ಬೆಂಗಳೂರು: ಸಿಂಬು ಅವರ ‘ಪತ್ತು ತಲ’ (Pathu Thala Teaser) ತಮಿಳಿನ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ‘ಪತ್ತು ತಲ‘ ಹೆಸರಿನಲ್ಲಿ ‘ಮಫ್ತಿ’ ಚಿತ್ರವನ್ನು ತಮಿಳಿನಲ್ಲಿ ಕಟ್ಟಿಕೊಡಲಾಗುತ್ತಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಕಷ್ಟದಿಂದ ಮೇಲಕ್ಕೆ ಏರಿದ ಮತ್ತು ಬದುಕಲು ಹೊಸ ಸವಾಲುಗಳನ್ನು ಎದುರಿಸುವ ಮಾಫಿಯಾ ಬಾಸ್‌ನ ಕಥೆಯ ಸುಳಿವು ನೀಡುತ್ತದೆ. ಅವಕಾಶ ವಂಚಿತ ಮಕ್ಕಳಿಗೆ ಸಹಾಯ ಮಾಡುವ ದರೋಡೆಕೋರನ ಪಾತ್ರವನ್ನು ನಟ ಸಿಂಬು ನಿರ್ವಹಿಸುತ್ತಿದ್ದಾರೆ.
‘ಭೈರತಿ ರಣಗಲ್’ ಆಗಿ ಸಿಂಬು ಉದ್ದನೆಯ ಗಡ್ಡ ಬಿಟ್ಟು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀ ಮುರುಳಿ ಪಾತ್ರವನ್ನು ಗೌತಮ್ ಕಾರ್ತಿಕ್ ನಿಭಾಯಿಸುತ್ತಿದ್ದಾರೆ. ಕನ್ನಡದಲ್ಲಿ ದೇವರಾಜ್ ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಗೌತಮ್ ವಾಸುದೇವನ್ ಮೆನನ್ ಮಾಡಿದ್ದಾರೆ. ಎ. ಆರ್ ರೆಹಮಾನ್ ಮ್ಯೂಸಿಕ್, ಫಾರೂಕ್ ಬಾಷಾ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಟೀಸರ್ ಮೊದಲ ನೋಟದಲ್ಲಿ ಸಿಂಬು ಅಭಿಮಾನಿಗಳ ಮನಗೆದ್ದಿದೆ. ಮಾರ್ಚ್ 30ಕ್ಕೆ ‘ಪತ್ತು ತಲ’ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಸತ್ಯಪ್ರಿಯಾ ಭವಾನಿ ಶಂಕರ್ ಚಿತ್ರದಲ್ಲಿ ಎಜಿಆರ್ ಸಹೋದರಿ ಪಾತ್ರವನ್ನು ಮಾಡ್ತಿದ್ದಾರೆ. ಕನ್ನಡದಲ್ಲಿ ಛಾಯಾ ಸಿಂಗ್ ಆ ಪಾತ್ರ ಮಾಡಿದ್ದರು. ನರ್ತನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ‘ಮಫ್ತಿ’ 2017ರಲ್ಲಿ ರಿಲೀಸ್ ಆಗಿ ಹಿಟ್ ಆಗಿತ್ತು.
ಇದನ್ನೂ ಓದಿ: Simbu Marriage: ಶ್ರೀಲಂಕಾದ ಉದ್ಯಮಿಯ ಮಗಳ ಜತೆ ಹಸೆಮಣೆ ಏರಲಿದ್ದಾರಾ ಸಿಂಬು?
ಭೈರತಿ ರಣಗಲ್ ಆಗಿ ಶಿವಣ್ಣ
ʻವೇದʼ ಸಿನಿಮಾ ಬಳಿಕ ‘ಗೀತಾ ಪಿಕ್ಚರ್ಸ್’ನಲ್ಲಿ ಇದೀಗ ಶಿವರಾತ್ರಿಗೆ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಮಪ್ತಿ ಸಿನಿಮಾದಲ್ಲಿ ಶಿವರಾಜ್‌ಕುಮಾರ್ (Shivarajkumar) ಅವರು ಭೈರತಿ ರಣಗಲ್ ಆಗಿ ಮಿಂಚಿದ್ದರು. ಅದೇ ಹೆಸರಿನಲ್ಲಿ ಇದೀಗ ಶಿವಣ್ಣ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಶಿವರಾತ್ರಿ ಪ್ರಯುಕ್ತ ಈ ಸಿನಿಮಾ ಘೋಷಣೆ ಆಗಿದ್ದು, ಅವರ ಲುಕ್ ಗಮನ ಸೆಳೆದಿದೆ. ನರ್ತನ್ ಅವರ ಎರಡನೇ ಸಿನಿಮಾ ಇದಾಗಿದೆ.
‘ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವಣ್ಣ. ಶಿವಣ್ಣ ಅವರ ಹೋಮ್ ಬ್ಯಾನರ್ನಲ್ಲಿ ಚಿತ್ರ ಮೂಡಿ ಬರುತ್ತಿದೆ. ‘ಗೀತಾ ಪಿಕ್ಚರ್ಸ್’ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಮಫ್ತಿ’ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನರ್ತನ್ ಅವರು ಯಾವುದೇ ಸಿನಿಮಾ ಘೋಷಣೆ ಆಗಿಲ್ಲರಲಿಲ್ಲ.