govinda

ಬಾಲಿವುಡ್‌ ನಟ ಗೋವಿಂದ (Actor Govinda) ಕಾಲಿಗೆ ಗುಂಡು ತಗುಲಿದೆ. ರಿವಾಲ್ವರ್​​ ಲಾಕ್​ ಓಪನ್​ ಆಗಿದ್ದರಿಂದ ಜೇಬಿಗೆ ರಿವಾಲ್ವರ್​ ಇಟ್ಟುಕೊಳ್ಳುವಾಗ ಮಿಸ್ ಫೈರ್ ಆಗಿದೆ. ಕೂಡಲೇ ಗೋವಿಂದ ಕುಟುಂಬಸ್ಥರು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಮುಂಜಾನೆ 4.45ರ ಸುಮಾರಿಗೆ ಘಟನೆ ನಡೆದಿದೆ.

ನಟ ಗೋವಿಂದ ಲೈಸೆನ್ಸ್​ ರಿವಾಲ್ವರ್​ ಬಳಕೆ ಮಾಡುತ್ತಿದ್ದರು. ಮನೆ ಬಿಡುವಾಗ ಗನ್​ ಚೆಕ್​ ಮಾಡುತ್ತಿದ್ದರು. ಈ ವೇಳೆ ಗೋವಿಂದ ಕಾಲಿಗೆ ಬುಲೆಟ್ ತಗುಲಿದೆ. ತನ್ನದೇ ರಿವಾಲ್ವರ್​​ನಿಂದ ಫೈರಿಂಗ್​​​ ಆಗಿದೆ. ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಯಲ್ಲಿ ಗೋವಿಂದಗೆ ಟ್ರೀಟ್​ಮೆಂಟ್​ ಮುಂದುವರಿದಿದೆ. ಅದೃಷ್ಟವಶಾತ್‌ ಗೋವಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಬೈ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಲಿದ್ದು, ಈ ಸಂಬಂಧ ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

ಮುಂಜಾನೆ ಕೋಲ್ಕತ್ತಾಗೆ ಹೊರಡುವ ಮೊದಲು ನಟ ತನ್ನ ಪರವಾನಗಿ ಪಡೆದ ರಿವಾಲ್ವರ್ ಅನ್ನು ಪರಿಶೀಲಿಸುತ್ತಿದ್ದಾಗ ಜುಹು ನಿವಾಸದಲ್ಲಿ ಈ ಘಟನೆ ನಡೆದಿದೆ. ರಿವಾಲ್ವರ್ ಆಕಸ್ಮಿಕವಾಗಿ ಗೋವಿಂದ ಕೈಯಿಂದ ಬಿದ್ದು, ಕಾಲಿಗೆ ಗುಂಡು ತಗುಲಿದೆ ಎನ್ನಲಾಗಿದೆ. ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಲು ಬೆಳಿಗ್ಗೆ 6 ಗಂಟೆಗೆ ಫ್ಲೈಟ್‌ ಇತ್ತು. ನಾನು ಮೊದಲೇ ವಿಮಾನ ನಿಲ್ದಾಣವನ್ನು ತಲುಪಿದ್ದೆ. ಗೋವಿಂದ ಅವರು ತಮ್ಮ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಹೊರಟಿದ್ದರು. ಆಗ ಈ ಅವಘಡ ಸಂಭವಿಸಿದೆ. ಸದ್ಯ ವೈದ್ಯರು ಗುಂಡು ಹೊರತೆಗೆದಿದ್ದು, ಗೋವಿಂದ ಆರೋಗ್ಯ ಸ್ಥಿರವಾಗಿದೆ ಎಂದು ನಟನ ಮ್ಯಾನೇಜರ್ ಶಶಿ ಸಿನ್ಹಾ ಹೇಳಿದ್ದಾರೆ.

ಆಸ್ಪತ್ರೆಯಿಂದ ನಟ ಗೋವಿಂದ ಆಡಿಯೋ ಮೆಸೇಜ್ ರಿಲೀಸ್ ಮಾಡಿದ್ದಾರೆ. ಎಲ್ಲರ ಹಾರೈಕೆ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ಗುಂಡು ಬಿದ್ದಿದನ್ನು ತೆಗೆಯಲಾಗಿದೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾರೆ. ಗೋವಿಂದ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Deepika Padukone: ಫೇಕ್ ಬೇಬಿ ಬಂಪ್ ಎಂದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ಬಿಟೌನ್ ಪದ್ಮಾವತಿ..!

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮುಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಬೇಬಿ ಬಂಪ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Deepika Padukone
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Deepika Padukone
ಪ್ರೆಗ್ನೆಸಿಯ ಸ್ಟನ್ನಿಂಗ್​ ಫೋಟೋಗಳನ್ನು ದೀಪಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Deepika Padukone
ಬ್ಲ್ಯಾಕ್ ಥೀಮ್​ನಲ್ಲಿ ಬೋಲ್ಡ್ ಬೇಬಿ ಬಂಪ್ ಶೂಟ್ ಮಾಡಿಸಿರೋ ದೀಪಿಕಾ ನಟ್ಟಿಗರ ಮನ ಸೆಳೆದಿದ್ದಾರೆ.
Deepika Padukone
ಫೋಟೋಶೂಟ್‌ನಲ್ಲಿ ರಣವೀರ್ ಸಿಂಗ್ ಸಹ ದೀಪಿಕಾಗೆ ಸಾಥ್ ನೀಡಿದ್ದಾರೆ.
Deepika Padukone
ನಟಿಗೆ ಸೆಪ್ಟೆಂಬರ್ 28ಕ್ಕೆ ಡೆಲಿವರಿ ಡೇಟ್ ನೀಡಲಾಗಿದ್ದು ಸೌತ್ ಬಾಂಬೆ ಆಸ್ಪತ್ರೆಯಲ್ಲಿ ದೀಪಿಕಾ ಡೆಲಿವರಿ ಆಗಲಿದೆ ಎಂದು ಹೇಳಿದ್ದಾರೆ.
Deepika Padukone
ಸದ್ಯ ದೀಪಿಕಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದು, ಮಾರ್ಚ್ ತನಕವೂ ಡಿಪ್ಪಿ ಮೆಟರ್ನಿಟಿ ಲೀವ್‌ನಲ್ಲಿ ಇದ್ದಾರೆ.

ಇದನ್ನೂ ಓದಿ: Pranitha Subhash: 2ನೇ ಮಗುವಿನ ನಿರೀಕ್ಷೆಯಲ್ಲಿರೋ ನಟಿ ಪ್ರಣೀತಾ ಸುಭಾಷ್; ಮತ್ತೆ ಬೇಬಿ ಬಂಪ್ ಫೋಟೋಶೂಟ್

Continue Reading

ರಾಜಕೀಯ

Kangana Ranaut: ದೂರದೃಷ್ಟಿಯೇ ಇಲ್ಲದ ರಾಹುಲ್ ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ: ಕಂಗನಾ

ರಾಹುಲ್ ಗಾಂಧಿ ಎಂದರೆ ಅವ್ಯವಸ್ಥೆ. ಅವರಿಗೆ ತಮ್ಮ ಭಾಷಣಗಳಲ್ಲಿ, ನಡವಳಿಕೆಯಲ್ಲಿ ಗೊಂದಲಮಯರಾಗಿದ್ದಾರೆ. ಲೋಕಸಭೆಯಲ್ಲಿ ಭಾಷಣ ಮಾಡುವಾಗ ಹಿಂದೂ ದೇವರಾದ ಶಿವನ ಚಿತ್ರಗಳನ್ನು ತೋರಿಸಿದ್ದಕ್ಕಾಗಿ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್ (Kangana Ranaut), ಅವರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

VISTARANEWS.COM


on

By

Kangana Ranaut

ಕಾಂಗ್ರೆಸ್ ನಾಯಕ (Congress leader) ರಾಹುಲ್ ಗಾಂಧಿ (Rahul Gandhi) ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದೆ (BJP MP), ನಟಿ ಕಂಗನಾ ರಣಾವತ್ (Kangana Ranaut), ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ ಮತ್ತು ನಿರಂತರವಾಗಿ ಮಾರ್ಗವನ್ನು ಬದಲಾಯಿಸುತ್ತಾರೆ. ಕಾಂಗ್ರೆಸ್ ಸಂಸದರು ಒಂದು ಕೊಳಕು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ರಾಹುಲ್ ಗಾಂಧಿ ಎಂದರೆ ಅವ್ಯವಸ್ಥೆ. ಅವರಿಗೆ ತಮ್ಮ ಭಾಷಣಗಳಲ್ಲಿ, ನಡವಳಿಕೆಯಲ್ಲಿ ಗೊಂದಲಮಯರಾಗಿದ್ದಾರೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಭಾಷಣ ಮಾಡುವಾಗ ಹಿಂದೂ ದೇವರಾದ ಶಿವನ ಚಿತ್ರಗಳನ್ನು ತೋರಿಸಿದ್ದಕ್ಕಾಗಿ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ, ಅವರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಯಾವುದೇ “ಸಂಘಟಿತ ಕಲ್ಪನೆ” ಕಾಣಲಿಲ್ಲ ಮತ್ತು ಅವರು ನಿರಂತರವಾಗಿ ಮಾರ್ಗಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅವರು ನಾಯಕರಾಗಿ ಯಾರು ಎಂಬ ನಿರ್ಣಾಯಕ ಕಲ್ಪನೆಯನ್ನು ಹೊಂದಿಲ್ಲ ಎಂದು ತೋರುತ್ತದೆ. ಕೇವಲ ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ ಮತ್ತು ಪ್ರತಿ ಬಾರಿ ಅವರು ತಮ್ಮ ಮಾರ್ಗವನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಿದರು.

ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕಂಗನಾ, ಕೇಂದ್ರ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪ್ರತಿಭಟನೆಗಳು ಭಾರತದಲ್ಲಿ ಬಾಂಗ್ಲಾದೇಶದಂತಹ ನಾಗರಿಕ ಅಶಾಂತಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಸಂಸದೆ ಕಂಗನಾ ರಣಾವತ್‌ ರೈತರ ಪ್ರತಿಭಟನೆ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಕೇಂದ್ರದಲ್ಲಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ರೈತರ ಪ್ರತಿಭಟನೆ ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗುತ್ತಿತ್ತು ಎಂದು ಹೇಳಿಕೆ ನೀಡಿ ಮತ್ತೊಮ್ಮೆ ರೈತರ ಕೋಪಕ್ಕೆ ಕಾರಣವಾಗಿದ್ದರು.

ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕಂಗನಾ ರಣಾವತ್‌‌ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಮಯದಲ್ಲಿ, “ಶವಗಳನ್ನು ನೇತುಹಾಕುತ್ತಿರುವುದು ಕಂಡುಬಂದಿದೆ ಮತ್ತು ಅತ್ಯಾಚಾರಗಳು ನಡೆಯುತ್ತಿದ್ದವು,” ಎಂದು ಆರೋಪಿಸಿದ್ದರು. ಕಾನೂನುಗಳನ್ನು ಹಿಂತೆಗೆದುಕೊಂಡ ನಂತರವೂ ಪ್ರತಿಭಟನೆಗಳು ಮುಂದುವರಿಯುತ್ತಿರುವುದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಮತ್ತು “ವಿದೇಶಿ ಶಕ್ತಿಗಳೇ ” ಕಾರಣ ಎಂದು ದೂಷಿಸಿದ್ದರು.

ಇದನ್ನೂ ಓದಿ: Crimes Against Women: ಮಹಿಳೆಯರ ವಿರುದ್ಧದ ಅಪರಾಧ ಆರೋಪ: ಪ.ಬಂಗಾಳದ ಶಾಸಕ, ಸಂಸದರೇ ಹೆಚ್ಚು!

ಕಂಗನಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮೋದಿ ಸರ್ಕಾರದ ಪ್ರಚಾರ ಯಂತ್ರವು “ನಿರಂತರವಾಗಿ ರೈತರನ್ನು ಅವಮಾನಿಸುತ್ತಿದೆ” ಎಂದು ಆರೋಪಿಸಿದರು.


ಈ ಕುರಿತು ಎಕ್ಸ್ ನಲಿ ಪೋಸ್ಟ್ ಮಾಡಿರುವ ಅವರು, 378 ದಿನಗಳ ಮ್ಯಾರಥಾನ್ ಹೋರಾಟದಲ್ಲಿ 700 ಸಹೋದ್ಯೋಗಿಗಳನ್ನು ಬಲಿಕೊಟ್ಟ ರೈತರನ್ನು ಬಿಜೆಪಿ ಸಂಸದರು ಅತ್ಯಾಚಾರಿಗಳು ಮತ್ತು ವಿದೇಶಿ ಶಕ್ತಿಗಳ ಪ್ರತಿನಿಧಿಗಳು ಎಂದು ಕರೆಯುವುದು ಬಿಜೆಪಿಯ ರೈತ ವಿರೋಧಿ ನೀತಿ ಮತ್ತು ಉದ್ದೇಶಗಳಿಗೆ ಮತ್ತೊಂದು ಪುರಾವೆಯಾಗಿದೆ ಎಂದು ತಿಳಿಸಿದ್ದು, ರೈತ ಸಂಸ್ಥೆಗಳು ಮತ್ತು ರಾಜಕಾರಣಿಗಳ ಕುರಿತು ನಟಿಯ ಹೇಳಿಕೆಗಳನ್ನು ಖಂಡಿಸಿದ್ದಾರೆ.

Continue Reading
Advertisement
ಕರ್ನಾಟಕ4 ಗಂಟೆಗಳು ago

ಮಹಿಳಾ ಮೀಸಲಾತಿಗೆ ವಿರೋಧವಿಲ್ಲ: ಸಿಎಂ ಸಿದ್ದರಾಮಯ್ಯ

Latest8 ಗಂಟೆಗಳು ago

ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ ಅವರಿಂದ PNS ವಿಸ್ತಾರ ನ್ಯೂಸ್ ಕಚೇರಿ ಉದ್ಘಾಟನೆ

ಪ್ರಮುಖ ಸುದ್ದಿ8 ಗಂಟೆಗಳು ago

ವಿಭಿನ್ನ ಕಾರ್ಯಯೋಜನೆಯೊಂದಿಗೆ ಸಮಾಜದ ಪ್ರತಿನಿಧಿ ರೂಪದಲ್ಲಿ ಸಿದ್ಧಗೊಳ್ಳುತ್ತಿದೆ ಪಿಎನ್‌ಎಸ್‌ ವಿಸ್ತಾರ ನ್ಯೂಸ್-ಹೆಚ್.ಜಿ ಪವಿತ್ರ ಗೌಡ

ಸುವಚನ9 ಗಂಟೆಗಳು ago

ಕರುನಾಡಿನ ಜನಧ್ವನಿಯಾಗಿ ಶುಭಾರಂಭಗೊಳ್ಳುತ್ತಿದೆ ಪಿಎನ್‌ಎಸ್‌ ವಿಸ್ತಾರ ನ್ಯೂಸ್‌ -ಶ್ರೀ ಶ್ರೀ ಡಾ. ಪ್ರಕಾಶನಾಥ ಗುರೂಜಿ

Kodava Family Hockey Tournament Website Launched
ಕೊಡಗು1 ವರ್ಷ ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ವರ್ಷ ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ವರ್ಷ ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ವರ್ಷ ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ವರ್ಷ ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ವರ್ಷ ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌