Site icon Vistara News

Pathaan Movie : 1000 ಕೋಟಿ ರೂ. ಗಳಿಕೆಯತ್ತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ದಾಪುಗಾಲು!

High Voltage Action Drama' Audience Appreciation for Pathaan Movie Here's the Tweet Review

ಮುಂಬೈ: ಪಠಾಣ್ ಸಿನಿಮಾ (Pathaan Movie) ಮೂಲಕ ಹಿರಿತೆರೆಗೆ ವಾಪಸಾಗಿರುವ ನಟ ಶಾರುಖ್ ಖಾನ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತವನ್ನೇ ಕೊಟ್ಟಿದ್ದಾರೆ. ಅದರ ಫಲವಾಗಿ ಪಠಾಣ್ ಸಿನಿಮಾ ವಿಶ್ವಾದ್ಯಂತ 950 ಕೋಟಿ ರೂ. ಬಾಚಿಕೊಂಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Pathaan Movie: ವಿಶ್ವಾದ್ಯಂತ 924 ಕೋಟಿ ರೂ. ಬಾಚಿದ ಪಠಾಣ್‌: ಚಿತ್ರತಂಡದಿಂದ ಅಧಿಕೃತ ಘೋಷಣೆ
ಪಠಾಣ್ ಸಿನಿಮಾ ಸೋಮವಾರದ ಅಂತ್ಯಕ್ಕೆ ದೇಶದಲ್ಲಿ 493 ಕೋಟಿ ರೂ. ಬಾಚಿಕೊಂಡಿದ್ದಾಗಿ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅವರು ಹೇಳಿದ್ದರು. ಸಿನಿಮಾ ವಿಶ್ವಾದ್ಯಂತ 946 ಕೋಟಿ ರೂ. ಗಳಿಸಿದೆ ಎಂದು ಸಿನಿಮಾ ನಿರ್ಮಾಣ ಮಾಡಿರುವ ವೈಆರ್‌ಎಫ್ ಸಂಸ್ಥೆ ಹೇಳಿಕೊಂಡಿತ್ತು. ಮಂಗಳವಾರದಂದೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಅದರ ಗಳಿಕೆ 950 ಕೋಟಿ ರೂ. ದಾಟಿದೆ ಎಂದು ಹೇಳಲಾಗಿದೆ.


ಪಠಾಣ್ ಸಿನಿಮಾ ಹಲವಾರು ರೀತಿಯ ದಾಖಲೆಗಳನ್ನು ಬರೆಯುತ್ತಿದೆ. ಈವರೆಗೆ ಹಿಂದಿ ಭಾಷೆಯಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳಲ್ಲಿ ಬಾಹುಬಲಿ 2 ಸಿನಿಮಾ ಮೊದಲಿದೆ. ಆ ಸಿನಿಮಾ 511 ಕೋಟಿ ರೂ. ಗಳಿಸಿತ್ತು. ಪಠಾಣ್ ಯಶಸ್ಸು ನೋಡಿದರೆ ಅದು ಬಾಹುಬಲಿ 2 ದಾಖಲೆಯನ್ನೂ ಮುರಿದು ಮುನ್ನುಗ್ಗುವ ಸಾಧ್ಯತೆಯಿದೆ ಎನ್ನಲಾಗಿದೆ.

Exit mobile version